Latest
Television Cricket League| ಕಲರ್ ಫುಲ್ ಟೆಲಿವಿಷನ್ ಕ್ರಿಕೆಟ್ ಲೀಗ್ ಸೀಸನ್-4ಗೆ ದಿನಗಣನೆ ಆರಂಭ
ಕಿರುತೆರೆ ತಾರೆಯರ ಪ್ರಸಿದ್ಧ ಕ್ರಿಕೆಟ್ ಲೀಗ್ ಟಿಸಿಎಲ್ ಸೀಸನ್- 4ಗೆ ಚಾಲನೆ ದೊರೆತಿದ್ದು ಮುಂದಿನ ತಿಂಗಳು ಡಿಸೆಂಬರ್ನಲ್ಲಿ ಪಂದ್ಯಾಟ ನಡೆಯಲಿವೆ.
ಬೆಂಗಳೂರು: ಧಾರಾವಾಹಿ ಮೂಲಕ ಮನೆಮಂದಿಗೆಲ್ಲ ಮನರಂಜನೆ ನೀಡುವ ಕಿರುತೆರೆ ತಾರೆಗಳು ಇದೀಗ ಟೆಲಿವಿಷನ್ ಕ್ರಿಕೆಟ್ ಲೀಗ್ (Television Cricket League) ಮೂಲಕ ಮತ್ತಷ್ಟು ರಂಜಿಸಲು ಸಜ್ಜಾಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ‘ಟೆಲಿವಿಷನ್ ಕ್ರಿಕೆಟ್ ಲೀಗ್’ ಕಲರ್ ಫುಲ್ ಆಗಿರಲಿದ್ದು ನಾಲ್ಕನೇ ಸೀಸನ್ ಡಿಸೆಂಬರ್ನಲ್ಲಿ ಆರಂಭವಾಗಲಿದೆ.
ವಾಸವಿ ವೆಂಚರ್ಸ್ನಡಿ ದೀಪಕ್, ಮಂಜೇಶ್ (ಮನು), ದಿವ್ಯ ಪ್ರಸಾದ್ ನೇತೃತ್ವದಲ್ಲಿ ನಡೆಯುವ ‘ಟಿಸಿಎಲ್’ ಈಗಾಗಲೇ ಮೂರು ಸೀಸನ್ ಯಶಸ್ವಿಯಾಗಿ ಪೂರೈಸಿದ್ದು, ನಾಲ್ಕನೇ ಸೀಸನ್ಗೆ ಸಕಲ ರೀತಿಯಲ್ಲೂ ತಯಾರಿ ನಡೆಯುತ್ತಿದೆ.
ಆರು ತಂಡಗಳ ಕಾದಾಟ
ಈ ಬಾರಿಯ ಟೂರ್ನಿಯಲ್ಲಿ ಒಟ್ಟು ಆರು ತಂಡಗಳಿರಲಿವೆ. ಗ್ಯಾಂಗ್ ಗರುಡಾಸ್, ಗಜಪಡೆ ವಾರಿಯರ್ಸ್, ಚಾಂಪಿಯನ್ ಚೀತಾಸ್, ಜಟಾಯು ಜಯಂಟ್ಸ್, ಕ್ರೇಜಿ ಕಿಲ್ಲರ್ಸ್, ರೋರಿಂಗ್ ಲಯನ್ಸ್ ಪ್ರಮುಖ ತಂಡಗಳಾಗಿವೆ. ಮಾಸ್ಟರ್ ಆನಂದ್, ಕಿರಿಕ್ ಕೀರ್ತಿ, ವಿವಾನ್ ಸುನೀಲ್, ಹೇಮಂತ್, ಹರ್ಷ ಸಿ. ಎಂ ಗೌಡ, ಅರ್ಜುನ್ ಯೋಗಿ ತಂಡಗಳ ನಾಯಕತ್ವ ವಹಿಸಿಕೊಂಡಿದ್ದು, ಕಾರ್ತಿಕ್ ಮಹೇಶ್, ಹರೀಶ್ ಗೌಡ, ವಿಕಾಸ್, ಮಂಜು ಪಾವಗಡ, ಕರಿಬಸವ, ಶ್ರೀರಾಮ್ ಉಪನಾಯಕರಾಗಿದ್ದಾರೆ. ಆರು ತಂಡಗಳ ಮೂಲಕ ಒಟ್ಟು110 ಕಿರುತೆರೆ ಕಲಾವಿದರು ಕ್ರಿಕೆಟ್ ಲೀಗ್ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರತಿ ತಂಡಕ್ಕೂ ಸೆಲೆಬ್ರೆಟಿ ಅಂಬಾಸಿಡರ್ ಇರಲಿದ್ದು, ಒಂದೊಂದು ತಂಡಕ್ಕೆ ಮೂರು ಜನ ಅಂಬಾಸಿಡರ್ ಇರಲಿದ್ದಾರೆ. ವರ್ಷಿತಾ, ಅಮೂಲ್ಯ, ಅಕ್ಷಿತ ‘ಗಜಪಡೆ ವಾರಿಯರ್ಸ್’, ಶುಭ ರಕ್ಷಾ, ಸುಶ್ಮಿತಾ ರುದ್ರೇಶ್, ಆಶಿಯಾ ‘ರೋರಿಂಗ್ ಲಯನ್ಸ್’, ಯಶು, ಗಾನವಿ, ವಿಜಯಲಕ್ಷೀ ‘ಚಾಂಪಿಯನ್ ಚೀತಾಸ್’, ಪಲ್ಲವಿ ಗೌಡ, ದ್ರವ್ಯ ಶೆಟ್ಟಿ, ತನಿಶಾ ಕುಪ್ಪಂಡ ‘ಗ್ಯಾಂಗ್ ಗರುಡಾಸ್’, ಶೃತಿ ರಮೇಶ್, ಸಾಕ್ಷಿ ಮೇಘನಾ, ಪೂಜಾ ಕ್ಷತ್ರಿಯ ‘ಜಟಾಯು ಜಯಂಟ್ಸ್’, ಮೇಘಾ ಎಸ್. ವಿ, ಅನ್ವಿತಾ, ರಶ್ಮಿತಾ ‘ಕ್ರೇಜಿ ಕಿಲ್ಲರ್ಸ್’ ತಂಡಕ್ಕೆ ಅಂಬಾಸಿಡರ್ ಆಗಿರಲಿದ್ದಾರೆ.
ಪ್ರೋ ವೈಟಲ್ ಹೆಲ್ತ್ ‘ರೋರಿಂಗ್ ಲಯನ್ಸ್’, ಡಾ. ಚೇತನಾ ‘ಜಟಾಯು ಜಯಂಟ್ಸ್’, ಪ್ರಧಾನ್ ಟಿವಿ ‘ಚಾಂಪಿಯನ್ ಚೀತಾಸ್’, ಡಿಜಿ ಇನ್ಫೋಟೆಕ್ ‘ಕ್ರೇಜಿ ಕಿಲ್ಲರ್ಸ್’, ಅಮ್ಮಾಸ್ ಫುಡ್ ‘ಗ್ಯಾಂಗ್ ಗರುಡಾಸ್’, ಕಿರೀಟಿ ವೆಂಚರ್ಸ್ ‘ಗಜಪಡೆ ವಾರಿಯರ್ಸ್’ ತಂಡಗಳ ಮಾಲೀಕತ್ವ ಹೊಂದಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಟ್ರಿಂಕೋ ಇನ್ಫ್ರಾ ಪ್ರೈ.ಲಿ. ಟೈಟಲ್ ಸ್ಪಾನ್ಸರ್ ಮಾಡುತ್ತಿದೆ.
