ಮುಂಬಯಿ: ಭಾರತ ತಂಡ ನಾಲ್ಕನೇ ಬಾರಿಗೆ ವಿಶ್ವ ಕಪ್ನಲ್ಲಿ ಫೈನಲ್ಗೇರಿದೆ. ಫೈನಲ್ ಪಂದ್ಯ ನವೆಂಬರ್ 19ರಂದು ನಡೆಯಲಿದ್ದು, ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾಗೆ ಎದುರಾಗಲಿದೆ. ಭಾರತದ ಪಾಲಿಗೆ ಇದು ವಿಶೇಷ ಅಭಿಯಾನ. ತವರಿನಲ್ಲಿ ನಡೆಯುತ್ತಿರು ಈ ಟೂರ್ನಿಯ ಲೀಗ್ ಹಂತದ ಎಲ್ಲಾ ಒಂಬತ್ತು ಪಂದ್ಯಗಳನ್ನು ಗೆದ್ದು ಬಳಿಕ ಸೆಮಿಯಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಮಣಿಸಿ ಬಲವಾದ ಅಭಿಪ್ರಾಯ ಸೃಷ್ಟಿಸಿದೆ. ಆದಾಗ್ಯೂ ವಿಶ್ವ ಕಪ್ನಲ್ಲಿ ಸ್ಥಿರ ಪ್ರದರ್ಶನ ನೀಡುವ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಸವಾಲೊಡ್ಡುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಏಕದಿನ ವಿಶ್ವಕಪ್ 2023ರ ಮೊದಲ ಫೈನಲ್ಗಿಂತ ಮೊದಲು ಭಾರತ ಮತ್ತು ಆಸ್ಟ್ರೇಲಿಯಾ ಐಸಿಸಿ ಟೂರ್ನಿಯ ಫೈನಲ್ನಲ್ಲಿ ಒಂದು ಬಾರಿ (2003) ಎದುರಾಗಿದೆ. ಅಲ್ಲಿ ಭಾರತಕ್ಕೆ ಸೋಲಾಗಿದೆ. ಆದಾಗ್ಯೂ ಭಾರತ ತಂಡ ಈ ಬಾರಿ ಸಾಮಾನ್ಯವಾಗಿಲ್ಲ. ಪ್ರತಿಯೊಬ್ಬರೂ ಬೆಂಕಿಯುಂಡೆಗಳಾಗಿದ್ದಾರೆ. ಅವಕಾಶ ಸಿಕ್ಕಾಗ ಸಿಡಿದೇಳುತ್ತಾರೆ. ಹೀಗಾಗಿ ಆಸ್ಟ್ರೇಲಿಯಾ ತಂಡಕ್ಕೆ ಈ ಬಾರಿ ಸೋಲು ಖಚಿತ ಎನ್ನಲಾಗುತ್ತಿದೆ.
ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಉತ್ತಮವಾಗಿ ಕಾರ್ಯನಿರ್ವಹಿಸಬಹುದು ಎಂಬುದಕ್ಕೆ ಭಾರತದ ಬ್ಯಾಟರ್ಗಳ ಫಾರ್ಮ್ ಮೊದಲ ಕಾರಣ. ಹಾಗಾದರೆ ಭಾರತದ ಬ್ಯಾಟರ್ಗಳು ಇದವರೆಗಿನ 10 ಪಂದ್ಯಗಳಲ್ಲಿ ಯಾವ ರೀತಿ ಕಾರ್ಯ ನಿರ್ವಹಿಸಿದ್ದಾರೆ ಎಂಬುದನ್ನು ನೋಡೋಣ
