Site icon Vistara News

INDvsAUS : ಭಾರತ ತಂಡ 262 ರನ್​ಗಳಿಗೆ ಆಲ್​ಔಟ್​, ಅರ್ಧ ಶತಕ ಬಾರಿಸಿ ಮಾನ ಕಾಪಾಡಿದ ಅಕ್ಷರ್​ ಪಟೇಲ್​

axar patel

#image_title

ನವ ದೆಹಲಿ: ಅಕ್ಷರ್​ ಪಟೇಲ್ (74) ಬಾರಿಸಿದ ಅಮೋಘ ಅರ್ಧ ಶತಕದ ನೆರವು ಪಡೆದ ಭಾರತ ತಂಡ ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧ ಟೆಸ್ಟ್​ ಸರಣಿಯ ಎರಡನೇ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 262 ರನ್​ಗೆ ಆಲ್​ಔಟ್​ ಆಯಿತು.. ಆದಾಗ್ಯೂ ಒಂದು ರನ್ ಹಿನ್ನಡೆ ಅನುಭವಿಸಿದೆ. ವಿರಾಟ್​ ಕೊಹ್ಲಿ 44 ರನ್​ ಬಾರಿಸಿ ತಂಡಕ್ಕೆ ಸ್ವಲ್ಪ ಮಟ್ಟಿಗೆ ನೆರವಾದರೆ, ಆರ್​ ಅಶ್ವಿನ್​ (37) ಅಕ್ಷರ್​ ಪಟೇಲ್​ ಜತೆ 114 ರನ್​ಗಳ ಜತೆಯಾಟ ನೀಡಿ, ಆರಂಭಿಕ ಕುಸಿತದಿಂದ ಪಾರು ಮಾಡಿದರು.

ಇಲ್ಲಿನ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದ ಮೊದಲ ಇನಿಂಗ್ಸ್​​ನಲ್ಲಿ ಆಸ್ಟ್ರೇಲಿಯಾ ತಂಡ ಗಳಿಸಿದ್ದ 263 ರನ್​ಗಳಿಗೆ ಪ್ರತಿಯಾಗಿ ಆಡಿದ ಭಾರತ ತಂಡ 83.3 ಓವರ್​ಗಳಲ್ಲಿ 262 ರನ್​ಗಳಿಗೆ ಕುಸಿದು ಒಂದು ರನ್​ ಹಿನ್ನಡೆಗೆ ಒಳಗಾಯಿತು. ನೇಥನ್​ ಲಯಾನ್​ 67 ರನ್​ಗಳಿಗೆ 5 ವಿಕೆಟ್​ ಕಬಳಿಸಿದರೆ, ಟಾಡ್​ ಮರ್ಫಿ 53 ರನ್​ಗಳಿಗೆ 2 ವಿಕೆಟ್​ ಹಾಗೂ ಮ್ಯಾಥ್ಯೂ ಕುನ್ಹೇಮನ್​ 72 ರನ್​ಗಳಿಗೆ 2 ವಿಕೆಟ್​ ಕಬಳಿಸಿ ಪ್ರವಾಸಿ ತಂಡವನ್ನು ಕಾಡಿದರು.

