Gautam Gambhir : ಸ್ಯಾಲರಿ ಫಿಕ್ಸ್​ ಮಾಡದೇ ಗಂಭೀರ್​ಗೆ ಕೋಚಿಂಗ್​ ಕೆಲಸ ಕೊಟ್ಟ ಬಿಸಿಸಿಐ! - Vistara News

ಪ್ರಮುಖ ಸುದ್ದಿ

Gautam Gambhir : ಸ್ಯಾಲರಿ ಫಿಕ್ಸ್​ ಮಾಡದೇ ಗಂಭೀರ್​ಗೆ ಕೋಚಿಂಗ್​ ಕೆಲಸ ಕೊಟ್ಟ ಬಿಸಿಸಿಐ!

Gautam Gambhir :ಗೌತಮ್ ಗಂಭೀರ್ ಅವರು ಭಾರತದ ಮುಖ್ಯ ಕೋಚ್ ಪಾತ್ರವನ್ನು ಒಪ್ಪಿಕೊಂಡಿದ್ದರೂ ಅವರು ಮಂಡಳಿಯೊಂದಿಗೆ ವೇತನ ಮಾತುಕತೆಗಳನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದು ವರದಿಗಳು ಸೂಚಿಸಿದೆ. ಇತ್ತೀಚೆಗೆ, ಮತ್ತೊಂದು ವರದಿಯು ಬಿಸಿಸಿಐ ಅವರನ್ನು ಮುಖ್ಯ ಕೋಚ್ ಆಗಿ ಘೋಷಿಸಲು ವಿಳಂಬ ಮಾಡಲು ವೇತನ ಮಾತುಕತೆ ಮುಖ್ಯ ಕಾರಣವಾಗಿದೆ ಎಂದು ಹೇಳಿದೆ.

VISTARANEWS.COM


on

Gautam Gambhir
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಗೌತಮ್ ಗಂಭೀರ್ (Gautam Gambhir) ಅವರನ್ನು ಮಂಗಳವಾರ (ಜುಲೈ 9) ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಬಿಸಿಸಿಐ ಆ ಪ್ರಕಟಣೆಯನ್ನು ಘೋಷಿಸಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಎಕ್ಸ್ ನಲ್ಲಿ ಈ ಮಾಹಿತಿ ನೀಡಿದ್ದಾರೆ.

ರಾಹುಲ್ ದ್ರಾವಿಡ್ ನಂತರ ಭಾರತದ ಮಾಜಿ ಆರಂಭಿಕ ಆಟಗಾರ ಭಾರತದ ಕೋಚ್ ಆಗಿ ನೇಮಕಗೊಂಡಿದ್ದಾರೆ. ದ್ರಾವಿಡ್ 2021 ರಲ್ಲಿ ತಂಡದ ಉಸ್ತುವಾರಿ ವಹಿಸಿಕೊಂಡಿದ್ದರು/ ಕಳೆದ ತಿಂಗಳು ಟಿ 20 ವಿಶ್ವಕಪ್​ನಲ್ಲಿ ಭಾರತದ ಗೆಲುವಿನ ನಂತರ ಅವರ ಅಧಿಕಾರಾವಧಿ ಕೊನೆಗೊಂಡಿತು. ದ್ರಾವಿಡ್ ಉತ್ತರಾಧಿಕಾರಿಯಾಗಿ ಗೌತಮ್ ಗಂಭೀರ್ ಸೂಕ್ತ. ಐಪಿಎಲ್​​ನ ಕೋಲ್ಕತಾ ನೈಟ್ ರೈಡರ್ಸ್​ಗೆ ಮಾರ್ಗದರ್ಶಕರಾಗಿ ತಮ್ಮ ವೃತ್ತಿಜೀವನವನ್ನು ನಡೆಸುತ್ತಿದ್ದಾಗಲೇ ಅವರ ಹೆಸರು ಕೋಚಿಂಗ್​ ಹುದ್ದೆಯ ಪಕ್ಕ ಸುತ್ತಲು ಆರಂಭಿಸಿತ್ತು.

ಗೌತಮ್ ಗಂಭೀರ್ ಅವರು ಭಾರತದ ಮುಖ್ಯ ಕೋಚ್ ಪಾತ್ರವನ್ನು ಒಪ್ಪಿಕೊಂಡಿದ್ದರೂ ಅವರು ಮಂಡಳಿಯೊಂದಿಗೆ ವೇತನ ಮಾತುಕತೆಗಳನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದು ವರದಿಗಳು ಸೂಚಿಸಿದೆ. ಇತ್ತೀಚೆಗೆ, ಮತ್ತೊಂದು ವರದಿಯು ಬಿಸಿಸಿಐ ಅವರನ್ನು ಮುಖ್ಯ ಕೋಚ್ ಆಗಿ ಘೋಷಿಸಲು ವಿಳಂಬ ಮಾಡಲು ವೇತನ ಮಾತುಕತೆ ಮುಖ್ಯ ಕಾರಣವಾಗಿದೆ ಎಂದು ಹೇಳಿದೆ.

ಮಂಡಳಿಯು ಅವರನ್ನು ಹೊಸ ತರಬೇತುದಾರರಾಗಿ ದೃಢಪಡಿಸಿದ್ದರೂ, ವೇತನ ಮಾತುಕತೆ ಇನ್ನೂ ನಡೆಯುತ್ತಿದೆ. , ಭಾರತದ ಮಾಜಿ ಕ್ರಿಕೆಟಿಗನ ವೇತನವು ಅವರ ಹಿಂದಿನ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರಷ್ಟೇ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: MS Dhoni : ಧೂಮ್ ಸಿನಿಮಾದ ಜಾನ್ ಅಬ್ರಾಹಮ್ ರೀತಿಯಲ್ಲೇ ಬೈಕ್ ಓಡಿಸಿದ ಧೋನಿ; ಇಲ್ಲಿದೆ ವಿಡಿಯೊ