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಹಾಲಿ ಟೂರ್ನಿಯಲ್ಲಿ ಅಸಮಾನ್ಯ ಪ್ರದರ್ಶನ ನೀಡುತ್ತಿದ್ದಾರೆ. ತಂಡದ 10 ಗೆಲುವಿನಲ್ಲಿ ಅವರು ಪ್ರಧಾನ ಪಾತ್ರ ವಹಿಸಿದ್ದಾರೆ. ಅವರೀಗ ಹಾಲಿ ಆವೃತ್ತಿಯ ಗರಿಷ್ಠ ರನ್ ಗಳಿಕೆದಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 10 ಪಂದ್ಯಗಳಲ್ಲಿ ಅವರ ಒಟ್ಟು ರನ್ 711. ಇದು ವಿಶ್ವ ಕಪ್ನ ಒಂದೇ ಆವೃತ್ತಿಯಲ್ಲಿ ದಾಖಲಿಸಲಾದ ಗರಿಷ್ಠ ಮೊತ್ತ. ಅವರು ಸರಾಸರಿ 101.57 ರಂತೆ 99 ಸ್ಟ್ರೈಕ್ರೇಟ್ ಪ್ರಕಾರ ಬ್ಯಾಟ್ ಬೀಸಿದ್ದಾರೆ. ಅವರ ಇನಿಂಗ್ಸ್ಗಳಲ್ಲಿ 5 ಅರ್ಧ ಶತಕಗಳು ಹಾಗೂ 3 ಶತಕಗಳು ಸೇರಿಕೊಂಡಿವೆ. 64 ಫೋರ್ ಹಾಗೂ 9 ಸಿಕ್ಸರ್ ಬಾರಿಸಿದ್ದಾರೆ. ಇವರ ಗರಿಷ್ಠ ಸ್ಕೋರ್ 117. ಕೊಹ್ಲಿ ಏಕ ದಿನ ಮಾದರಿಯಲ್ಲಿ 50 ಶತಕಗಳನ್ನು ಬಾರಿಸಿದ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.
ರೋಹಿತ್ ಶರ್ಮಾ
ನಾಯಕ ಹಾಗೂ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಇನಿಂಗ್ಸ್ ಆರಂಭದಲ್ಲಿ ನಿರ್ಭಿಡ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಭಾರತ ತಂಡಕ್ಕೆ ಬಹುತೇಕ ಪಂದ್ಯಗಳಲ್ಲಿ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಯಿತು. ನಂತರದ ಬ್ಯಾಟರ್ಗಳಿಗೆ ಇನಿಂಗ್ಸ್ ಮುಂದುವರಿಸಲು ಅವಕಾಶ ಸಿಕ್ಕಿತ್ತು. ರೋಹಿತ್ 10 ಪಂದ್ಯಗಳಲ್ಲಿ 550 ರನ್ ಗಳಿಸಿದ್ದಾರೆ. ಅವರು ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. 55.00 ಸರಾಸರಿಯಂತೆ 124 ಸ್ಟ್ರೈಕ್ರೇಟ್ ಪ್ರಕಾರ್ ರನ್ ಬಾರಿಸಿದ್ದಾರೆ. 1 ಶತಕ ಹಾಗೂ 3 ಅರ್ಧ ಶತಕಗಳು ಅವರ ಇನಿಂಗ್ಸ್ನಲ್ಲಿದೆ. 62 ಫೋರ್ ಹಾಗೂ 28 ಸಿಕ್ಸರ್ ಬಾರಿಸಿದ್ದಾರೆ. ರೋಹಿತ್ ವಿಶ್ವ ಕಪ್ನಲ್ಲಿ ಎರಡೆರಡು ಬಾರಿ 500 ಪ್ಲಸ್ ರನ್ ಬಾರಿಸಿದ ಎರಡನೇ ಆಟಗಾರ ಹಾಗೂ ಸತತವಾಗಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ರೋಹಿತ್ ಗರಿಷ್ಠ ಸ್ಕೋರ್ 131.
ಇದನ್ನೂ ಓದಿ : ICC World Cup 2023 : ಕಳೆದ 5 ವಿಶ್ವಕಪ್‌ಗಳಲ್ಲಿ ಭಾರತ-ನ್ಯೂಜಿಲ್ಯಾಂಡ್ ಮುಖಾಮುಖಿ ಹೀಗಿತ್ತು!
