ಬೆಂಗಳೂರು : ಐಪಿಎಲ್ನ ಪಂಜಾಬ್ ಕಿಂಗ್ಸ್ ತಂಡ 2023ರ ಆವೃತ್ತಿಯ (IPL 2023) ಐಪಿಎಲ್ಗೆ ಸ್ಪಿನ್ ಬೌಲರ್ ಅನಿಲ್ ಕುಂಬ್ಳೆ ಅವರನ್ನು ಹೆಡ್ ಕೋಚ್ ಆಗಿ ಮುಂದುವರಿಸಿಲ್ಲ. ಅವರ ಜತೆ ಮಾಡಿಕೊಂಡಿದ್ದ ಮೂರು ವರ್ಷಗಳ ಗುತ್ತಿಗೆಯನ್ನು ಕೊನೆಗೊಳಿಸಿತ್ತು. ಜತೆಗೆ ನಾಯಕರಾಗಿದ್ದ ಮಯಾಂಕ್ ಅಗರ್ವಾಲ್ ಅವರನ್ನು ಹರಾಜಿಗೆ ಮೊದಲು ತಂಡದಿಂದ ಕೈ ಬಿಟ್ಟಿತು. ಇಷ್ಟೆಲ್ಲ ಮಾಡಿರುವ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಮ್ಯಾನೇಜ್ಮೆಂಟ್ ಇದೀಗ ಕನ್ನಡಿಗನನ್ನೇ ಸ್ಪಿನ್ ಬೌಲಿಂಗ್ ಕೋಚ್ ಆಗಿ ಆಯ್ಕೆ ಮಾಡಿಕೊಂಡಿದೆ. ಅವರೇ ಭಾರತ ತಂಡದ ಪ್ರಧಾನ ಸ್ಪಿನ್ನರ್ ಆಗಿ ಆಡಿದ್ದ ಸುನೀಲ್ ಜೋಶಿ
ಸುನೀಲ್ ಜೋಶಿ ಅವರು ಭಾರತ ತಂಡದ ಪರ 15 ಟೆಸ್ಟ್ ಪಂದ್ಯಗಳನ್ನು ಆಡಿ 41 ವಿಕೆಟ್ಗಳನ್ನ ಉರುಳಿಸಿದ್ದರು. ಅದೇ ರೀತಿ 69 ಏಕ ದಿನ ತಂಡದಲ್ಲಿ ಆಡಿ 69 ವಿಕೆಟ್ಗಳನ್ನು ಉರುಳಿಸಿದ್ದರು. ಅನುಭವಿ ಬೌಲರ್ ಆಗಿರುವ ಅವರನ್ನು ತಮ್ಮ ತಂಡದ ಸೇವೆಗೆ ಬಳಸಿಕೊಳ್ಳುವುದಕ್ಕೆ ಪಂಜಾಬ್ ಕಿಂಗ್ಸ್ ಮ್ಯಾನೇಜ್ಮೆಂಟ್ ಮುಂದಾಗಿದೆ.
ಸುನೀಲ್ ಜೋಶಿ ಅವರು ಆರಂಭಿಕ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಐಪಿಎಲ್ನಲ್ಲಿ ಆಡಿದ್ದರು. ನಾಲ್ಕು ಹಣಾಹಣಿಗಳಲ್ಲಿ ಅವರು ಪಡೆದಿರುವುದು 1 ವಿಕೆಟ್ ಮಾತ್ರ. ಅದಾದ ಬಳಿಕ ಅವರಿಗೆ ಭಾರತ ಹಿರಿಯರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದರು. ಆ ಹುದ್ದೆಯನ್ನು ಯಶಸ್ವಿಯಾಗಿ ಮುಗಿಸಿದ ಬಳಿಕ ಅವರು ಯಾವುದೇ ಜವಾಬ್ದಾರಿಯನ್ನು ವಹಿಸಿಕೊಂಡಿರಲಿಲ್ಲ. ಇದೀಗ ಐಪಿಎಲ್ ಫ್ರಾಂಚೈಸಿಯೊಂದು ಅವರನ್ನು ಕೈಬೀಸಿ ಕರೆದಿದೆ.
ಪಂಜಾಬ್ ತಂಡದ ಕೋಚಿಂಗ್ ಸಿಬ್ಬಂದಿಗಳು ಇವರು
ಟ್ರೆವರ್ ಬೈಲೀಸ್ ತಂಡದ ಹೆಡ್ ಕೋಚ್ ಆಗಿದ್ದು, ಬ್ರಾಡ್ ಹೆಡಿನ್ ಸಹಾಯಕ ಕೋಚ್ ಆಗಿದ್ದಾರೆ. ವಾಸಿಮ್ ಜಾಫರ್ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದು, ಕ್ರಿಸ್ ಲಾಂಗ್ವೆಲೋಟ್ ಬೌಲಿಂಗ್ ಕೋಚ್ ಆಗಿದ್ದು, ಸುನೀಲ್ ಸ್ಪಿನ್ ವಿಭಾಗದ ನಿರ್ವಹಣೆ ಮಾಡಲಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡ ಈ ರೀತಿ ಇದೆ
ಶಿಖರ್ ಧವನ್, ಶಾರುಖ್ ಖಾನ್, ಜಾನಿ ಬೈರ್‌ಸ್ಟೋವ್, ಪ್ರಭ್ ಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಷ, ಶಿವಂ ಸಿಂಗ್, ಮೋಹಿತ್ ರಥಿ, ವಿದ್ವತ್ ಕಾವೇರಪ್ಪ, ಹರ್‌ಪ್ರೀತ್ ಭಾಟಿಯಾ , ಸಿಕಂದರ್ ರಾಜಾ, ಸ್ಯಾಮ್ ಕರನ್, ಜಿತೇಶ್ ಶರ್ಮಾ, ರಾಜ್ ಬಾವಾ, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟನ್, ಅಥರ್ವ ಥೈಡೆ, ಅರ್ಷ್‌ದೀಪ್ ಸಿಂಗ್, ಬಲ್ತೇಜ್ ಸಿಂಗ್, ನಾಥನ್ ಎಲ್ಲಿಸ್, ಕಗಿಸೊ ರಬಾಡ, ರಾಹುಲ್ ಚಾಹರ್, ಹರ್‌ಪ್ರೀತ್ ಬ್ರಾರ್.
ಇದನ್ನೂ ಓದಿ | Women’s IPL | ಮಹಿಳೆಯರ ಐಪಿಎಲ್ ನೇರ ಪ್ರಸಾರದ ಹಕ್ಕುಗಳು ರಿಲಯನ್ಸ್ಪಾಲು, 951 ಕೋಟಿ ರೂಪಾಯಿಗಳಿಗೆ ಹಕ್ಕುಗಳ ಖರೀದಿ