“ಗೌತಮ್ ಅವರು ಅವರು ಅಧಿಕಾರ ವಹಿಸಿಕೊಂಡಿರುವುದು ಮುಖ್ಯ. ಸಂಬಳ ಮತ್ತು ಇತರ ವಿಷಯಗಳನ್ನು ನಂತರವೂ ರೂಪಿಸಬಹುದು. ಏಕೆಂದರೆ ಅದು ಎಲ್ಲಿಯೂ ಹೋಗುವುದಿಲ್ಲ. 2014ರಲ್ಲಿ ರವಿಶಾಸ್ತ್ರಿ ಅವರನ್ನು ಮೊದಲ ಬಾರಿಗೆ ಮುಖ್ಯ ಕೋಚ್ ಡಂಕನ್ ಫ್ಲೆಚರ್ ಅವರ ಮೇಲೆ ಕ್ರಿಕೆಟ್ ನಿರ್ದೇಶಕರನ್ನಾಗಿ ಮಾಡಿದಾಗ ಇದೇ ರೀತಿ ಆಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ರವಿ ಶಾಸ್ತ್ರಿ ಕೆಲಸಕ್ಕೆ ಸೇರಿದ ದಿನ, ಅವರಿಗೆ ವೇತನ ಒಪ್ಪಂದವೂ ಆಗಿರಲಿಲ್ಲ. ಗೌತಮ್ ಅವರ ವಿಷಯದಲ್ಲೂ, ಕೆಲವು ಸೂಕ್ಷ್ಮ ವಿವರಗಳನ್ನು ರೂಪಿಸಲಾಗುತ್ತಿದೆ. ರಾಹುಲ್ ದ್ರಾವಿಡ್ ಅವರ ವೇತನವೂ ಇದೇ ವ್ಯಾಪ್ತಿಯಲ್ಲಿರಲಿದೆ, ಎಂದು ಅವರು ಹೇಳಿದರು.

ಹೆಮ್ಮೆಯ ಪ್ರತೀಕ

ಭಾರತ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ನೇಮಕಗೊಂಡ ಬೆನ್ನಲ್ಲೇ ಅಭಿಮಾನಿಗಳಿಗೆ ಸಂದೇಶವೊಂದನ್ನು ಕಳುಹಿಸಿದ್ದಾರೆ. ಭಾರತೀಯ ತಂಡಕ್ಕೆ ಮರಳಿದ ಬಗ್ಗೆ ಮಾಜಿ ಆಟಗಾರ ಸಂತೋಷ ವ್ಯಕ್ತಪಡಿಸಿದ್ದಾರೆ. ದೇಶಕ್ಕೆ ಹೆಮ್ಮೆ ತರುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಅವರ ಮೊದಲ ನೇಮಕವು ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾ ಪ್ರವಾಸದಿಂದ ಆರಂಭವಾಗಲಿದೆ. ಸರಣಿಗೂ ಮುನ್ನ ಬಿಸಿಸಿಐ ಬ್ಯಾಟಿಂಗ್ ಮತ್ತು ಬೌಲಿಂಗ್ ಕೋಚ್​ಗಳಂಥ ಇತರ ಸಹಾಯಕ ಸಿಬ್ಬಂದಿಯ ಹೆಸರುಗಳನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ, ಅಭಿಷೇಕ್ ನಾಯರ್ ಮತ್ತು ವಿನಯ್ ಕುಮಾರ್ ಅವರಂತಹವರು ಈ ಹುದ್ದೆಗೆ ಸ್ಪರ್ಧೆಯಲ್ಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Assembly Session: ಕಾರ್ಮಿಕ ಇಲಾಖೆಯಿಂದ ಸಿನಿ ಕಾರ್ಮಿಕರಿಗೆ ಭರ್ಜರಿ ಗಿಫ್ಟ್!

Assembly Session: ಸಿನಿಮಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರ ಕಲ್ಯಾಣಕ್ಕಾಗಿ ಕರ್ನಾಟಕ ಸಿನಿಮಾ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ವಿಧೇಯಕ, 2024 ಅನ್ನು ರೂಪಿಸಿ ಜಾರಿಗೆ ತರಲು ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದ್ದು, ವಿಧಾನ ಮಂಡಲದಲ್ಲಿ ಸಹ ಅಂಗೀಕಾರ ಪಡೆಯಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.

VISTARANEWS.COM


on

Assembly Session Minister Santosh Lad gave a huge gift to the film workers from the labor department
Koo

ಬೆಂಗಳೂರು: ಸಿನಿಮಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರ ಕಲ್ಯಾಣಕ್ಕಾಗಿ ಕರ್ನಾಟಕ ಸಿನಿಮಾ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ವಿಧೇಯಕ 2024ಅನ್ನು ರೂಪಿಸಿ ಜಾರಿಗೆ ತರಲು ಸಂಪುಟ ಸಭೆಯಲ್ಲಿ (Assembly Session) ಅನುಮೋದನೆ ಪಡೆಯಲಾಗಿದ್ದು, ವಿಧಾನ ಮಂಡಲದಲ್ಲಿ ಸಹ ಅಂಗೀಕಾರ ಪಡೆಯಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.

ಈ ವಿಧೇಯಕದಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಿದ ಶ್ರೇಯ ಸರ್ಕಾರಕ್ಕೆ ಸಿಗಲಿದೆ. ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಅವರು ಈ ವಿಧೇಯಕ ಜಾರಿಯಾಗುವುದಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಇಲಾಖೆಯ ಮೂಲಕ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಈ ವಿಧೇಯಕ ಜಾರಿಯಿಂದ ಅಸಂಖ್ಯಾತ ಕಾರ್ಮಿಕರ ಬಾಳಿಗೆ ಭದ್ರತೆ ದೊರೆಯಲಿದೆ.

ಇದನ್ನೂ ಓದಿ: KSRTC Package Tour: ಸೋಮನಾಥಪುರ, ತಲಕಾಡು, ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿಗೆ ಕೆಎಸ್‌ಆರ್‌ಟಿಸಿ ಪ್ಯಾಕೇಜ್‌ ಟೂರ್‌; ದರವೆಷ್ಟು?

