Site icon Vistara News

Team India: ವಿಶ್ವಕಪ್​ ಗೆದ್ದು ಟೀಮ್​ ಇಂಡಿಯಾ ನಿರ್ಮಿಸಿದ ದಾಖಲೆಗಳ ಪಟ್ಟಿ ಹೀಗಿದೆ

Team India: The list of records created by Team India after winning the T20 World Cup 2024

ಬಾರ್ಬಡೋಸ್​: ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ಟಿ20 ವಿಶ್ವಕಪ್​ ಫೈನಲ್(​T20 World Cup 2024) ಪಂದ್ಯದಲ್ಲಿ ಭಾರತ ತಂಡ(Team India) ದಕ್ಷಿಣ ಆಫ್ರಿಕಾ(South Africa vs India) ವಿರುದ್ಧ 7 ವಿಕೆಟ್​ಗಳ ಗೆಲುವು ಸಾಧಿಸುವ ಮೂಲಕ 13 ವರ್ಷಗಳ ಬಳಿಕ ಐಸಿಸಿ ಪ್ರಶಸ್ತಿ ಬರವೊಂದನ್ನು ನೀಗಿಸಿತು. ಈ ಪಂದ್ಯದಲ್ಲಿ ಭಾರತ ಮತ್ತು ತಂಡದ ಆಟಗಾರರು ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ಪಟ್ಟಿ ಇಂತಿದೆ.

ದಾಖಲೆಗಳ ಪಟ್ಟಿ ಹೀಗಿದೆ

1. ನೀಗಿದ ಪ್ರಶಸ್ತಿ ಬರ: ಕಪ್​ ಗೆಲ್ಲುವ ಮೂಲಕ 11 ವರ್ಷಗಳ ಐಸಿಸಿ ಟ್ರೋಫಿ, 13 ವರ್ಷಗಳ ಐಸಿಸಿ ವಿಶ್ವಕಪ್​ ಬರ ನೀಗಿತು.


2. ದ್ವಿತೀಯ ಟಿ20 ವಿಶ್ವಕಪ್​: ಭಾರತ ತಂಡ 2ನೇ ಎರಡನೇ ಬಾರಿ ಮತ್ತು 17 ವರ್ಷಗಳ ಬಳಿಕ ಟಿ20 ವಿಶ್ವ ಚಾಂಪಿಯನ್​ ಪಟ್ಟ ಅಲಂಕರಿಸಿತು.

3. ಮೂರನೇ ತಂಡ: ಭಾರತ 2 ಟಿ20 ವಿಶ್ವಕಪ್​ ಗೆದ್ದ ಮೂರನೇ ತಂಡ ಎನಿಸಿಕೊಂಡಿತು. ಇದಕ್ಕೂ ಮುನ್ನ ವೆಸ್ಟ್​ ಇಂಡೀಸ್​ ಮತ್ತು ಇಂಗ್ಲೆಂಡ್​ ಈ ಸಾಧನೆ ಮಾಡಿತ್ತು.


4. ರೋಹಿತ್​ ಸಾಧನೆ: ರೋಹಿತ್​ ಶರ್ಮ ಅವರು ಭಾರತ ಪರ 2 ಟಿ0 ವಿಶ್ವಕಪ್​ ಗೆದ್ದ ಮೊದಲ ಆಟಗಾರ. ನಾಯಕನಾಗಿ ಮತ್ತು ಆಟಗಾರನಾಗಿ. ಜತೆಗೆ ಧೋನಿ ನಂತರ ಟಿ20 ವಿಶ್ವಕಪ್​ ಗೆದ್ದ 2ನೇ ನಾಯಕ ಎನಿಸಿಕೊಂಡರು.

5. ದ್ರಾವಿಡ್​ಗೆ ಗೆಲುವಿನ ವಿದಾಯ: ರಾಹುಲ್​ ದ್ರಾವಿಡ್​ ಕೋಚ್​ ಆಗಿ ಜೂನಿಯರ್​ ಮತ್ತು ಸೀನಿಯರ್​ ವಿಭಾಗದಲ್ಲಿ ಐಸಿಸಿ ಟ್ರೋಫಿ ಗೆದ್ದ ಸಾಧನೆ ಮಾಡಿದರು.


6. ಕೊಹ್ಲಿಗೆ ಮೊದಲ ಕಪ್​: ವಿರಾಟ್​ ಕೊಹ್ಲಿ ಅವರು ಮೊದಲ ಟಿ20 ವಿಶ್ವಕಪ್​ ಗೆದ್ದರು. ಈ ಮೂಲಕ ಏಕದಿನ ಮತ್ತು ಟಿ20 ವಿಶ್ವಕಪ್​ ಗೆದ್ದ ಸಾಧನೆ ಮಾಡಿದರು.

7. ನಾಲ್ಕನೇ ಐಸಿಸಿ ವಿಶ್ವಕಪ್: ಭಾರತ ಈ ಕಪ್​ ಗೆಲ್ಲುವ ಮೂಲಕ 4 ಐಸಿಸಿ ವಿಶ್ವಕಪ್​ ಗೆದ್ದ ಸಾಧನೆ ಮಾಡಿತು. (2 ಏಕದಿನ, 2 ಟಿ20).

8. 4ನೇ ನಾಯಕ: ರೋಹಿತ್​ ಕಪ್​ ಗೆಲ್ಲುವ ಮೂಲಕ ಐಸಿಸಿ ಟ್ರೋಫಿ ಗೆದ್ದ 4ನೇ ಭಾರತೀಯ ನಾಯಕ ಎನಿಸಿಕೊಂಡರು. ಕಪಿಲ್ ದೇವ್​, ಸೌರವ್​ ಗಂಗೂಲಿ, ಧೋನಿ ಉಳಿದ ನಾಯಕರು.

9. ಐದು ಫೈನಲ್​ ಸೋಲಿನ ಬಳಿಕದ ಗೆಲುವು: ಸತತ 5 ಐಸಿಸಿ ಟೂರ್ನಿಗಳ ಫೈನಲ್​ ಸೋಲಿನ ಬಳಿಕ ಸಾಧಿಸಿದ ಗೆಲುವು ಇದಾಗಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ(South Africa vs India) 8 ವಿಕೆಟ್​ಗೆ 169 ರನ್​ ಗಳಿಸಲಷ್ಟೇ ಶಕ್ತವಾಯಿತು. ಭಾರತ 7 ರನ್​ಗಳ ಗೆಲುವು ಸಾಧಿಸಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆದ್ದು ಬೀಗಿತು.

Exit mobile version