ಮುಂಬಯಿ: ರಾಹುಲ್ ದ್ರಾವಿಡ್ ಅವರ ನಿರ್ಗಮನದಿಂದ ತೆರವಾದ ಭಾರತ ಕ್ರಿಕೆಟ್ ತಂಡ ಮುಖ್ಯ ಕೋಚ್ ಹುದ್ದೆಗೆ(Team India Coach) ಈಗಾಗಲೇ ಬಿಸಿಸಿಐ(BCCI) ಗೌತಮ್ ಗಂಭೀರ್(Gautam Gambhir) ಅವರನ್ನು ನೇಮಕ ಮಾಡಿದೆ. ಇದೀಗ ಕೋಚ್ ಹುದ್ದೆಗೆ ಗಂಭೀರ್ ಅವರನ್ನು ಆಯ್ಕೆ ಮಾಡುವ ಮುನ್ನ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(virat kohli) ಜತೆ ಬಿಸಿಸಿಐ ಅಭಿಪ್ರಾಯ ಕೇಳಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಹೌದು ವಿರಾಟ್ ಕೊಹ್ಲಿ ಮತ್ತು ಗಂಭೀರ್ ಐಪಿಎಲ್ ವೇಳೆ ಹಾವು ಮುಂಗುಸಿಯಂತೆ ಕಿತ್ತಾಡಿಕೊಳ್ಳುತ್ತಿದ್ದರು. ಕಳೆದ ವರ್ಷದ ಐಪಿಎಲ್ ವೇಳೆ ಕೈ ಕೈ ಮಿಲಾಯಿಸುವ ಹಂತಕ್ಕೂ ಇಬರಿಬ್ಬರ ಜಗಳ ಮುಂದುವರಿದಿತ್ತು. ಕೊಹ್ಲಿಯ ವಿರುದ್ಧ ಹಲವು ಬಾರಿ ಬಹಿರಂಗವಾಗಿ ಮುನಿಸನ್ನು ಪ್ರದರ್ಶಿಸಿದ್ದರು. ಹೀಗಿರುವಾಗ ಬಿಸಿಸಿಐ ಗಂಭೀರ್ ಅವರನ್ನು ಕೋಚ್ ಆಗಿ ನೇಮಕ ಮಾಡುವಾಗ ಕೊಹ್ಲಿಯನ್ನು ಒಂದು ಮಾತು ಕೂಡ ಕೇಳದೇ ಇರುವುದು ಕೊಹ್ಲಿ ಮತ್ತು ಟೀಮ್ ಇಂಡಿಯಾ ಅಭಿಮಾನಿಗಳಿಗೆ ಅಸಮಾಧಾನ ಉಂಟುಮಾಡಿದೆ. ಇವರಿಬ್ಬರ ಜಗಳ ಮತ್ತೆ ಮುಂದುವರಿದರೆ ತಂಡದ ಒಗ್ಗಟ್ಟು ಇಲ್ಲದಂತಾಗಬಹುದೆಂದು ಅನೇಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಪ್ರತಿ ಐಪಿಎಲ್ನಲ್ಲಿ ಕಚ್ಚಾಟ ನಡೆಸುತ್ತಿದ್ದ ಕೊಹ್ಲಿ ಮತ್ತು ಗಂಭೀರ್ ಈ ಬಾರಿಯ ಐಪಿಎಲ್ನಲ್ಲಿ ಅತ್ಯಂತ ಆತ್ಮೀಯವಾಗಿ ಕಂಡುಬಂದಿದ್ದರು. ಇಬ್ಬರು ಕೂಡ ತಮ್ಮ ಅಹಂ ಮತ್ತು ಮುನಿಸನ್ನು ಮರೆತಿರುವಂತೆ ಕಂಡುಬಂದಿದ್ದರು. ಆದರೂ ಕೂಡ ಕೊಹ್ಲಿ ಕೆಲ ಪಂದ್ಯಗಳಲ್ಲಿ ಆಡದೇ ಇದ್ದಾಗ ಇವರಿಬ್ಬರ ಮಧ್ಯೆ ಮತ್ತೆ ಜಗಳ ಆರಂಭಗೊಳ್ಳುವ ಸಾಧ್ಯತೆ ಇದೆ ಎನ್ನುವುದು ಅಭಿಮಾನಿಗಳ ಆತಂಕ. ಬದಿಗಿಟ್ಟು ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೋಚ್ ಆಯ್ಕೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಶ್ರೀಲಂಕಾ ವಿರುದ್ಧದ ಸರಣಿ ಗಂಭೀರ್ ಪಾಲಿಗೆ ಕೋಚ್ ಆಗಿ ಮೊದಲ ಸವಾಲಾಗಿದೆ.
