Site icon Vistara News

Team India: ಟೀಮ್​ ಇಂಡಿಯಾ ಬಳಿ ಇರುವುದು ನಕಲಿ ವಿಶ್ವಕಪ್​ ಟ್ರೋಫಿ; ಅಸಲಿ ಟ್ರೋಫಿ ಎಲ್ಲಿದೆ?

Team India

Team India: Why Is Team India Carrying Fake T20 World Cup Trophy to India Despite Winning WC? Here's the Reason

ಬೆಂಗಳೂರು: 17 ವರ್ಷಗಳ ಬಳಿಕ ಭಾರತ ತಂಡ(Team India) 2ನೇ ಬಾರಿಗೆ ಟಿ20 ವಿಶ್ವಕಪ್(t20 world cup) ಟ್ರೋಫಿ​ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಈ ಸಾಧನೆ ಮಾಡಿದ ಆಟಗಾರರಿಗೆ ಈಗಾಗಲೇ ತವರಿನಲ್ಲಿ ಅಭೂತಪೂರ್ವ ಸ್ವಾಗತ ಕೂಡ ಲಭಿಸಿದೆ. ಆದರೆ, ಭಾರತ ತಂಡದ ಬಳಿ ಇರುವುದು ಮೂಲ ಟಿ20 ವಿಶ್ವಕಪ್​ ಟ್ರೋಫಿ(t20 world cup trophy) ಅಲ್ಲ ಇದು ಡುಪ್ಲಿಕೇಟ್ ಟ್ರೋಫಿ ಎಂದು ತಿಳಿದು ಅಭಿಮಾನಿಗಳು ಶಾಕ್ ಆಗಿದ್ದಾರೆ.

ಹೌದು, ಟೀಮ್​ ಇಂಡಿಯಾ ಭಾರತಕ್ಕೆ ತಂದಿರುವುದು ಡುಪ್ಲಿಕೇಟ್ ಟಿ20 ವಿಶ್ವಕಪ್​ ಟ್ರೋಫಿ. ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಯೋಜಿಸುವ ಯಾವುದೇ ವಿಶ್ವಕಪ್​ ಟೂರ್ನಿಯಲ್ಲಿ ಫೋಟೋಶೂಟ್‌ಗೆ ಮಾತ್ರ ಮೂಲ ಟ್ರೋಫಿಯನ್ನು ನೀಡಲಾಗುತ್ತದೆ. ಆ ಬಳಿಕ ಐಸಿಸಿ ವರ್ಷದ ಲಾಂಛನದೊಂದಿಗೆ ನಕಲಿ ಬೆಳ್ಳಿಯ ಟ್ರೋಫಿಯನ್ನು ವಿನ್ಯಾಸಗೊಳಿಸುತ್ತದೆ ಮತ್ತು ಇದರನ್ನು ವಿಜೇತ ತಂಡಕ್ಕೆ ನೀಡಲಾಗುತ್ತದೆ. ಮೂಲ ಟ್ರೋಫಿ ಐಸಿಸಿ ಬಳಿಯೇ ಇರುತ್ತದೆ.

ಇದನ್ನೂ ಓದಿ Team India: ವಾಂಖೆಡೆ ಸ್ಟೇಡಿಯಂನಲ್ಲಿ ವಂದೇ ಮಾತರಂ ಹಾಡಿದ ಟೀಮ್​ ಇಂಡಿಯಾ; ವಿಡಿಯೊ ಹಂಚಿಕೊಂಡ ಎ.ಆರ್. ರೆಹಮಾನ್

ಅಸಲಿ ಟ್ರೋಫಿ ದುಬೈನಲ್ಲಿರುವ ಐಸಿಸಿ ಕೇಂದ್ರ ಕಚೇರಿಯಲ್ಲಿದೆ. ಫೋಟೋಶೂಟ್​ ನಡೆಸಿದ ಬಳಿಕ ಮೂಲ ಟ್ರೋಫಿಯನ್ನು ಕೇಂದ್ರ ಕಚೇರಿಗೆ ನೀಡಲಾಗುತ್ತದೆ. ಯಾವುದೇ ತಂಡ ಕಪ್ ಗೆದ್ದರೂ ಅದನ್ನು ಸಂಭ್ರಮಾಚರಣೆ ಮತ್ತು ಫೋಟೋ ಸೆಷನ್​ವರೆಗೂ ಮಾತ್ರ ಪ್ರಸ್ತುತಪಡಿಸಲಾಗುತ್ತದೆ. ಅದರ ನಂತರ, ಗೆದ್ದವರು ನಕಲಿ ಟ್ರೋಫಿಯೊಂದಿಗೆ ತವರಿಗೆ ಹಿಂದಿರುಗುತ್ತಾರೆ. ಚಾಂಪಿಯನ್​ ಎನಿಸಿಕೊಂಡಿರುವ ಭಾರತದ ಬಳಿ ಇರುವುದು ಡುಪ್ಲಿಕೇಟ್ ಟ್ರೋಫಿ ಎಂದು ತಿಳಿದ ಅಭಿಮಾನಿಗಳು ನಕಲಿ ಟ್ರೋಫಿಗಾಗಿ ಇಷ್ಟೊಂದು ಹೋರಾಡಬೇಕಿತ್ತಾ ಎಂದು ಪ್ರಶ್ನಿಸುತ್ತಿದ್ದಾರೆ.

ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ಜೂನ್​ 29ರಂದು ನಡೆದಿದ್ದ ಟಿ20 ವಿಶ್ವಕಪ್​ ಫೈನಲ್(​T20 World Cup 2024) ಪಂದ್ಯದಲ್ಲಿ ಭಾರತ ತಂಡ(Team India) ದಕ್ಷಿಣ ಆಫ್ರಿಕಾ(South Africa vs India) ವಿರುದ್ಧ 7 ರನ್​ಗಳ ಸಾಧಿಸುವ ಮೂಲಕ 13 ವರ್ಷಗಳ ಬಳಿಕ ಐಸಿಸಿ ಪ್ರಶಸ್ತಿ ಬರವೊಂದನ್ನು ನೀಗಿಸಿತ್ತು.

ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ(South Africa vs India) 8 ವಿಕೆಟ್​ಗೆ 169 ರನ್​ ಗಳಿಸಲಷ್ಟೇ ಶಕ್ತವಾಯಿತು. ಭಾರತ 7 ರನ್​ಗಳ ಗೆಲುವು ಸಾಧಿಸಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆದ್ದು ಬೀಗಿತು.

Exit mobile version