Site icon Vistara News

Television Cricket League| ಕಲರ್ ಫುಲ್ ಟೆಲಿವಿಷನ್ ಕ್ರಿಕೆಟ್ ಲೀಗ್ ಸೀಸನ್-4ಗೆ ದಿನಗಣನೆ ಆರಂಭ

Television Cricket League

ಬೆಂಗಳೂರು: ಧಾರಾವಾಹಿ ಮೂಲಕ ಮನೆಮಂದಿಗೆಲ್ಲ ಮನರಂಜನೆ ನೀಡುವ ಕಿರುತೆರೆ ತಾರೆಗಳು ಇದೀಗ ಟೆಲಿವಿಷನ್ ಕ್ರಿಕೆಟ್ ಲೀಗ್ (Television Cricket League) ಮೂಲಕ ಮತ್ತಷ್ಟು ರಂಜಿಸಲು ಸಜ್ಜಾಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ‘ಟೆಲಿವಿಷನ್ ಕ್ರಿಕೆಟ್ ಲೀಗ್’ ಕಲರ್ ಫುಲ್ ಆಗಿರಲಿದ್ದು ನಾಲ್ಕನೇ ಸೀಸನ್ ಡಿಸೆಂಬರ್​ನಲ್ಲಿ ಆರಂಭವಾಗಲಿದೆ.

ವಾಸವಿ ವೆಂಚರ್ಸ್​ನಡಿ ದೀಪಕ್, ಮಂಜೇಶ್ (ಮನು), ದಿವ್ಯ ಪ್ರಸಾದ್ ನೇತೃತ್ವದಲ್ಲಿ ನಡೆಯುವ ‘ಟಿಸಿಎಲ್’ ಈಗಾಗಲೇ ಮೂರು ಸೀಸನ್ ಯಶಸ್ವಿಯಾಗಿ ಪೂರೈಸಿದ್ದು, ನಾಲ್ಕನೇ ಸೀಸನ್​ಗೆ ಸಕಲ ರೀತಿಯಲ್ಲೂ ತಯಾರಿ ನಡೆಯುತ್ತಿದೆ.

ಆರು ತಂಡಗಳ ಕಾದಾಟ

ಈ ಬಾರಿಯ ಟೂರ್ನಿಯಲ್ಲಿ ಒಟ್ಟು ಆರು ತಂಡಗಳಿರಲಿವೆ. ಗ್ಯಾಂಗ್ ಗರುಡಾಸ್, ಗಜಪಡೆ ವಾರಿಯರ್ಸ್, ಚಾಂಪಿಯನ್ ಚೀತಾಸ್, ಜಟಾಯು ಜಯಂಟ್ಸ್, ಕ್ರೇಜಿ ಕಿಲ್ಲರ್ಸ್, ರೋರಿಂಗ್ ಲಯನ್ಸ್ ಪ್ರಮುಖ ತಂಡಗಳಾಗಿವೆ. ಮಾಸ್ಟರ್ ಆನಂದ್, ಕಿರಿಕ್ ಕೀರ್ತಿ, ವಿವಾನ್ ಸುನೀಲ್, ಹೇಮಂತ್, ಹರ್ಷ ಸಿ. ಎಂ ಗೌಡ, ಅರ್ಜುನ್ ಯೋಗಿ ತಂಡಗಳ ನಾಯಕತ್ವ ವಹಿಸಿಕೊಂಡಿದ್ದು, ಕಾರ್ತಿಕ್ ಮಹೇಶ್, ಹರೀಶ್ ಗೌಡ, ವಿಕಾಸ್, ಮಂಜು ಪಾವಗಡ, ಕರಿಬಸವ, ಶ್ರೀರಾಮ್ ಉಪನಾಯಕರಾಗಿದ್ದಾರೆ. ಆರು ತಂಡಗಳ ಮೂಲಕ ಒಟ್ಟು110 ಕಿರುತೆರೆ ಕಲಾವಿದರು ಕ್ರಿಕೆಟ್ ಲೀಗ್​ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರತಿ ತಂಡಕ್ಕೂ ಸೆಲೆಬ್ರೆಟಿ ಅಂಬಾಸಿಡರ್ ಇರಲಿದ್ದು, ಒಂದೊಂದು ತಂಡಕ್ಕೆ ಮೂರು ಜನ ಅಂಬಾಸಿಡರ್ ಇರಲಿದ್ದಾರೆ. ವರ್ಷಿತಾ, ಅಮೂಲ್ಯ, ಅಕ್ಷಿತ ‘ಗಜಪಡೆ ವಾರಿಯರ್ಸ್’, ಶುಭ ರಕ್ಷಾ, ಸುಶ್ಮಿತಾ ರುದ್ರೇಶ್, ಆಶಿಯಾ ‘ರೋರಿಂಗ್ ಲಯನ್ಸ್’, ಯಶು, ಗಾನವಿ, ವಿಜಯಲಕ್ಷೀ ‘ಚಾಂಪಿಯನ್ ಚೀತಾಸ್’, ಪಲ್ಲವಿ ಗೌಡ, ದ್ರವ್ಯ ಶೆಟ್ಟಿ, ತನಿಶಾ ಕುಪ್ಪಂಡ ‘ಗ್ಯಾಂಗ್ ಗರುಡಾಸ್’, ಶೃತಿ ರಮೇಶ್, ಸಾಕ್ಷಿ ಮೇಘನಾ, ಪೂಜಾ ಕ್ಷತ್ರಿಯ ‘ಜಟಾಯು ಜಯಂಟ್ಸ್’, ಮೇಘಾ ಎಸ್. ವಿ, ಅನ್ವಿತಾ, ರಶ್ಮಿತಾ ‘ಕ್ರೇಜಿ ಕಿಲ್ಲರ್ಸ್’ ತಂಡಕ್ಕೆ ಅಂಬಾಸಿಡರ್ ಆಗಿರಲಿದ್ದಾರೆ.

