Site icon Vistara News

Ind vs Aus : ಬೆಂಗಳೂರಿನಲ್ಲಿಂದು ನಡೆಯಲಿದೆ ಔಪಚಾರಿಕ ಪಂದ್ಯ

Cricket news

ಬೆಂಘಳೂರು: ಐದು ಪಂದ್ಯಗಳ ಸರಣಿಯ 4ನೇ ಟಿ20 ಪಂದ್ಯದಲ್ಲಿ 20 ರನ್​ಗಳ ಭರ್ಜರಿ ಜಯ ಸಾಧಿಸಿರುವ ಭಾರತ ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ 5ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ (Ind vs Aus) ಸೆಣಸಲಿದೆ. ಈ ಮೂಲಕ ಟಿ20 ಸರಣಿಯಲ್ಲಿ ಭಾರತ 3-1ರ ಮುನ್ನಡೆ ಸಾಧಿಸಿದೆ. ಇಂದು ಡಿಸೆಂಬರ್​ 3ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐದನೇ ಹಾಗೂ ಕೊನೇ ಪಂದ್ಯ ನಡೆಯಲಿದೆ. ಸರಣಿಯನ್ನು ಭಾರತ ತಂಡ ಗೆದ್ದಿರುವ ಕಾರಣ ಇದು ಔಪಚಾರಿಕ ಪಂದ್ಯ ಎನಿಸಿಕೊಳ್ಳಲಿದೆ.

4ನೇ ಟಿ20 ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿರುವುದು ನಿಜವಾದರೂ ರಿಂಕು ಸಿಂಗ್ ಅವರ 46 ಮತ್ತು ಯಶಸ್ವಿ ಜೈಸ್ವಾಲ್ ಅವರ 37 ರನ್​ಗಳ ನೆರವಿನಿಂದ ಭಾರತ 174 ರನ್ ಗಳಿಸಿತು. ಉಳಿದಂತೆ ಕೆಲವು ಬ್ಯಾಟರ್​​ಗಳು ವಿಫಲಗೊಂಡಿದ್ದರು. ಭಾರತದ ಯುವ ಬ್ಯಾಟಿಂಗ್ ಲೈನ್ ಅಪ್ ತಮ್ಮಲ್ಲಿ ಸಾಕಷ್ಟು ಫೈರ್ ಪವರ್ ಇದೆ ಎಂದು ತೋರಿಸಿದೆ. ರಿಂಕು ಸಿಂಗ್ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಅವರು ಪಂದ್ಯದ ಅಗತ್ಯಗಳಿಗೆ ಅನುಗುಣವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಸರಣಿಯಲ್ಲಿ ತನ್ನ ಮೊದಲ ಪಂದ್ಯವನ್ನು ಆಡಿದ ಜಿತೇಶ್ ಶರ್ಮಾ 35 ರನ್ ಗಳಿಸಿ ಭಾರತ 174 ರನ್ ಗಳಿಸಲು ನೆರವಾಗಿದ್ದೂ ಅನುಕೂಲಕರವಾಗಿತ್ತು.

ಹಾಲಿ ಟಿ 20 ಐ ಸರಣಿಯಲ್ಲಿ ಭಾರತವು ಇನ್ನಿಂಗ್ಸ್​​ನಲ್ಲಿ 200 ಕ್ಕಿಂತ ಕಡಿಮೆ ರನ್ ಗಳಿಸಿರುವುದು ಇದೇ ಮೊದಲು. ತಿಲಕ್ ವರ್ಮಾ ಬದಲಿಗೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಶ್ರೇಯಸ್ ಅಯ್ಯರ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಆದರೆ ಅವರ ಫಾರ್ಮ್ ಅನ್ನು ಪರಿಗಣಿಸಿದರೆ, ಭಾರತವು ಅಯ್ಯರ್ ಅವರ ಮೇಲೆ ಉತ್ತಮವಾಗಿ ಆಡಲು ಪಣತೊಡುತ್ತದೆ.

ಸ್ಪಿನ್ನರ್​ಗಳ ಸಾಧನೆ

ಭಾರತದ ಬೌಲಿಂಗ್ ಬಗ್ಗೆ ಮಾತನಾಡುವುದಾದರೆ ಸ್ಪಿನ್ನರ್​ಗಳು ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ ಪಂದ್ಯದಲ್ಲಿ ರವಿ ಬಿಷ್ಣೋಯ್ ಮತ್ತು ಅಕ್ಷರ್ ಪಟೇಲ್ ಅವರಂತಹ ಆಟಗಾರರು ವಿಕೆಟ್ ಪಡೆದುಕೊಂಡಿದ್ದಾರೆ. ವೇಗದ ಬೌಲಿಂಗ್ ಘಟಕವು ಕಳವಳಕಾರಿಯಾಗಿದೆ. 4ನೇ ಟಿ20ಯಲ್ಲಿ ಅವೇಶ್ ಖಾನ್ ಹೊರತುಪಡಿಸಿದರೆ ಬೇರೆ ಯಾರೂ ಆರಾಮದಾಯಕವಾಗಿ ಕಾಣಲಿಲ್ಲ. ಬೆಂಗಳೂರು ಪಿಚ್ ಬೌಲರ್​ಗಳಿಗೆ ಆಘಾತಕಾರಿಯಾಗಿರುವುದರಿಂದ ಮತ್ತಷ್ಟು ಬಲ ಕಂಡುಕೊಳ್ಳಬೇಕಾಗಿದೆ.

ಆಸ್ಟ್ರೇಲಿಯಾ ಕೆಲವು ಬದಲಾವಣೆಗಳನ್ನು ಮಾಡಿದೆ. ಗ್ಲೆನ್ ಮ್ಯಾಕ್ಸ್ವೆಲ್, ಆಡಮ್ ಜಂಪಾ ಮತ್ತು ಸ್ಟೋಯ್ನಿಸ್ ಅವರಂತಹ ಹಲವಾರು ಹಿರಿಯ ಆಟಗಾರರು ತವರಿಗೆ ಮರಳಿರುವುದರಿಂದ ತಂಡ ಬಲ ಕ್ಷೀಣಿಸಿತ್ತಿದೆ. ಪವರ್ ಪ್ಲೇನಲ್ಲಿ ಟ್ರಾವಿಸ್ ಹೆಡ್ ಭಾರತದ ಬೌಲಿಂಗ್ ದಾಳಿಯನ್ನು ಹಿಮ್ಮಟ್ಟಿಸುತ್ತಿದ್ದಾರೆ. ನಾಯಕ ಮ್ಯಾಥ್ಯೂ ವೇಡ್ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಸರಣಿಯುದ್ದಕ್ಕೂ ಭಾರತೀಯ ಬ್ಯಾಟರ್​ಗಳು ಆಸ್ಟ್ರೇಲಿಯಾದ ಬೌಲರ್​​ಗಳನ್ನು ಬೆಂಡೆತ್ತಿದ್ದಾರೆ. 4ನೇ ಟಿ20 ಪಂದ್ಯದಲ್ಲಿ ಬೆನ್ ದ್ವಾರ್ಶುಯಿಸ್ 3 ವಿಕೆಟ್ ಪಡೆದರೂ, 4 ಓವರ್​ಗಳಲ್ಲಿ 40 ರನ್ ನೀಡಿ ಮಿಂಚಿದ್ದಾರೆ.

ಇದನ್ನೂ ಓದಿ : IPL 2024 : ಐಪಿಎಲ್​ ಹರಾಜಿನ ದಿನಾಂಕ, ಸ್ಥಳದ ಬಗ್ಗೆ ಖಚಿತ ಮಾಹಿತಿ ನೀಡಿದ ಬಿಸಿಸಿಐ

ಪಿಚ್ ವರದಿ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವು ಬ್ಯಾಟಿಂಗ್ ಸ್ವರ್ಗವಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್​​ನಲ್ಲಿ ಹೆಚ್ಚಿನ ತಂಡಗಳು ತಮ್ಮ ಇನ್ನಿಂಗ್ಸ್​ನಲ್ಲಿ 300 ಕ್ಕಿಂತ ಹೆಚ್ಚು ರನ್ ದಾಖಲಾಗಿದ್ದವು. ಚಿನ್ನಸ್ವಾಮಿಯಲ್ಲಿ ಆಡಿದ 8 ಟಿ 20 ಪಂದ್ಯಗಳಲ್ಲಿ ಎರಡನೇ ಬ್ಯಾಟಿಂಗ್ ಮಾಡುವ ತಂಡಗಳು 5ರಲ್ಲಿ ಗೆದ್ದಿದ್ದರೆ, ಮೊದಲು ಬ್ಯಾಟಿಂಗ್ ಮಾಡುವ ತಂಡವು ಎರಡು ಬಾರಿ ಗೆದ್ದಿದೆ. 5 ನೇ ಟಿ 20 ಐ ಪಿಚ್ ಸಾಕಷ್ಟು ರನ್​ಗಳೊಂದಿಗೆ ಸಮತಟ್ಟಾಗುವ ನಿರೀಕ್ಷೆಯಿದೆ.

ಸಂಭಾವ್ಯ ಪ್ಲೇಯಿಂಗ್ ಇಲೆವೆನ್

ಭಾರತ: ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಿಂಕು ಸಿಂಗ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ದೀಪಕ್ ಚಹರ್, ಅವೇಶ್ ಖಾನ್, ಮುಖೇಶ್ ಕುಮಾರ್.

ಆಸ್ಟ್ರೇಲಿಯಾ: ಟ್ರಾವಿಸ್ ಹೆಡ್, ಜೋಶ್ ಫಿಲಿಪ್, ಆರೋನ್ ಹಾರ್ಡಿ, ಬೆನ್ ಮೆಕ್ಡರ್ಮಾಟ್, ಟಿಮ್ ಡೇವಿಡ್, ಮ್ಯಾಟ್ ಶಾರ್ಟ್, ಮ್ಯಾಥ್ಯೂ ವೇಡ್ (ನಾಯಕ/ ವಿಕೆಟ್ ಕೀಪರ್), ಬೆನ್ ಡ್ವಾರ್ಶುಯಿಸ್, ತನ್ವೀರ್ ಸಂಘಾ, ಕ್ರಿಸ್ ಗ್ರೀನ್, ಜೇಸನ್ ಬೆಹ್ರೆನ್ಡಾರ್ಫ್.

Exit mobile version