ಕಳೆದ ಹಲವು ವರ್ಷಗಳಿಂದ ಈ ಯೋಜನೆ ಜಾರಿಗೆ ಸಾಕಷ್ಟು ಪ್ರಯತ್ನಗಳು ನಡೆದಿದ್ದವು. ಆದರೆ ಅವು ಸಾಕಾರಗೊಂಡಿರಲಿಲ್ಲ, ಇದೀಗ ಸಚಿವ ಸಂತೋಷ್‌ ಲಾಡ್‌ ಅವರು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇರಿಸಿದ್ದಾರೆ. ಕಳೆದ ಸರ್ಕಾರದ ಅವಧಿಯಲ್ಲೂ ಸಾಕಷ್ಟು ಪ್ರಯತ್ನಗಳು ನಡೆದಿದ್ದವು. ಆದರೆ ಅವುಗಳು ಕಾರ್ಯರೂಪಕ್ಕೆ ಬಂದಿರಲಿಲ್ಲ. ಈ ಬಾರಿ ಸಂತೋಷ್‌ ಲಾಡ್‌ ಅವರ ಅವಿರತ ಪ್ರಯತ್ನದ ಫಲವಾಗಿ ಈಗ ಕಾಲ ಕೂಡಿ ಬಂದಿದೆ. ಮನರಂಜನಾ ಕ್ಷೇತ್ರದ ಕಾರ್ಮಿಕರು ಸರಿಯಾದ ಉದ್ಯೋಗ ಭದ್ರತೆ ಇಲ್ಲದೆ ಯಾವುದೇ ಸೌಲಭ್ಯ ಇಲ್ಲದೇ ಅನಿಶ್ಚಿತತೆಯಲ್ಲಿ ಇರುವವರಿಗೆ ವರದಾನವಾಗಲಿದೆ. ಸಂತೋಷ್‌ ಲಾಡ್‌ ಅವರು ಕಾರ್ಮಿಕ ಸಚಿವರಾದಾಗಿನಿಂದ ಇಂತಹ ಹಲವಾರು ಹೊಸ ಕ್ರಮಗಳನ್ನು ಜಾರಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಗಿಗ್‌ ಕಾರ್ಮಿಕರಿಗಾಗಿಯೂ ಅವರು ಹೊಸ ಯೋಜನೆ ಜಾರಿ ಮಾಡಿದ್ದಾರೆ.

ವಿಧೇಯಕದ ಪ್ರಮುಖ ಅಂಶಗಳು

ಸಿನಿಮಾ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ದುಡಿಯುತ್ತಿರುವ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಿ ಸಾಮಾಜಿಕ ಭದ್ರತಾ ಸೌಲಭ್ಯಗಳಾದ ಜೀವವಿಮೆ, ಅಪಘಾತ ಪರಿಹಾರ, ಹೆರಿಗೆ ಭತ್ಯೆ, ಶವಸಂಸ್ಕಾರ ವೆಚ್ಚ, ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಮುಂತಾದ ಸೌಲಭ್ಯಗಳನ್ನು ಹಂತ ಹಂತವಾಗಿ ಒದಗಿಸಲಾಗುವುದು.

ಸಿನಿಮಾ ಹಾಗೂ ಸಂಬಂಧಿತ ಕ್ಷೇತ್ರಗಳ ಪ್ರದರ್ಶನದ ಟಿಕೆಟ್‌ಗಳ ಮೇಲೆ ಶೇ.2ರಷ್ಟು ಮೀರದಂತೆ ಆದರೆ ಶೇ.1 ಕ್ಕೆ ಕಡಿಮೆಯಿಲ್ಲದಷ್ಟು ಸುಂಕ ವಿಧಿಸುವ ಮೂಲಕ ಹಾಗೂ ಸಂಬಂಧಿತ ಸಂಸ್ಥೆಗಳಿಂದ ವಂತಿಗೆ ಸಂಗ್ರಹಿಸುವ ಮೂಲಕ ಸಿನಿಮಾ ಹಾಗೂ ಸಾಂಸ್ಕೃತಿಕ ಕಾರ್ಯಕರ್ತರ ಕಲ್ಯಾಣ ನಿಧಿ ಸ್ಥಾಪಿಸಿ ಆವಶ್ಯಕವಿರುವ ನಿಧಿ ಸಂಗ್ರಹಣೆಗೆ ಉದ್ದೇಶಿಸಲಾಗಿದೆ.

ನಿಧಿ ಸಂಗ್ರಹಣೆ, ನಿರ್ವಹಣೆ ಹಾಗೂ ಫಲಾನುಭವಿಗಳಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳ ವಿತರಣೆಗೆ ಪ್ರತ್ಯೇಕವಾದ Karnataka Cine and Cultural Activities Welfare Board ಅನ್ನು ರಚಿಸಲು ಉದ್ದೇಶಿಸಲಾಗಿದೆ. ಸಿನಿಮಾ ಮತ್ತು ಇತರೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡ ತಂತ್ರಜ್ಞರು, ಕಾರ್ಮಿಕರಿಗೆ ನಿಯಮಿತವಾಗಿ ಕೆಲಸವಿರುವುದಿಲ್ಲ. ಅವರು ಅವಶ್ಯಕತೆ ಇರುವ ಅವಧಿಯಲ್ಲಿ ಮಾತ್ರವೇ ಕೆಲಸದಲ್ಲಿ ತೊಡಗಿರುತ್ತಾರೆ. ಕೆಲವು ಅವಧಿ ಅವರು ನಿರುದ್ಯೋಗಿಯಾಗಿರುತ್ತಾರೆ. ಈ ಯೋಜನೆಯ ಜಾರಿಗೆ ರಾಜ್ಯ ಸರ್ಕಾರದ ಅನುದಾನವನ್ನು ಅವಲಂಬಿಸುವ ಬದಲು ಪ್ರತ್ಯೇಕ ಸಂಪನ್ಮೂಲವನ್ನು ಕ್ರೋಡೀಕರಿಸಲಾಗುವುದು.

ಇದನ್ನೂ ಓದಿ: Olympics On Television: ಒಲಿಂಪಿಕ್ಸ್​ ಕ್ರೀಡಾಕೂಟ ಮೊದಲ ಬಾರಿಗೆ ಟಿವಿಯಲ್ಲಿ ಪ್ರಸಾರ ಕಂಡಿದ್ದು ಯಾವಾಗ?

ಈ ವಿಧೇಯಕ ಸಂಬಂಧ ಆರ್ಥಿಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಇಲಾಖೆ, ಕಾನೂನು ಇಲಾಖೆ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ಜತೆಗೆ ಸಭೆ ನಡೆಸಿ ಸಮಾಲೋಚನೆ ನಡೆಸಲಾಗಿದೆ.