ಟಿಸಿಎಲ್ ಸೀಸನ್- 4 ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಯೋಜಕರಾದ ದೀಪಕ್ ನವೆಂಬರ್ ಕೊನೆಯಲ್ಲಿ ಟೆಲಿವಿಷನ್ ಕ್ರಿಕೆಟ್ ಲೀಗ್ ಲಾಂಚ್ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ನಡೆಯಲಿದೆ. ಲಾಂಚ್ ಈವೆಂಟ್ ನಲ್ಲಿ ಸಾರ್ವಜನಿಕರಿಗೂ ಭಾಗವಹಿಸಲು ಅವಕಾಶವಿದೆ. ಸ್ಯಾಂಡಲ್ವುಡ್ ಸೆಲೆಬ್ರೆಟಿಯಿಂದ ‘ಟಿಸಿಲ್’ ಲಾಂಚ್ ಕಾರ್ಯಕ್ರಮ ನಡೆಯಲಿದ್ದು ಡಿಸೆಂಬರ್ನಲ್ಲಿ ಲೀಗ್ ಆರಂಭವಾಗಲಿದೆ. ಎಲ್ಲ ಕಿರುತೆರೆ ವಾಹಿನಿಯ ಕಲಾವಿದರನ್ನು ಒಂದೆಡೆ ಸೇರಿಸುವ ಪ್ರಯತ್ನ ಇದಾಗಿದ್ದು ಕ್ರೀಡೆ ಜತೆಗೆ ಸ್ನೇಹವನ್ನು ಬೆಸೆಯುವ ಉದ್ದೇಶವನ್ನು ‘ಟಿಸಿಎಲ್’ ಹೊಂದಿದೆ ಎಂದು ತಿಳಿಸಿದರು.
ಇದನ್ನೂ ಓದಿ | Kantara Movie | ಬೆಂಗಳೂರಿನಲ್ಲಿ ಕಾಂತಾರ ಸಿನಿಮಾ ವೀಕ್ಷಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
Latest
Bombay Jayashree: ಖ್ಯಾತ ಗಾಯಕಿ ಬಾಂಬೆ ಜಯಶ್ರೀ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
ತಾವು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಇಂದು ಬೆಳಗ್ಗೆ ಉಪಹಾರ ಮತ್ತು ಊಟಕ್ಕೆ ಜಯಶ್ರೀ ಅವರು ಬಾರದೇ ಹೋದಾಗ, ಹೋಟೆಲ್ ಕೋಣೆಗೆ ಹೋಗಿ ನೋಡಿದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಲಂಡನ್: ಖ್ಯಾತ ಗಾಯಕಿ ಬಾಂಬೆ ಜಯಶ್ರೀ (Bombay Jayashree) ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬ್ರಿಟನ್ ದೇಶದ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಅವರಿಗೆ ಮೆದುಳಿನಲ್ಲಿ ರಕ್ತಸ್ರಾವವಾಗಿದ್ದು, ತಾವು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದರು ಎಂದು ಹೇಳಲಾಗುತ್ತಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾವು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಇಂದು ಬೆಳಗ್ಗೆ ಉಪಹಾರ ಮತ್ತು ಊಟಕ್ಕೆ ಜಯಶ್ರೀ ಅವರು ಬಾರದೇ ಹೋದಾಗ, ಹೋಟೆಲ್ ಕೋಣೆಗೆ ಹೋಗಿ ನೋಡಿದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಚಿಕಿತ್ಸೆಯ ನಂತರ ಅವರನ್ನು ಚೆನ್ನೈಗೆ ಕರೆತರಲಾಗುತ್ತಿದೆ ಎನ್ನುವ ಮಾಹಿತಿ ಇದೆ. ಆಪ್ತ ಮೂಲಗಳ ಪ್ರಕಾರ ಬಾಂಬೆ ಜಯಶ್ರೀ ಅವರು ಶಸ್ತ್ರಚಿಕಿತ್ಸೆಗೆ ಒಳಲಾಗಿದ್ದರು. ನಿನ್ನೆ ರಾತ್ರಿ ಅವರು ಬಳಲಿಕೆ ಹಾಗೂ ತೀವ್ರ ಕುತ್ತಿಗೆ ನೋವಿನ ಬಗ್ಗೆಯೂ ಮಾತನಾಡಿದ್ದರು ಎಂದು ಆಪ್ತರು ತಿಳಿಸಿದ್ದಾರೆ.
