Site icon Vistara News

Womens Cricket : ಕೌರ್​ ಕೋಪಕ್ಕೆ ಗುರಿಯಾಗಿದ್ದ ಅಂಪೈರ್​ ತನ್ವೀರ್​ ಗೆ ಮುಂಬರುವ ಸರಣಿಯಲ್ಲಿ ಇಲ್ಲ ಚಾನ್ಸ್​

womens Cricket

ಬೆಂಗಳೂರು: ಬಾಂಗ್ಲಾದೇಶದ ಸಿಲ್ಹೆಟ್ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಏಪ್ರಿಲ್ 28 ರಂದು ಪ್ರಾರಂಭವಾಗಲಿರುವ ಭಾರತ ಮಹಿಳಾ (Womens Cricket) ಮತ್ತು ಬಾಂಗ್ಲಾದೇಶ ಮಹಿಳೆಯರ ತಂಡಗಳ ನಡುವಿನ ಮುಂಬರುವ ಟಿ 20 ಐ ಸರಣಿಯ ವೇಳೆ ಅಂಪೈರ್​ ಪ್ಯಾನೆಲ್​ನಲ್ಲಿ ತನ್ವೀರ್ ಅವರನ್ನು ಸೇರಿಸಿಲ್ಲ. ಹಿಂದಿನ ಸರಣಿ ವೇಳೆ ಭಾರತ ತಂಡದ ನಾಯಕಿ ಹರ್ಮನ್​ಪ್ರೀತ್​ ಕೌರ್ ಕೋಪಕ್ಕೆ ತನ್ವೀರ್​ ಗುರಿಯಾಗಿದ್ದರು. ಹೀಗಾಗಿ ಸಂಭಾವ್ಯ ವಿವಾದಗಳನ್ನು ತಪ್ಪಿಸಲು, ಅಂಪೈರ್ ತನ್ವೀರ್ ಅಹ್ಮದ್ ಮುಂಬರುವ ಸರಣಿಯಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುವುದಿಲ್ಲ.

ಈ ವರ್ಷದ ಆರಂಭದಲ್ಲಿ ಭಾರತ ಮತ್ತ ಬಾಂಗ್ಲಾ ತಂಡಗಳ ನಡುವಿನ ಏಕದಿನ ಸರಣಿಯ ಸಮಯದಲ್ಲಿ ಅಹ್ಮದ್ ಅನಗತ್ಯ ಘಟನೆಯಲ್ಲಿ ಭಾಗಿಯಾಗಿದ್ದರು. ಇದು ಭಾರತೀಯ ಆಟಗಾರರೊಂದಿಗೆ ಉದ್ವಿಗ್ನತೆಗೆ ಕಾರಣವಾಗಿತ್ತು. ಭಾರತ ಮತ್ತು ಬಾಂಗ್ಲಾದೇಶ ನಡುವಿನ 2023 ರ ಏಕದಿನ ಸರಣಿಯಲ್ಲಿ ಅಹ್ಮದ್ ಮತ್ತು ಭಾರತೀಯ ನಾಯಕಿ ಹರ್ಮನ್ಪ್ರೀತ್ ಕೌರ್ ಅವರಿಗೆ ಅನವಶ್ಯಕ ಔಟ್ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

ಅಂತಿಮ ಏಕದಿನ ಪಂದ್ಯದಲ್ಲಿ, ಕೌರ್ ಅವರನ್ನು ಎಲ್​ಬಿಡಬ್ಲ್ಯು ಎಂದು ಅಹ್ಮದ್ ಬೆರಳು ಎತ್ತಿದರು. ಇದು ಭಾರತೀಯ ನಾಯಕಿಯ ಹತಾಶೆಗೆ ಕಾರಣವಾಗಿತ್ತು. ಅವರು ಸ್ಟಂಪ್​ಗಳಿಗೆ ಬ್ಯಾಟ್​ನಿಂದ ಬಡಿದು ಅಂಪೈರ್​ ಜತೆ ತೀವ್ರ ವಾಗ್ವಾದದಲ್ಲಿ ತೊಡಗಿದ್ದರು. ಕೌರ್ ಮಾಡಿರುವ ತಪ್ಪುಗಳಿಗಾಗಿ ನಂತರ ಎರಡು ಪಂದ್ಯಗಳ ನಿಷೇಧವನ್ನು ವಿಧಿಸಲಾಯಿತು. ಅದಕ್ಕಿಂತ ಮೊದಲು ಅವರು ಬಾಂಗ್ಲಾದೇಶದ ಆಟಗಾರರನ್ನು ಗೇಲಿ ಮಾಡುವ ಮೂಲಕ ವಿವಾದಕ್ಕೆ ಕಾರಣರಾಗಿದ್ದರು.

