Site icon Vistara News

IND vs AUS | ರೋಹಿತ್‌ ಶರ್ಮ ಅಬ್ಬರ; ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡಕ್ಕೆ 6 ವಿಕೆಟ್‌ ಜಯ

Ind vs AUS

ನಾಗ್ಪುರ : ಮಳೆಯಿಂದ ಬಾಧಿತವಾಗಿದ್ದ ಟಿ೨೦ ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಆರು ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಇತ್ತಂಡಗಳು ೧-೧ ಸಮಬಲದ ಸಾಧನೆ ಮಾಡಿದವು. ಸೆಪ್ಟೆಂಬರ್‌ ೨೫ರಂದು ಹೈದರಾಬಾದ್‌ನಲ್ಲಿ ನಡೆಯುವ ಮೂರನೇ ಹಾಗೂ ಕೊನೇ ಹಣಾಹಣಿಯಲ್ಲಿ ಸರಣಿ ವಿಜೇತರು ಯಾರೆಂಬುದು ನಿರ್ಣಯವಾಗಲಿದೆ.

ನಾಗ್ಪುರದ ವಿದರ್ಭ ಕ್ರಿಕೆಟ್‌ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯವು ಮಳೆಯಿಂದಾಗಿ ತಡವಾಗಿ ಆರಂಭಗೊಂಡಿತು. ಹೀಗಾಗಿ ಪಂದ್ಯವನ್ನು ೮ ಓವರ್‌ಗಳ ಇನಿಂಗ್ಸ್‌ಗೆ ಸೀಮಿತಗೊಳಿಸಲಾಯಿತು. ಅಂತೆಯೇ ಟಾಸ್‌ ತೋತು ಟಾಸ್‌ ಸೋತು ಬ್ಯಾಟಿಂಗ್‌ಗೆ ಆಹ್ವಾನ ಪಡೆದ ಆಸ್ಟ್ರೇಲಿಯಾ ತಂಡ ೮ ಓವರ್‌ಗಳಲ್ಲಿ ೪ ವಿಕೆಟ್‌ ನಷ್ಟಕ್ಕೆ ೯೧ ರನ್ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಭಾರತ ತಂಡ ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ೪ ವಿಕೆಟ್‌ಗೆ ೯೨ ರನ್ ಬಾರಿಸಿ ಜಯಶಾಲಿಯಾಯಿತು. ೨೦ ಎಸೆತಗಳಲ್ಲಿ ೪೬ ರನ್‌ ಬಾರಿಸಿದ ನಾಯಕ ರೋಹಿತ್ ಶರ್ಮ ಗೆಲುವಿನ ರೂವಾರಿ ಎನಿಸಿಕೊಂಡರು.

ಸವಾಲಿನ ಮೊತ್ತವ್ನನು ಬೆನ್ನಟ್ಟಲು ಆರಂಭಿಸಿದ ಭಾರತ ತಂಡ ಉತ್ತಮ ಆರಂಭ ಪಡೆಯಿತು. ಆದರೆ, ಕೆ.ಎಲ್‌ ರಾಹುಲ್‌ (೧೦), ವಿರಾಟ್‌ ಕೊಹ್ಲಿ (೧೧) ವಿಕೆಟ್‌ ಪತನಗೊಳ್ಳುವುದರೊಂದಿಗೆ ಹಿನ್ನಡೆಗೆ ಒಳಗಾಯಿತು. ಸೂರ್ಯಕುಮಾರ್‌ ಯಾದವ್‌ ಕೂಡ ಸೊನ್ನೆ ಸುತ್ತಿದರು. ಆಸೀಸ್‌ ತಂಡದ ಸ್ಪಿನ್ನರ್‌ ಅಡಂ ಜಂಪಾ ೧೬ ರನ್‌ಗಳಿಗೆ ೩ ವಿಕೆಟ್‌ ಕಬಳಿಸಿ ಭಾರತದ ವೇಗದ ಓಟಕ್ಕೆ ಕಡಿವಾಣ ಹಾಕಿದರು. ಕೊನೆಯಲ್ಲಿ ದಿನೇಶ್‌ ಕಾರ್ತಿಕ್ ೨ ಎಸೆತಗಳಿಗೆ ೧೦ ರನ್‌ ಬಾರಿಸಿ ಫಿನಿಶರ್‌ ಪಾತ್ರ ಪೂರೈಸಿದರು.

ಫಿಂಚ್ ಅಬ್ಬರ

ಮೊದಲು ಇನಿಂಗ್ಸ್ ಆರಂಭಿಸಿದ ನಾಯಕ ಆರೋನ್‌ ಫಿಂಚ್‌ ಬಿರುಸಿನ ಬ್ಯಾಟಿಂಗ್‌ ಪ್ರದರ್ಶಿಸಿದರು. ಅವರು ೧೫ ಎಸೆತಗಳಲ್ಲಿ ೩೧ ರನ್‌ ಬಾರಿಸಿದರು. ಏತನ್ಮಧ್ಯೆ, ಭಾರತದ ಬೌಲರ್‌ಗಳು ಆಸೀಸ್‌ ಬ್ಯಾಟರ್‌ಗಳಿಗೆ ಕಡಿವಾಣ ಸ್ಕಡಿವಾಣ ಹಾಕಿದರು. ಆದರೆ ಮ್ಯಾಥ್ಯೂ ವೇಡ್‌ ೧೯ ಎಸೆತಗಳಲ್ಲಿ ೪೩ ರನ್ ಬಾರಿಸಿ ದೊಡ್ಡ ಮೊತ್ತ ಪೇರಿಸಲು ನೆರವಾದರು. ಭಾರತ ಬೌಲಿಂಗ್‌ ಪರ ಅಕ್ಷರ್ ಪಟೇಲ್‌ ೧೩ ರನ್‌ ವೆಚ್ಚದಲ್ಲಿ ೨ ವಿಕೆಟ್‌ ಕಬಳಿಸಿದರು.

ಸ್ಕೋರ್‌ ವಿವರ

ಆಸ್ಟ್ರೇಲಿಯಾ : ೮ ಓವರ್‌ಗಳಲ್ಲಿ ೪ ವಿಕೆಟ್‌ಗೆ ೯೦ (ಆರೋನ್‌ ಫಿಂಚ್‌ ೩೧, ಮ್ಯಾಥ್ಯೂ ವೇಡ್‌ ೪೩, ಅಕ್ಷರ್‌ ಪಟೇಲ್‌ ೧೩ಕ್ಕೆ೨)

ಭಾರತ : ೭.೨ ಓವರ್‌ಗಳಲ್ಲಿ ೪ ವಿಕೆಟ್‌ಗೆ ೯೨ (ರೋಹಿತ್ ಶರ್ಮ ೪೬*, ದಿನೇಶ್‌ ಕಾರ್ತಿಕ್‌ ೧೦* ವಿರಾಟ್‌ ಕೊಹ್ಲಿ ೧೧, ಆಡಂ ಜಂಪಾ ೧೬ಕ್ಕೆ೩).

ಇದನ್ನೂ ಓದಿ | IND vs AUS | ರೋಹಿತ್‌ ಶರ್ಮ ಮೈದಾನದಲ್ಲೇ ದಿನೇಶ್‌ ಕಾರ್ತಿಕ್‌ ಕತ್ತು ಹಿಡಿದಿದ್ದು ಯಾಕಪ್ಪಾ?

Exit mobile version