ಭುವನೇಶ್ವರ: ಟೀಮ್ ಇಂಡಿಯಾದ(Team India) ಅಪ್ಪಟ ಅಭಿಮಾನಿಯಾಗಿರುವ(Team India Fan) ಒಡಿಶಾದ ಭುವನೇಶ್ವರ ನಿವಾಸಿ ಮನೋಜ್ ನಾಯಕ್(Manoj nayak) ಅವರು ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರರ ಹೆಸರನ್ನು ತನ್ನ ಬೆನ್ನ ಮೇಲೆ ಟ್ಯಾಟು ಹಾಕಿಸಿಕೊಂಡಿದ್ದಾರೆ. ಈ ವಿಡಿಯೊವನ್ನು ಮನೋಜ್(Manoj nayak team india fan) ತನ್ನ ಅಧಿಕೃತ ಟ್ವೀಟರ್ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಟ್ಯಾಟು ಹಾಕಿಸಿಕೊಂಡ ವಿಡಿಯೊ ಹಂಚಿಕೊಂಡಿರುವ ಮನೋಜ್, ‘ಕೊಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಳೆದ 13 ವರ್ಷಗಳಿಂದ ಕಾಯುತ್ತಿದ್ದ ಐಸಿಸಿ ಟ್ರೋಫಿ ಕೊನೆಗೂ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಸಾಕಾರಗೊಂಡಿದೆ. ಈ ಐತಿಹಾಸಿಕ ಸಾಧನೆ ಮಾಡಿದ ಕ್ಷಣ ಮತ್ತು ಆಟಗಾರರನ್ನು ಸದಾ ನೆನೆಪಿನಲ್ಲಿ ಇರುವ ಸಲುವಾಗಿ ತಂಡಕ್ಕೆ ನನ್ನ ಕಡೆಯಿಂದ ಸಣ್ಣದೊಂದು ಉಡುಗೊರೆ. ಭಾರತಕ್ಕೆ ಕೀರ್ತಿ ತಂದ ಭಾರತ ತಂಡಕ್ಕೆ ದೊಡ್ಡ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಆಟಗಾರರ ಹೆಸರುಗಳು ಕೂಡ ಮನೋಜ್ ಬೆನ್ನ ಮೇಲೆ ಇದೆ. ಇಷ್ಟೇ ಅಲ್ಲದೆ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ ಅವರ ಫೋಟೊವನ್ನು ಕೂಡ ಟ್ಯಾಟು ಹಾಕಿಸಿಕೊಂಡಿದ್ದಾರೆ. ಒಟ್ಟಾರೆ ಇವರ ದೇಹ ಒಂದು ರೀತಿಯ ಕ್ರಿಕೆಟ್ ಮ್ಯೂಸಿಯಂನಂತಿದೆ. ಭಾರತೀಯ ಕ್ರಿಕೆಟ್ ಆಟಗಾರರು ಏನೇ ಸಾಧನೆ ಮಾಡಲಿ ತಕ್ಷಣ ಮನೋಜ್ ಇದನ್ನು ತಮ್ಮ ದೇಹದ ಯಾವುದಾದರೊಂದು ಭಾಗದಲ್ಲಿ ಟ್ಯಾಟು ಹಾಕಿ ಅಭಿಮಾನ ಮೆರೆಯುತ್ತಾರೆ. ಇದೇ ವರ್ಷ ನಡೆದಿದ್ದ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ತಂಡ ಚಾಂಪಿಯನ್ ಆದಾಗಲು ಕೂಡ ತಂಡದ ಆಟಗಾರ್ತಿಯರ ಹೆಸರನ್ನು ತನ್ನ ಕೈಯಲ್ಲಿ ಅಚ್ಚೆ ಹಾಕಿಸಿದ್ದರು. ಸ್ವಾರಸ್ಯವೆಂದರೆ ಇವರಿಗೆ ಟ್ಯಾಟು ಹಾಕುತ್ತಿರುವ ವ್ಯಕ್ತಿ ಕೂಡ ಟೀಮ್ ಇಂಡಿಯಾದ ಅಪ್ಪಟ ಅಭಿಮಾನಿಯಾಗಿದ್ದಾರೆ. ಪ್ರತಿ ಬಾರಿ ಮನೋಜ್ಗೆ ಟ್ಯಾಟು ಹಾಕುವಾಗ ಟೀಮ್ ಇಂಡಿಯಾ ಜೆರ್ಸಿ ಧರಿಸಿಯೇ ಟ್ಯಾಟು ಹಾಕುತ್ತಾರೆ.
ಇದನ್ನೂ ಓದಿ Team India: ರೋಹಿತ್, ಸೂರ್ಯಕುಮಾರ್, ದುಬೆ, ಜೈಸ್ವಾಲ್ಗೆ ಸನ್ಮಾನ ಮಾಡಿದ ಸಿಎಂ ಏಕನಾಥ್ ಶಿಂಧೆ
ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ಜೂನ್ 29ರಂದು ನಡೆದಿದ್ದ ಟಿ20 ವಿಶ್ವಕಪ್ ಫೈನಲ್(T20 World Cup 2024) ಪಂದ್ಯದಲ್ಲಿ ಭಾರತ ತಂಡ(Team India) ದಕ್ಷಿಣ ಆಫ್ರಿಕಾ(South Africa vs India) ವಿರುದ್ಧ 7 ರನ್ಗಳ ಸಾಧಿಸುವ ಮೂಲಕ 13 ವರ್ಷಗಳ ಬಳಿಕ ಐಸಿಸಿ ಪ್ರಶಸ್ತಿ ಬರವೊಂದನ್ನು ನೀಗಿಸಿತ್ತು.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ(South Africa vs India) 8 ವಿಕೆಟ್ಗೆ 169 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತ 7 ರನ್ಗಳ ಗೆಲುವು ಸಾಧಿಸಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದು ಬೀಗಿತು.