ರಾವಲ್ಪಿಂಡಿ : ಇಂಗ್ಲೆಂಡ್ ತಂಡ ೧೭ ವರ್ಷದ ಬಳಿಕ ಪಾಕಿಸ್ತಾನಕ್ಕೆ ತೆರಳಿ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುತ್ತಿದೆ. ಮೊದಲ ಟೆಸ್ಟ್ ಮುಕ್ತಾಯಗೊಂಡಿದ್ದು ಪ್ರವಾಸಿ ಇಂಗ್ಲೆಂಡ್ ತಂಡ ೭೪ ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಇವೆಲ್ಲದರ ನಡುವೆ ಈ ಪಂದ್ಯವನ್ನು ಅಯೋಜಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತಯಾರಿಸಿರುವ ಪಿಚ್ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಸಲು ಸೂಕ್ತವಾಗಿಲ್ಲ ಎಂಬುದಾಗಿ ಮ್ಯಾಚ್ ರೆಫರಿ ಘೋಷಿಸಿದ್ದು, ಒಂದು ಡಿಮೆರಿಟ್ ಅಂಕಗಳನ್ನು ನೀಡಿದ್ದಾರೆ.
ಪಂದ್ಯ ನಡೆದ ರಾವಲ್ಪಿಂಡಿ ಪಿಚ್ ಸ್ಪರ್ಧಾತ್ಮಕವಾಗಿರಲಿಲ್ಲ. ಮೊದಲೆರಡು ದಿನ ರನ್ ಹೊಳೆಯೇ ಹರಿದಿದ್ದ ಅಲ್ಲಿ ಬಳಿಕ ಬೌಲರ್‌ಗಳಿಗೆ ನೆರವು ನೀಡಿತ್ತು. ಒಟ್ಟಾರೆಯಾಗಿ ಅಲ್ಲಿ ೧೭೬೮ ರನ್‌ಗಳು ಕ್ರೊಡೀಕರಣಗೊಂಡಿದ್ದವು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಮತೋಲನ ಇರದ ಈ ಪಿಚ್ ಗುಣಮಟ್ಟಕ್ಕಿಂತ ಕಡಿಮೆ ಇತ್ತು ಎಂಬುದಾಗಿ ಮ್ಯಾಚ್ ರೆಫರಿ ರಂಜನ್ ಮದುಗಲೆ ಹೇಳಿದ್ದಾರೆ.
ಮ್ಯಾಚ್ ರೆಫರಿ ನೀಡಿರುವ ಡಿಮೆರಿಟ್ ಅಂಕಗಳು ಐದು ವರ್ಷ ಚಾಲ್ತಿಯಲ್ಲಿರುತ್ತದೆ. ಒಂದು ವೇಳೆ ಐದು ವರ್ಷಗಳ ಅವಧಿಯಲ್ಲಿ ಈ ಪಿಚ್ ಒಟ್ಟು ಐದು ಡಿಮೆರಿಟ್ ಅಂಕಗಳನ್ನು ಪಡೆದರೆ ಅಲ್ಲಿಂದ ೧೨ ತಿಂಗಳ ಕಾಲ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸಲು ನಿಷೇಧ ಹೇರಲಾಗುತ್ತದೆ.
ಇದನ್ನೂ ಓದಿ | ENGvsPAK | ಪಾಕ್ ತಂಡಕ್ಕೆ ತವರಿನಲ್ಲಿ ಮುಖಭಂಗ, ಮೊದಲ ಟೆಸ್ಟ್‌ನಲ್ಲಿ ಆಂಗ್ಲರಿಗೆ ಜಯ