Site icon Vistara News

ಭಾರತದ ಐತಿಹಾಸಿಕ ಗೆಲುವಿನ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದ ಆಸೀಸ್ ನಾಯಕಿ

Alyssa Healy turn photographer

ಮುಂಬಯಿ: ಆಸ್ಟ್ರೇಲಿಯಾ(AUSW vs INDW) ವಿರುದ್ಧದ ಏಕೈಕ ಪಂದ್ಯದ ಟೆಸ್ಟ್ ಸರಣಿಯನ್ನು 8 ವಿಕೆಟ್​ಗಳಿಂದ ಗೆಲ್ಲುವ ಮೂಲಕ ಭಾರತ ಮಹಿಳಾ ಕ್ರಿಕೆಟ್​ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಈ ಗೆಲುವಿನ ಸಂಭ್ರಮದಲ್ಲಿದ್ದಾಗ ಆಸೀಸ್​ ನಾಯಕಿ ಅಲಿಸ್ಸಾ ಹೀಲಿ(Australia captain Alyssa Healy) ಅವರು ಅಚ್ಚರಿ ಎಂಬಂತೆ ಕ್ಯಾಮೆರಾ ಹಿಡಿದು ಮೈದಾನಕ್ಕೆ ಬಂದಿದ್ದಾರೆ. ಅಲ್ಲದೆ ಆಟಗಾರ್ತಿಯರ ಫೋಟೊ ಕೂಡ ಕ್ಲಿಕ್ಕಿಸಿ ಎಲ್ಲರ ಹೃದಯ ಗೆದ್ದಿದ್ದಾರೆ. ಹೀಲಿ ಕ್ಯಾಮೆರಾ ಹಿಡಿದುಕೊಂಡು ಬಂದ ವಿಡಿಯೊ(viral cricket video) ವೈರಲ್​ ಆಗಿದೆ.

ಅಂತಿಮ ದಿನವಾದ ಇಂದು(ಭಾನುವಾರ) ಭಾರತ ಮಹಿಳಾ ತಂಡಕ್ಕೆ ಗೆಲ್ಲಲು ಕೇವಲ 75 ರನ್‌ಗಳು ಬೇಕಿತ್ತು. 18.4 ಓವರ್​ನಲ್ಲಿ 2 ವಿಕಟ್​ನಷ್ಟಕ್ಕೆ ಈ ಮೊತ್ತವನ್ನು ಬೆನ್ನಟ್ಟಿದ ಭಾರತ ಐತಿಹಾಸಿಕ ಗೆಲುವ ದಾಖಲಿಸಿತು. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರು ಬೌಂಡರಿ ಬಾರಿಸುವ ಮೂಲಕ ಭಾರತದ ಗೆಲುವುವನ್ನು ಸಾರಿದರು.

ಇದನ್ನೂ ಓದಿ Ind vs Aus : ಟೆಸ್ಟ್​​ನಲ್ಲಿ ಆಸೀಸ್​ ವಿರುದ್ಧ ಜಯ; ಭಾರತೀಯ ಮಹಿಳೆಯರ ಚಾರಿತ್ರಿಕ ಸಾಧನೆ

ಪಂದ್ಯ ಗೆದ್ದ ಬಳಿಕ ಆತಿಥೇಯ ತಂಡವು ಟ್ರೋಫಿಯೊಂದಿಗೆ ಸಂಭ್ರಮಾಚರಣೆಯಲ್ಲಿ ತೊಡಗಿತು. ಈ ವೇಳೆ ಆಸ್ಟ್ರೇಲಿಯಾ ತಂಡದ ನಾಯಕಿ ಅಲಿಸ್ಸಾ ಹೀಲಿ ಅವರು ಕ್ಯಾಮೆರಾ ಹಿಡಿದಿಕೊಂಡು ಬಂದು ಸಂಭ್ರಮಿಸುತ್ತಿದ್ದ ಭಾರತೀಯ ಆಟಗಾರ್ತಿಯ ಸುಂದರ ಫೋಟೊಗಳನ್ನು ಸೆರೆ ಹಿಡಿದಿದ್ದಾರೆ. ಅಲ್ಲದೆ ಫೋಟೊಗೆ ಫೋಸ್​ ನೀಡುವಂತೆ ಸಲಹೆಯನ್ನೂ ನೀಡಿದ್ದಾರೆ. ಭಾರತೀಯ ಆಟಗಾರ್ತಿರು ಒಂದು ಕ್ಷಣ ಹೀಲಿ ಯಾಕೆ ನಮ್ಮ ತಂಡದ ಫೋಟೋ ತೆಗೆಯುತ್ತಿದ್ದಾರೆ ಎಂದು ಯೋಚಿಸಿದ್ದಾರೆ.

ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಟೀಯಲ್ಲಿ ಪತ್ರಕರ್ತರು ಹೀಲಿ ಅವರನ್ನು ಕ್ಯಾಮೆರ ಹಿಡಿದು ಭಾರತೀಯ ಆಟಗಾರ್ತಿರ ಫೋಟೊ ತೆಗೆದ ಬಗ್ಗೆ ಪಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಹೀಲಿ, ‘ಎಲ್ಲರು ಇದು ನನ್ನ ಕ್ಯಾಮೆರ ಎಂದು ತಿಳಿದುಕೊಂಡಿದ್ದಾರೆ. ಆದರೆ ಇದು ನನ್ನ ಕ್ಯಾಮೆರಾ ಅಲ್ಲ. ಭಾರತ ತಂಡದ ಫೋಟೋ ತೆಗೆಯಲು ಹಲವು ಕ್ಯಾಮೆರಾಮೇನ್​ಗಳು ನೂಕಾಡ ನಡೆಸುತ್ತಿದ್ದ ವೇಳೆ ಒಬ್ಬ ಕ್ಯಾಮೆರಾಮೇನ್​ ಹಿಂದಕ್ಕೆ ತಳ್ಳಲ್ಪಟ್ಟರು. ಹೀಗಾಗಿ ಅವರಿಗೆ ಕ್ಲಿಪ್ತ ಸಯದಲ್ಲಿ ಅಲ್ಲಿಗೆ ಹೋಗಿ ಫೋಟೋ ತೆಯುವುದು ಅಸಾಧ್ಯವಾದಂತೆ ನನಗೆ ತೋರಿತು. ಈ ವೇಳೆ ನಾನು ಅವರ ಕೈಯಿಂದ ಕ್ಯಾಮೆರಾ ಪಡೆದು ಫೋಟೋ ತೆಗೆಯಲು ಬಂದೆ ಎಂದು ವಿವರಿಸಿದರು. ಇದೇ ವೇಳೆ ಭವಿಷ್ಯದಲ್ಲಿ ಇನ್ನಷ್ಟು ಮಹಿಳಾ ಟೆಸ್ಟ್ ಪಂದ್ಯಗಳು ಆಯೋಜನೆಗೊಂಡರೆ ಚೆನ್ನಾಗಿರುತ್ತದೆ ಎಂದು ಹೇಳಿದರು.

ತನ್ನ ತಂಡ ಸೋಲು ಕಂಡಿದ್ದರೂ ಕೂಡ ಅಲಿಸ್ಸಾ ಹೀಲಿ ಅವರು ಭಾರತೀಯ ಆಟಗಾರ್ತಿಯರ ಸಂಭ್ರಮದ ಕ್ಷಣ ವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದನ್ನು ಕಂಡ ಅನೇಕ ನೆಟ್ಟಿಗರು ಪ್ರಶಂಸ್ಸೆ ವ್ಯಕ್ತಪಡಿಸಿದ್ದಾರೆ. ಇನ್ನ ಕ್ರೀಡಾ ಸ್ಫೂರ್ತಿಯನ್ನು ಮೆಚ್ಚಲೇ ಬೇಕು ಎಂದಿದ್ದಾರೆ. ಬಿಸಿಸಿಐ ಕೂಡ ಈ ವಿಡಿಯೊವನ್ನು ಹಂಚಿಕೊಂಡು ‘ಸ್ಪಿರಿಟ್​ ಆಫ್​ ಕ್ರಿಕೆಟ್​’ ಎಂದು ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದೆ.

ಐತಿಹಾಸಿಕ ಗೆಲುವಿನ ಬಳಿಕ ಮಾತನಾಡಿದ ಭಾರತ ತಂಡದ ನಾಯಕಿ ಹರ್ಮನ್​ಪ್ರೀತ್​ ಕೌರ್​, “ಇಷ್ಟು ವರ್ಷಗಳಿಂದ ನಾವು ಮಾಡಿದ ಎಲ್ಲ ಶ್ರಮಕ್ಕೆ ಈ ಗೆಲುವು ಪ್ರತಿಫಲ. ಈ ಗೆಲುವಿನ ಎಲ್ಲ ಕ್ರೆಡಿಟ್ ನಮ್ಮ ತಂಡದ ಸಿಬ್ಬಂದಿಗೆ, ವಿಶೇಷವಾಗಿ ನಮ್ಮ ಬೌಲಿಂಗ್ ಕೋಚ್ ಮತ್ತು ಬ್ಯಾಟಿಂಗ್ ಕೋಚ್‌ಗೆ ಸಲ್ಲುತ್ತದೆ” ಎಂದು ಕೌರ್ ಹೇಳಿದರು.

Exit mobile version