Continue Reading

ಕರ್ನಾಟಕ

Sadananda Suvarna : ʼಗುಡ್ಡದ ಭೂತʼ ಖ್ಯಾತಿಯ ಹಿರಿಯ ರಂಗಕರ್ಮಿ, ನಿರ್ದೇಶಕ ಸದಾನಂದ ಸುವರ್ಣ ಇನ್ನಿಲ್ಲ

Sadananda Suvarna : ಸದಾನಂದ ಸುವರ್ಣ ಅವರು 1991 ರಲ್ಲಿ ದೂರದರ್ಶನದಲ್ಲಿ (ಡಿಡಿ ಚಾನೆಲ್​) 13 ಭಾಗಗಳಲ್ಲಿ ಪ್ರದರ್ಶನಗೊಂಡ ಧಾರಾವಾಹಿ ‘ಗುಡ್ಡದ ಭೂತ’ವನ್ನು ನಿರ್ಮಾಣ ಮಾಡಿದ ಪ್ರಖ್ಯಾತಿ ಪಡೆದಿದ್ದರು. ಅದೇ ರೀತಿ ಜ್ಱಆನ ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಕೆ.ಶಿವರಾಮ ಕಾರಂತರ ಕುರಿತು ಎಂಟು ಭಾಗಗಳ ಸಾಕ್ಷ್ಯಚಿತ್ರ ನಿರ್ಮಿಸಿ ಕನ್ನಡದ ಸಾಂಸ್ಕೃತಿಕ ಲೋಕದಲ್ಲಿ ಚಿರಸ್ಥಾಯಿಯಾದರು. ಖ್ಯಾತ ಗಾಯಕ ಗಿರೀಶ್ ಕಾಸರವಳ್ಳಿ ಅವರೊಂದಿಗಿನ ಅವರ ಸಹಯೋಗವು ಹಲವಾರು ಅದ್ಭುತ ಸಿನಿಮಾಗಳಿಗೆ ಕಾರಣವಾಯಿತು.

VISTARANEWS.COM


on

Sadananda Suvarna
Koo

ಮಂಗಳೂರು: ಹಿರಿಯ ರಂಗಕರ್ಮಿ, ಖ್ಯಾತ ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಸದಾನಂದ ಸುವರ್ಣ (92) (Sadananda Suvarna) ಅವರು ಜುಲೈ 16ರಂದು (ಮಂಗಳವಾರ) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಸದಾನಂದ ಸುವರ್ಣ ಅವರು 1991ರಲ್ಲಿ ದೂರದರ್ಶನದಲ್ಲಿ (ಡಿಡಿ ಚಾನೆಲ್​) 13 ಭಾಗಗಳಲ್ಲಿ ಪ್ರದರ್ಶನಗೊಂಡ ಧಾರಾವಾಹಿ ‘ಗುಡ್ಡದ ಭೂತ’ ನಿರ್ಮಾಣ ಮಾಡಿದ ಪ್ರಖ್ಯಾತಿ ಪಡೆದಿದ್ದರು. ಅದೇ ರೀತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಕೆ.ಶಿವರಾಮ ಕಾರಂತರ ಕುರಿತು 8 ಭಾಗಗಳ ಸಾಕ್ಷ್ಯಚಿತ್ರ ನಿರ್ಮಿಸಿ ಕನ್ನಡದ ಸಾಂಸ್ಕೃತಿಕ ಲೋಕದಲ್ಲಿ ಚಿರಸ್ಥಾಯಿಯಾದವರು. ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರೊಂದಿಗಿನ ಅವರ ಸಹಯೋಗ ಹಲವಾರು ಅದ್ಭುತ ಸಿನಿಮಾಗಳಿಗೆ ಕಾರಣವಾಯಿತು.

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯವರಾದ ಸುವರ್ಣ ಅವರು ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಮುಂಬೈನಲ್ಲಿ ಮುಗಿಸಿದ್ದರು. ಅಲ್ಲೇ 30 ವರ್ಷ ಪೇಂಟ್ ವ್ಯಾಪಾರಿಯಾಗಿ ಕೆಲಸ ಮಾಡುವ ಮೊದಲು ಅವರು ಮುಂಬೈನ ಸಂಜೆ ಹೈಸ್ಕೂಲ್​ನಲ್ಲಿ ಐದು ವರ್ಷಗಳ ಕಾಲ ಶಿಕ್ಷಕರಾಗಿ ಕೆಲಸ ಮಾಡಿದ್ದರು. ಮುಂಬೈನ ಕನ್ನಡ ರಂಗಭೂಮಿಯಲ್ಲಿ ಸಂದಾನಂದ ಸುವರ್ಣ ಅವರದ್ದು ಮರೆಯಲಾಗದ ಹೆಸರು. ನಂತರದ ವರ್ಷಗಳಲ್ಲಿ, ಅವರು ಮಂಗಳೂರಿಗೆ ಸ್ಥಳಾಂತರಗೊಂಡಿದ್ದರು. ಅಲ್ಲಿಯೂ ಅವರು ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಅವರು ಕನ್ನಡ ಮತ್ತು ತುಳು ಭಾಷೆಗಳಲ್ಲಿ ನೂರಾರು ನಾಟಕಗಳನ್ನು ನಿರ್ದೇಶಿಸಿ ಪ್ರದರ್ಶಿಸಿದ್ದಾರೆ.

ಇದನ್ನೂ ಓದಿ: Money Guide: ಹಿರಿಯರಿಗೆ ಆರೋಗ್ಯ ವಿಮೆ: ಯಾಕಾಗಿ? ಏನಿದರ ಉಪಯೋಗ?

ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರಗಳಾದ ‘ತಬರನ ಕಥೆ, ಮನೆ ಹಾಗೂ ʼಕ್ರೌರ್ಯʼ ಚಿತ್ರಗಳಿಗೆ ಸುವರ್ಣ ಕಾರ್ಯಕಾರಿ ನಿರ್ಮಾಪಕರಾಗಿ ಸೇವೆ ಸಲ್ಲಿಸಿದ್ದಾರೆ. 1989ರಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣ ಕಥೆಯನ್ನು ಆಧರಿಸಿದ ‘ಕುಬಿ ಮತ್ತು ಇಯಾಲ’ ಚಿತ್ರದ ಮೂಲಕ ನಿರ್ದೇಶನ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದರು. ಶ್ರೀ ನಾರಾಯಣ ಗುರು ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸಲು ಮುಂದಾಗಿದ್ದರು. ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ತುಳುನಾಡಿನ ಶ್ರೀಮಂತ ಸಂಸ್ಕೃತಿಯನ್ನು ಪ್ರದರ್ಶಿಸುವ ಸಾಕ್ಷ್ಯಚಿತ್ರ ‘ತುಳುನಾಡು ಒಂದು ಇಣುಕುನೋಟ’ ಅವರ ಪ್ರಸಿದ್ಧ ಕೃತಿಗಳಲ್ಲಿ ಒಂದಾಗಿದೆ.

ಸಿನಿಮಾ ಚಳವಳಿ

ಮುಂಬೈನಲ್ಲಿದ್ದಾಗ ಅವರು ‘ಸೃಷ್ಟಿ’ ಎಂಬ ಫಿಲ್ಮ್ ಸೊಸೈಟಿ ನಡೆಸುತ್ತಿದ್ದರು. ಅಲ್ಲಿ ಭಾರತೀಯ ಭಾಷೆಯ ಚಲನಚಿತ್ರಗಳನ್ನು ಮಾತ್ರ ಪ್ರದರ್ಶಿಸಲಾಗುತ್ತಿತ್ತು. ಯಾಕೆಂದರೆ ಆ ವೇಳೆ ಅಲ್ಲಿ ಇತರ ಫಿಲ್ಮ್ ಸೊಸೈಟಿಗಳು ವಿದೇಶಿ ಭಾಷಾ ಚಲನಚಿತ್ರಗಳನ್ನು ಮಾತ್ರ ಪ್ರದರ್ಶಿಸುತ್ತಿದ್ದವು. ಫಿಲ್ಮ್ ಸೊಸೈಟಿ ಚಳವಳಿಯ ಮೂಲಕ ಅವರು 1970ರ ದಶಕದ ಸಿನೆಮಾ ಚಳವಳಿಗೆ ಅಡಿಯಿಟ್ಟಿದ್ದರು.

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣ ಕಥೆಯನ್ನು ಆಧರಿಸಿದ ‘ಕುಬಿ ಮತ್ತು ಇಯಾಲ’ ಎಂಬ ಏಕೈಕ ಚಿತ್ರವನ್ನು ಸದಾನಂದ ಸುವರ್ಣ ನಿರ್ದೇಶಿಸಿದ್ದರು. ಮನೆ, ಕ್ರೌರ್ಯ ಮತ್ತು ತಬರನ ಕಥೆ ಸೇರಿದಂತೆ ಅನೇಕ ಚಲನಚಿತ್ರಗಳಿಗೆ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಕೆಲಸ ಮಾಡಿದರು. ಇವೆಲ್ಲವೂ ಕಾಸರವಳ್ಳಿ ನಿರ್ದೇಶಿಸಿದ ಸಿನಿಮಾಗಳು. ಇವುಗಳು ಹಲವಾರು ಪ್ರಶಸ್ತಿಗಳನ್ನು ಗೆದ್ದವು. ಅಂದ ಹಾಗೆ ಕಾಸರವಳ್ಳಿಯವರು ʼಗುಡ್ಡದ ಭೂತʼ ಧಾರಾವಾಹಿಯಲ್ಲಿ ಕ್ರಿಯೇಟಿವ್​ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು.

ಕಾಸರವಳ್ಳಿ ಹಾಗೂ ಸುವರ್ಣ ಅವರು ಹಲವಾರು ಯೋಜನೆಗಳಲ್ಲಿ ಕೆಲಸ ಮಾಡಿದ್ದರು. ಆದರೆ ಅವುಗಳಲ್ಲಿ ಹೆಚ್ಚಿನವು ಕಾರ್ಯರೂಪಕ್ಕೆ ಬರಲಿಲ್ಲ. ಸದಾನಂದ ಅವರು ಮಾತೃಭಾಷೆ ತುಳುವಿನಲ್ಲಿ ಒಂದು ಚಿತ್ರ ಮಾಡಲು ಬಯಸಿದ್ದರು. ಅನೇಕ ಸ್ಕ್ರಿಪ್ಟ್ ಗಳನ್ನು ಬರೆದಿದ್ದರು. ಸದಾನಂದ ಸುವರ್ಣ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾನಾ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.

Continue Reading

ಕರ್ನಾಟಕ

D. S. Veeraiah: ಅರಸು ಟ್ರಕ್ ಟರ್ಮಿನಲ್ ಹಗರಣ;‌ ಡಿ.ಎಸ್‌.ವೀರಯ್ಯಗೆ ಜು.30ರವರೆಗೆ ನ್ಯಾಯಾಂಗ ಬಂಧನ

D. S. Veeraiah: ಬೆಂಗಳೂರಿನ 42ನೇ ಎಸಿಎಂಎಂ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಬಿಜೆಪಿ ಮಾಜಿ ಎಂಎಲ್‌ಸಿ ಡಿ.ಎಸ್‌. ವೀರಯ್ಯರನ್ನು ಸಿಐಡಿ ಹಾಜರುಪಡಿಸಿತ್ತು. ಪ್ರಕರಣದ ವಿಚಾರಣೆ ನಡೆಸಿರುವ ಕೋರ್ಟ್‌, ಜುಲೈ 30ರವರೆಗೂ ನ್ಯಾಯಾಂಗ ಬಂಧನ ಒಪ್ಪಿಸಲು ಸೂಚಿಸಿದೆ.

