Site icon Vistara News

IND vs ZIM ODI | ಅಭ್ಯಾಸ ಆರಂಭಿಸಿದ ಟೀಮ್‌ ಇಂಡಿಯಾ ಆಟಗಾರರು

IND vs ZIM ODI

ಹರಾರೆ : ಮೂರು ಏಕದಿನ ಪಂದ್ಯಗಳಿಗಾಗಿ ಜಿಂಬಾಬ್ವೆಗೆ (IND vs Z IM ODI) ತೆರಳಿರುವ ಭಾರತ ತಂಡದ ಆಟಗಾರರು ವಿಶ್ರಾಂತಿ ಮುಗಿಸಿದ್ದು ಅಭ್ಯಾಸಕ್ಕಾಗಿ ನೆಟ್‌ಗೆ ಇಳಿದಿದ್ದಾರೆ. ಬಿಸಿಸಿಐ ಅಧಿಕೃತ ಟ್ವಿಟರ್ ಖಾತೆಯಿಂದ ಆಟಗಾರರು ಅಭ್ಯಾಸ ಮಾಡುವ ಚಿತ್ರಗಳನ್ನು ಪ್ರಕಟಿಸಿದ್ದಾರೆ. ಪ್ರಮುಖವಾಗಿ ದೀಪಕ್‌ ಚಾಹರ್‌, ಪ್ರಸಿದ್ಧ್‌ ಕೃಷ್ಣ, ಮೊಹಮ್ಮದ್ ಸಿರಾಜ್‌ ಸತತವಾಗಿ ನೆಟ್‌ನಲ್ಲಿ ಬೆವರಿಳಿಸಿದರು.

ಭಾರತ ತಂಡ ಆರು ವರ್ಷಗಳ ಬಳಿಕ ಜಿಂಬಾಬ್ವೆಗೆ ಏಕದಿನ ಸರಣಿಗಾಗಿ ತೆರಳಿದೆ. ಈ ಹಿಂದೆ ೨೦೧೬ರಲ್ಲಿ ಮಹೇಂದ್ರ ಸಿಂಗ್‌ ಧೋನಿಯ ನೇತೃತ್ವದಲ್ಲಿ ಭಾರತ ಜಿಂಬಾಬ್ವೆಗೆ ತೆರಳಿತ್ತು. ಆ ವೇಳೆ ಏಕದಿನ ಹಾಗೂ ಟಿ೨೦ ಸರಣಿಯಲ್ಲಿ ಪಾಲ್ಗೊಂಡಿತ್ತು. ಎರಡೂ ಸರಣಿಗಳನ್ನು ಭಾರತ ಕೈವಶ ಮಾಡಿಕೊಂಡಿತ್ತು.

ಈ ಬಾರಿ ಭಾರತ ತಂಡ ಕೆ.ಎಲ್‌ ರಾಹುಲ್‌ ನೇತೃತ್ವದಲ್ಲಿ ಭಾರತ ತಂಡ ಜಿಂಬಾಬ್ವೆ ಪ್ರವಾಸ ಮಾಡಿದೆ. ಏಷ್ಯಾ ಕಪ್‌ಗೆ ಮುನ್ನ ತೆರಳಿರುವ ಈ ಪ್ರವಾಸ ರಾಹುಲ್‌ ಅವರಿಗೆ ಸವಾಲಿನ ಸರಣಿಯಾಗಿ ಪರಿಣಮಿಸಿದೆ. ಇದೇ ವೇಳೆ ಗಾಯದ ಸಮಸ್ಯೆಯಿಂದಾಗಿ ಐಪಿಎಲ್‌ ಸೇರಿದಂತೆ ಆ ಬಳಿಕದ ಹಲವು ಸರಣಿಗಳಿಗೆ ಅಯ್ಕೆಯಾಗುವ ಅವಕಾಶ ಕಳೆದುಕೊಂಡಿದ್ದ ದೀಪಕ್‌ ಚಾಹರ್‌ ಅವರೂ ಸರಣಿಗೆ ಆಯ್ಕೆಯಾಗಿದ್ದಾರೆ. ಬೌಲಿಂಗ್‌ ಆಲ್‌ರೌಂಡರ್‌ ಆಗಿರುವ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲಿದ್ದಾರೆ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಹೊರತಾಗಿಯೂ ಟೀಮ್‌ ಇಂಡಿಯಾ ಪರ ಮೈದಾನಕ್ಕೆ ಇಳಿಯುವ ಅವಕಾಶ ಗಿಟ್ಟಿಸಿಕೊಳ್ಳದ ರಾಹುಲ್‌ ತ್ರಿಪಾಠಿ ಪ್ರವಾಸ ಮಾಡಿರುವ ತಂಡದಲ್ಲಿ ಇದ್ದಾರೆ. ಆದರೆ ಅವರು ಅಡುವ ಅವಕಾಶ ಪಡೆಯುವರೋ ಎಂಬುದು ಸದ್ಯದ ಕೌತುಕು.

