ಬೆಂಗಳೂರು: ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2023) ಡಿಜಿಟಲ್ ಪ್ರಸಾರದ ಹಕ್ಕುಗಳ ಪಡೆದಿರುವ ಜಿಯೋ ಸಿನಿಮಾ, ಮಂಗಳೂರಿನಲ್ಲಿ ನಿರ್ಮಿಸಲಾಗಿರುವ ಟಾಟಾ ಐಪಿಎಲ್ ಫ್ಯಾನ್ ಪಾರ್ಕ್‌ಗೆ ಅಭಿಮಾನಿಗಳಿಗೆ ಆಹ್ವಾನ ನೀಡಿದೆ. ದೇರಳಕಟ್ಟೆ ಕೋಟೆಕಾರ್ನ ತೊಕ್ಕೊಟ್ಟು-ಕೋಣಾಜೆ ವಿಶ್ವವಿದ್ಯಾಲಯ ರಸ್ತೆಯಲ್ಲಿರುವ ಕಣಚೂರು ಮೆಡಿಕಲ್ ಕಾಲೇಜು ಮೈದಾನದಲ್ಲಿ ನಿರ್ಮಿಸಲಾಗಿರುವ ಟಾಟಾ ಐಪಿಎಲ್ ಫ್ಯಾನ್ ಪಾರ್ಕ್‌ಗೆ ಮೇ 21ರಂದು ಕ್ರಿಕೆಟ್ ಪ್ರೇಮಿಗಳು ಆಗಮಿಸಿ ಐಪಿಎಲ್ ಪಂದ್ಯಗಳ ನೇರಪ್ರಸಾರ ವೀಕ್ಷಣೆ ಮಾಡಬಹುದು.
ಮೇ 21ರಂದು ಮಧ್ಯಾಹ್ನ 3.30ರಿಂದ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಮತ್ತು ರಾತ್ರಿ 7.30ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ನಡುವೆ ನಡೆಯಲಿರುವ ಟಾಟಾ ಐಪಿಎಲ್ ಪಂದ್ಯಗಳನ್ನು ಮಂಗಳೂರಿನ ಫ್ಯಾನ್ ಪಾರ್ಕ್ನಲ್ಲಿ ಜಿಯೋಸಿನಿಮಾ ನೇರಪ್ರಸಾರ ಮಾಡಲಿದೆ. ಭಾನುವಾರ ಮಧ್ಯಾಹ್ನ 1.30ರಿಂದ ಫ್ಯಾನ್ ಪಾರ್ಕ್ನ ಗೇಟ್ಗಳು ತೆರೆಯಲಿವೆ.
ಟಾಟಾ ಐಪಿಎಲ್ ಫ್ಯಾನ್ ಪಾರ್ಕ್‌ಗೆ ಪ್ರವೇಶ ಉಚಿತವಾಗಿರುತ್ತದೆ. ಅಭಿಮಾನಿಗಳು ದೈತ್ಯ ಎಲ್ಇಡಿ ಪರದೆಗಳಲ್ಲಿ ಜಿಯೋಸಿನಿಮಾ ಅಪ್ಲಿಕೇಶನ್ ಮೂಲಕ ಲೈವ್-ಸ್ಟ್ರೀಮ್ ಮಾಡುವ ಆಟವನ್ನು ವೀಕ್ಷಿಸಿ ಆನಂದಿಸಬಹುದು. ವಿಶೇಷವಾಗಿ ಮೀಸಲಾದ ಕುಟುಂಬ ವಲಯ, ಮಕ್ಕಳ ವಲಯ, ಆಹಾರ ಮತ್ತು ಪಾನೀಯಗಳು ಮತ್ತು ಜಿಯೋಸಿನಿಮಾ ಅನುಭವ ವಲಯ ಸೇರಿದಂತೆ ಎಲ್ಲಾ ವಯಸ್ಸಿನ ಜನರಿಗೆ ಅತ್ಯಾಕರ್ಷಕ ಕೊಡುಗೆಗಳು ಲಭ್ಯವಿದೆ.
ಕಳೆದ ತಿಂಗಳು ಜಿಯೋಸಿನಿಮಾ ಜೀತೋ ಧನ್ ಧನಾ ಧನ್ ಎಂಬ ಹೊಸ ಸ್ಪರ್ಧೆಯನ್ನು ಪರಿಚಯಿಸಿತ್ತು. ಇದು ಅಭಿಮಾನಿಗಳಿಗೆ ಪ್ರತಿ ಪಂದ್ಯದಲ್ಲೂ ಒಂದು ಕಾರನ್ನು ಗೆಲ್ಲುವ ಅವಕಾಶವನ್ನು ನೀಡುತ್ತ ಬಂದಿದೆ. ಇದು ಟಾಟಾ ಐಪಿಎಲ್ ಪಂದ್ಯಗಳನ್ನು ವೀಕ್ಷಿಸುತ್ತಿರುವಾಗ ಅವರ ವಿಶೇಷ ಅನುಭವ ನೀಡಿದೆ. ಇಲ್ಲಿಯವರೆಗಿನ ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಜನರು ಹೊಸ ಕಾರನ್ನು ಗೆದ್ದು ಮನೆಗೆ ಕೊಂಡೊಯ್ದಿದ್ದಾರೆ. ಈ ಸ್ಪರ್ಧೆಯಲ್ಲಿ ಕರ್ನಾಟಕದ ಹಾಸನದ ಸೋಮಶೇಖರ್ ಪಿ.ವಿ. ಮತ್ತು ಬೆಳಗಾವಿಯ ನ್ಯಾಮತ್ ಮಟ್ಟೆ ಅವರು ಕೂಡ ಕಾರು ವಿಜೇತರಾಗಿದ್ದಾರೆ.
ಇದನ್ನೂ ಓದಿ : IPL 2023: ಮುಂಬಯಿ ಇಂಡಿಯನ್ಸ್ ವಿರುದ್ಧ ಲಕ್ನೊ ತಂಡ ಗೆದ್ದ ಬಳಿಕ ಐಪಿಎಲ್ ಅಂಕಪಟ್ಟಿ ಈ ರೀತಿ ಇದೆ
ಜಿಯೋಸಿನಿಮಾದಲ್ಲಿನ ಟಾಟಾ ಐಪಿಎಲ್‌ನ ನೇರಪ್ರಸಾರವು ಈಗಾಗಲೇ ಹಲವಾರು ದಾಖಲೆಗಳನ್ನು ಮುರಿದಿದೆ. ಏಪ್ರಿಲ್ 17ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ದಾಖಲೆಯ 2.4 ಕೋಟಿ ವೀಕ್ಷಣೆ ಕಂಡಿತ್ತು. ಇದು ಈ ಋತುವಿನ ಟಾಟಾ ಐಪಿಎಲ್ನಲ್ಲಿ ಗರಿಷ್ಠ ವೀಕ್ಷಣೆ ಕಂಡ ಪಂದ್ಯವಾಗಿದೆ.