ಪ್ರೋ ವೈಟಲ್ ಹೆಲ್ತ್ ‘ರೋರಿಂಗ್ ಲಯನ್ಸ್’, ಡಾ. ಚೇತನಾ ‘ಜಟಾಯು ಜಯಂಟ್ಸ್’, ಪ್ರಧಾನ್ ಟಿವಿ ‘ಚಾಂಪಿಯನ್ ಚೀತಾಸ್’, ಡಿಜಿ ಇನ್ಫೋಟೆಕ್ ‘ಕ್ರೇಜಿ ಕಿಲ್ಲರ್ಸ್’, ಅಮ್ಮಾಸ್ ಫುಡ್ ‘ಗ್ಯಾಂಗ್ ಗರುಡಾಸ್’, ಕಿರೀಟಿ ವೆಂಚರ್ಸ್ ‘ಗಜಪಡೆ ವಾರಿಯರ್ಸ್’ ತಂಡಗಳ ಮಾಲೀಕತ್ವ ಹೊಂದಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಟ್ರಿಂಕೋ ಇನ್ಫ್ರಾ ಪ್ರೈ.ಲಿ. ಟೈಟಲ್ ಸ್ಪಾನ್ಸರ್ ಮಾಡುತ್ತಿದೆ.

ಟಿಸಿಎಲ್ ಸೀಸನ್- 4 ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಯೋಜಕರಾದ ದೀಪಕ್ ನವೆಂಬರ್ ಕೊನೆಯಲ್ಲಿ ಟೆಲಿವಿಷನ್ ಕ್ರಿಕೆಟ್ ಲೀಗ್ ಲಾಂಚ್ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ನಡೆಯಲಿದೆ. ಲಾಂಚ್ ಈವೆಂಟ್ ನಲ್ಲಿ ಸಾರ್ವಜನಿಕರಿಗೂ ಭಾಗವಹಿಸಲು ಅವಕಾಶವಿದೆ. ಸ್ಯಾಂಡಲ್​ವುಡ್​ ಸೆಲೆಬ್ರೆಟಿಯಿಂದ ‘ಟಿಸಿಲ್’ ಲಾಂಚ್ ಕಾರ್ಯಕ್ರಮ ನಡೆಯಲಿದ್ದು ಡಿಸೆಂಬರ್​ನಲ್ಲಿ ಲೀಗ್ ಆರಂಭವಾಗಲಿದೆ. ಎಲ್ಲ ಕಿರುತೆರೆ ವಾಹಿನಿಯ ಕಲಾವಿದರನ್ನು ಒಂದೆಡೆ ಸೇರಿಸುವ ಪ್ರಯತ್ನ ಇದಾಗಿದ್ದು ಕ್ರೀಡೆ ಜತೆಗೆ ಸ್ನೇಹವನ್ನು ಬೆಸೆಯುವ ಉದ್ದೇಶವನ್ನು ‘ಟಿಸಿಎಲ್’ ಹೊಂದಿದೆ ಎಂದು ತಿಳಿಸಿದರು.

ಇದನ್ನೂ ಓದಿ | Kantara Movie | ಬೆಂಗಳೂರಿನಲ್ಲಿ ಕಾಂತಾರ ಸಿನಿಮಾ ವೀಕ್ಷಿಸಿದ ಕೇಂದ್ರ ಸಚಿವೆ ನಿರ್ಮಲಾ‌ ಸೀತಾರಾಮನ್‌

Exit mobile version