Site icon Vistara News

ದ್ವಿತೀಯ ಟಿ20 ಪಂದ್ಯ ನೋಡಲು ಕಾದು ಕುಳಿತ ಅಭಿಮಾನಿಗಳಿಗೆ ನಿರಾಸೆ ಖಚಿತ!

South Africa vs India 2nd T20

ಗ್ಕೆಬರ್ಹಾ (ಸೇಂಟ್ ಜಾರ್ಜ್ ಪಾರ್ಕ್): ಭಾರತ ಮತ್ತು ದಕ್ಷಿಣ ಆಫ್ರಿಕಾ(South Africa vs India, 2nd T20) ನಡುವಣ ಮೊದಲ ಪಂದ್ಯವನ್ನು ಕಣ್ತುಂಬಿಕೊಳ್ಳಲಾಗದೆ ನಿರಾಸೆ ಅನುಭವಿಸಿದ್ದ ಕ್ರಿಕೆಟ್​ ಅಭಿಮಾನಿಗಳಿಗೆ ಈ ಬಾರಿಯೂ ನಿರಾಸೆಯಾಗುವುದು ಖಚಿತ ಎನ್ನುವಂತಿದೆ. ಹೌದು, ಇಂದು ನಡೆಯುವ ದ್ವಿತೀಯ ಟಿ20(IND vs SA 2nd T20) ಪಂದ್ಯವಕ್ಕೂ ಹವಾಮಾನ ಇಲಾಖೆ ಭಾರಿ ಮಳೆಯ ಮುನ್ಸೂಚನೆ ನೀಡಿದೆ.

ಡರ್ಬಾನ್​ನಲ್ಲಿ ಭಾನುವಾರ ನಡೆಯಬೇಕಿದ್ದ ಮೊದಲ ಪಂದ್ಯ ಟಾಸ್​ ಕೂಟ ಕಾಣದೆ ರದ್ದುಗೊಂಡಿತ್ತು. ಇದೀಗ ದ್ವಿತೀಯ ಪಂದ್ಯ ನಡೆಯುವ ಗ್ಕೆಬರ್ಹಾ(St George’s Park, Gqeberha) ಪ್ರದೇಶದಲ್ಲಿ ಸೋಮವಾರ ರಾತ್ರಿ ಭಾರಿ ಮಳೆಯಾಗಿದೆ. ಹೀಗಾಗಿ ಇತ್ತಂಡಗಳ ಆಟಗಾರರು ಅಭ್ಯಾಸ ಕೂಡ ನಡೆಸಿಲ್ಲ ಎಂದು ಇಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಅಲ್ಲದೆ ಇಂದು ಕೂಡ ಶೇ.65ರಷ್ಟು ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಒಂದೊಮ್ಮೆ ಎರಡನೇ ಪಂದ್ಯವೂ ರದ್ದಾಗಲಿದೆ. ಕೊನೆಯ ಪಂದ್ಯ ಗುರುವಾರ (ಡಿಸೆಂಬರ್ 14) ಜೊಹಾನ್ಸ್​ಬರ್ಗ್​ನಲ್ಲಿ ನಡೆಯಲಿದೆ. ಇದು ಸರಣಿ ನಿರ್ಣಾಯಕ ಪಂದ್ಯವಾಗಲಿದೆ ಗೆದ್ದ ತಂಡಕ್ಕೆ ಕಪ್​ ಸಿಗಲಿದೆ.

ಪಿಚ್​ ರಿಪೋರ್ಟ್​

ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿನ ಪಿಚ್​ ಮೇಲ್ಮೈ ಬ್ಯಾಟರ್‌ಗಳಿಗೆ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ, ಆಟ ಸಾಗುತ್ತಲೇ ಹೋದಾಗ ಸ್ಪಿನ್ನರ್‌ಗಳು ಸ್ವಲ್ಪ ಸಹಾಯವನ್ನು ಪಡೆಯಬಹುದು. ಇಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ತಂಡಗಳೇ ಹೆಚ್ಚಾಗಿ ಗೆದ್ದಿದೆ. ಪಿಚ್​ ತಿರುವು ಪಡೆಯುವ ಕಾರಣ ದ್ವಿತೀಯ ಇನಿಂಗ್ಸ್​ನಲ್ಲಿ ಬ್ಯಾಟಿಂಗ್​ ನಡೆಸುವುದು ಕಷ್ಟಕರ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡುವುದು ಉತ್ತಮ.