ಇದನ್ನೂ ಓದಿ Gautam Gambhir : ಸ್ಯಾಲರಿ ಫಿಕ್ಸ್ ಮಾಡದೇ ಗಂಭೀರ್ಗೆ ಕೋಚಿಂಗ್ ಕೆಲಸ ಕೊಟ್ಟ ಬಿಸಿಸಿಐ!
ಕೊಹ್ಲಿಗೆ ಮೊದಲ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿದ್ದೇ ಗಂಭೀರ್…
ವಿರಾಟ್ ಕೊಹ್ಲಿ ಅವರ ಆರಂಭಿಕ ಕ್ರಿಕೆಟ್ ಜರ್ನಿಯಲ್ಲಿ ಗಂಭೀರ್ ಅವರು ತಮಗೆ ಸಿಕ್ಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕೊಹ್ಲಿಗೆ ನೀಡಿ ಕ್ರೀಡಾಸ್ಫೂರ್ತಿ ಮರೆದ್ದರು. ಅಲ್ಲದೆ ಯುವ ಕ್ರಿಕೆಟಿಗರಿಗೆ ಈ ರೀತಿಯ ಗೌರವ ನೀಡಿದರೆ ಅವರು ಮುಂದೆ ಶ್ರೇಷ್ಠ ಕ್ರಿಕೆಟ್ ಆಟಗಾರರಾಗಿ ಬೆಳೆಯುತ್ತಾರೆ ಎಂದಿದ್ದರು. ಆದರೆ ಆ ಬಳಿಕ ಉಭಯ ಆಟಗಾರರು ಹಾವು ಮುಂಗುಸಿಯಂತೆ ಕಚ್ಚಾಡುತ್ತಾ ದ್ವೇಷ ಸಾಧಿಸಿದರು.
“ಗೌತಮ್ ಗಂಭೀರ್ ಅವರನ್ನು ಭಾರತ ತಂಡದ ಮುಖ್ಯ ಕೋಚ್ ಆಗಿ ಸ್ವಾಗತಿಸಲು ಅಪಾರ ಸಂತೋಷವಾಗುತ್ತಿದೆ. ಆಧುನಿಕ ಕ್ರಿಕೆಟ್ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಗೌತಮ್ ಗಂಭೀರ್ ಈ ಬದಲಾವಣೆಯನ್ನು ಬಹಳ ಹತ್ತಿರದಿಂದ ನೋಡಿದ್ದಾರೆ. ತಮ್ಮ ಕ್ರಿಕೆಟ್ ಕರಿಯರ್‌ನಲ್ಲಿ ಗೌತಮ್ ಗಂಭೀರ್ ಹಲವು ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಹೀಗಾಗಿ ಗೌತಮ್ ಗಂಭೀರ್, ಮುಖ್ಯ ಕೋಚ್ ಆಗಿ ಭಾರತ ತಂಡವನ್ನು ಮುನ್ನಡೆಸಲು ಸೂಕ್ತ ವ್ಯಕ್ತಿ ಎಂಬ ವಿಶ್ವಾಸ ನನಗಿದೆ” ಎಂದು ಹೇಳುವ ಮೂಲಕ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಗಂಭೀರ್ ಅವರನ್ನು ಕೋಚ್ ಆಗಿ ಆಯ್ಕೆ ಮಾಡಿದ ವಿಚಾರವನ್ನು ತಿಳಿಸಿದ್ದರು.