ಮೊಹಾಲಿ: ಭಾರತ ಮತ್ತು ಅಫಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಇಂದು ಪಂಜಾಬ್ನ ಮೊಹಾಲಿಯಲ್ಲಿ ನಡೆಯಲಿದೆ. ಮೊಹಾಲಿಯಲ್ಲಿ ವಿಪರೀತ ಚಳಿ ಇರುವ ಕಾರಣ ಉಭಯ ತಂಡಗಳ ಆಟಗಾರರು ಕೂಡ ಜಾಕೆಟ್, ಗೌಸ್ ಮತ್ತು ಮಂಕಿ ಕ್ಯಾಪ್ ಮೊರೆಹೋಗಿದ್ದಾರೆ. ಭಾರತ ತಂಡದ(Team India) ಆಟಗಾರರು ಮತ್ತು ಕೋಚ್ ಚಳಿಯಲ್ಲಿ ಗಡಗಡನೆ ನಡುಗಿದ ವಿಡಿಯೊವನ್ನು ಬಿಸಿಸಿಐ(BCCI) ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಬಿಸಿಸಿಐ ಹಂಚಿಕೊಂಡ ವಿಡಿಯೊದಲ್ಲಿ ಅಕ್ಷರ್ ಪಟೇಲ್, ರವಿ ಬಿಷ್ಟೋಯಿ, ಅವೇಶ್ ಖಾನ್, ವಾಸಿಂಗ್ಟನ್ ಸುಂದರ್, ಕೋಚ್ ರಾಹುಲ್ ದ್ರಾವಿಡ್ ಅವರು ಮೊಹಾಲಿಯಲ್ಲಿನ ಚಳಿಯ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಈ ವಿಡಿಯೊಗೆ ‘ಗ್ಲೌಸ್ ಆನ್, ಜಾಕೆಟ್ ಆನ್, ವಾರ್ಮಪ್ಸ್ ಆನ್’ ಎಂದು ಶಿರ್ಷಿಕೆ ನೀಡಿದೆ. ದ್ರಾವಿಡ್ ಅವರು ಬೆಂಗಳೂರಿನಲ್ಲಿಯೂ ಈ ರೀತಿಯ ಚಳಿ ನೋಡಿಲ್ಲ ಎಂದು ಹೇಳಿದ್ದು ಈ ವಿಡಿಯೊದಲ್ಲಿ ನೋಡಬಹುದು.
Jacket 🧥 ON
— BCCI (@BCCI) January 11, 2024
Warmers ON
Gloves 🧤 ON #TeamIndia have a funny take on their "chilling" ❄️🥶 training session in Mohali. #INDvAFG | @IDFCFIRSTBank pic.twitter.com/rWeodTeDr2
ಭಾರತ ಮತ್ತು ಅಫಘಾನಿಸ್ತಾನ ತಂಡದ ಎಲ್ಲ ಆಟಗಾರರು ಕೂಡ ಬೆಚ್ಚನೆಯ ಉಡುಪು ಧರಿಸಿ ಅಭ್ಯಾಸ ನಡೆಸಿದ್ದು ಕಂಡು ಬಂತು. ರಾತ್ರಿಯ ವೇಳೆ ಮಂಜು ಬೀಳುವ ಕಾರಣ ಚಳಿ ಇನ್ನೂ ಹೆಚ್ಚಾಗಲಿದೆ. ಹೀಗಾಗಿ ಆಟಗಾರರು ಇಂದು ಪಂದ್ಯವನ್ನಾಡಲು ಕೊಂಚ ಹರಸಾಹಸ ಪಡಬಹುದು.
ಬೌಲರ್ಗಳಿಗೆ ಕಷ್ಟ
ಚಳಿಯ ವಾತಾವರಣ ಇರುವುದರಿಂದ ವೇಗದ ಬೌಲರ್ಗಳು ಸ್ನಾಯು ಸೆಳೆತಕ್ಕೆ ಒಳಗಾಗುವ ಭೀತಿ ಇದೆ. ಅಲ್ಲದೆ ಇಬ್ಬನಿ ಕಾಟದಿಂದಾಗಿ ನಿರ್ಧಿಷ್ಟ ಲೆಂತ್ ಮತ್ತು ಲೈನ್ನಲ್ಲಿ ಬೌಲಿಂಗ್ ನಡೆಸುವುದು ಕೂಡ ಸವಾಲಿನಿಂದ ಕೂಡಿರಲಿದೆ. ರಾತ್ರಿಯ ವೇಳೆ ವಿಪರೀತ ಮಂಜು ಬೀಳುವ ಕಾರಣ ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ದುಕೊಂಡು ಎದುರಾಳಿ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಬೇಕಿದೆ. ದೊಡ್ಡ ಮೊತ್ತದ ಗುರಿ ಪಡೆದರೆ ಚೇಸಿಂಗ್ ನಡಸುವುದು ಕೂಡ ಕಷ್ಟ. ಇಬ್ಬನಿ ಬಿದ್ದು ಮೈದಾನ ಒದೆಯಾಗುವ ಕಾರಣದಿಂದ ಔಟ್ ಫೀಲ್ಡ್ನಲ್ಲಿ ಚೆಂಡಿನ ಚಲನೆ ನಿಧಾನವಾಗಲಿದೆ.
ಇದನ್ನೂ ಓದಿ Rohit Sharma: ಒಂದೇ ಪಂದ್ಯದಲ್ಲಿ ಹಲವು ದಾಖಲೆ ಬರೆಯಲು ಸಜ್ಜಾದ ರೋಹಿತ್ ಶರ್ಮ
ಮಳೆ ಭೀತಿ ಇಲ್ಲ
ಈ ಪಂದ್ಯಕ್ಕೆ ಮಳೆಯ ಸಾಧ್ಯತೆಯಿಲ್ಲ. ಹೀಗಾಗಿ ಪಂದ್ಯವನ್ನು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು. ಗಾಳಿಯು ಗಂಟೆಗೆ 16 ಕಿಮೀ ವೇಗದಲ್ಲಿ ಬೀಸಲಿದೆ. ಜತೆಗೆ ಚಳಿಯೂ ಇರಲಿದೆ.
ಸಂಭಾವ್ಯ ತಂಡ
ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ತಿಲಕ್ ವರ್ಮ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಶಿವಂ ದುಬೆ, ಅರ್ಶ್ದೀಪ್ ಸಿಂಗ್, ಮುಖೇಶ್ ಕುಮಾರ್, ಆವೇಶ್ ಖಾನ್.
ಅಫಘಾನಿಸ್ತಾನ: ಇಬ್ರಾಹಿಂ ಜದ್ರಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ರಹಮತ್ ಶಾ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಕರೀಮ್ ಜನತ್, ಅಜ್ಮತುಲ್ಲಾ ಒಮರ್ಜಾಯ್, ಮುಜೀಬ್ ಉರ್ ರೆಹಮಾನ್, ಫಜಲ್ ಹಕ್ ಫಾರೂಕಿ, ನವೀನ್ ಉಲ್ ಹಕ್, ಕೈಸ್ ಅಹ್ಮದ್.