ಅಗ್ರ ಕ್ರಮಾಂಕದ ಬ್ಯಾಟರ್​ಗಳು ಫೇಲ್​

ಭಾರತ ತಂಡದ ಆರಂಭಿಕ ಬ್ಯಾಟರ್​ಗಳು ಮತ್ತೆ ಬ್ಯಾಟಿಂಗ್ ವೈಫಲ್ಯ ಎದುರಿಸಿದರು. ಮೊದಲ ದಿನ ಔಟಾಗದೇ 21 ರನ್​ ಬಾರಿಸಿದ್ದ ಭಾರತ ತಂಡ ಎರಡನೇ ದಿನ ಆರಂಭದಲ್ಲೇ ವಿಕೆಟ್​ ಕಳೆದುಕೊಂಡಿತು. ಮತ್ತೊಮ್ಮೆ ಬ್ಯಾಟಿಂಗ್​ ವೈಫಲ್ಯ ಎದುರಿಸಿದ ಕೆ. ಎಲ್​ ರಾಹುಲ್ 17 ರನ್​ಗೆ ವಿಕೆಟ್​ ಒಪ್ಪಿಸಿದರು. 46 ರನ್​ಗೆ ಮೊದಲ ವಿಕೆಟ್ ಕಳೆದುಕೊಂಡ ಭಾರತ ಸ್ವಲ್ಪ ಹೊತ್ತಿನಲ್ಲೇ ಮತ್ತೊಂದು ಆಘಾತಕ್ಕೆ ಒಳಗಾಯಿತು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಚೇತೇಶ್ವರ್​ ಪೂಜಾರ ಶೂನ್ಯಕ್ಕೆ ಔಟಾದರು. 100ನೇ ಟೆಸ್ಟ್​ ಅಡುತ್ತಿರುವ ಅವರು ನಿರಾಸೆಗ ಮೂಡಿಸಿದರು. ಸ್ವಲ್ಪ ಹೊತ್ತಿನಲ್ಲಿ ನಾಯಕ ರೋಹಿತ್​ ಶರ್ಮ (32) ವಿಕೆಟ್​ ಒಪ್ಪಿಸಿದರು. ಈ ವೇಳೆ ಭಾರತ 66 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡಿತು.

ಬಳಿಕ ಜತೆಯಾದ ವಿರಾಟ್ ಕೊಹ್ಲಿ (44) ಹಾಗೂ ರವೀಂದ್ರ ಜಡೇಜಾ (26) ಸ್ವಲ್ಪ ಹೊತ್ತು ಕ್ರೀಸ್​ನಲ್ಲಿ ತಳವೂರಿ ನಿಂತರು. ಆದರೆ, ಜಡೇಜಾ ಎಲ್​ಬಿಡಬ್ಲ್ಯು ಆಡುವ ಮೂಲಕ ನಿರಾಸೆಯಿಂದ ನಡೆದರು. ನಂತರ ಬಂದ ವಿಕೆಟ್​ಕೀಪರ್​ ಬ್ಯಾಟರ್ ಶ್ರೀಕರ್ ಭರತ್​ ಕೂಡ 6 ರನ್​ಗೆ ವಿಕೆಟ್​ ಒಪ್ಪಿಸಿದರು. ಸ್ವಲ್ಪ ಹೊತ್ತಿನಲ್ಲೇ ವಿರಾಟ್ ಕೊಹ್ಲಿ ವಿವಾದಾತ್ಮಕ ತೀರ್ಪಿಗೆ ಔಟಾದರು.

ಇದನ್ನೂ ಓದಿ : INDvsAUS : ಶತಕದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ಚೇತೇಶ್ವರ್​ ಪೂಜಾರ, ಜೀವದಾನ ಸಿಕ್ಕರೂ ಬಳಸಿಕೊಳ್ಳಲಿಲ್ಲ!

ನಂತರ ಆಸ್ಟ್ರೇಲಿಯಾದ ಬೌಲರ್​ಗಳನ್ನು ಕಾಡಿದ ಅಕ್ಷರ್​ ಪಟೇಲ್ ಹಾಗೂ ರವಿಚಂದ್ರನ್​ ಅಶ್ವಿನ್​ ಶತಕದ ಜತೆಯಾಡಿದರು. ಅಶ್ವಿನ್​ ವಿಕೆಟ್​ ಪಡೆಯುವ ಮೂಲಕ ಜತೆಯಾಟ ಮುರಿದ ಆಸೀಸ್​ ಬೌಲರ್​ಗಳು ಸ್ವಲ್ಪ ಹೊತ್ತಿನಲ್ಲಿ ಅಕ್ಷರ್ ಪಟೇಲ್​ ಅವರನ್ನೂ ಔಟ್​ ಮಾಡಿದರು.

Exit mobile version