ಕರ್ನಾಟಕ ಶಾಸ್ತ್ರೀಯ ಸಂಗೀತದ ಖ್ಯಾತ ಗಾಯಕಿಯಾಗಿರುವ ಜಯಶ್ರೀ ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿದ್ದಾರೆ. ಪದ್ಮಶ್ರೀ ಸೇರಿದಂತೆ ಹಲವು ಪುರಸ್ಕಾರಗಳು ಅವರಿಗೆ ದೊರೆತಿವೆ. ʼಲೈಫ್ ಆಫ್ ಪೈʼ ಮುಂತಾದ ಹಾಲಿವುಡ್ ಸಿನಿಮಾಗಳಲ್ಲೂ ಅವರು ಹಾಡಿದ್ದಾರೆ.
ಇದನ್ನೂ ಓದಿ: Viral Video: ಭಾರತದ 51 ನದಿ ಹೆಸರಿರುವ ಮ್ಯೂಸಿಕ್ ವಿಡಿಯೋ ಷೇರ್ ಮಾಡಿದ ಆನಂದ್ ಮಹೀಂದ್ರಾ, ನೆಟ್ಟಿಗರು ಫಿದಾ
Latest
Viral Video : ತಪ್ಪು ಟರ್ಮಿನಲ್ ತಲುಪಿ, ಇದಕ್ಕೂ ಮೋದಿ ಕಾರಣ ಎಂದ ನೆಟ್ಟಿಗ! ವೈರಲ್ ಆಯ್ತು ವಿಡಿಯೊ
ತಮ್ಮ ವಿಮಾನ ಪ್ರಯಾಣದ ಇ-ಟಿಕೆಟ್ ನೋಡದ ವ್ಯಕ್ತಿಯೊಬ್ಬರು ತಪ್ಪಾದ ಟರ್ಮಿನಲ್ ತಲುಪಿ ಈ ವಿಚಾರದಲ್ಲಿಯೂ ಪ್ರಧಾನಿ ಅವರು ಗಮನಹರಿಸಬೇಕು ಎಂದು ವಿಡಿಯೊ ಹರಿಬಿಟ್ಟಿದ್ದಾರೆ. ಆ ವಿಡಿಯೊ ವೈರಲ್ (Viral Video) ಆಗಿದೆ.
ಮುಂಬೈ: ವಿಮಾನ ಪ್ರಯಾಣ ಮಾಡುವವರು ತಮ್ಮ ವಿಮಾನದ ಟರ್ಮಿನಲ್ ಸಂಖ್ಯೆ ತಿಳಿದುಕೊಳ್ಳುವುದು ಅತಿಮುಖ್ಯ. ಆದರೆ ಅದನ್ನೇ ತಿಳಿದುಕೊಳ್ಳದ ವ್ಯಕ್ತಿಯೊಬ್ಬರು ತಪ್ಪಾದ ಟರ್ಮಿನಲ್ ತಲುಪಿ, ಇದಕ್ಕೂ ಪ್ರಧಾನಿ ಮೋದಿ ಕಾರಣ ಎಂದು ದೂಷಿಸಿದ್ದಾರೆ! ಅವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ಇದನ್ನೂ ಓದಿ: Viral Video: ನಡೆಯೋದನ್ನು ಕಲಿಯೋ ಎಂದರೆ ಡ್ಯಾನ್ಸ್ ಮಾಡಿ ತೋರಿಸಿದ ಪುಟಾಣಿ; ಈ ಮುದ್ದಾದ ವಿಡಿಯೋಗೆ ಮನಸೋಲದವರಿಲ್ಲ
ಉಜ್ವಲ್ ತ್ರಿವೇದಿ ಅವರು ಬುಧವಾರ ಮುಂಬೈನಿಂದ ಬೆಂಗಳೂರಿಗೆ ಆಕಾಶ ಏರ್‌ಲೈನ್ ವಿಮಾನದಲ್ಲಿ ಹೊರಟಿದ್ದರು. ತಾವು ವಿಮಾನದ ಟಿಕೆಟ್ ಬುಕ್ ಮಾಡಿದಾಗ ಟಿಕೆಟ್‌ನಲ್ಲಿ, ವಿಮಾನವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದೆ ಎಂದು ತೋರಿಸಿತ್ತು. ಆದರೆ ಬುಧವಾರ ಅವರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದಾಗ ವಿಮಾನವು ಪ್ರಾದೇಶಿಕ ವಿಮಾನ ನಿಲ್ದಾಣಕ್ಕೆ ಬರುತ್ತದೆ ಎಂದು ತಿಳಿಸಲಾಯಿತು ಎನ್ನುವುದು ತ್ರಿವೇದಿ ಅವರ ದೂರು.
