Site icon Vistara News

Team India Coach: ಟೀಮ್​ ಇಂಡಿಯಾದ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ ಪ್ರಧಾನಿ ಮೋದಿ, ಅಮಿತ್ ಶಾ!

Team India Coach

team-india-coach-narendra-modi-and-amit-shah-fake-india-coach-applicants-use-famous-names

ಮುಂಬಯಿ: ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌(Team India Coach) ಹುದ್ದೆಗೆ(Team India Coach Applications) ಯಾರು ಸೂಕ್ತ ಎಂದು ಚಿಂತಿಸುತ್ತಿರುವ ಮಧ್ಯೆ ಬಿಸಿಸಿಐಗೆ ಅಚ್ಚರಿಯೊಂದು ಎದುರಾಗಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi), ಸಚಿನ್​ ತೆಂಡೂಲ್ಕರ್​(Sachin Tendulkar) , ಎಂ.ಎಸ್​ ಧೋನಿ(MS Dhoni), ಅಮಿತ್ ಶಾ(Amit Shah) ಸೇರಿ ಹಲವು ಪ್ರಮುಖರು ಅರ್ಜಿ ಸಲ್ಲಿದ್ದಾರೆ. ಅಸಲಿಗೆ ಇವರ್‍ಯಾರು‌ ಈ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ. ಬದಲಾಗಿ ನೆಟ್ಟಿಗರು ಇವರ ಹೆಸರಿನಲ್ಲಿ ನಕಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಅರ್ಜಿ ಸಲ್ಲಿಸಲು ಮೇ 27 ಅಂತಿಮ ಗಡುವಾಗಿತ್ತು. ಹೀಗಾಗಿ ಕೆಲ ನೆಟ್ಟಿಗರು ಮೋದಿ, ಸಚಿನ್​, ಅಮಿತ್ ಶಾ ಹೆಸರಿನಲ್ಲಿ ನಕಲಿ ಅರ್ಜಿಗಳನ್ನು ಸಲ್ಲಿಸಿ ಬಿಸಿಸಿಐಗೆ ಚಕಮ್​ ಕೊಟ್ಟಿದ್ದಾರೆ. ಇದಕ್ಕೂ ಮುನ್ನ ಅನೇಕ ಕ್ರಿಕೆಟ್​ ಅಭಿಮಾನಿಗಳು(Cricket Fans Apply For India’s Head Coach) ಗೂಗಲ್​ ಅರ್ಜಿ ಪಡೆದುಕೊಂಡು ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತ ಟ್ವೀಟ್​ಗಳು ವೈರಲ್​ ಆಗಿತ್ತು. ಮೂಲಗಳ ಪ್ರಕಾರ ಈಗಾಗಲೇ 3,000 ಅರ್ಜಿಗಳು ಬಂದಿಗೆ ಎಂದು ಹೇಳಲಾಗಿದೆ.

ಆಯ್ಕೆ ಪ್ರಕ್ರಿಯೆ ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಿ ನಂತರ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನ ಒಳಗೊಂಡಿರುತ್ತದೆ ಎಂದು ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಆಯ್ಕೆಯಾದ ಹೊಸ ಕೋಚ್‌ ಟಿ20 ವಿಶ್ವಕಪ್‌ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ನೂತನ ಕೋಚ್​ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿಯೂ ಈ ಕೋಚ್​ಗೆ ಸಿಗಲಿದೆ. 

ಇದನ್ನೂ ಓದಿ Team India Coach Applications: ಭಾರತ ತಂಡದ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ ಸಾವಿರಾರು ಅಭಿಮಾನಿಗಳು; ಫಜೀತಿಗೆ ಸಿಲುಕಿದ ಬಿಸಿಸಿಐ

2011ರಲ್ಲಿ ಗ್ಯಾರಿ ಕಸ್ಟನ್ ಮಾರ್ಗದರ್ಶನದಲ್ಲಿ ಭಾರತ 2ನೇ ಬಾರಿಗೆ ವಿಶ್ವಕಪ್​ ಗೆದ್ದಿತ್ತು. ಬಳಿಕ 2013ರಲ್ಲಿ ಡಂಕನ್​ ಪ್ಲೆಚರ್​ ಮಾರ್ಗದರ್ಶನದಲ್ಲಿ ಭಾರತ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಜಯಿಸಿತ್ತು. ಇದಾದ ಬಳಿಕ ಭಾರತ ಇದುವರೆಗೂ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ರವಿಶಾಸ್ತ್ರಿ ಮತ್ತು ರಾಹುಲ್​ ದ್ರಾವಿಡ್​ ಮಾರ್ಗದರ್ಶನಲ್ಲಿ 2 ಏಕದಿನ ವಿಶ್ವಕಪ್​ ಆಡಿದರೂ ಭಾರತ ಕಪ್​ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ವಿದೇಶಿ ಕೋಚ್​ ಆಯ್ಕೆಯೇ ಉತ್ತಮ ಎಂದು ಬಿಸಿಸಿಐ ಆರಂಭಿಕ ಹಂತದಲ್ಲಿ ಯೋಚಿಸಿತ್ತು. ಆದರೆ ಅನೇಕ ವಿದೇಶಿ ಆಟಗಾರರು ಕೋಚ್​ ಆಗಲಿ ಆಸಕ್ತಿ ಹೊಂದಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಹೀಗಾಗಿ ಬಿಸಿಸಿಐ ದೇಶೀಯ ಆಟಗಾರರ ಮೊರೆ ಹೋದಂತಿದೆ.

ಮೂಲಗಳ ಪ್ರಕಾರ ಗೌತಮ್​ ಗಂಭೀರ್​ ಅವರು ಭಾರತ ತಂಡದ ಕೋಚ್ ಆಗುವ ಸಾಧ್ಯತೆ ಕಂಡುಬಂದಿದೆ. ಭಾನುವಾರ ಮುಕ್ತಾಯ ಕಂಡ 17ನೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ ಕೆಕೆಆರ್​ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಗೌತಮ್​ ಗಂಭೀರ್​ ತಂಡದ ಮೆಂಟರ್​ ಆಗಿದ್ದರು. ಪಂದ್ಯದ ಮುಕ್ತಾಯದ ಬಳಿಕ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರು ಗಂಭೀರ್​ ಜತೆ ಅತ್ಯಂತ ಆತ್ಮೀಯವಾಗಿ ಸುರ್ದೀಘ ಚರ್ಚೆ ಕೂಡ ನಡೆಸಿದ್ದರು. ಇದನ್ನೆಲ್ಲ ನೋಡುವಾಗ ಗಂಭೀರ್​ ಕೋಚ್​ ಆಗುವುದು ಬಹುತೇಖ ಖಚಿತವಾದಂತಿದೆ.

Exit mobile version