Site icon Vistara News

IND vs ZIM ODI | 10 ವಿಕೆಟ್‌ ಜಯದೊಂದಿಗೆ ಟೀಮ್‌ ಇಂಡಿಯಾದ ನೂತನ ದಾಖಲೆ

IND vs ZIM ODI

ಹರಾರೆ : ಜಿಂಬಾಬ್ವೆ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್‌ ತಂಡ ಏಕದಿನ ಸರಣಿಯ (IND vs ZIM ODI) ಜಯ ಸಾಧಿಸುವ ಮೂಲಕ ಹೊಸ ದಾಖಲೆಯೊಂದನ್ನು ಬರೆದಿದೆ. ಗುರುವಾರ ನಡೆದ ಪಂದ್ಯದಲ್ಲಿ ಕೆ. ಎಲ್‌. ರಾಹುಲ್‌ ನಾಯಕತ್ವದ ಭಾರತ ತಂಡ ಆತಿಥೇಯ ಜಿಂಬಾಬ್ವೆ ತಂಡವನ್ನು ೧೦ ವಿಕೆಟ್‌ಗಳಿಂದ ಸೋಲಿಸಿದೆ. ಈ ಮೂಲಕ ಒಂದೇ ವರ್ಷದಲ್ಲಿ ಎರಡು ಬಾರಿ ೧೦ ವಿಕೆಟ್‌ ಜಯ ಸಾಧಿಸಿದ ಹೊಸ ಸಾಧನೆ ಮಾಡಿತು. ಭಾರತ ಇದುವರೆಗೆ ಒಂದು ವರ್ಷದಲ್ಲಿ ಎರಡು ಬಾರಿ ೧೦ ವಿಕೆಟ್‌ಗಳ ಜಯ ಸಾಧಿಸಿರಲಿಲ್ಲ. ಈ ಹಿಂದೆ ರೋಹಿತ್ ಶರ್ಮ ನೇತೃತ್ವದ ಭಾರತ ತಂಡ ಜುಲೈ ೧೨ರಂದು ಇಂಗ್ಲೆಂಡ್ ವಿರುದ್ಧ ೧೦ ವಿಕೆಟ್‌ಗಳ ಸುಲಭ ಜಯ ದಾಖಲಿಸಿತ್ತು. ಇದು ಜಿಂಬಾಬ್ವೆ ವಿರುದ್ಧ ಭಾರತ ತಂಡಕ್ಕೆ ಸಿಕ್ಕಿದ ಸತತ ೧೩ನೇ ಜಯವಾಗಿದೆ.

ಇದಕ್ಕೂ ಮೊದಲು, ಹರಾರೆ ಸ್ಪೋರ್ಟ್‌ ಕ್ಲಬ್‌ ಗ್ರೌಂಡ್‌ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ತಂಡ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್‌ ಮಾಡಿದ ಜಿಂಬಾಬ್ವೆ ತಂಡ ೪೦.೩ ಓವರ್‌ಗಳಲ್ಲಿ ೧೮೯ ರನ್‌ಗಳಿಗೆ ಸರ್ವಪತನ ಕಂಡಿತು. ಗುರಿ ಬೆನ್ನಟ್ಟಿದ ಭಾರತ 30.5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 192 ರನ್‌ ಬಾರಿಸಿ ಜಯ ಸಾಧಿಸಿತು.

ಹಿಂದಿನ ವೆಸ್ಟ್‌ ಇಂಡೀಸ್‌ ವಿರುದ್ಧದ ಏಕ ದಿನ ಸರಣಿಯಲ್ಲಿ ಉತ್ತಮ ರೀತಿಯಲ್ಲಿ ಬ್ಯಾಟಿಂಗ್‌ ಮಾಡಿದ್ದ ಭಾರತ ತಂಡದ ಆರಂಭಿಕ ಜೋಡಿ ಶಿಖರ್‌ ಧವನ್‌ ಹಾಗೂ ಶುಬ್ಮನ್‌ ಗಿಲ್‌ ಆರಂಭದಿಂದಲೇ ಜಿಂಬಾಬ್ವೆ ಬೌಲರ್‌ಗಳು ಪರಿತಪಿಸುವಂತೆ ಮಾಡಿದರು. ೧೧.೨ ಓವರ್‌ಗಳಲ್ಲಿ ೫೦ ರನ್‌ ಬಾರಿಸಿದ ಈ ಜೋಡಿ ಗೆಲುವಿನ ವಿಶ್ವಾಸ ಮೂಡಿಸಿತು. ೧೯. ಓವರ್‌ಗಳಲ್ಲಿ ೧೦೦ ರನ್‌ ಪೂರೈಸಿದ ನಂತರದಲ್ಲಿ ನಿರಂತರವಾಗಿ ರನ್‌ ಗಳಿಸುತ್ತಾ ಸಾಗಿ ಭಾರತಕ್ಕೆ ಗೆಲುವು ತಂದುಕೊಟ್ಟಿತು. ಶಿಖರ್ ಧವನ್‌ ೬೮ ಎಸೆತಗಳಲ್ಲಿ ಅರ್ಧ ಶತಕ ಬಾರಿಸುವ ಜತೆಗೆ ೧೧೩ ಎಸೆತಗಳಲ್ಲಿ ೮೧ ರನ್‌ ಬಾರಿಸಿದರು. ವೇಗವಾಗಿ ರನ್‌ ಗಳಿಸಿದ ಶುಬ್ಮನ್‌ ಗಿಲ್‌ ೭೨ ಎಸೆತಗಳಲ್ಲಿ ೮೨ ರನ್‌ ಬಾರಿಸಿದರು.

Exit mobile version