ಈ ವಿಚಾರದಲ್ಲಿ ಉಜ್ವಲ್ ಅವರು ವಿಡಿಯೊ ಮಾಡಿದ್ದು, “ಈ ಸಮಸ್ಯೆಗಳನ್ನು ಯಾರು ಪರಿಹರಿಸುತ್ತಾರೆ? ನಮ್ಮ ಪ್ರಧಾನಿ ಸಣ್ಣ ಸಣ್ಣ ವಿಷಯಗಳ ಕ್ರೆಡಿಟ್ ತೆಗೆದುಕೊಳ್ಳಲು ಬರುತ್ತಾರೆ. ಆದರೆ ಸಾಮಾನ್ಯ ಜನರಿಗೆ ಹೇಗೆ ಕಿರುಕುಳ ನೀಡಲಾಗುತ್ತಿದೆ ಎಂಬುದು ಅವರಿಗೆ ತಿಳಿದಿರಬೇಕು. ನಾನು ಆಕಾಶ ಏರ್ ಹೆಲ್ಪ್‌ಡೆಸ್ಕ್‌ಗೆ ಹೋದೆ. ಅಲ್ಲಿ ಟರ್ಮಿನಲ್ ಅನ್ನು ಏಕೆ ಬರೆಯಲಾಗಿಲ್ಲ ಎಂಬುದನ್ನು ವಿವರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಟಿಕೆಟ್‌ನಲ್ಲಿ ಅಂತಾರಾಷ್ಟ್ರೀಯ ನಿಲ್ದಾಣ ಎಂದು ಹೇಳಿದ ಮೇಲೆ ಒಬ್ಬ ವ್ಯಕ್ತಿಯು ದೇಶೀಯ ವಿಮಾನ ನಿಲ್ದಾಣಕ್ಕೆ ಏಕಾಗಿ ಹೋಗುತ್ತಾನೆ? ಬೆಳಗ್ಗೆ ವಿಮಾನವನ್ನು ಹತ್ತಲೆಂದು ಧಾವಿಸಿ ತಪ್ಪು ಟರ್ಮಿನಲ್ ತಲುಪುತ್ತಾನೆ ಅಂತಾದರೆ ಪರಿಸ್ಥಿತಿ ಹೇಗಿರುತ್ತದೆ ಎಂದು ಊಹಿಸಿ.” ಎಂದು ಹೇಳಿದ್ದಾರೆ. ವಿಡಿಯೊದಲ್ಲಿ ಜಿ20 ಬಗ್ಗೆಯೂ ಅವರು ಮಾತನಾಡಿದ್ದಾರೆ.
ಉಜ್ವಲ್ ಅವರು ಟಿಕೆಟ್ ಅನ್ನೂ ವಿಡಿಯೊದಲ್ಲಿ ತೋರಿಸಿದ್ದು, ನೆಟ್ಟಿಗರು ಆ ಟಿಕೆಟ್‌ನಲ್ಲಿದ್ದ ವಿಮಾನದ ನಂಬರ್ ಅನ್ನು ಗೂಗಲ್‌ನಲ್ಲಿ ಹುಡುಕಿ ಟರ್ಮಿನಲ್ ಮಾಹಿತಿ ತೆಗೆದಿದ್ದಾರೆ. ಉಜ್ವಲ್ ಅವರ ಇ-ಟಿಕೆಟ್ ಹಾಗೂ ಬೋರ್ಡಿಂಗ್ ಪಾಸ್‌ನಲ್ಲಿ ಟಿ1 ಟರ್ಮಿನಲ್ ಎಂದೇ ಬರೆದಿದೆ. ಅದನ್ನು ಸರಿಯಾಗಿ ನೋಡದೆಯೇ ವಿಮಾನ ನಿಲ್ದಾಣಕ್ಕೆ ಹೋಗಿದ್ದೀರಿ ಎಂದು ಜನರು ಉಜ್ವಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದಾದ ಕೆಲ ಸಮಯದ ನಂತರ ಉಜ್ವಲ್ ಅವರು ಮತ್ತೊಂದು ವಿಡಿಯೊ ಹಾಕಿದ್ದು, ಆಕಾಶ ಏರ್‌ಲೈನ್ ಹಾಗೂ ಅವರು ಟಿಕೆಟ್ ಬುಕ್ ಮಾಡಿದ್ದ GoIbibo ವೆಬ್ ಸೈಟ್ ತಮ್ಮ ಕ್ಷಮೆ ಯಾಚಿಸಿವೆ ಎಂದು ತಿಳಿಸಿದ್ದಾರೆ.
