ದುಬೈ: ಐಸಿಸಿ ನೂತನ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ(Test bowling rankings) ಇಂಗ್ಲೆಂಡ್ ತಂಡದ ಸ್ಟಾರ್ ವೇಗಿ ಜೇಮ್ಸ್ ಆ್ಯಂಡರ್ಸನ್(James Anderson) ಅವರನ್ನು ಹಿಂದಿಕ್ಕಿ ಟೀಮ್ ಇಂಡಿಯಾದ ಆರ್.ಅಶ್ವಿನ್(Ravichandran Ashwin) ನಂ.1 ಸ್ಥಾನಕ್ಕೇರಿದ್ದಾರೆ. ಕಳೆದ ವಾರ ಜೇಮ್ಸ್ ಆ್ಯಂಡರ್ಸನ್ ನಂ.1 ಸ್ಥಾನದಲ್ಲಿದ್ದರು. ಆದರೆ ಇದೀಗ ರೇಟಿಂಗ್ ಅಂಕದಲ್ಲಿ ಕುಸಿತ ಕಂಡ ಪರಿಣಾಮ ಅವರು ದ್ವಿತೀಯ ಸ್ಥಾನಕ್ಕೆ ಜಾರಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಪ್ರಸಕ್ತ ಸಾಗುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಮೂರನೇ ಪಂದ್ಯದಲ್ಲಿ ಬೌಲಿಂಗ್ ನಡೆಸಿದ ವೇಳೆ ಅಶ್ವಿನ್ ನಂ.1 ಸ್ಥಾನಕ್ಕೇರಿದರು. ವಿಕೆಟ್ ಪಡೆಯದಿದ್ದರೂ ಅವರು ರೇಟಿಂಗ್ ಅಂಕದ ಆಧಾರದಲ್ಲಿ ಮೊದಲ ಸ್ಥಾನ ಪಡೆದರು.
ಕಳೆದ ವಾರ ಅಶ್ವಿನ್ 864 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದ್ದರು. ಕೇವಲ ಎರಡು ಅಂಕಗಳ ವ್ಯತ್ಯಾಸದಲ್ಲಿ ಮೊದಲ ಸ್ಥಾನಕ್ಕೆ ಸನಿಹದಲ್ಲಿದ್ದರು. ಆದರೆ ನ್ಯೂಜಿಲ್ಯಾಂಡ್ ವಿರುದ್ಧದ ದ್ವಿತೀಯ ಟೆಸ್ಟ್ನಲ್ಲಿ ಕಳಪೆ ಪ್ರದರ್ಶನ ತೋರಿದ ಕಾರಣ ಆಂಡರ್ಸನ್ 859 ರೇಟಿಂಗ್ ಅಂಕಕ್ಕೆ ಕುಸಿದರು. ಕಳೆದ ವಾರ ಅವರ ರೇಟಿಂಗ್ ಅಂಕ 866 ಇತ್ತು. ಈ ಮೂಲಕ ಅಶ್ವಿನ್ ನಂ.1 ಸ್ಥಾನ ಸಂಪಾದಿಸಿದರು. ಒಂದೊಮ್ಮೆ ಮೂರನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದರೆ ಅಶ್ವಿನ್ ಅವರ ನಂ.1 ಸ್ಥಾನ ಮತ್ತಷ್ಟು ಭದ್ರವಾಗಲಿದೆ.
ಇದನ್ನೂ ಓದಿ IND VS AUS: ಹಲವು ಜೀವದಾನ ಪಡೆದರೂ ಸದುಪಯೋಗ ಪಡಿಸಿಕೊಳ್ಳದ ಭಾರತೀಯ ಆಟಗಾರರ ವಿರುದ್ಧ ನೆಟ್ಟಿಗರ ಆಕ್ರೋಶ
ಉಳಿದಂತೆ ಯಾವುದೇ ದೊಡ್ಡ ಬದಲಾವಣೆ ಸಂಭವಿಸಿಲ್ಲ ಆಸೀಸ್ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್(Pat Cummins) ಮೂರನೇ ಸ್ಥಾನದಲ್ಲಿ ಮತ್ತು ಜಸ್ಪ್ರೀತ್ ಬುಮ್ರಾ 4ನೇ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ.