ಬೆಂಗಳೂರು: ಕೋಕಾ-ಕೋಲಾ (Coca cola) ಕಂಪನಿಯ ಸ್ಪ್ರೈಟ್(Sprite), ನಿಂಬೆ ಮತ್ತು ನಿಂಬೆಯ-ಪರಿಮಳದ ಪಾನೀಯ. ಇದು ಉದ್ವಿಗ್ನ ಕ್ಷಣಗಳಲ್ಲಿ ಕ್ರಿಕೆಟ್ ಅಭಿಮಾನಿಗಳನ್ನು (Cricket Fans) ತಂಪಾಗಿಸುತ್ತದೆ. ಇದರ ಸಂಬಂಧ, ಈ ಕಂಪನಿ ಇದೀಗ ‘ಥಂಡ್ ರಖ್’ (thand rakh) ಹೆಸರಿನ ಸರಣಿ ಬ್ರಾಂಡ್ ಚಲನಚಿತ್ರಗಳನ್ನು ಬಿಡುಗಡೆ ಮಾಡಿದೆ. ಸದ್ಯ ನಡೆಯುತ್ತಿರುವ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ನಲ್ಲಿ (ICC World Cup 2023) ಸಹಜವಾಗಿಯೇ, ಕಾವೇರುವ ಸಂದರ್ಭಗಳು ಬರುತ್ತಿರುತ್ತವೆ. ಒತ್ತಡ ಎಷ್ಟೇ ಇರಲಿ, ಅಭಿಮಾನಿಗಳನ್ನು ತಂಪಾಗಿ ಮತ್ತು ಸಮಾಧಾನದಿಂದ ಇರಿಸಲು ಪರಮೋಲ್ಲಾಸ ನೀಡುವ ಸ್ಪ್ರೈಟ್ ಸಹಾಯ ಮಾಡುತ್ತದೆ.
ಈ ಆಕರ್ಷಕ ಟಿವಿ ಜಾಹೀರಾತುಗಳ ಸರಣಿಯಲ್ಲಿ, ಸ್ನೇಹಿತರ ಗುಂಪೊಂದು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಪೂರ್ತಿಯಾಗಿ ಮಗ್ನರಾಗಿರುತ್ತಾರೆ. ಅವರಲ್ಲಿ ಒಬ್ಬರು ಮನೆ ಆವರಣವನ್ನು ಸಜ್ಜುಗೊಳಿಸುತ್ತಿದ್ದರೆ, ಉಳಿದವರು ಚೆಂಡಿನಿಂದ ನೋಟ ಅಗಲದಂತೆ ಟಿವಿಗೆ ಅಂಟಿಕೊಂಡಿದ್ದಾರೆ. ಪಂದ್ಯದ ತೀವ್ರತೆ ಹೆಚ್ಚಾದಂತೆ, ಮನೆಯಲ್ಲಿ ಅವ್ಯವಸ್ಥೆ ಉಂಟಾಗುತ್ತದೆ. ಆಗ ಅವರಲ್ಲಿ ಒಬ್ಬರು ಸ್ಪ್ರೈಟ್‌ನ ಪ್ರಸ್ತಾಪ ಮಾಡುತ್ತಾರೆ.
ಸ್ಪ್ರೈಟ್ ಮತ್ತೂ ಒಂದು ಹೊಸತಾದ, ಉತ್ತೇಜಕ ಮತ್ತು ಮುಂದಾಲೋಚನೆಯ ಕ್ರಮವನ್ನು ಅಳವಡಿಸಿಕೊಳ್ಳುತ್ತಿದೆ. ಅಕ್ಟೋಬರ್ 14 ರಂದು ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನದ ಪಂದ್ಯದ ಸಂದರ್ಭದಲ್ಲಿ ಔಟ್-ಆಫ್-ಹೋಮ್ (OOH) ಜಾಹೀರಾತು ಪ್ರಚಾರವನ್ನು ಪ್ರಾರಂಭಿಸುವ ಮೂಲಕ ‘ಥಂಡ್ ರಖ್’ ಅನ್ನು ಪ್ರೋತ್ಸಾಹಿಸುತ್ತಿದೆ. ಆಟದ ತೀವ್ರತೆ ಹೆಚ್ಚಾಗುತ್ತಿದ್ದಂತೆ, ಅಹಮದಾಬಾದ್ ನಗರ ಮತ್ತು ನರೇಂದ್ರ ಮೋದಿ ಸ್ಟೇಡಿಯಂ ಅನ್ನು ಪ್ರತಿನಿಧಿಸುವ ಡಿಜಿಟಲ್ ಬಿಲ್‌ಬೋರ್ಡ್‌ನ ತಾಪಮಾನದಲ್ಲೂ ಏರಿಕೆ ಕಂಡುಬರುತ್ತಿದೆ. ಪಂದ್ಯದ ಉತ್ಸಾಹದ ಮಟ್ಟದ ಆಧಾರದ ಮೇಲೆ OOH ನಲ್ಲಿನ ತಾಪಮಾನ, ನೈಜ ಸಮಯದಲ್ಲಿ ಬದಲಾಗುತ್ತಿರುತ್ತದೆ. ಈ ವಿಶಿಷ್ಟ ಮತ್ತು ವಿನೂತನವಾದ ಆವಿಷ್ಕಾರದಲ್ಲಿ, ಕ್ರೀಡಾಂಗಣದೊಳಗಿನ ಉತ್ಸಾಹದ ತೀವ್ರತೆಯನ್ನು ನೇರವಾಗಿ ಶಬ್ದದ ಮಟ್ಟಗಳಿಗೆ ಜೋಡಿಸಲಾಗಿದ್ದು ಬೋರ್ಡ್‌ನಲ್ಲಿ ಪ್ರದರ್ಶಿಸಲಾದ ತಾಪಮಾನ ಸಂಚಲನಾತ್ಮಕವಾಗಿ ಬದಲಾಗುತ್ತದೆ.
ಸ್ಪಾರ್ಕ್ಲಿಂಗ್ ಫ್ಲೇವರ್ಸ್ (ಭಾರತ ಮತ್ತು ನೈಋತ್ಯ ಏಷ್ಯಾ) ಕೋಕಾ-ಕೋಲಾ ಇಂಡಿಯಾದ ಸೀನಿಯರ್ ಕೆಟಗರಿ ಡೈರೆಕ್ಟರ್ ಕಾಂಡೆನೊ ಅವರು ಈ ಹೊಸ ಅಭಿಯಾನದ ಬಗ್ಗೆ ತಮ್ಮ ಉತ್ಸಾಹವನ್ನು ಹೀಗೆ ವ್ಯಕ್ತಪಡಿಸಿದ್ದಾರೆ: “ಹೊಸ ‘ಥಂಡ್ ರಖ್’ ಅಭಿಯಾನ ಕ್ರೀಡೆಯೊಡನೆ ಬರುವ ಅವಿಸ್ಮರಣೀಯ ಭಾವ ತೀವ್ರತೆಯನ್ನು ಅಳವಡಿಸಿಕೊಂಡಿದೆ. ಸ್ಪ್ರೈಟ್, ನಿಜವಾಗಿಯೂ ಈ ಬಿಸಿ ಬಿಸಿ ಕ್ಷಣಗಳಮ್ಮು ತನ್ನ ಕೈಗೆ ತೆಗೆದುಕೊಳ್ಳುತ್ತದೆ. ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸಮಯದಲ್ಲಿ ಜನರನ್ನು ತಂಪಾಗಿಸುತ್ತದೆ. ಪಂದ್ಯಾವಳಿಯ ಹೆಚ್ಚಿನ ಒತ್ತಡದ ಕ್ಷಣಗಳಲ್ಲಿ ತಂಪನೆರೆಯಲು ನಾವು ಬಹಳ ಉತ್ಸುಕರಾಗಿದ್ದೇವೆ.”