Latest
Sindhuri Vs Roopa: ರೋಹಿಣಿ ಸಿಂಧೂರಿ- ಸಾ.ರಾ. ಮಹೇಶ್ ಕದನದಲ್ಲಿ ಪೋಲಾಯಿತು ಕೋಟ್ಯಂತರ ರೂ.!
ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹಾಗೂ ಶಾಸಕ ಸಾ.ರಾ ಮಹೇಶ್ ನಡುವಿನ ಕದನದಿಂದಾಗಿ ಉಂಟಾಗಿರುವ ʼಬಟ್ಟೆ ಬ್ಯಾಗ್ ಹಗರಣʼ ಕುರಿತು ವಿಸ್ತಾರ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದ್ದು, ಕೋಟ್ಯಂತರ ಹಣ ಪೋಲಾಗಿರುವುದು ಕಂಡುಬಂದಿದೆ.
ಮೈಸೂರು: ಇಬ್ಬರು ಪ್ರತಿಷ್ಠಿತರ ನಡುವಿನ ಕದನದಿಂದಾಗಿ ಬರೋಬ್ಬರಿ 6.18 ಕೋಟಿ ರೂ.ಗಳಷ್ಟು ಸಾರ್ವಜನಿಕ ಹಣ ಪೋಲಾಗಿದೆ. ರೋಹಿಣಿ ಸಿಂಧೂರಿ- ರೂಪಾ ಕದನದಲ್ಲಿ ಇದು ಕೂಡ ಪ್ರಸ್ತಾಪವಾಗಿತ್ತು.
ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹಾಗೂ ಶಾಸಕ ಸಾ.ರಾ ಮಹೇಶ್ ನಡುವಿನ ಕದನದಿಂದಾಗಿ ಉಂಟಾಗಿರುವ ʼಬಟ್ಟೆ ಬ್ಯಾಗ್ ಹಗರಣʼ ಕುರಿತು ವಿಸ್ತಾರ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದೆ.
ರೋಹಿಣಿ ಸಿಂಧೂರಿ ಮೈಸೂರು ಡಿಸಿ ಆಗಿದ್ದಾಗ 14.71 ಲಕ್ಷ ಬಟ್ಟೆ ಬ್ಯಾಗ್ಗಳನ್ನು ಖರೀದಿಸಿದ್ದರು. ಇದಕ್ಕಾಗಿ 6.18 ಕೋಟಿ ರೂ. ಪಾವತಿಸಿದ್ದರು. ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಶಾಸಕ ಸಾ.ರಾ.ಮಹೇಶ್ ಆರೋಪಿಸಿದ್ದರು. ಒಂದು ಬ್ಯಾಗ್ಗೆ 8-10 ರೂ. ಆಗುತ್ತದೆ. ಆದರೆ ರೋಹಿಣಿ ಸಿಂಧೂರಿ 52 ರೂ. ನೀಡಿದ್ದಾರೆ. ಇದಕ್ಕೆ 5 ಕೋಟಿ ರೂ. ಕಿಕ್ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಿದ್ದರು.
