Site icon Vistara News

IND vs AUS | ನೂಕುನುಗ್ಗಲಿನಲ್ಲಿ ಗಾಯಗೊಂಡವರಿಗೆ ಕ್ರಿಕೆಟ್ ಪಂದ್ಯದ ಉಚಿತ ಟಿಕೆಟ್‌ ನೀಡಿದ ಸರಕಾರ

ಹೈದಬಾರಾಬಾದ್‌ : ಭಾರತ ಹಾಗೂ ಆಸ್ಟ್ರೇಲಿಯಾ (IND vs AUS) ತಂಡಗಳ ನಡುವಿನ ಏಕದಿನ ಪಂದ್ಯದ ಟಿಕೆಟ್‌ ಖರೀದಿ ವೇಳೆ ಉಂಟಾದ ನೂಕುನುಗ್ಗಲಿನ ವೇಳೆ ಗಾಯಗೊಂಡಿದ್ದ ಎಂಟು ಮಂದಿನ ತೆಲಂಗಾಣ ಕ್ರೀಡಾ ಸಚಿವಾಲಯ ಉಚಿತ ಟಿಕೆಟ್‌ಗಳನ್ನು ವಿತರಿಸಿದೆ. ಈ ಮೂಲಕ ನೋವಿನಲ್ಲಿದ್ದವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ ಅಲ್ಲಿನ ಸರಕಾರ.

ಗಾಯಗೊಂಡ ಪ್ರತಿಯೊಬ್ಬರಿಗೂ ತಲಾ ಎರಡು ಟಿಕೆಟ್‌ಗಳನ್ನು ವಿತರಿಸುವುದಾಗಿ ಕ್ರೀಡಾ ಸಚಿವಾಲಯ ಹೇಳಿದೆ. ಅಂತೆಯೇ ಅವರಿಗೆ ಪೊಲೀಸ್‌ ಭದ್ರತೆಯೊಂದಿಗೆ ಒಂದೇ ಬಸ್‌ನಲ್ಲಿ ಮೈದಾನಕ್ಕೆ ತೆರಳುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಅಂತೆಯೇ ಶನಿವಾರ ಸ್ಥಳೀಯ ಪೊಲೀಸರ ಗಾಯಗೊಂಡ ಎಲ್ಲರಿಗೂ ಫೋನ್‌ ಮಾಡಿ ಭಾನುವಾರ ಸಂಜೆ ೪ ಗಂಟೆಗೆ ಸಜ್ಜಾಗಿರುವಂತೆ ಸೂಚನೆ ನೀಡಿದೆ.

ಎರಡು ದಿನಗಳ ಹಿಂದೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ೨೦ ಸರಣಿಯ ಕೊನೇ ಪಂದ್ಯದ ಟಿಕೆಟ್‌ ಖರೀದಿಗಾಗಿ ಬಂದಿದ್ದ ಅಭಿಮಾನಿಗಳು ನೂಕುನುಗ್ಗಲು ನಡೆಸಿದ್ದ ಕಾರಣ ಹಲವರಿಗೆ ಗಾಯಗಳಾಗಿತ್ತು. ಅದರಲ್ಲಿ ಎಂಟು ಮಂದಿ ತೀವ್ರ ರೀತಿಯಲ್ಲಿ ಗಾಯಗೊಂಡಿದ್ದರು. ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಲಾಠೀ ಚಾರ್ಜ್‌ ಮಾಡಿದ್ದರು.

೩೦೦೦ ಟಿಕೆಟ್‌ಗ ಖರೀದಿ ಮಾಡಲು ೫೦ ಸಾವಿರಕ್ಕೂ ಹೆಚ್ಚು ಮಂದಿ ಜಿಮ್ಖಾನಾ ಕ್ರಿಕೆಟ್‌ ಸ್ಟೇಡಿಯಮ್‌ ಬಳಿ ಸೇರಿದ್ದ ಘಟನೆಗೆ ಕಾರಣ ಎನ್ನಲಾಗಿದೆ.

ಇದನ್ನೂ ಓದಿ | Stampede | 3ನೇ ಟಿ-20 ಪಂದ್ಯದ ಟಿಕೆಟ್‌ ಖರೀದಿಗೆ ಹೈದರಾಬಾದ್‌ನಲ್ಲಿ ಕಾಲ್ತುಳಿತ, ನಾಲ್ವರಿಗೆ ಗಾಯ

Exit mobile version