Site icon Vistara News

Test Cricket : ಟೆಸ್ಟ್​ ಕ್ರಿಕೆಟ್​ನಲ್ಲಿ ಐತಿಹಾಸಿಕ ದಾಖಲೆ ಬರೆದ ಭಾರತ ಮಹಿಳೆಯರ ಕ್ರಿಕೆಟ್ ತಂಡ

Test Cricket

ಮುಂಬಯಿ: ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನವಾದ ಗುರುವಾರ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ದಾಖಲೆಗಳು ಸೃಷ್ಟಿಯಾಗಿವೆ. ಮಹಿಳಾ ಟೆಸ್ಟ್ ಕ್ರಿಕೆಟ್​ನ ಇನಿಂಗ್ಸ್​ನಲ್ಲಿ ಒಂದೇ ದಿನ 400 ಕ್ಕೂ ಹೆಚ್ಚು ರನ್ ಗಳಿಸಿದ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಭಾರತ ಮಹಿಳಾ ತಂಡ ಪಾತ್ರವಾಗಿದೆ. ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು 88 ವರ್ಷಗಳಲ್ಲಿ ಮಹಿಳಾ ಕ್ರಿಕೆಟ್​ನಲ್ಲಿ ಟೆಸ್ಟ್ ಇನ್ನಿಂಗ್ಸ್​ನ ಮೊದಲ ದಿನದಂದು 400+ ಮೊತ್ತವನ್ನು ದಾಖಲಿಸಿದ 3ನೇ ತಂಡವಾಗಿದೆ.

1935ರಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 4 ವಿಕೆಟ್ ನಷ್ಟಕ್ಕೆ 431 ರನ್ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

ಇದನ್ನೂ ಓದಿ: ಬಾಲ್​ ಬದಿಗಿಟ್ಟು ಬ್ಯಾಟ್​ ಹಿಡಿದ ಶಮಿ; ಮನೆಯಲ್ಲೇ ಪಿಚ್ ನಿರ್ಮಿಸಿ ಬ್ಯಾಟಿಂಗ್​ ಅಭ್ಯಾಸ

ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಂತರ, ಭಾರತೀಯ ಬ್ಯಾಟರ್​​ಗಳು ಸತ್ವವಿಲ್ಲ ಪಿಚ್​ನಲ್ಲಿ ಉಲ್ಲಿಸಿತರಾಗಿ ಆಡಿದರು. ಅಗ್ರ ಮತ್ತು ಮಧ್ಯಮ ಕ್ರಮಾಂಕ ಬ್ಯಾಟರ್​ಗಳು ಗಮನಾರ್ಹ ಕೊಡುಗೆಗಳನ್ನು ನೀಡಿದರು. ಶುಭಾ ಸತೀಶ್ (69), ಜೆಮಿಮಾ ರೊಡ್ರಿಗಸ್ (68), ಯಸ್ತಿಕಾ ಭಾಟಿಯಾ (66) ಮತ್ತು ದೀಪ್ತಿ ಶರ್ಮಾ (ಅಜೇಯ 60) ಅರ್ಧಶತಕಗಳನ್ನು ಬಾರಿಸಿದರು. ಮೊದಲ ದಿನ ಅದ್ಭುತ ಬ್ಯಾಟಿಂಗ್ ಪ್ರದರ್ಶನದೊಂದಿಗೆ, ಭಾರತವು ತವರಿನಲ್ಲಿ ತನ್ನ ಹಿಂದಿನ ಅತ್ಯಧಿಕ ಮೊತ್ತವನ್ನು ಮೀರಿಸಿತು. 2014ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್ ನಷ್ಟಕ್ಕೆ 400 ರನ್ ಗಳಿಸಿತ್ತು.

Exit mobile version