ಇದರಿಂದಾಗಿ ಒಂದೂವರೆ ವರ್ಷದಿಂದಲೂ ಬಟ್ಟೆ ಬ್ಯಾಗ್ಗಳು ಇಟ್ಟಲ್ಲೇ ಕೊಳೆಯುತ್ತಿವೆ. ಚಿನ್ನಗಿರಿ ಕೊಪ್ಪಲು ಸಮುದಾಯ ಭವನದಲ್ಲಿ ಬ್ಯಾಗ್ಗಳ ರಾಶಿ ಬಿದ್ದಿದ್ದು, ಬಂಡಲ್ ಕೂಡ ಓಪನ್ ಮಾಡದೆ ಜಿಲ್ಲಾಡಳಿತ ಅದನ್ನು ಹಾಗೇ ಬಿಟ್ಟಿದೆ. ಅಮೂಲ್ಯವಾದ ಸಾರ್ವಜನಿಕರ ಹಣ ಕಣ್ಣೆದುರೇ ಕಸವಾಗುತ್ತಿದೆ. ಈ ಪ್ರಕರಣದ ತನಿಖೆಗೆ ಸರ್ಕಾರ ಅನುಮತಿ ತಿರಸ್ಕರಿಸಿದೆ ಎಂದು ಈಗ ಐಪಿಎಸ್ ಅಧಿಕಾರಿ ಡಿ. ರೂಪ ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ: Sindhuri Vs Roopa : ರೂಪಾ ಹೇಳಿದ, ರೋಹಿಣಿ ಸಿಂಧೂರಿ ಕಟ್ಟಿಸುತ್ತಿರುವ ಮನೆ ಹೇಗಿದೆ? ನೀವೇ ನೋಡಿ
Latest
Shivaraj kumar: ಚಿತ್ರರಂಗಕ್ಕೆ ಬಂದು 37 ವರ್ಷ: ಅಭಿಮಾನಿಗಳಿಗೆ ಪತ್ರ ಬರೆದ ಶಿವಣ್ಣ
ಕನ್ನಡ ಚಿತ್ರೋದ್ಯಮಕ್ಕೆ ಬಂದು 37 ವರ್ಷಗಳು ಆಗಿರುವ ಹಿನ್ನೆಲೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅಭಿಮಾನಿಗಳಿಗೆ ಧನ್ಯವಾದದ ಪತ್ರ ಬರೆದಿದ್ದಾರೆ.
ಬೆಂಗಳೂರು: ಕನ್ನಡ ಸಿನಿಮಾ ರಂಗದಲ್ಲಿ 37 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ನಟ ಶಿವರಾಜ್ ಕುಮಾರ್ ಅವರು ಅಭಿಮಾನಿಗಳಿಗೂ ಕನ್ನಡ ಚಿತ್ರರಸಿಕರಿಗೂ ಧನ್ಯವಾದ ತಿಳಿಸಿದ್ದಾರೆ.
ತಮ್ಮ ಮೊದಲ ಚಿತ್ರ “ಆನಂದ್ ನೆನಪಿಸಿಕೊಂಡು ಅಭಿಮಾನಿಗಳಿಗೆ ಶಿವಣ್ಣ ಪತ್ರ ಬರೆದಿದ್ದಾರೆ. ʼʼನಮ್ಮ ಕನ್ನಡ ಚಿತ್ರರಂಗಕ್ಕೆ ನಾನು ಪಾದಾರ್ಪಣೆ ಮಾಡಿ ಇಂದಿಗೆ (19-02-2023) 37 ವರ್ಷ ಆಗಿದೆ. ಆನಂದ್ ಚಿತ್ರದ ಮೊದಲ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ! ಆನಂದ್ ಇಂದ ವೇದವರೆಗೂ ನೀವು ಕೊಟ್ಟ ಪ್ರೀತಿ ಬೆಲೆ ಕಟ್ಟಲಾಗದ್ದು. ನನ್ನನ್ನು ನೀವು ಕೇವಲ ಒಬ್ಬ ನಟನಾಗಿ, ಸ್ಟಾರ್ ಆಗಿ ಮಾತ್ರವಲ್ಲದೆ ನಿಮ್ಮ ಮನೆಮಗನಾಗಿ ಬೆಳೆಸಿದ್ದೀರಿ. ದೇವರ ಸ್ವರೂಪವಾಗಿರುವ ಅಭಿಮಾನಿಗಳಿಗೆ, ಮಾಧ್ಯಮ ಮಿತ್ರರಿಗೆ, ಹಿರಿಯರಿಗೆ, ಕಿರಿಯರಿಗೆ, ಸಹೋದ್ಯೋಗಿಗಳಿಗೆ ಹಾಗೂ ನನ್ನ ಇಡೀ ಕುಟುಂಬಕ್ಕೆ ಅನಂತ ವಂದನೆಗಳುʼʼ ಎಂದು ಶಿವಣ್ಣ ಟ್ವೀಟ್ ಮಾಡಿದ್ದಾರೆ.