VISTARANEWS.COM


on

DS Veeraiah
Koo

ಬೆಂಗಳೂರು: ದೇವರಾಜ ಅರಸು ಟ್ರಕ್ ಟರ್ಮಿನಲ್‌ ಹಗರಣದಲ್ಲಿ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಎಂಎಲ್‌ಸಿ ಡಿ.ಎಸ್‌. ವೀರಯ್ಯ (D. S. Veeraiah) ಅವರಿಗೆ ಜುಲೈ 30ರವರೆಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 47 ಕೋಟಿ ರೂ. ಹಗರಣ ಆರೋಪದಲ್ಲಿ ಬಂಧನವಾಗಿದ್ದ ವೀರಯ್ಯರನ್ನು ಸಿಐಡಿ ಅಧಿಕಾರಿಗಳು ನಗರದ 42ನೇ ಎಸಿಎಂಎಂ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿರುವ ಕೋರ್ಟ್‌ ನ್ಯಾಯಾಧೀಶರು, ವೀರಯ್ಯರನ್ನು ನ್ಯಾಯಾಂಗ ಬಂಧನ‌ಕ್ಕೆ ಒಪ್ಪಿಸಲು ಆದೇಶ ನೀಡಿದ್ದಾರೆ. ಮತ್ತೊಂದೆಡೆ ವೀರಯ್ಯ ಪರ ವಕೀಲ ವಕೀಲ ಶ್ಯಾಮಸುಂದರ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.

ದೇವರಾಜ ಅರಸು ಟರ್ಮಿನಲ್ ಬಹುಕೋಟಿ ಹಗರಣಕ್ಕೆ (Devaraja Arasu truck terminal scam) ಸಂಬಂಧಿಸಿ ಬಿಜೆಪಿ ಮಾಜಿ ಎಂಎಲ್‌ಸಿ ಡಿ.ಎಸ್‌. ವೀರಯ್ಯಋನ್ನು ಜುಲೈ 12ರಂದು ಬಂಧಿಸಲಾಗಿತ್ತು. 47 ಕೋಟಿ ರೂ. ಹಗರಣದ ಆರೋಪದಲ್ಲಿ ಮೈಸೂರಿನಲ್ಲಿ ವೀರಯ್ಯರನ್ನು ಸಿಐಡಿ ಬಂಧಿಸಿತ್ತು. ಈ ಹಿಂದೆ ವಾರ್ತಾ ಇಲಾಖೆಯ ಶಂಕರಪ್ಪ ಬಂಧನವಾಗಿತ್ತು, ಇದಾದ ಬೆನ್ನಲ್ಲೇ ಮೈಸೂರಿನಲ್ಲಿ ಮುಡಾ ಅಕ್ರಮ ವಿರೋಧಿಸಿ ಪ್ರತಿಭಟನೆಗೆ ತೆರಳಿದ್ದಾಗ ವೀರಯ್ಯರನ್ನು ಬಂಧಿಸಲಾಗಿತ್ತು.

2021ರಿಂದ 2023ರವರೆಗೆ ಡಿ.ಎಸ್.ವೀರಯ್ಯ ಅವರು ಡಿ.ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ನಿಗಮದ ಅಧ್ಯಕ್ಷರಾಗಿದ್ದಾಗ ನಡೆದಿದ್ದ ಸುಮಾರು 47 ಕೋಟಿ ರೂ. ಅಕ್ರಮದ ಬಗ್ಗೆ ಹಾಲಿ ವ್ಯವಸ್ಥಾಪಕ ನಿರ್ದೇಶಕ ಸಿಎನ್​ ಶಿವಪ್ರಸಾದ್ ವಿಲ್ಸನ್​​ ಗಾರ್ಡ್​ನ್​ ಠಾಣೆಗೆ ದೂರು ನೀಡಿದ್ದರು. ತುಂಡು ಗುತ್ತಿದೆ ಆಧಾರದಲ್ಲಿ ಅಕ್ರಮ ನಡೆದಿದೆ ನೀಡಿದ್ದ ದೂರಿನ ಮೇರೆಗೆ 2023ರ ಸೆಪ್ಟೆಂಬರ್​ 23ರಂದು ಎಫ್​ಐಆರ್ ದಾಖಲಾಗಿತ್ತು. ಬಳಿಕ ವೀರಯ್ಯ ಅವರಿಗೆ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್​ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು.

ಇದನ್ನೂ ಓದಿ | Hit And Run Case: ಮುಂಬೈ ಹಿಟ್‌ ಆ್ಯಂಡ್‌ ರನ್‌ ಕೇಸ್‌; ತನಗೆ ಕುಡಿಯುವ ಅಭ್ಯಾಸ ಇದೆ ಎಂದು ಒಪ್ಪಿಕೊಂಡ ಆರೋಪಿ

ಏನಿದು ಹಗರಣ?

2021ರ ಅಕ್ಟೋಬರ್ 25ರಂದು ದೇವರಾಜ ಅರಸು ಟ್ರಕ್ ಟರ್ಮಿನಲ್‌ನಲ್ಲಿ 194ನೇ ನಿರ್ದೇಶಕ ಮಂಡಳಿ ಸಭೆಯಲ್ಲಿ ಟ್ರಕ್ ಟರ್ಮಿನಲ್‌ಗಳ ದುರಸ್ತಿ ಹಾಗೂ ನಿರ್ವಹಣೆಗೆ 10 ಕೋಟಿ ರೂ.ಗಳವರೆಗೆ ತುಂಡು ಗುತ್ತಿಗೆ ನೀಡಲು ಅನುಮೋದನಾ ನಿರ್ಣಯ ಮಾಡಲಾಗಿತ್ತು. ಆನಂತರ ಕಾಮಗಾರಿ ನಡೆಸದೆ ನಕಲಿ ದಾಖಲೆ ಸೃಷ್ಟಿಸಿ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನಿಗಮದ ಹಾಲಿ ಎಂಡಿ, ಬಳಿಕ ವಿಲ್ಸನ್ ಗಾರ್ಡನ್ ಠಾಣೆಗೆ ತುಂಡು ಗುತ್ತಿಗೆ ಕಾಮಗಾರಿಯಲ್ಲಿ 47.10 ಕೋಟಿ ಅಕ್ರಮ ನಡೆದಿದೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶ ನೀಡಿತ್ತು.

Continue Reading

ಕ್ರೀಡೆ

Olympics On Television: ಒಲಿಂಪಿಕ್ಸ್​ ಕ್ರೀಡಾಕೂಟ ಮೊದಲ ಬಾರಿಗೆ ಟಿವಿಯಲ್ಲಿ ಪ್ರಸಾರ ಕಂಡಿದ್ದು ಯಾವಾಗ?

