ನವದೆಹಲಿ: ಭಾರತದ ಹಿರಿಯ ಕ್ರಿಕೆಟಿಗ ಶಿಖರ್ ಧವನ್ ಇತ್ತೀಚೆಗೆ ಪತ್ನಿ ಆಯೆಷಾ ಮುಖರ್ಜಿ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಹೀಗಾಗಿ ಕಳೆದ ಐದರಿಂದ ಆರು ತಿಂಗಳುಗಳಿಂದ ತಮ್ಮ ಮಗ ಜೊರಾವರ್ ನಿಂದ ದೂರವಾಗಿದ್ದಾರೆ. ಈ ಬಗ್ಗೆ ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಮಗನನ್ನು ಭೇಟಿ ಮಾಡಲು ಪಡುವ ಕಷ್ಟವನ್ನು ಹೇಳಿಕೊಂಡು ದುಃಖಿಸಿದ್ದಾರೆ.
ಮಗನ ಪ್ರೀತಿ ಕುರಿತು ಮುಕ್ತವಾಗಿ ಮಾತನಾಡಿದ ಧವನ್, ವಿಚ್ಛೇದನದ ನಂತರ ತಮ್ಮ ಮಗನೊಂದಿಗೆ ಸಂಪರ್ಕ ಸಾಧಿಸಲು ಎದುರಿಸಿದ ಸವಾಲುಗಳನ್ನು ತೆರೆದಿಟ್ಟಿದ್ದಾರೆ. ಜೊರಾವರ್ ಗೆ ಸಲ್ಲಬೇಕಾದ ತಂದೆಯ ಪ್ರೀತಿಯನ್ನು ಒದಗಿಸುವ ಆಳವಾದ ಹಂಬಲ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ಭೇಟಿಯ ಸಮಯದಲ್ಲಿ ಧವನ್ ತಮ್ಮ ಮಗನೊಂದಿಗೆ ಸಂಪರ್ಕ ಸಾಧಿಸಲು ಪಟ್ಟಿರುವ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ತಮ್ಮ ಭೇಟಿ ಕ್ಷಣಗಳಲ್ಲೇ ಮುಗಿದು ಹೋಯಿತು ಎಂಬುದಾಗಿಯೂ ಬೇಸರ ವ್ಯಕ್ತಪಡಿಸಿದ್ದಾರೆ.
Shikhar Dhawan said "I write messages to him (His Son) everyday, I don't know whether he is recieving it – I am a father & I am doing the duty, and that’s my Karma, I miss him, I feel sad but I have learned to live with it" (HB Podcast)
— Vipin Tiwari (@Vipintiwari952_) January 30, 2024
– Shikhar deserves better than this💔 pic.twitter.com/69vMh0ZVse
ನಾನು ನನ್ನ ಮಗನನ್ನು ನೋಡಲು ಒಂದು ವಾರ ಆಸ್ಟ್ರೇಲಿಯಾಕ್ಕೆ ಹೋಗಿದ್ದೆ. ಮಗನಿಗೆ ನನ್ನನ್ನು ಭೇಟಿಯಾಗಲು ಕೆಲವೇ ಗಂಟೆಗಳು ಸಿಗುತ್ತಿತ್ತು. ನಾನು ಅವನೊಂದಿಗೆ ಪ್ರೀತಿಯ ಕ್ಷಣಗಳನ್ನು ಹಂಚಿಕೊಳ್ಳಲು ಬಯಸುತ್ತಿರುತ್ತೇನೆ. ಅವನನ್ನು ನನ್ನ ತೋಳುಗಳಲ್ಲಿ ಮಲಗಿಸಲು ಬಿಗಿಯಾಗಿ ಅಪ್ಪಿಕೊಳ್ಳಲು ಬಯಸುತ್ತೇನೆ. ಅವನಿಗೆ ಅರ್ಹವಾದ ತಂದೆಯ ಪ್ರೀತಿಯನ್ನು ಒದಗಿಸಬೇಕಾಗಿದೆ. ದುರದೃಷ್ಟವಶಾತ್ ಕಳೆದ 5ರಿಂದ 6 ತಿಂಗಳುಗಳಿಂದ ನಾನು ಅವರೊಂದಿಗೆ ಮಾತುಕತೆಯೇ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.
ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಧವನ್
ಸವಾಲುಗಳ ಹೊರತಾಗಿಯೂ ಧವನ್ ಸಕಾರಾತ್ಮಕವಾಗಿ ಉಳಿದಿದ್ದಾರೆ. ತಮ್ಮ ಮಗನಿಗೆ ಪ್ರೀತಿಯನ್ನು ಸಂದೇಶ ರವಾನಿಸುವುದನ್ನು ಮುಂದುವರಿಸಿದ್ದಾರೆ. ನಾನು ಅವರ ಸಂತೋಷವನ್ನು ಬಯಸುತ್ತೇನೆ. ಒಂದಲ್ಲ ಒಂದು ಒಂದು ದಿನ ಅವರು ನನ್ನೊಂದಿಗೆ ಹಿಂತಿರುಗುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಧವನ್ ಹೇಳಿದ್ದಾರೆ.
ಇದನ್ನೂ ಓದಿ : Mayank Agarwal : ಸಂಚು ನಡೆದಿದೆ ಎಂದು ದೂರು ದಾಖಲಿಸಿದ ಮಯಾಂಕ್
ಕಳೆದ ವರ್ಷ ತಮ್ಮ ಮಗನ ಹುಟ್ಟುಹಬ್ಬದಂದು ಧವನ್ ಭಾವನಾತ್ಮಕ ಬರವಣಿಗೆ ನೀಡಿದ್ದರು. ತಮಾಷೆಯ ಮತ್ತು ಜವಾಬ್ದಾರಿಯುತ ಜೀವನಕ್ಕೆ ಸಲಹೆ ನೀಡಿದ್ದರು. 2012ರ ಅಕ್ಟೋಬರ್ನಲ್ಲಿ ಆಯೇಷಾ ಮುಖರ್ಜಿ ಅವರನ್ನು ಧವನ್ ಮದುವೆಯಾಗಿದ್ದರು. ತನ್ನ ಹಿಂದಿನ ಮದುವೆಯಿಂದ ಇಬ್ಬರು ಹೆಣ್ಣುಮಕ್ಕಳನ್ನು ಹೊಂದಿದ್ದ ಆಯೆಷಾ. 2021ರಲ್ಲಿ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಧವನ್ಗೆ ವಿಚ್ಛೇದನ ನೀಡುವ ಉದ್ದೇಶವನ್ನು ಘೋಷಿಸಿದ್ದರು. ತನ್ನ ಬದ್ಧತೆಗಳಿಂದಾಗಿ ಅವಳು ಆಸ್ಟ್ರೇಲಿಯಾದಲ್ಲಿಯೇ ಉಳಿದಿದ್ದರು. ಇದು ಧವನ್ ಜೊರಾವರ್ ನಿಂದ ಬೇರ್ಪಡಲು ಕಾರಣವಾಯಿತು.
ಭಾವನಾತ್ಮಕ ಕ್ಷಣವನ್ನು ಹಂಚಿಕೊಂಡಿದ್ದ ಧವನ್
ಧವನ್ ತಮ್ಮ ಮಗ ಜೊರಾವರ್ ಅವರನ್ನು ಕೊನೆಯ ಬಾರಿಗೆ ನೋಡಿದ ಬಗ್ಗೆ ತಮ್ಮ ಭಾವನೆಗಳನ್ನು ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಹಂಚಿಕೊಂಡಿದ್ದರು ಪೋಸ್ಟ್ನಲ್ಲಿ, ಅವರು ಜೊರಾವರ್ ಬಗ್ಗೆ ಪ್ರೀತಿ ವ್ಯಕ್ತಪಡಿಸಿದ್ದರು ಮತ್ತು ಅವನಿಂದ ಬೇರ್ಪಡುವ ಸವಾಲುಗಳನ್ನು ಒಪ್ಪಿಕೊಂಡಿದ್ದರು.
ಸಂವಹನ ಸವಾಲುಗಳ ಹೊರತಾಗಿಯೂ ಧವನ್ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದರು. ಈ ವೇಳೆ ಜೊರಾವರ್ ಗೆ ಧವನ್ ಹಲವು ಸಲಹೆಗಳನ್ನು ನೀಡಿದ್ದರು. ದಯೆ, ಔದಾರ್ಯ, ನಮ್ರತೆ ಮತ್ತು ಸಹಾನುಭೂತಿಯನ್ನು ಅಳವಡಿಸಿಕೊಳ್ಳಲು ಹೇಳಿದ್ದರು. ಜವಾಬ್ದಾರಿಯೊಂದಿಗೆ ಸಮತೋಲನ ಕಾಪಾಡಿಕೊಳ್ಳುವುದಕ್ಕೆ ಹೇಳಿದ್ದರು.