Site icon Vistara News

World Cup 2023 : ಲೀಕ್​ ಆಯಿತು ಭಾರತ ತಂಡದ ವಿಶ್ವ ಕಪ್ ಜೆರ್ಸಿಯ ಚಿತ್ರ; ಚರ್ಚೆಗೆ ಕಾರಣವಾದ ಸ್ಟಾರ್​

Team India

ಬೆಂಗಳೂರು: ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಪ್ರಸ್ತುತ ಶ್ರೀಲಂಕಾದಲ್ಲಿ ಏಷ್ಯಾ ಕಪ್ ಅಭಿಯಾನ ನಡೆಸುತ್ತಿದೆ. ಅಲ್ಲಿ ಅವರು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಸೂಪರ್ ಫೋರ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸುತ್ತಿದೆ. ಭಾರತ ತಂಡ ಈಗಾಗಲೇ ಫೈನಲ್​ಗೇರಿದ್ದು ಲಂಕಾ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ. ಇದು ಮುಂಬರುವ ವಿಶ್ವ ಕಪ್​ಗೆ (World Cup 2023) ಮೊದಲು ಭಾರತ ತಂಡಕ್ಕೆ ಲಭಿಸಿದ ಉತ್ತಮ ಅಭ್ಯಾಸವಾಗಿದೆ. ಏತನ್ಮಧ್ಯೆ ಟೀಮ್ ಇಂಡಿಯಾದ ವಿಶ್ವಕಪ್ ಜೆರ್ಸಿಯ ಚಿತ್ರವೊಂದು ಆನ್ ಲೈನ್ ನಲ್ಲಿ ಸೋರಿಕೆಯಾಗಿದೆ. ಇದು ಹಲವಾರು ಚರ್ಚೆಗಳಿಗೆ ಕಾರಣವಾಗಿದೆ.

ವಿಶ್ವಕಪ್ 2023 ರ ಜೆರ್ಸಿಯ ಒಂದು ನೋಟವು ಆನ್​ಲೈನ್​ನಲ್ಲಿ ಕಾಣಿಸಿಕೊಂಡಿತು. ಅದು ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ. ಬಣ್ಣ ಮತ್ತು ವಿನ್ಯಾಸದ ಹೊರತಾಗಿ, ಅಭಿಮಾನಿಗಳ ಗಮನ ಸೆಳೆದ ವಿವರವೆಂದರೆ ಎದೆಯ ಮೇಲೆ ಬಿಸಿಸಿಐ ಲಾಂಛನದ ಮೇಲೆ ಹೊಂದಿರುವ ನಕ್ಷತ್ರಗಳ ಸಂಖ್ಯೆ.. ಸೋರಿಕೆಯಾದ ಚಿತ್ರದಲ್ಲಿ ಪ್ರಸ್ತುತ ಧರಿಸುವ ಜೆರ್ಸಿಗಿಂತ ಭಿನ್ನವಾಗಿ ಎರಡು ಸ್ಟಾರ್​ಗಳನ್ನು ತೋರಿಸಲಾಗಿದೆ. ಇದು ಭಾರತದ ಮೂರು ವಿಶ್ವಕಪ್ ಗೆಲುವುಗಳನ್ನು ಸೂಚಿಸುವುದಿಲ್ಲ. ಏಕದಿನ ಸ್ವರೂಪದಲ್ಲಿ ಎರಡು ಮತ್ತು ಟಿ 20 ಸ್ವರೂಪದಲ್ಲಿ ಒಂದು ವಿಶ್ವ ಕಪ್​ ಗೆದ್ದ ಹೊರತಾಗಿಯೂ ಕೇವಲ ಎರಡು ಸ್ಟಾರ್​ಗಳನ್ನು ಮಾತ್ರ ಹಾಕಿರುವುದು ಯಾಕೆ ಎಂಬ ಪ್ರಶ್ನೆ ಎದುರಾಗಿದೆ. ಹಾಗಾದರೆ 2007ರ ಟಿ20 ವಿಶ್ವಕಪ್ ವಿಜೇತ ಭಾರತದ ಸ್ಟಾರ್​ ಅನ್ನು ಏಕದಿನ ವಿಶ್ವ ಕಪ್​ ಜೆರ್ಸಿಯಿಂದ ತೆಗೆದಿರುವುದು ಯಾಕೆ ಎಂಬ ಪ್ರಶ್ನೆ ಎದುರಾಗಿದೆ.

1983 ಮತ್ತು 2011ರಲ್ಲಿ ಏಕದಿನ ಕ್ರಿಕೆಟ್​ನಲ್ಲಿ ಎರಡು ಹಾಗೂ 2007ರಲ್ಲಿ ಟಿ20 ಮಾದರಿಯಲ್ಲಿ ಒಂದು ವಿಶ್ವಕಪ್ ಗೆದ್ದ ಭಾರತದ ಮೂರು ವಿಶ್ವಕಪ್ ಗೆಲುವುಗಳನ್ನು ಸೂಚಿಸುವ ಮೂರು ಸ್ಟಾರ್​ಗಳನ್ನು ಏಷ್ಯಾಕಪ್ ಆಡುವ ವೇಳೆ ಭಾರತ ತಂಡದ ಆಟಗಾರರು ಧರಿಸಿದ್ದಾರೆ. ಆದ್ದರಿಂದ, ಏಕದಿನ ವಿಶ್ವ ಕಪ್​ನಲ್ಲಿ ಜೆರ್ಸಿಯಲ್ಲಿ ಕೇವಲ ಎರಡು ಸ್ಟಾರ್​ಗಳು ಮಾತ್ರ ಇವೆ. ಯಾಕೆಂದರೆ ಭಾರತ ತಂಡ 2 ಏಕ ದಿನ ವಿಶ್ವ ಕಪ್​ ಮಾತ್ರ ಗೆದ್ದಿದೆ.

ಭಾರತ ತಂಡ ಕೇವಲ ಒಂದು ಟಿ20 ವಿಶ್ವಕಪ್ ಗೆದ್ದಿರುವುದರಿಂದ 2024ರ ಟಿ 20 ವಿಶ್ವಕಪ್​ನ ಭಾರತದ ಜರ್ಸಿಯಲ್ಲಿ ಒಬ್ಬ ಸ್ಟಾರ್ ಇರಲಿದೆ.

ಇದನ್ನೂ ಓದಿ : Ravindra Jadeja : ಕಪಿಲ್​ ದೇವ್ ಬಳಿಕ ಈ ದಾಖಲೆ ಮಾಡಿದ್ದು ರವೀಂದ್ರ ಜಡೇಜಾ ಮಾತ್ರ; ಏನದು ಸಾಧನೆ?

ಅಕ್ಟೋಬರ್ 8 ರಂದು ಚೆನ್ನೈನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಮುಖಾಮುಖಿಯಾಗುವುದರೊಂದಿಗೆ ವಿಶ್ವಕಪ್ 2023 ರ ಅಭಿಯಾನವನ್ನು ಪ್ರಾರಂಭಿಸಲಿದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಪ್ರಸ್ತುತ ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾ ಕಪ್ 2023 ರಲ್ಲಿ ಆಡುತ್ತಿದೆ. ಭಾರತ ತಂಡ ಈಗಾಗಲೇ ಫೈನಲ್ ಗೆ ಅರ್ಹತೆ ಪಡೆದಿದ್ದು, ಸೆಪ್ಟೆಂಬರ್ 17ರ ಭಾನುವಾರ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಸೆಣಸಲಿದೆ.

Exit mobile version