ತನ್ವೀರ್ ಹೆಸರಿಲ್ಲ: ಇಫ್ತಿಖರ್ ಅಹ್ಮದ್ ಮಿಥ

ಭಾರತೀಯ ಆಟಗಾರರಿಂದ ಯಾವುದೇ ಸಂಭಾವ್ಯ ವಿವಾದ ಅಥವಾ ಹಿನ್ನಡೆ ತಡೆಗಟ್ಟಲು ಟಿ 20 ಐ ಸರಣಿಗೆ ಅಂಪೈರಿಂಗ್ ಸಮಿತಿಯಿಂದ ಅಹ್ಮದ್ ಅವರನ್ನು ಹೊರಗಿಡಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ನಿರ್ಧರಿಸಿದೆ.

ಭಾರತ ಮಹಿಳಾ ತಂಡದ ವಿರುದ್ಧದ ಮುಂಬರುವ ತವರು ಸರಣಿಯಲ್ಲಿ ಅವರನ್ನು ಸೇರಿಸಿದರೆ ಭಾರತೀಯ ಮಹಿಳಾ ಕ್ರಿಕೆಟಿಗರು ಅವರನ್ನು ಗುರಿಯಾಗಿಸಬಹುದು. ಅದು ಸಂಭವಿಸಲು ನಾವು ಬಯಸುವುದಿಲ್ಲ. ಇದರ ಪರಿಣಾಮವಾಗಿ, ಬಾಂಗ್ಲಾದೇಶ ಮತ್ತು ಭಾರತ ಮಹಿಳಾ ತಂಡವನ್ನು ಒಳಗೊಂಡ ಸರಣಿಗೆ ಅವರನ್ನು ಸೇರಿಸದಿರಲು ನಾವು ನಿರ್ಧರಿಸಿದ್ದೇವೆ”ಎಂದು ಬಿಸಿಬಿ ಅಧಿಕಾರಿಯೊಬ್ಬರು ಕ್ರಿಕ್​ಬಜ್​ಗೆ ತಿಳಿಸಿದ್ದಾರೆ.

ಇದನ್ನೂ ಓದಿ: Virat kohli : ವಿಶ್ವಕಪ್ ಫೈನಲ್​ನಲ್ಲಿ ಔಟ್ ಆದ ರೀತಿಯನ್ನುಗೌತಮ್ ಗಂಭೀರ್​ಗೆ ವಿವರಿಸಿದ ಕೊಹ್ಲಿ, ಇಲ್ಲಿದೆ ವಿಡಿಯೊ

ಬಿಸಿಬಿಯ ಅಂಪೈರ್ ಸಮಿತಿಯ ಅಧ್ಯಕ್ಷ ಇಫ್ತಿಖರ್ ಅಹ್ಮದ್ ಮಿಥು ಈ ನಿರ್ಧಾರವನ್ನು ವಿವರಿಸಿದ್ದಾರೆ. “ಭಾರತ ಮಹಿಳಾ ತಂಡದ ವಿರುದ್ಧದ ತವರು ಸರಣಿಗೆ ತನ್ವೀರ್ ಅವರನ್ನು ಪಂದ್ಯದ ಅಧಿಕಾರಿಗಳ ಪಟ್ಟಿಯಲ್ಲಿ ಸೇರಿಸಲಾಗಿಲ್ಲ, ಏಕೆಂದರೆ ಅವರು ಜಿಂಬಾಬ್ವೆ ವಿರುದ್ಧದ ತವರು ಸರಣಿಯಲ್ಲಿ ಭಾಗಿಯಾಗಬೇಕೆಂದು ನಾವು ಬಯಸುತ್ತೇವೆ. ಎರಡೂ ಸರಣಿಗಳನ್ನು ಅಕ್ಕಪಕ್ಕದಲ್ಲಿ ಆಡಲಾಗುವುದು” ಎಂದು ಅವರು ಹೇಳಿದರು.

ಬಿಸಿಸಿಐ ಏಪ್ರಿಲ್ 15 ರಂದು ಸರಣಿಗೆ ತಂಡವನ್ನು ಪ್ರಕಟಿಸಿದೆ. ಹರ್ಮನ್ ಪ್ರೀತ್ ಸಿಂಗ್ ತಂಡವನ್ನು ಮುನ್ನಡೆಸಲಿದ್ದು, ಸ್ಮೃತಿ ಮಂದಾನ ಉಪನಾಯಕಿಯಾಗಲಿದ್ದಾರೆ. ಆಶಾ ಶೋಭನಾ ಮತ್ತು ಸಜನಾ ಸಜೀವನ್ ತಮ್ಮ ಮೊದಲ ರಾಷ್ಟ್ರೀಯ ಕರೆಗಳನ್ನು ಗಳಿಸಿದ್ದಾರೆ, ಡಬ್ಲ್ಯುಪಿಎಲ್ 2024 ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಶ್ರೇಯಾಂಕಾ ಪಾಟೀಲ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Exit mobile version