Olympics On Television: ಎಲ್ಲ ಕ್ರೀಡೆಗಳಲ್ಲಿರುವಂತೆ ಇದೀಗ ಒಲಿಂಪಿಕ್ಸ್‌ಗಳಲ್ಲಿಯೂ ಉದ್ದೀಪನ ಪರೀಕ್ಷೆ ಕಟ್ಟುನಿಟ್ಟಾಗಿ ನಡೆಯುತ್ತದೆ. ಒಲಿಂಪಿಕ್ಸ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಮಾದಕ ದ್ರವ್ಯ ಸೇವನೆ ಪ್ರಕರಣ ಬೆಳಕಿಗೆ ಬಂದದ್ದು 1968ರ ಮೆಕ್ಸಿಕೊ ಗೇಮ್ಸ್‌ನಲ್ಲಿ.

VISTARANEWS.COM


on

Olympics on television
Koo

ಬೆಂಗಳೂರು: ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್ 2024ರ ಕ್ರೀಡಾಕೂಟ ಆರಂಭಕ್ಕೆ ಇನ್ನು ಕೇವಲ 10 ದಿನಗಳು ಮಾತ್ರ ಬಾಕಿ ಉಳಿದಿವೆ. ಹಿಂದೆಂದಿಗಿಂತಲೂ ಈ ಬಾರಿ ಒಲಿಂಪಿಕ್ಸ್​ ಟೂರ್ನಿಯ ಪ್ರಸಾರ ದೊಡ್ಡ ಮಟ್ಟದಲ್ಲಿ ಇರಲಿದೆ. ಜಿಯೋ ಸಿನಿಮಾದಲ್ಲಿ ಉಚಿತವಾಗಿ ಪ್ರಸಾರಗೊಳ್ಳಲಿದೆ. ಆದರೆ ಮೊದಲ ಬಾರಿಗೆ ಒಲಿಂಪಿಕ್ಸ್​ ಟಿವಿಯಲ್ಲಿ(Olympics On Television) ಪ್ರಸಾರ ಕಂಡಿದ್ದು ಯಾವಾಗ? ಯಾರ ಆತಿಥ್ಯದಲ್ಲಿ ನಡೆದ ಒಲಿಂಪಿಕ್ಸ್​ ಇದಾಗಿತ್ತು ಎನ್ನುವ ಮಾಹಿತಿ ಇಂತಿದೆ.

ಮೊದಲ ಬಾರಿಗೆ ಒಲಿಂಪಿಕ್ಸ್​ ಕ್ರೀಡಾಕೂಟ ಟಿವಿಯಲ್ಲಿ ಪ್ರಸಾರಗೊಂಡದ್ದು 1936ರಲ್ಲಿ. ಬರ್ಲಿನ್​ನಲ್ಲಿ ನಡೆದಿದ್ದ ಟೂರ್ನಿ ಇದಾಗಿತ್ತು. ಆದರೆ, ಆತಿಥೇಯ ಜರ್ಮನಿಯ ಟಿವಿ ಹಾಲ್‌ಗ‌ಳಲ್ಲಿ ಮಾತ್ರ ಇದು ಪ್ರಸಾರ ಕಂಡಿತ್ತು. ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಿವಿಯಲ್ಲಿ ಪ್ರಸಾರಗೊಂಡ ಒಲಿಂಪಿಕ್ಸ್​ ಕ್ರೀಡಾಕೂಟ ಟೋಕಿಯೊ ಒಲಿಂಪಿಕ್ಸ್‌. 1964ರಲ್ಲಿ ನಡೆದಿದ್ದ ಟೂರ್ನಿ ಇದಾಗಿತ್ತು. ಇದಾದ ಬಳಿಕ 1956ರಲ್ಲಿ ಮೆಲ್ಬರ್ನ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಟಿವಿ ಪ್ರಸಾರ ಹಕ್ಕು ಮಾರಾಟ ಮಾಡಲಾಗಿತ್ತು. ಈ ಬಾರಿ ಟಿವಿ ಮಾತ್ರವಲ್ಲದೆ ಮೊಬೈಲ್​ ಆ್ಯಪ್​ನಲ್ಲಿಯೂ ಒಲಿಂಪಿಕ್ಸ್​ ಪ್ರಸಾರಗೊಳ್ಳುವ ಕಾರಣ ಪ್ರಸಾರಕರಿಗೆ ದೊಡ್ಡ ಮೊತ್ತದ ಹಣ ಸಿಗಲಿದೆ.

ಒಲಿಂಪಿಕ್ಸ್‌ನಲ್ಲಿ ಡೋಪಿಂಗ್‌


ಎಲ್ಲ ಕ್ರೀಡೆಗಳಲ್ಲಿರುವಂತೆ ಇದೀಗ ಒಲಿಂಪಿಕ್ಸ್‌ಗಳಲ್ಲಿಯೂ ಉದ್ದೀಪನ ಪರೀಕ್ಷೆ ಕಟ್ಟುನಿಟ್ಟಾಗಿ ನಡೆಯುತ್ತದೆ. ಒಲಿಂಪಿಕ್ಸ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಮಾದಕ ದ್ರವ್ಯ ಸೇವನೆ ಪ್ರಕರಣ ಬೆಳಕಿಗೆ ಬಂದದ್ದು 1968ರ ಮೆಕ್ಸಿಕೊ ಗೇಮ್ಸ್‌ನಲ್ಲಿ. ಬಿಯರ್‌ ಕುಡಿದಿದ್ದಕ್ಕಾಗಿ ಸ್ವೀಡನ್‌ ಆ್ಯತ್ಲೀಟ್‌ ಹನ್ಸ್‌-ಗುನ್ನಾರ್‌ ಲಿಲಿಜೆನ್‌ವಾಲ್‌ ನಿಷೇಧ ಶಿಕ್ಷೆ ಅನುಭವಿಸಬೇಕಾಯಿತು! ಇದಕ್ಕಾಗಿ ಅವರು ಗೆದ್ದಿದ್ದ ಕಂಚಿನ ಪದಕವನ್ನೂ ವಾಪಸ್‌ ಪಡೆಯಲಾಗಿತ್ತು.

