ಮುಂಬಯಿ: ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯ(Virat Kohli) ಹೆಸರು ಮತ್ತು ಅವರ ಮಾಡಿರುವ ಸಾಧನೆಯ ಬಗ್ಗೆ ತಿಳಿಯದವರು ಅತಿ ವಿರಳ. ಅವರು ಮಾಡಿರುವ, ಮಾಡುತ್ತಿರುವ, ಮಾಡಲಿರುವ ಸಾಧನೆಯೇ ಅಂತಹುದ್ದು. ಇದೀಗ ಅವರ ಕುರಿತಾದ ಪ್ರಶ್ನೆಯೊಂದು ಆಲ್ ಇಂಡಿಯಾ ಕಾನೂನು ಪ್ರವೇಶ ಪರೀಕ್ಷೆಯಲ್ಲಿ ಕಾಣಿಸಿಕೊಂಡಿದೆ. ಈ ಪ್ರಶ್ನೆ ವೈರಲ್ ಆಗಿದೆ.
ವಿರಾಟ್ ಕೊಹ್ಲಿ ಬಗ್ಗೆ ಆಲ್ ಇಂಡಿಯಾ ಕಾನೂನು ಪ್ರವೇಶ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆ ಎಂದರೆ, ಐಪಿಎಲ್ನಲ್ಲಿ ಒಂದೇ ತಂಡದ ಪರ ಎಲ್ಲ ಆವೃತ್ತಿಯಲ್ಲಿ ಆಡುತ್ತಿರುವ ಆಟಗಾರ ಯಾರು? ಎಂಬುದು. ನಾಲ್ಕು ಆಯ್ಕೆಗಳನ್ನು ನೀಡಲಾಗಿದ್ದು ಇದರಲ್ಲಿ ಬೆನ್ ಸ್ಟೋಕ್ಸ್, ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಹೆಸರು ಕಾಣಿಸಿಕೊಂಡಿದೆ. ಇದಕ್ಕೆ ಸರಿಯಾದ ಉತ್ತರ ವಿರಾಟ್ ಕೊಹ್ಲಿ.
ಇದನ್ನೂ ಓದಿ Mohammed Shami: ಶಮಿ ಮನೆ ಮುಂದೆ ಜನಸಾಗರ; ವಿಶೇಷ ಚೇತನರಿಗೆ ಸನ್ಮಾನ
A question related to King Kohli in AILET examination. pic.twitter.com/Jl1lDITasR
— Mufaddal Vohra (@mufaddal_vohra) December 10, 2023
ಹೌದು, ವಿರಾಟ್ ಕೊಹ್ಲಿ ಅವರು ಆರ್ಸಿಬಿ ಪರ ಎಲ್ಲ 16 ಆವೃತ್ತಿ ಆಡಿದ್ದಾರೆ. ಐಪಿಎಲ್ ಆವೃತ್ತಿಯಲ್ಲಿ ಒಂದೇ ತಂಡದ ಪರ ಆಡಿದ ಆಟಗಾರ ಎನ್ನುವ ಕೀರ್ತಿಯೂ ಹೊಂದಿದ್ದಾರೆ.
ಈ ಬಾರಿ ವಿಶ್ವಕಪ್ನಲ್ಲಿ ಕೊಹ್ಲಿ ಪ್ರದರ್ಶನ
ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಬ್ಯಾಟಿಂಗ್ ವಿರಾಟ ದರ್ಶನ ತೋರಿದ ಕೊಹ್ಲಿ ಟೂರ್ನಿಯ ಟಾಪ್ ಸ್ಕೋರರ್ ಆಗಿ ಹೊರಮೊಮ್ಮಿದ್ದಾರೆ. ಅಲ್ಲದೆ ತಮ್ಮ ಹೆಸರಿಗೆ ನಾನಾ ದಾಖಲೆಗಳನ್ನೂ ಬರೆಸಿಕೊಂಡಿದ್ದಾರೆ. ಆಸೀಸ್ ವಿರುದ್ಧದ ಮೊದಲ ಲೀಗ್ ಪಂದ್ಯದಲ್ಲಿ ಕುಸಿದಿದ್ದ ಭಾರತ ತಂಡಕ್ಕೆ ಆಸರೆಯಾದ ಕೊಹ್ಲಿ 85 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು. ಅಫಘಾನಿಸ್ತಾನ ವಿರುದ್ಧ ನಡೆದ 2ನೇ ಪಂದ್ಯದಲ್ಲಿ ಕೊಹ್ಲಿ 55 ರನ್ ಬಾರಿಸಿದ್ದರು. ಬಾಂಗ್ಲಾ ವಿರುದ್ಧ ಅಮೋಘ ಪ್ರದರ್ಶನ ನೀಡಿದ ಕೊಹ್ಲಿ 97 ಎಸೆತಗಳಲ್ಲಿ 103 ರನ್ ಗಳಿಸಿದ್ದರು.
ನ್ಯೂಜಿಲ್ಯಾಂಡ್ ವಿರುದ್ಧ 95 ರನ್ ಗಳಿಸಿ ಐದು ರನ್‌ನಿಂದ ಶತಕ ವಂಚಿತರಾದರು. ಶ್ರೀಲಂಕಾ ವಿರುದ್ಧ 88, ದಕ್ಷಿಣ ಆಫ್ರಿಕಾ ವಿರುದ್ಧ 101 ರನ್ ಗಳಿಸಿ ಸಚಿನ್ ಅವರ 49ನೇ ಶತಕವನ್ನು ಸರಿಗಟ್ಟಿದ್ದರು. ನೆದರ್ಲೆಂಡ್ಸ್ ವಿರುದ್ಧ 51 ರನ್ ಗಳಿಸಿದರು. ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ 117 ರನ್ ಗಳಿಸಿದ ಕೊಹ್ಲಿ, ಸಚಿನ್ ಅವರ ದಾಖಲೆ ಮುರಿದು 50ನೇ ಸೆಂಚುರಿ ಬಾರಿಸಿ ದಾಖಲೆ ನಿರ್ಮಿಸಿದರು. ಫೈನಲ್ ಪಂದ್ಯದಲ್ಲಿ 54 ರನ್ ಬಾರಿಸಿದರು. ಈ ಬಾರಿ ಆಡಿದ 11 ಪಂದ್ಯಗಳಲ್ಲಿ 765 ರನ್ ಬಾರಿಸಿದ್ದರು.