ಶುಭ್ಮನ್ ಗಿಲ್
ಗಿಲ್ ಭಾರತ ತಂಡದ ಪ್ರಭಾವಿ ಆರಂಭಿಕ ಬ್ಯಾಟರ್. ಅವರು ಜ್ವರದ ಕಾರಣಕ್ಕೆ ಮೊದಲೆಡು ಪಂದ್ಯಗಳಲ್ಲಿ ಆಡಿರಲಿಲ್ಲ. ಆದಾಗ್ಯೂ 8 ಪಂದ್ಯಗಳಲ್ಲಿ 350 ರನ್ ಬಾರಿಸಿದ್ದಾರೆ. 50 ಸರಾಸರಿಯಂತೆ 108. 02 ಸರಾಸರಿಯಲ್ಲಿ ಅವರು ಬ್ಯಾಟ್ ಬೀಸಿದ್ದಾರೆ. ಅವರ ಗರಿಷ್ಠ ಸ್ಕೋರ್ 92. ಗಿಲ್ ಆಟದಲ್ಲಿ 3 ಅರ್ಧ ಶತಕಗಳಿವೆ. 41 ಫೋರ್ ಹಾಗೂ 12 ಸಿಕ್ಸರ್ಗಳು ಸೇರಿಕೊಂಡಿವೆ.
ಶ್ರೇಯಸ್ ಅಯ್ಯರ್
ಶ್ರೇಯಸ್ ಅಯ್ಯರ್ ಅಮೋಘ ಫಾರ್ಮ್ನಲ್ಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಭಾರತದ ಆಧಾರ ಸ್ತಂಭವಾಗಿದ್ದಾರೆ. ಅವರು ಅಗ್ರ ರನ್ ಗಳಿಕೆದಾರರ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ. ಅವರು ಒಟ್ಟು 526 ರನ್ ಬಾರಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ ಅಜೇಯ 128. ಶ್ರೇಯಸ್ 113.11 ಸ್ಟ್ರೈಕ್ರೇಟ್ನಂತೆ 75.14 ಸರಾಸರಿ ಪ್ರಕಾರ ಬ್ಯಾಟ್ ಬೀಸಿದ್ದಾರೆ. 3 ಅರ್ಧ ಶತಕಗಳು ಹಾಗೂ 2 ಶತಕವನ್ನೂ ಬಾರಿಸಿದಾರೆ. 36 ಫೋರ್ 24 ಸಿಕ್ಸರ್ಗಳನ್ನು ಬಾರಿಸಿದ್ದಾರೆ.
ಕೆ. ಎಲ್ ರಾಹುಲ್
ವಿಕೆಟ್ ಕೀಪರ್ ಬ್ಯಾಟರ್ ಕೆ. ಎಲ್ ರಾಹುಲ್ ಭಾರತ ತಂಡದ ಪರ ದ್ವಿಪಾತ್ರ ವಹಿಸಿದ್ದಾರೆ. ವಿಕೆಟ್ ಕೀಪಿಂಗ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದಾರೆ. ಆಡಿರುವ 10 ಪಂದ್ಯಗಳಲ್ಲಿ 9ಇನಿಂಗ್ಸ್ ನಲ್ಲಿ ಬ್ಯಾಟ್ ಮಾಡಿದ್ದಾರೆ. ಅವರು 386 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 102. ರಾಹುಲ್ 77.20 ಸರಾಸರಿಯಲ್ಲಿ ಬ್ಯಾಟ್ ಮಾಡಿದ್ದು. 98.72 ಸ್ಟ್ರೈಕ್ ರೇಟ್ ಹೊಂದಿದ್ದಾರೆ. 1 ಶತಕ ಹಾಗೂ 1 ಅರ್ಧ ಶತಕಗಳು ಅವರ ಖಾತೆಯಲ್ಲಿವೆ. 32 ಫೋರ್ ಹಾಗೂ 7 ಸಿಕ್ಸರ್ ಬಾರಿಸಿದ್ದಾರೆ.
ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್ 5 ಪಂದ್ಯಗಳ 5 ಇನಿಂಗ್ಸ್ಗಳಲ್ಲೂ ಬ್ಯಾಟ್ ಮಾಡಿದ್ದಾರೆ. ಆದರೆ ಅವರಿಗೆ ಹೆಚ್ಚು ಬ್ಯಾಟ್ ಮಾಡಲು ಅವಕಾಶ ಸಿಗಲಿಲ್ಲ. ಅವರ ಸ್ಕೋರ್ 88. ಸರಾಸರಿ 21. 75 ಹಾಗೂ 116.00 ಸ್ಟ್ರೈಕ್ರೇಟ್ ಹೊಂದಿದ್ದಾರೆ. 11 ಫೋರ್ ಹಾಗೂ 1 ಸಿಕ್ಸರ್ ಬಾರಿಸಿದ್ದಾರೆ.