Site icon Vistara News

Ind vs Aus : ಭಾರತ- ಆಸ್ಟ್ರೇಲಿಯಾ ಪಂದ್ಯ ನಡೆಯುವ ಗುವಾಹಟಿ ಪಿಚ್​ ಹೇಗಿದೆ?

Team India

ಗುವಾಹಟಿ: ನವೆಂಬರ್ 26 ರಂದು ತಿರುವನಂತಪುರಂನಲ್ಲಿ ನಡೆದ ಐದು ಪಂದ್ಯಗಳ ಟಿ 20 ಐ ಸರಣಿಯ ಎರಡನೇ ಪಂದ್ಯದಲ್ಲಿ ಭಾರತದ ಅಗ್ರ ಕ್ರಮಾಂಕವು ಆಸೀಸ್ ವಿರುದ್ಧ ಪ್ರಾಬಲ್ಯ ಸಾಧಿಸಿತ್ತು. 44 ರನ್​ಗಳ ಜಯದೊಂದಿಗೆ ಸರಣಿಯಲ್ಲಿ 2 -0 ಮುನ್ನಡೆ ಸಾಧಿಸಿದೆ. ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಕಿಶನ್ ತಲಾ ಅರ್ಧಶತಕಗಳನ್ನು ಬಾರಿಸುವ ಮೂಲಕ ಭಾರತ ತಂಡಕ್ಕೆ 4 ವಿಕೆಟ್​ಗೆ 235 ರನ್​ ತಂದುಕೊಟ್ಟರು. ನವೆಂಬರ್ 28 ರಂದು ನಡೆಯಲಿರುವ ಮೂರನೇ ಟಿ 20 ಪಂದ್ಯಯು ಗುವಾಹಟಿಯ ಬರ್ಸಪಾರಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಎರಡನೇ ಪಂದ್ಯದ ಬಗ್ಗೆ ಇನ್ನಷ್ಟು ವಿವರಣೆ ಹೇಳುವುದಾದರೆ. ಭಾರತವು ಟಾಸ್​ ಸೋತಿತ್ತು. ಚೇಸ್ ಮಾಡಿ ಗೆಲ್ಲಬಹುದಾಗಿದ್ದ ಸಂದರ್ಭದ ಹೊರತಾಗಿಯೂ ಅನಿವಾರ್ಯವಾಗಿ ಮೊದಲು ಬ್ಯಾಟಿಂಗ್ ಮಾಡಿತು. ಟೀಮ್ ಇಂಡಿಯಾದ ಇಬ್ಬರೂ ಆರಂಭಿಕರು ಕ್ರಮವಾಗಿ ಅರ್ಧಶತಕಗಳನ್ನು ತಲುಪಿದರು. ಬಳಿಕ ಇಶಾನ್ ಕಿಶನ್ (32 ಎಸೆತಗಳಲ್ಲಿ 52 ರನ್) ಮತ್ತು ರಿಂಕು ಸಿಂಗ್ 9 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿ ಭಾರತವನ್ನು ಬೃಹತ್ ಮೊತ್ತಕ್ಕೆ ಕೊಂಡೊಯ್ದರು. ಆಸ್ಟ್ರೇಲಿಯಾ ಪರ ನಾಥನ್ ಎಲ್ಲಿಸ್ 4 ಓವರ್​ಗಳಲ್ಲಿ 45 ರನ್ ನೀಡಿ 3 ವಿಕೆಟ್​ ಪಡೆದಿದ್ದೇ ಆ ತಂಡದ ಬೌಲರ್​ಗಳ ಉತ್ತಮ ಸಾಧನೆ.. ಮತ್ತೊಂದೆಡೆ, ಸೀನ್ ಅಬಾಟ್ ತಮ್ಮ ಮೂರು ಓವರ್​ಗಳಲ್ಲಿ ವಿಕೆಟ್ ಪಡೆಯದೆ 56 ರನ್ ನೀಡಿ ದುಬಾರಿ ಎನಿಸಿದರು.

ಆಸ್ಟ್ರೇಲಿಯಾದ ಅಬ್ಬರ. ಇಳಿತ

ಆಸೀಸ್​ನ ಆರಂಭಿಕ ಆಟಗಾರರಾದ ಸ್ಟೀವನ್ ಸ್ಮಿತ್ ಮತ್ತು ಮ್ಯಾಥ್ಯೂ ಶಾರ್ಟ್ ತಲಾ 19 ರನ್ ಗಳಿಸಿದರು. ಜತೆಗೆ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಜೋಶ್ ಇಂಗ್ಲಿಸ್ ಕೂಡ ಬೇಗನೆ ಮರಳಿದರು. ಆದರೆ ಸ್ಟೊಯಿನಿಸ್ ಮತ್ತು ಟಿಮ್ ಡೇವಿಡ್ ಕ್ರಮವಾಗಿ 45 ಮತ್ತು 37 ರನ್ ಗಳಿಸಿ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದರು. ನಾಯಕ ಮ್ಯಾಥ್ಯೂ ವೇಡ್ 42 ರನ್ ಗಳಿಸಿ ಔಟಾಗದೆ ಉಳಿದರು. ಭಾರತದ ಪರ ಮಣಿಕಟ್ಟು ಸ್ಪಿನ್ನರ್ ರವಿ ಬಿಷ್ಣೋಯ್ 4 ಓವರ್​ಗಳಲ್ಲಿ 32 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು.

ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಸತತ ಎರಡು ಸೋಲುಗಳಿಂದ ಪುಟಿದೇಳಲು ಎದುರು ನೋಡಿದೆರ ಭಾರತ ಮೂರನೇ ಪಂದ್ಯದಲ್ಲಿ ಗೆಲುವಿನೊಂದಿಗೆ ಸರಣಿ ಗೆಲುವು ಸಾಧಿಸುವ ಗುರಿ ಹೊಂದಿದೆ. ಬರ್ಸಪಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೂರನೇ ಟಿ 20 ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿ. ಹಿಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಏಳು ವಿಕೆಟ್ ಗಳಿಂದ ಮತ್ತು 27 ಎಸೆತಗಳು ಬಾಕಿ ಇರುವಾಗ ಜಯಗಳಿಸಿತ್ತು.

ಭಾರತ-ಆಸ್ಟ್ರೇಲಿಯಾ ಮುಖಾಮುಖಿ ದಾಖಲೆ

ಉಭಯ ತಂಡಗಳು 28 ಟಿ 20 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ 17 ಹಣಾಹಣಿಗಳಲ್ಲಿ ಗೆಲುವು ಸಾಧಿಸಿದ್ದರೆ, ಆಸ್ಟ್ರೇಲಿಯಾ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ತವರು ನೆಲದಲ್ಲಿ ಭಾರತ ಹನ್ನೆರಡು ಪಂದ್ಯಗಳಲ್ಲಿ ಎಂಟು ಪಂದ್ಯಗಳನ್ನು ಗೆದ್ದಿದ್ದರೆ, ಆಸ್ಟ್ರೇಲಿಯಾ ನಾಲ್ಕರಲ್ಲಿ ಗೆದ್ದಿದೆ.

ಬರ್ಸಪಾರಾ ಕ್ರಿಕೆಟ್ ಸ್ಟೇಡಿಯಂ ಪಿಚ್ ವರದಿ

ಬರ್ಸಪಾರಾ ಕ್ರಿಕೆಟ್ ಸ್ಟೇಡಿಯಂ ಪಿಚ್ ಬ್ಯಾಟರ್​ಗಳಿಗೆ ಸ್ವರ್ಗವಾಗಿದೆ. ಆದಾಗ್ಯೂ, ಮಧ್ಯಮ ವೇಗಿಗಳು ವಿಕೆಟ್ ಉರುಳಿಸುವ ಎಲ್ಲ ಅವಕಾಶಗಳನ್ನು ಹೊಂದಿದ್ದಾರೆ. ವಿಶೇಷವಾಗಿ ಮೊದಲ ಇನಿಂಗ್ಸ್ ಬಳಿಕ ಬೌಲರ್​ಗಳು ಹವಾಮಾನ ಪರಿಸ್ಥಿತಿಯ ಲಾಭ ಪಡೆಯಬಹುದು.

ಇದನ್ನೂ ಓದಿ : Ind vs Aus : ಕಾಂಗರೂ ಪಡೆಯನ್ನು ಹಿಮ್ಮೆಟ್ಟಿಸಿ ಸರಣಿ ಗೆಲ್ಲುವುದೇ ಸೂರ್ಯ ಬಳಗ?

ಬರ್ಸಪಾರಾ ಕ್ರಿಕೆಟ್ ಸ್ಟೇಡಿಯಂ ಟಿ 20 ಐ ಅಂಕಿಅಂಶಗಳು

ಈ ಮೈದಾನದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ, ವೇಗಿಗಳು 43 ಸರಾಸರಿಯಲ್ಲಿ 11 ವಿಕೆಟ್​ಗಳನ್ನು ಪಡೆದರೆ, ಸ್ಪಿನ್ನರ್​ಗಳು 43.20 ಸರಾಸರಿಯಲ್ಲಿ ಐದು ವಿಕೆಟ್​ಗಳನ್ನು ಪಡೆದಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಮತ್ತು ಎರಡನೇ ಬ್ಯಾಟಿಂಗ್ ಎರಡರಲ್ಲೂ ತಲಾ ಒಂದು ಗೆಲುವು ಕಂಡುಬಂದರೆ. ಒಂದು ಪಂದ್ಯವು ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಗುವಾಹಟಿಯಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 118 ಆಗಿದೆ

ಸಂಭಾವ್ಯ ತಂಡಗಳು ಇಂತಿವೆ

ಭಾರತ: ಋತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ (ವಿಕೆಟ್​ ಕೀಪರ್​), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಷ್ದೀಪ್ ಸಿಂಗ್, ಮುಖೇಶ್ ಕುಮಾರ್, ಪ್ರಸಿದ್ಧ್ ಕೃಷ್ಣ.

ಆಸ್ಟ್ರೇಲಿಯಾ: ಮ್ಯಾಥ್ಯೂ ಶಾರ್ಟ್, ಸ್ಟೀವನ್ ಸ್ಮಿತ್, ಜೋಶ್ ಇಂಗ್ಲಿಸ್, ಆರೋನ್ ಹಾರ್ಡಿ, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ನಾಯಕ / ವಿಕೆಟ್​ ಕೀಪರ್​), ಸೀನ್ ಅಬಾಟ್, ನಾಥನ್ ಎಲ್ಲಿಸ್, ಜೇಸನ್ ಬೆಹ್ರೆನ್ಡಾರ್ಫ್, ತನ್ವೀರ್ ಸಂಘಾ.

.

Exit mobile version