1962ರಲ್ಲಿ ಜನಿಸಿದ ಶಿವರಾಜ್ ಕುಮಾರ್ 1986ರಲ್ಲಿ ಅನಂದ್ ಚಿತ್ರದ ಮೂಲಕ ಸಿನಿಮಾ ನಟನೆಗೆ ಕಾಲಿಟ್ಟಿದ್ದರು. ಆನಂದ್ ಸೇರಿದಂತೆ ಅವರ ಮೂರೂ ಆರಂಭಿಕ ಚಿತ್ರಗಳು (ಆನಂದ್, ರಥಸಪ್ತಮಿ ಮತ್ತು ಮನಮೆಚ್ಚಿದ ಹುಡುಗಿ) ಶತದಿನ ಪ್ರದರ್ಶನ ಕಂಡಿದ್ದವು. ಹೀಗಾಗಿ ಅವರು ಹ್ಯಾಟ್ರಿಕ್ ಸ್ಟಾರ್ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ ʼವೇದʼ ಶಿವಣ್ಣನ 125ನೇ ಚಿತ್ರವಾಗಿದೆ.
ಇದನ್ನೂ ಓದಿ: Shivarajkumar: ಶಿವಣ್ಣ ಅಭಿನಯದ ‘ವೇದ’ ಒಟಿಟಿಗೆ ಎಂಟ್ರಿ ಕೊಡಲು ಡೇಟ್ ಫಿಕ್ಸ್
-
ದೇಶ19 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ20 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಗ್ಯಾಜೆಟ್ಸ್9 hours ago
Aadhaar Update: ಆನ್‌ಲೈನ್‌ನಲ್ಲಿ ಆಧಾರ್ ಅಪ್ಡೇಟ್ ಉಚಿತ; ಈ ಸೌಲಭ್ಯ ಜೂನ್ 14ರವರೆಗೆ ಮಾತ್ರ
-
ಅಂಕಣ20 hours ago
ಗೋ ಸಂಪತ್ತು: ಆಹಾರವಾಗಿ ಮಾತ್ರವಲ್ಲ, ಔಷಧವಾಗಿಯೂ ಮಜ್ಜಿಗೆಗೆ ಮಹತ್ವವಿದೆ!
-
ಅಂಕಣ20 hours ago
Brand story : ಚೀನಾದ ಇ-ಕಾಮರ್ಸ್ ದಿಗ್ಗಜ ಅಲಿಬಾಬಾ, 6 ಕಂಪನಿಗಳಾಗಿ ವಿಭಜನೆಯಾಗುತ್ತಿರುವುದೇಕೆ?
-
ಕರ್ನಾಟಕ10 hours ago
B.Y. Vijayendra: ಯಾವುದೇ ಕಾರಣಕ್ಕೆ ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಲ್ಲ: ಗೊಂದಲಕ್ಕೆ ತೆರೆಯೆಳೆದ ಯಡಿಯೂರಪ್ಪ
-
ದೇಶ12 hours ago
Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್ಗೆ 25 ಸಾವಿರ ರೂ. ದಂಡ!
-
ಕರ್ನಾಟಕ14 hours ago
SSLC Exam 2023: ಕಲಬುರಗಿಯಲ್ಲಿ ಎಸ್ಎಸ್ಎಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ; ವಾಟ್ಸಾಪ್ನಲ್ಲಿ ಹರಿದಾಡಿದ ಕನ್ನಡ ಪೇಪರ್