ಇಸ್ಲಾಮಾಬಾದ್: ಇತ್ತೀಚೆಗೆ ಸಣ್ಣ ಸಣ್ಣ ವಯಸ್ಸಿನ ಯುವಕರೇ ಹೃದಯಾಘಾತಕ್ಕೀಡಾಗಿ (Heart Attack) ಕ್ಷಣ ಮಾತ್ರದಲ್ಲಿ ಜೀವ ಕಳೆದುಕೊಳ್ಳುವ ವಿದ್ಯಮಾನಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲೂ ಜಿಮ್ ನಲ್ಲಿ ವರ್ಕೌಟ್ ಮಾಡುವಾಗ, ಆಟ ಆಡುವಾಗ ಒಮ್ಮೆಲೇ ಹೃದಯ ನಿಂತು ಬಿಡುವುದು ಹೆಚ್ಚಾಗುತ್ತಲೇ ಇದೆ. ಪಾಕಿಸ್ತಾನದ(Pakistani tennis player Zainab Ali Naqvi) ಯುವ ಟೆನಿಸ್ ಆಟಗಾರ್ತಿ ಝೈನಾಬ್ ಅಲಿ ನಖ್ವಿ(Zainab Ali Naqvi) ಅಭ್ಯಾಸ ಮಾಡುವಾಗ ಕುಸಿದು ಸಾವನ್ನಪ್ಪಿದ್ದಾರೆ. 17 ವರ್ಷದ ಆಟಗಾರ್ತಿಗೆ ಹೃದಯಾಘಾತವಾಗಿರುವ(Heart Attack) ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಮುಂಬರುವ ಐಟಿಎಫ್ ಜೂನಿಯರ್ ಟೂರ್ನಿಯಲ್ಲಿ(ITF junior tournament) ಆಡಲು ಅವರು ಸಿದ್ಧತೆ ನಡೆಸುತ್ತಿದ್ದರು.
‘ಝೈನಾಬ್ ಉದಯೋನ್ಮುಖ ಆಟಗಾರ್ತಿಯಾಗಿದ್ದರು. ವೈದ್ಯರು ಅವರಿಗೆ ಹೃದಯಾಘಾತ ಆಗಿದೆ ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಸಹಜ ಸಾವು ಎಂದು ದಾಖಲಿಸಲಾಗಿದೆ. ಆಟಗಾರ್ತಿಯ ದೇಹದ ಮರಣೋತ್ತರ ಪರೀಕ್ಷೆ ಬೇಡವೆಂದು ಪಾಲಕರೂ ಮನವಿ ಮಾಡಿದ್ದರಿಂದ ಕುಟುಂಬದವರಿಗೆ ಆಟಗಾರ್ತಿಯ ಪಾರ್ಥಿವ ಶರೀರವನ್ನು ಹಸ್ತಾಂತರಿಸಲಾಗಿದೆ ಎಂದು ಪಾಕಿಸ್ತಾನ ಟೆನಿಸ್ ಫೆಡರೇಷನ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
Heart Attack : ನಮಾಜ್ ಮಾಡುತ್ತಿದ್ದಾಗ ಕುಳಿತಲ್ಲೇ ಕುಸಿದು ಬಿದ್ದು ಮೃತ್ಯು; ವಿಡಿಯೊ ಇದೆ
ಅಭ್ಯಾಸ ನಡೆಸಿ ತಮ್ಮ ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಅವರು ಸಾವಿಗೀಡಾದರು. ಪ್ರಜ್ಞಾಹೀನರಾದ ಝೈನಾಬ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು. ಝೈನಾಬ್ ಜತೆಗೆ ಅವರ ಅಜ್ಜಿ ಕೂಡ ಈ ಕೋಣೆಯಲ್ಲಿದ್ದರು. ಇವರ ಸಾವಿಗೆ ಟೆನ್ನಿಸ್ ಫೆಡರೇಶನ್ ಸಂತಾಪ ಸೂಚಿಸಿದೆ.
ಕಳೆದ ವರ್ಷ ಪಾಕಿಸ್ತಾನದಲ್ಲಿ ಕ್ಲಬ್ ಕ್ರಿಕೆಟ್ ಆಡುವ ವೇಳೆ ಯುವ ಕ್ರಿಕೆಟಿಗರೊಬ್ಬರು ಹೃದಯಾಘಾತದಿಂದ ಕ್ರೀಡಾಂಗಣದಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದರು. ಘಟನೆ ಬಗ್ಗೆ ಅಲ್ಲಿನ ಕ್ರಿಕೆಟರ್‌ಗಳು ದಿಗ್ರ್ಭಮೆ ವ್ಯಕ್ತಪಡಿಸಿದ್ದರು. ಅಲ್ಲಿನ ಕಾರ್ಪೊರೇಟ್ ಕ್ರಿಕೆಟ್ ಟೂರ್ನಮೆಂಟ್ ವೇಳೆ ಘಟನೆ ಸಂಭವಿಸಿತ್ತು
ಮೃತಪಟ್ಟ ಉಸ್ಮಾನ್ ಶಿನ್ವಾರಿ ಫೀಲ್ಡಿಂಗ್ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಸಹ ಆಟಗಾರರು ನೆರವಿಗೆ ಹೋದರು ಪ್ರಯೋಜನಕ್ಕೆ ಬರಲಿಲ್ಲ. ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಕ್ಕಿಂತ ಮೊದಲೇ ಅವರು ಮೃತಪಟ್ಟಿದ್ದರು.
Guys guys, he is other Usman Shinwari, not the one you all know. https://t.co/HN23JYUoEd
— Faizan Lakhani (@faizanlakhani) September 25, 2022
ದಿಲ್ಲಿಯಲ್ಲಿ ಕ್ರಿಕೆಟ್ ಆಡುವ ವೇಳೆ ಸಾಫ್ಟ್ ವೇರ್ ಎಂಜಿನಿಯರ್ ಸಾವು
ಇತ್ತೀಚೆಗೆ ನೊಯ್ಡಾ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ವಿಕಾಸ್ ನೇಗಿ ಅವರು ಕ್ರಿಕೆಟ್ ಆಡುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಕಾರ್ಪೊರೇಟ್ ಟೂರ್ನಮೆಂಟ್ ಒಂದರ ಪಂದ್ಯದಲ್ಲಿ ಪಾಲ್ಗೊಂಡಿದ್ದ ವಿಕಾಸ್ ನಾನ್ ಸ್ಟ್ರೈಕ್‌ನಿಂದ ಸ್ಟ್ರೈಕರ್ ಕಡೆಗೆ ಸಾಗಿ ನಂತರ ಎದೆ ಹಿಡಿದುಕೊಂಡು ಅಲ್ಲೇ ಕುಸಿದುಬಿದ್ದಿದ್ದಾರೆ. ಎದುರಾಳಿ ತಂಡದ ಆಟಗಾರರು ಮತ್ತು ಸಹ ಆಟಗಾರರು ಕೂಡಲೇ ಸಹಾಯಕ್ಕೆ ಮುಂದಾದರೂ ಯಾವುದೇ ಪ್ರಯೋಜನ ಆಗಿರಲಿಲ್ಲ.