ಬೆಂಗಳೂರು: ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜಮಾಯಿಸಲಿರುವ 1.3 ಲಕ್ಷ ಪ್ರೇಕ್ಷಕರ ಮುಂದೆ ಆಡುವುದು 2023 ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಫೈನಲ್ನಲ್ಲಿ (ICC World Cup 2023) ಆಸ್ಟ್ರೇಲಿಯಾ ತಂಡದ ಮುಂದಿರುವ ದೊಡ್ಡ ಸವಾಲು. ನವೆಂಬರ್ 19 ರಂದು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಟ್ರೋಫಿಗಾಗಿ ಸೆಣಸಲಿದ್ದು, ಫೈನಲ್ ಪಂದ್ಯಕ್ಕಾಗಿ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ ಭರ್ತಿಯಾಗುವ ನಿರೀಕ್ಷೆಯಿದೆ. ಪ್ರವಾಸಿ ತಂಡಕ್ಕೆ ಈ ಸ್ಟೇಡಿಯಮ್ನಲ್ಲಿ ಅಷ್ಟೊಂದು ಬೆಂಬಲ ಸಿಗದು. ದೇಶದ ಕೆಲವೇ ಅಭಿಮಾನಿಗಳ ಉಪಸ್ಥಿತಿಯಲ್ಲಿ ಅವರು ಆಡಬೇಕಾಗಿದೆ.
ಶನಿವಾರ ನಡೆದ ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ, ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ (Pat Cummins) ಅಹಮದಾಬಾದ್ ಪ್ರೇಕ್ಷಕ ಬಗ್ಗೆ ತಮ್ಮ ತಂಡದ ನಿರೀಕ್ಷೆಗಳ ಬಗ್ಗೆ ಚರ್ಚಿಸಿದರು. ಭಾರತದ ವಿರುದ್ಧ ಪ್ರೇಕ್ಷಕರು ಏಕಪಕ್ಷೀಯವಾಗಿರುತ್ತಾರೆ ಎಂದು ಆಸ್ಟ್ರೇಲಿಯಾಕ್ಕೆ ತಿಳಿದಿದೆ. ಆದರೆ ಅವರನ್ನು ಮೌನಗೊಳಿಸುವುದೇ ನಮ್ಮ ಉದ್ದೇಶವಾಗಿದೆ ಎಂದು 30 ವರ್ಷದ ವೇಗಿ ಉಲ್ಲೇಖಿಸಿದ್ದಾರೆ.
“ನಾವು ಸಂದರ್ಭವನ್ನು ಒಪ್ಪಿಕೊಳ್ಳಲೇಬೇಕು ಎಂದು ನಾನು ಭಾವಿಸುತ್ತೇನೆ. ಜನಸಮೂಹವು ನಿಸ್ಸಂಶಯವಾಗಿ ತುಂಬಾ ಏಕಪಕ್ಷೀಯವಾಗಿರಲಿದೆ ಆದರೆ ನಮ್ಮ ಪಾಲಿಗೆ ಬೃಹತ್ ಸಂಖ್ಯೆ ಅಭಿಮಾನಿಗಳನ್ನು ಮೌನವಾಗಿಸುವುದೇ ಅತ್ಯಂತ ಖುಷಿಯ ವಿಚಾರ. ಅದಕ್ಕಿಂತ ಹೆಚ್ಚು ತೃಪ್ತಿಕರವಾದುದು ಇನ್ನು ಯಾವುದೂ ಇಲ್ಲ. ಅದು ನಾಳೆಯೂ ನಮ್ಮ ಗುರಿ ಅದೇ ಆಗಲಿದೆ ಎಂದು ಕಮಿನ್ಸ್ ಹೇಳಿದ್ದಾರೆ.
ನೀವು ಅದರ ಪ್ರತಿಯೊಂದು ವಿಷಯವನ್ನು ಒಪ್ಪಿಕೊಳ್ಳಬೇಕಾಗಿದೆ. ಫೈನಲ್ನ ಪ್ರತಿಯೊಂದು ಭಾಗವೂ ಸದ್ದು ಮಾಡುತ್ತದೆ. ಹೆಚ್ಚಿನ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ನಮಗೆ ತಿಳಿದಿದೆ. ಇಂಥ ಸಂದರ್ಭಕ್ಕೆ ನಾವು ಹೆದರಿ ಕುಳಿತುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಪರಿಸ್ಥಿತಿಗೆ ಸಿದ್ಧರಾಗಿರಬೇಕು. ಏನೇ ಘಟಿಸಿದರೂ ಅದು ಒಳ್ಳೆಯದು ಎಂದು ತಿಳಿದುಕೊಳ್ಳಬೇಕಾಗುತ್ತದೆ. ಎಂದು ಪ್ಯಾಟ್ ಕಮಿನ್ಸ್ ಐಸಿಸಿ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಹೇಳಿಕೊಂಡಿದ್ದಾರೆ.
ಕಮಿನ್ಸ್ ಭಾರತ ವಿರುದ್ಧದ ಗುಂಪು ಹಂತದ ಮುಖಾಮುಖಿಯನ್ನು ಸ್ಮರಿಸಿಕೊಂಡರು. ಪಂದ್ಯಾವಳಿಯಲ್ಲಿ ಮೆನ್ ಇನ್ ಬ್ಲೂ ತಂಡದ ಪ್ರಭಾವಶಾಲಿ ಪ್ರದರ್ಶನವನ್ನು ಒಪ್ಪಿಕೊಂಡರು. ಆ ನಿರ್ದಿಷ್ಟ ಪಂದ್ಯದಲ್ಲಿ ಆಸ್ಟ್ರೇಲಿಯಾ ಉತ್ತಮ ಪ್ರದರ್ಶನ ನೀಡಲಿಲ್ಲ ಎಂದು ಅವರು ಒಪ್ಪಿಕೊಂಡರು ಆದರೆ ವಿಶ್ವಕಪ್ಗೆ ಮುಂಚಿತವಾಗಿ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ತಂಡದ ಯಶಸ್ಸಿನ ಬಗ್ಗೆ ಅವರು ಹೇಳಿದರು.
