ಬೆಂಗಳೂರು: ಭಾರತ ಕ್ರಿಕೆಟ್ ತಂಡ ಇಂದು ಮುಂಬೈಗೆ ಬಂದು ಇಳಿಯಿತು. 2023ರ ವಿಶ್ವಕಪ್ ಟೂರ್ನಿಯ ಮುಂದಿನ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿದೆ. ಈ ಪಂದ್ಯವು 2011 ರ ವಿಶ್ವಕಪ್ ಫೈನಲ್ನ ಪುನರಾವರ್ತನೆಯಾಗಿದೆ. ಅಲ್ಲಿ ಎಂಎಸ್ ಧೋನಿ ನೇತೃತ್ವದ ಟೀಮ್ ಇಂಡಿಯಾ ಲಂಕಾ ಬಳಗವನ್ನು ಸೋಲಿಸಿ ಟ್ರೋಫಿಯನ್ನು ವಶಪಡಿಸಿಕೊಂಡಿತ್ತು.
ಇಲ್ಲಿನ ಎಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು 100 ರನ್ ಗಳಿಂದ ಮಣಿಸಿದೆ. ಈ ಗೆಲುವಿನೊಂದಿಗೆ ರೋಹಿತ್ ಶರ್ಮಾ ನೇತೃತ್ವದ ತಂಡ 2023ರ ವಿಶ್ವಕಪ್ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದೆ. ಲಕ್ನೋದಲ್ಲಿ ಆಂಗ್ಲರ ಪಡೆಯ ವಿರುದ್ಧದ ಗೆಲುವಿನ ನಂತರ ಮೆನ್ ಇನ್ ಬ್ಲೂ ಇಂದು ‘ಕನಸುಗಳ ನಗರ’ ಮುಂಬೈಗೆ ಇಳಿದಿದೆ.
ಈ ಸುದ್ದಿಯನ್ನೂ ಓದಿ : BCCI vs PCB : ನಿಮ್ಮಲ್ಲಿಗೆ ಎಂದಿಗೂ ಕಾಲಿಡುವುದಿಲ್ಲ; ಪಾಕಿಸ್ತಾನಕ್ಕೆ ಭಾರತದ ತಿರುಗೇಟು
ಮುಂಬಯಿಎ ಬಂದಿಳಿದ ಹೊರತಾಗಿಯೂ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ತಂಡದೊಂದಿಗೆ ಹೋಟೆಲ್ಗೆ ಹೋಗಲಿಲ್ಲ. ರೋಹಿತ್ ಶರ್ಮಾ ತಮ್ಮ ಕಾರು ಹತ್ತಿಕೊಂಡು ಸೀದಾ ತಮ್ಮ ಮನೆಗೆ ತೆರಳಿದರು. ವಿರಾಟ್ ಕೊಹ್ಲಿಯೂ ಮುಂಬೈನಲ್ಲಿರುವ ತಮ್ಮ ಬಂಗಲೆ ಕಡೆಗೆ ಪ್ರಯಾಣ ಬೆಳೆಸಿದರು. ಸೂರ್ಯಕುಮಾರ್ ಯಾದವ್ ಕೂಡ ಮನೆಯ ಹಾದಿ ಹಿಡಿದರು. ಉಳಿದಂತೆ ಎಲ್ಲರೂ ಬಸ್ ಹತ್ತಿಕೊಂಡು ಹೋಟೆಲ್ಗೆ ಹೋದರು.
Indian team lead by Rohit has reached Mumbai to make 7 out of 7 in World Cup 2023. 🇮🇳pic.twitter.com/ymDzMboVFL
— Johns. (@CricCrazyJohns) October 30, 2023
ಲಕ್ನೋದಲ್ಲಿ ರೋಹಿತ್ ಶರ್ಮಾ ಭರ್ಜರಿ ಅರ್ಧ ಶತಕ!
ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ, ಭಾರತದ ಬೌಲರ್ಗಳು ಲಕ್ನೋದ ಫ್ಲಡ್ ಲೈಟ್ ಅಡಿಯಲ್ಲಿ ಇಂಗ್ಲೆಂಡ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದರು, 100 ರನ್ಗಳಿ ಗೆದ್ದು ಬೀಗಿದರು. ಭಾರತ ಇಂಗ್ಲೆಂಡ್ ವಿರುದ್ಧ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 229 ರನ್ ಕಲೆಹಾಕಿತು. ರೋಹಿತ್ ಶರ್ಮಾ 87 ರನ್ ಬಾರಿಸುವ ಮೂಲಕ ಭಾರತದ ಇನ್ನಿಂಗ್ಸ್ನಲ್ಲಿ ಮಿಂಚಿದರು. ಕೆಎಲ್ ರಾಹುಲ್ (39), ಸೂರ್ಯಕುಮಾರ್ ಯಾದವ್ (49) ಮತ್ತು ಜಸ್ಪ್ರೀತ್ ಬುಮ್ರಾ (16) ಬೌಲಿಂಗ್ಗೆ ನೆರವಾದ ಪಿಚ್ನಲ್ಲಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.
ಬಳಿಕ ಮೊಹಮ್ಮದ್ ಶಮಿ 22ಕ್ಕೆ 4 ಹಾಗೂ ಜಸ್ಪ್ರೀತ್ ಬುಮ್ರಾ 32ಕ್ಕೆ 3 ವಿಕೆಟ್ ಪಡೆದು ಇಂಗ್ಲೆಂಡ್ ವಿರುದ್ಧ ಗೆಲುವಿಗೆ ಕಾರಣರಾದರು. ಇಂಗ್ಲೆಂಡ್ ಮುಂದಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಇದೇ ವೇಲೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಲಂಕಾ ವಿರುದ್ಧ ಸೆಣಸಲಿದೆ.
30 ರನ್ಗಳ ಕೊರತೆ ಎಂದ ರೋಹಿತ್
ಇಂಗ್ಲೆಂಡ್(IND vs ENG) ವಿರುದ್ಧದ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೂ ತಂಡದ ನಾಯಕ ರೋಹಿತ್ ಶರ್ಮ(Rohit Sharma) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಬ್ಯಾಟರ್ಗಳು ಈ ಪಂದ್ಯದಲ್ಲಿ 30 ರನ್ಗಳ ಕೊರತೆ ಅನುಭವಿಸಿದ್ದಾರೆ ಎಂದು ಹೇಳಿದರು.
ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ರೋಹಿತ್, “ಇದೊಂದು ಅದ್ಭುತ ಪಂದ್ಯವಾಗಿತ್ತು. ಆದರೆ ನಮ್ಮ ಬ್ಯಾಟರ್ಗಳು 30 ರನ್ಗಳ ಕೊರತೆ ಅನುಭವಿಸಿದ್ದು ಬೇಸರ ತಂದಿದೆ. ನಿಜಕ್ಕೂ ಈ ಗೆಲುವು ಬೌಲರ್ಗಳಿಗೆ ಸಲ್ಲಬೇಕು. ಸಾಧಾರಣ ಮೊತ್ತವನ್ನು ಇಬ್ಬನಿ ಬೀಳುತ್ತಿದ್ದ ಹೊರತಾಗಿಯೂ ರಕ್ಷಿಸಿಕೊಂಡಿದ್ದು ಮೆಚ್ಚಲೇ ಬೇಕು. ಈ ಪಂದ್ಯದ ಮೂಲಕ ನಮ್ಮ ತಂಡದ ಬೌಲಿಂಗ್ ಪ್ರದರ್ಶನ ಏನೆಂಬುದು ತಿಳಿದುಬಂದಿದೆ” ಎಂದು ಹೇಳಿದರು.
“ಎದುರಾಳಿ ತಂಡದ ಮೇಲೆ ಒತ್ತಡ ಹೇರಲು ಪಂದ್ಯದ ಆರಂಭದಲ್ಲೇ ಒಂದೆರಡು ವಿಕೆಟ್‌ಗಳನ್ನು ಪಡೆಯಲು ಪ್ರಯತ್ನಿಸಬೇಕು. ಅದನ್ನು ಮಾಡುವಲ್ಲಿ ನಮ್ಮ ತಂಡದ ಬೌಲರ್ಗಳ ಯಶಸ್ಸು ಸಾಧಿಸಿದರು. ಇಬ್ಬನಿಯನ್ನೂ ಲೆಕ್ಕಿಸದೆ ಲೈನ್ ಅಂಡ್ ಲೆಂತ್ನಲ್ಲಿ ಬೌಲಿಂಗ್ ಮಾಡಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ತಂದು ಕೊಟ್ಟರು” ಎಂದು ಬೌಲರ್ಗಳ ಪ್ರದರ್ಶನವನ್ನು ಶ್ಲಾಘಿಸಿದರು.