ಜಟಿಲವಾದ ಪ್ಲೇಯಿಂಗ್​ ಇಲೆವೆನ್​

ಆಸ್ಟ್ರೇಲಿಯಾ ವಿರುದ್ಧದ ತವರಿನ ಟಿ20ಯಲ್ಲಿ ಮಿಂಚಿದ್ದ ಆಟಗಾರರು ಈ ಸರಣಿಯಲ್ಲಿ ಕಾಣಿಸಿಕೊಂಡಿದ್ದರೆ. ಆದರೆ ಶುಭಮನ್​ ಗಿಲ್‌, ರವೀಂದ್ರ ಜಡೇಜ, ಮೊಹಮ್ಮದ್​ ಸಿರಾಜ್‌ ಆಗಮನದಿಂದ ಆಡುವ ಬಳಗದ ಆಯ್ಕೆ ತುಸು ಜಟಿಲವಾಗಿದೆ. ಗಿಲ್​ ಆಗಮನದಿಂದ ಗಾಯಕ್ವಾಡ್​ಗೆ ಅವಕಾಶ ಕಷ್ಟ. ಬೌಲಿಂಗ್​ನಲ್ಲಿ ಮುಕೇಶ್​ ಬದಲು ಸಿರಾಜ್​ ಆಡಬಹುದು. ಯಶಸ್ವಿ ಜೈಸ್ವಾಲ್, ಶುಭಮನ್​ ಗಿಲ್,​ ಸೂರ್ಯಕುಮಾರ್​, ರಿಂಕು ಸಿಂಗ್​ ಮತ್ತು ಶ್ರೇಯಸ್​ ಅಯ್ಯರ್​ ಒಳಗೊಂಡ ಭಾರತೀಯ ಬ್ಯಾಟಿಂಗ್​ ಲೈನ್​ ಅಪ್​ ಬಲಿಷ್ಠವಾಗಿದೆ. ಆದರೆ ಇವರೆಲ್ಲ ಬೌನ್ಸ್​ ಪಿಚ್​ನಲ್ಲಿ ಆಡಲು ಸಮರ್ಥರಿದ್ದಾರೆಯೇ ಎನ್ನುವುದು ಪಶ್ನೆಯಾಗಿದೆ.

ಇದನ್ನೂ ಓದಿ IND vs SA 2nd T20: ಮಳೆ ಭೀತಿಯಲ್ಲಿ ಆಡಲು ಸಜ್ಜಾದ ಭಾರತ-ದಕ್ಷಿಣ ಆಫ್ರಿಕಾ 

ಸಂಭಾವ್ಯ ತಂಡ

ಭಾರತ: ಸೂರ್ಯಕುಮಾರ್‌ ಯಾದವ್‌ (ನಾಯಕ), ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌, ರಿಂಕು ಸಿಂಗ್‌, ಶ್ರೇಯಸ್‌ ಅಯ್ಯರ್‌, ಇಶಾನ್‌ ಕಿಶನ್‌, ರವೀಂದ್ರ ಜಡೇಜ, ರವಿ ಬಿಷ್ಣೋಯಿ, ಆರ್ಷದೀಪ್‌ ಸಿಂಗ್‌, ಮೊಹಮ್ಮದ್‌ ಸಿರಾಜ್‌. ದೀಪಕ್​ ಚಹರ್​.

ದಕ್ಷಿಣ ಆಫ್ರಿಕಾ: ಐಡನ್‌ ಮಾರ್ಕ್‌ರಮ್‌ (ನಾಯಕ), ರೀಝ ಹೆಂಡ್ರಿಕ್ಸ್‌, ಮಾರ್ಕೊ ಜಾನ್ಸೆನ್‌, ಹೆನ್ರಿಕ್‌ ಕ್ಲಾಸೆನ್‌, ಕೇಶವ್‌ ಮಹಾರಾಜ್‌, ಡೇವಿಡ್‌ ಮಿಲ್ಲರ್‌, ಆ್ಯಂಡಿಲ್‌ ಫೆಲುಕ್ವಾಯೊ, ತಬ್ರೇಜ್‌ ಶಮ್ಸಿ, ಟ್ರಿಸ್ಟನ್‌ ಸ್ಟಬ್ಸ್, ಲಿಝಾಡ್‌ ವಿಲಿಯಮ್ಸ್‌. ಓಟ್‌ನೀಲ್‌ ಬಾರ್ಟ್‌ಮ್ಯಾನ್‌.

Exit mobile version