ಇದನ್ನೂ ಓದಿ : ICC World Cup 2023 : ಪಿಚ್ ವರ್ತನೆ ಕುರಿತು ವಿವರ ನೀಡಿದ ಆಸ್ಟ್ರೇಲಿಯಾ ತಂಡದ ನಾಯಕ
ಭಾರತ ತಂಡ ಖಂಡಿತವಾಗಿಯೂ ಈ ವಿಶ್ವಕಪ್ನಲ್ಲಿ ಉತ್ತಮವಾಗಿ ಆಡಿದೆ. ನಮ್ಮೆರಡು ತಂಡಗಳ ಮೊದಲ ಪಂದ್ಯದಲ್ಲಿ ನಾವು ಉತ್ತಮ ಸ್ಕೋರ್ ಮಾಡಿದ್ದೇವೆ ಎಂದು ನಾನು ಭಾವಿಸುವುದಿಲ್ಲ. ಆದರೆ ಆ ಆಟದ ರೀತಿಯಲ್ಲೇ ಇರುವುದಿಲ್ಲ. ವರ್ಷದ ಆರಂಭದಲ್ಲಿ ನಾವು ಇಲ್ಲಿ ಏಕದಿನ ಸರಣಿಯನ್ನು ಗೆದ್ದಿದ್ದೇವೆ. ನಿಜವಾಗಿಯೂ ಭಾರತ ತಂಡದ ವಿರುದ್ಧ ನಾವು ಯಶಸ್ಸನ್ನು ಕಂಡ ಸಾಕಷ್ಟು ಕ್ಷಣಗಳಿವೆ, “ಎಂದು ಆಸೀಸ್ ನಾಯಕ ಹೇಳಿಕೊಂಡರು.
ಯಾರು ಬೇಕಾದರೂ ಆಡಬಹುದು: ಕಮಿನ್ಸ್
ನಿರ್ಣಾಯಕ ಪಂದ್ಯಕ್ಕೆ ಆಸ್ಟ್ರೇಲಿಯಾದ ಪ್ಲೇಯಿಂಗ್ ಇಲೆವೆನ್ ಬಗ್ಗೆ ಮಾತನಾಡಿದ ಕಮಿನ್ಸ್, ಆಲ್ರೌಂಡರ್ಗಳಾದ ಮಾರ್ಕಸ್ ಸ್ಟೊಯಿನಿಸ್ ಮತ್ತು ಕ್ಯಾಮರೂನ್ ಗ್ರೀನ್ ಅವರನ್ನು ಸೇರಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಶನಿವಾರ ರಾತ್ರಿಯ ವೇಳೆಗೆ ಅಂತಿಮ ನಿರ್ಧಾರವನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದರು. ಆಸ್ಟ್ರೇಲಿಯಾವು 15 ಸದಸ್ಯರ ಬಲವಾದ ತಂಡವನ್ನು ಹೊಂದಿದೆ. ತಂಡದಿಂದ ಯಾರಾದರೂ ಕಣಕ್ಕೆ ಇಳಿಯಬಹುದು ಮತ್ತು ಉತ್ತಮ ಪ್ರದರ್ಶನ ನೀಡಬಹುದು ಎಂದು ಅವರು ಒತ್ತಿ ಹೇಳಿದರು.
” ನಾವು ಸ್ಟೋಯ್ನಿಸ್ ಮತ್ತು ಗ್ರೀನ್ ಸೇರ್ಪಡೆಯನ್ನು ಪರಿಗಣಿಸುತ್ತೇವೆ. ನಾವು ಅದೃಷ್ಟವಂತರು, ನಾವು 15 ಸದಸ್ಯರ ತಂಡವನ್ನು ಹೊಂದಿದ್ದೇವೆ. ಅವರು ಯಾರು ಬೇಕಾದರೂ ಆಡಬಹುದು ಮತ್ತು ಉತ್ತಮ ಪ್ರದರ್ಶನ ನೀಡಬಹುದು ಎಂದು ನಾವು ಭಾವಿಸುತ್ತೇವೆ. ಅವರೆಲ್ಲರೂ ಆಡಲು ಸಿದ್ಧರಾಗಿದ್ದಾರೆ. ಆದ್ದರಿಂದ, ಇತರ ಪಂದ್ಯಗಳಂತೆ, ಕೋಚ್ಗಳು ಒಟ್ಟಿಗೆ ಸೇರಿ ಯೋಚಿಸುತ್ತಾರೆ ಅಥವಾ ಆಟವು ಹೇಗೆ ಸಾಗುತ್ತದೆ ಎಂದು ನಿರ್ಧಾರ ತೆಗೆದುಕೊಳ್ಳುತ್ತಾರೆ. ನಂತರ ಆಯ್ಕೆದಾರರು ನಿಸ್ಸಂಶಯವಾಗಿ ಅಂತಿಮ 11 ಜನರನ್ನು ಆಯ್ಕೆ ಮಾಡುತ್ತಾರೆ”ಎಂದು ಕಮಿನ್ಸ್ ಹೇಳಿಕೊಂಡಿದ್ದಾರೆ.