ಸಿಡ್ನಿ: ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧ ಸಾಗುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅಂಪೈರ್ ಲಿಫ್ಟ್‌ನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಇದರಿಂದ ಪಂದ್ಯ ಕೆಲ ಕಾಲ ತಡವಾಗಿ ಆರಂಭಗೊಂಡಿದೆ. ರಿಚರ್ಡ್ ಇಲಿಂಗ್‌ವರ್ತ್(Richard Illingworth) ಲಿಫ್ಟ್‌ನಲ್ಲಿ ಸಿಲುಕಿಕೊಂಡ ಅಂಪೈರ್ ಆಗಿದ್ದಾರೆ. ಈ ವಿಡಿಯೊ ವೈರಲ್(Viral Video) ಆಗಿದೆ.
ಮಳೆ, ಮಂದ ಬೆಳಕು ಹೀಗೆ ಹಲವು ಕಾರಣಗಳಿಂದ ಪಂದ್ಯ ವಿಳಂವವಾಗುವು ಸರ್ವೇ ಸಾಮಾನ್ಯ ಆದರೆ, ಅಂಪೈರ್ ಅವರಿಂದಾಗಿ ಪಂದ್ಯ ತಡವಾಗಿ ಆರಂಭಗೊಂಡಿದ್ದು ಇದೇ ಮೊದಲು. ಸುಮಾರು 5 ನಿಮಿಷ ತಡವಾಗಿ ಪಂದ್ಯ ಆರಂಭವಾಯಿತು.
A wild Richard Illingworth appeared! #AUSvPAK pic.twitter.com/7Rsqci4whn
— cricket.com.au (@cricketcomau) December 28, 2023
ಭೋಜನ ವಿರಾಮದ ಬಳಿಕ ಮತ್ತೆ ಕಾರ್ಯ ನಿರ್ವಹಿಸಲು ಮುಂದಾಗಿದ್ದ ಮೂರನೇ ಅಂಪೈರ್ ಇಲ್ಲಿಂಗ್ವರ್ತ್ ಲಿಫ್ಟ್‌ನಲ್ಲಿ ಸಿಲುಕಿಕೊಂಡರು. ತಾಂತ್ರಿಕ ಕಾರಣದಿಂದಾಗಿ ಲಿಫ್ಟ್ ಕೆಟ್ಟುಹೋಗಿತ್ತು. ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಲಿಫ್ಟ್ ಸರಿಪಡಿಸಿ ಇಲಿಂಗ್‌ವರ್ತ್ ಅವರನ್ನು ಹೊರಬರುವಂತೆ ಮಾಡಿದ್ದಾರೆ. ಲಿಫ್ಟ್ನಿಂದ ಹೊರ ಬಂದ ಬಳಿಕ ಅವರು ನಗುತ್ತಲೇ ಮೈದಾನದತ್ತ ಕೈ ಬೀಸಿದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 318 ರನ್ ಗಳಿಸಿ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಪಾಕ್ 264 ಸರ್ವಪತನ ಕಂಡಿತು. ದ್ವಿತೀಯ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ನಡೆಸುತ್ತಿರುವ ಆಸ್ಟ್ರೇಲಿಯಾ 6 ವಿಕೆಟ್ಗೆ 187 ರನ್ಗಳಿಸಿದೆ. 241 ಮುನ್ನಡೆ ಕಾಯ್ದುಕೊಂಡಿದೆ. ಇನ್ನೂ 2 ದಿನದ ಆಟ ಬಾಕಿ ಇದ್ದು ಆಸೀಸ್ ಗೆಲ್ಲುವ ಎಲ್ಲ ಸೂಚನೆಯೂ ಲಭ್ಯವಾಗಿದೆ. ಒಂದೊಮ್ಮೆ ಪಾಕಿಸ್ತಾನ ಈ ಪಂದ್ಯವನ್ನು ಡ್ರಾ ಮಾಡಿಕೊಂಡರೆ, ಆಗ ಪಾಕ್ ಹೋರಾಟವನ್ನು ಮೆಚ್ಚಲೇ ಬೇಕು.
ಪಾಕ್ ಆಟಗಾರನ ಕಳ್ಳಾಟ ಕಂಡು ಮೈದಾನದಲ್ಲೇ ಬೆಂಡೆತ್ತಿದ ಅಂಪೈರ್
ಪಾಕಿಸ್ತಾನದ ಕ್ರಿಕೆಟಿಗರು (Pakistan Cricket Team) ಮೈದಾನದಲ್ಲಿ ಮಾಡುವ ಅವಾಂತರಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಇಂಥ ಘಟನೆಗಳಿಗೆ ಛೀಮಾರಿ ಹಾಕಿಸಿಕೊಂಡ ಬಳಿಕವೂ ಅವರು ಪಾಠ ಕಲಿಯುವುದಿಲ್ಲ. ಮೊಸದಾಟ ಹಾಗೂ ಇನ್ನಿತರ ಅಕ್ರಮಗಳ ವಿಚಾರಕ್ಕೆ ಬಂದಾಗಲೂ ಆ ದೇಶದ ಕ್ರಿಕೆಟ್ ಕುಖ್ಯಾತಿ ಪಡೆದುಕೊಂಡಿದೆ. ಮೊದಲೇ ಪ್ರಾಮಾಣಿಕತೆ ಮತ್ತು ಪಾಕಿಸ್ತಾನದ ಕ್ರಿಕೆಟ್ಗೆ ಎಣ್ಣೆ- ಸೀಗೆಕಾಯಿ ಸಂಬಂಧವಾಗಿರುವ ಕಾರಣ ಅಲ್ಲಿನ ಆಟಗಾರರ ಬಗ್ಗೆ ಅಂಪೈರ್ಗಳು ಹಾಗೂ ರೆಫರಿಗಳಿಗೆ ಒಂದಿಷ್ಟು ಹೆಚ್ಚು ಅನುಮಾನ. ಅಂಥದ್ದೇ ಒಂದು ಅನುಮಾನಾಸ್ಪದ ಪ್ರಸಂಗ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯದ ವೇಳೆ ನಡೆದಿತ್ತು.
ಪರ್ತನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಆನ್ ಫೀಲ್ಡ್ ಅಂಪೈರ್ ಪಾಕಿಸ್ತಾನದ ಆಟಗಾರ ಅಗಾ ಸಲ್ಮಾನ್ ಅವರ ತೋಳುಗಳು ಮತ್ತು ಮಣಿಕಟ್ಟುಗಳನ್ನು ಪರೀಕ್ಷಿಸಿದ ಘಟನೆ ನಡೆದಿತ್ತು. ಅವರು ತೋಳಿನಲ್ಲಿ ಏನೂ ಬಚ್ಚಿಟ್ಟುಕೊಂಡಿದ್ದಾರೆ ಹಾಗೂ ಅದನ್ನು ಮೋಸದಾಟಕ್ಕೆ ಬಳಸುತ್ತಿದ್ದಾರೆ ಎಂಬುದೇ ಅಂಪೈರ್ ಅನುಮಾನವಾಗಿತ್ತು. ಬಳಿಕ ಅದು ರಿಸ್ಟ್ ಬ್ಯಾಂಡ್ ಎಂಬುದು ಗೊತ್ತಾಗಿತ್ತು.