ಎನ್‌ಸಿಎ ಮುಖ್ಯಸ್ಥರಾಗಿರುವ ವಿವಿಎಸ್‌ ಲಕ್ಷ್ಮಣ್‌ ಅವರು ಟೀಮ್‌ ಇಂಡಿಯಾದ ಕೋಚ್‌ ಅಗಿ ಅಲ್ಲಿಗೆ ಜಿಂಬಾಬ್ವೆಗೆ ತೆರಳಿದ್ದಾರೆ. ಈ ಹಿಂದೆ ಐರ್ಲೆಂಡ್‌ ಪ್ರವಾಸ ತೆರಳಿದ್ದ ಭಾರತ ತಂಡಕ್ಕೆ ಅವರು ಕೋಚ್‌ ಆಗಿ ಹೋಗಿದ್ದರು. ಆ ಸರಣಿಯನ್ನು ಭಾರತ ೨-೦ ಅಂತರದಿಂದ ಸರಣಿ ವಶಪಡಿಸಿಕೊಂಡಿತ್ತು.

ಮೂರು ಪಂದ್ಯಗಳ ಸರಣಿ

ಮೂರು ಪಂದ್ಯಗಳ ಸರಣಿ ಆಗಸ್ಟ್‌ ೧೮ರಂದು ಆರಂಭಗೊಳ್ಳಲಿದ್ದು, ೨೦ ಹಾಗೂ ೨೨ರಂದು ಉಳಿದೆರಡು ಪಂದ್ಯಗಳು ನಡೆಯಲಿವೆ. ಎಲ್ಲ ಪಂದ್ಯಗಳು ಹರಾರೆ ಸ್ಟೇಡಿಯಮ್‌ನಲ್ಲಿ ನಡೆಯಲಿದೆ. ಎಲ್ಲ ಪಂದ್ಯಗಳು ಹರಾರೆ ಸ್ಪೋಟ್ಸ್‌ ಕ್ಲಬ್‌ ಸ್ಟೇಡಿಯಮ್‌ನಲ್ಲೇ ನಡೆಯಲಿದೆ.

ಭಾರತ ತಂಡ

ಕೆ ಎಲ್​ ರಾಹುಲ್​​ (ನಾಯಕ), ಶಿಖರ್ ಧವನ್​(ಉಪ ನಾಯಕ​), ಋತುರಾಜ್ ಗಾಯಕ್ವಾಡ, ದೀಪಕ್ ಹೂಡಾ, ಶುಬ್ಮನ್ ಗಿಲ್, ಇಶಾನ್ ಕಿಶನ್​(ವಿಕೆಟ್‌ಕೀಪರ್‌), ರಾಹುಲ್ ತ್ರಿಪಾಠಿ, ಸಂಜು ಸ್ಯಾಮನ್ಸ್​, ವಾಷಿಂಗ್ಟನ್ ಸುಂದರ್, ಶಾರ್ದುಲ್‌ ಠಾಕೂರ್, ಆವೇಶ್ ಖಾನ್​, ಕುಲ್ದೀಪ್ ಯಾದವ್​, ಅಕ್ಷರ್ ಪಟೇಲ್, ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್‌.

Exit mobile version