ಇದನ್ನೂ ಓದಿ India at the Olympics: ಒಲಿಂಪಿಕ್ಸ್​ನಲ್ಲಿ ಭಾರತದ ಪದಕ ಸಾಧನೆಯ ಇಣುಕು ನೋಟ

ಸೀನ್ ನದಿಯಲ್ಲಿ ಉದ್ಘಾಟನಾ ಸಮಾರಂಭ


ಈ ಬಾರಿಯ ಒಲಿಂಪಿಕ್ಸ್​ ಉದ್ಘಾಟನಾ ಸಮಾರಂಭ(paris olympics 2024 opening ceremony) ಜುಲೈ 26ರಂದು ಸೀನ್ ನದಿಯಲ್ಲಿ ಸಂಜೆ 7.30ಕ್ಕೆ ಅದ್ಧೂರಿ ಕಾರ್ಯಕ್ರಮದೊಂದಿಗೆ ನೆರವೇರಲಿದೆ. ಕ್ರೀಡಾಕೂಟ ಜುಲೈ 26ರಿಂದ ಆರಂಭವಾಗಿ, ಆಗಸ್ಟ್‌ 11ರವರೆಗೆ ನಡೆಯಲಿದೆ. ಪ್ಯಾರಾಲಿಂಪಿಕ್ಸ್‌ ಆಗಸ್ಟ್‌ 28 ರಿಂದ ಸೆಪ್ಟೆಂಬರ್‌ 8ರವರೆಗೆ ನಿಗದಿಯಾಗಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ಈಗಾಗಲೇ ಕ್ರೀಡಾಕೂಟದ ಆಯೋಜಕರು ಮಾಡಿದ್ದಾರೆ. ಗೇಮ್ಸ್‌ಗಾಗಿಯೇ ಇಲ್ಲಿನ ಸೀನ್‌ ನದಿಯನ್ನು ಸಾರ್ವಜನಿಕ ನಿಧಿಯಿಂದ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿ ಈ ನದಿಯನ್ನು ಸ್ನಾನಮಾಡಲು ಯೋಗ್ಯವೆನಿಸುವ ರೀತಿಯಲ್ಲಿ ಸ್ವಚ್ಛ ಮಾಡಲಾಗಿದೆ.

ಇದನ್ನೂ ಓದಿ Paris Olympics 2024 : ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಕಡಿಮೆ ಪದಕಗಳು ಸಿಗುವುದು ಯಾಕೆ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ

ಬೋಟ್‌ಗಳಲ್ಲೇ ಪರೇಡ್‌


ಒಲಿಂಪಿಕ್ಸ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್‌ ವರೆಗೆ ಬೋಟ್‌ಗಳಲ್ಲೇ ಪರೇಡ್‌ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.

Continue Reading
Advertisement
Assembly Session Minister Santosh Lad gave a huge gift to the film workers from the labor department
ಕರ್ನಾಟಕ1 min ago

Assembly Session: ಕಾರ್ಮಿಕ ಇಲಾಖೆಯಿಂದ ಸಿನಿ ಕಾರ್ಮಿಕರಿಗೆ ಭರ್ಜರಿ ಗಿಫ್ಟ್!

Sadananda Suvarna
ಕರ್ನಾಟಕ20 mins ago

Sadananda Suvarna : ʼಗುಡ್ಡದ ಭೂತʼ ಖ್ಯಾತಿಯ ಹಿರಿಯ ರಂಗಕರ್ಮಿ, ನಿರ್ದೇಶಕ ಸದಾನಂದ ಸುವರ್ಣ ಇನ್ನಿಲ್ಲ

DS Veeraiah
ಕರ್ನಾಟಕ27 mins ago

D. S. Veeraiah: ಅರಸು ಟ್ರಕ್ ಟರ್ಮಿನಲ್ ಹಗರಣ;‌ ಡಿ.ಎಸ್‌.ವೀರಯ್ಯಗೆ ಜು.30ರವರೆಗೆ ನ್ಯಾಯಾಂಗ ಬಂಧನ

NEET-UG 2024
ದೇಶ39 mins ago

NEET UG 2024: ನೀಟ್‌ ಅಕ್ರಮ; ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದ ಮತ್ತಿಬ್ಬರು ಆರೋಪಿಗಳು ಅರೆಸ್ಟ್‌

Olympics on television
ಕ್ರೀಡೆ51 mins ago

Olympics On Television: ಒಲಿಂಪಿಕ್ಸ್​ ಕ್ರೀಡಾಕೂಟ ಮೊದಲ ಬಾರಿಗೆ ಟಿವಿಯಲ್ಲಿ ಪ್ರಸಾರ ಕಂಡಿದ್ದು ಯಾವಾಗ?

Pennar River Dispute
ಪ್ರಮುಖ ಸುದ್ದಿ1 hour ago

Pennar River Dispute: ಪೆನ್ನಾರ್ ನದಿ ನೀರು ಹಂಚಿಕೆ ವಿವಾದ; 8 ವಾರದಲ್ಲಿ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

Rape Case
Latest1 hour ago

Sexual Abuse: ಮಧ್ಯವಯಸ್ಕ ಮಹಿಳೆಯ ಮೇಲೆ ಮಗನ ಸ್ನೇಹಿತನಿಂದಲೇ ಅತ್ಯಾಚಾರ!

ಕ್ರೀಡೆ1 hour ago

India at the Olympics: ಒಲಿಂಪಿಕ್ಸ್​ನಲ್ಲಿ ಭಾರತದ ಪದಕ ಸಾಧನೆಯ ಇಣುಕು ನೋಟ

Ambani Video
ಪ್ರಮುಖ ಸುದ್ದಿ2 hours ago

Ambani Video: 3 ವರ್ಷದ ಅಂಬಾನಿ ಮೊಮ್ಮಗ ವೇದಿಕೆ ಮೇಲೆ ಜಾರಿ ಬಿದ್ದ, ಆದರೆ ಜನರ ಹೃದಯ ಗೆದ್ದ!

Money Guide
ಮನಿ-ಗೈಡ್2 hours ago

Money Guide: ಹಿರಿಯರಿಗೆ ಆರೋಗ್ಯ ವಿಮೆ: ಯಾಕಾಗಿ? ಏನಿದರ ಉಪಯೋಗ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ6 hours ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ7 hours ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ1 day ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 day ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ2 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