ಒಗಿಲ್ವಿ ಇಂಡಿಯಾದ ಚೀಫ್ ಕ್ರಿಯೆಟಿವ್ ಆಫೀಸರ್ ಸುಕೇಶ್ ನಾಯಕ್: “ಜೀವನದಲ್ಲಿ ತಲೆಬಿಸಿಯಾಗುವ ಸಂದರ್ಭಗಳು ಸಹಜವಾಗಿ ಬಂದೇ ಬರುತ್ತವೆ. ಆಗೆಲ್ಲ ನೀವು ಸ್ಪ್ರೈಟ್ ನೆರವನ್ನು ಪಡೆಯಬಹುದು. ಸ್ಪ್ರೈಟ್ ಅಂತಹ ಬ್ರ್ಯಾಂಡ್ ಆಗಿದೆ. ಕ್ರಿಕೆಟ್ ವಿಶ್ವಕಪ್ ನಲ್ಲಿ ಅಂತಹ ಸನ್ನಿವೇಶಗಳು ಬೇಕಾದಷ್ಟಿರುತ್ತವೆ. ನಮ್ಮ ಈ ಚಲನಚಿತ್ರಗಳ ಸರಣಿ, ಕ್ರಿಕೆಟನ್ನು ಜೀವನದ ಮಸೂರದ ಮೂಲಕ ಆಸಕ್ತಿದಾಯಕವಾಗಿ ತೋರಿಸುತ್ತದೆ ಮತ್ತು ಅದು ದೋಷಗಳ ಹಾಸ್ಯದಲ್ಲಿ ಕೊನೆಗೊಳ್ಳುತ್ತದೆ. ಇದು ಸರಳವಾಗಿ ಗ್ರಹಿಸಬಹುದಾದ ವಿಷಯವಾಗಿದ್ದು, ಕಾವೇರಿದಾಗ ಸ್ಪ್ರೈಟ್ ರಕ್ಷಣೆಗೆ ಬರುತ್ತದೆ, ಎಂಬ ಅಂಶವನ್ನು ಒತ್ತಿ ಹೇಳುತ್ತದೆ.
ಒಗಿಲ್ವಿ ಇಂಡಿಯಾದ (ಉತ್ತರ) ಚೀಫ್ ಕ್ರಿಯೆಟಿವ್ ಆಫೀಸರ್ ರಿತು ಶಾರದಾ: “ಕ್ರಿಕೆಟ್ ವಿಶ್ವಕಪ್ ಜಗತ್ತಿನ ಅತ್ಯುತ್ತಮ ತಂಡಗಳ ನಡುವಿನ ಅತಿದೊಡ್ಡ ಕ್ರಿಕೆಟ್ ಸಂಘರ್ಷವಾಗಿದೆ. ನಿಸ್ಸಂಶಯವಾಗಿ ತೀವ್ರವಾದ ಕ್ಷಣಗಳು ಇರುತ್ತದೆ ಮತ್ತು ಚರ್ಚೆಗಳು ಬಿಸಿ ಹುಟ್ಟಿಸುತ್ತವೆ. ಪಂದ್ಯದ ಬಿಸಿ ಬಿಸಿ ಕ್ಷಣಗಳು ಹೇಗೆ ನಿಜ ಜೀವನಕ್ಕೂ ವರ್ಗಾವಣೆಯಾಗುತ್ತವೆ ಎಂಬುದನ್ನು ಈ ಚಲನಚಿತ್ರಗಳು ತೋರಿಸಿವೆ. ನಾವು ಕ್ರಿಕೆಟ್ ಪ್ರಪಂಚದ ಭಾಷೆಯನ್ನೆ ತೆಗೆದುಕೊಂಡು ನಿಜ ಜೀವನದ ಸನ್ನಿವೇಶಗಳಲ್ಲಿ ಅದೇ ಪದಗಳು ಹೇಗೆ ಸಂಪೂರ್ಣವಾಗಿ ವಿಭಿನ್ನವಾಗಿರುವ ಅರ್ಥಗಳನ್ನು ನೀಡಬಹುದು ಎಂಬುದನ್ನು ತೋರಿಸಿದ್ದೇವೆ. ಸ್ಪ್ರೈಟ್, ಕ್ರಿಕೆಟ್ ಹುಟ್ಟಿಸುವ ಶಾಖದ ಅಧಿಕೃತ ಕೂಲರ್ ಆಗಿ ಮೈದಾನಕ್ಕಿಳಿದಿದೆ; ಮತ್ತು ಸ್ಪ್ರೈಟ್ ಸೇವಿಸಿ ಕಾವನ್ನು ಕಡಿಮೆ ಮಾಡಿಕೊಂಡು ವಿಶ್ವಕಪ್ ಅನ್ನು ಸಂಪೂರ್ಣವಾಗಿ ಆನಂದಿಸುವಂತೆ ಜನರಿಗೆ ಹೇಳುತ್ತದೆ.
ಈ ಸುದ್ದಿಯನ್ನೂ ಓದಿ: ICC World Cup 2023: ಸೆಮಿಫೈನಲ್ ಪ್ರವೇಶಕ್ಕೆ ಭಾರತ ಇನ್ನೆಷ್ಟು ಪಂದ್ಯ ಗೆಲ್ಲಬೇಕು?