Site icon Vistara News

Vinesh Phogat : ತೂಕ ಇಳಿಸಲು ಹೋಗಿ ಸಾವಿನ ಬಾಗಿಲು ತಟ್ಟಿದ್ದ ವಿನೇಶ್​ ಫೋಗಟ್​; ಭಯಾನಕ ಕ್ಷಣಗಳನ್ನು ವಿವರಿಸಿದ ಕೋಚ್​!

Vinesh Phogat

ಬೆಂಗಳೂರು: ಭಾರತದ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಅವರ ಪ್ಯಾರಿಸ್ ಒಲಿಂಪಿಕ್ಸ್​ ಕನಸು ನುಚ್ಚು ನೂರಾಗಿದೆ. ಅವರು ಸಲ್ಲಿಸಿದ್ದ ಮೇಲ್ಮನವಿಯೂ ತಿರಸ್ಕಾರಗೊಂಡಿದೆ. ಮಹಿಳೆಯರ 50 ಕೆ.ಜಿ ವಿಭಾಗದಲ್ಲಿ ಫೈನಲ್ ತಲುಪಿದ್ದ ಅವರು ಕೇವಲ 100 ಗ್ರಾಮ್ ಹೆಚ್ಚುವರಿ ತೂಕ ಹೊಂದಿದ್ದ ಕಾರಣ ಬೆಳ್ಳಿ ಪದಕವನ್ನೂ ಪಡೆಯದೇ ಅನರ್ಹತೆಗೆ ಒಳಗಾಗಿದ್ದರು. ಅವರ ಪಾಲಿಗೆ ವೃತ್ತಿ ಕುಸ್ತಿಯ ಅತ್ಯಂತ ಕಠಿಣ ದಿನಗಳು ಎಂಬುದರಲ್ಲಿ ಎರಡು ಮಾತಿಲ್ಲ. ಇಷ್ಟೆಲ್ಲ ಮುಗಿಯುವ ವೇಳೆ ಅವರ ತರಬೇತುದಾರ ವೊಲ್ರ್ ಅಕೋಸ್ ಭಯಾನಕ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ಫೈನಲ್​ ಮೊದಲು ತೂಕ ಇಳಿಸಲು ಮುಂದಾದ ಅವರು ಸಾವಿನ ಮನೆಯ ಕದ ತಟ್ಟಿ ಬಂದಿದ್ದರು ಎಂಬುದನ್ನು ಬೇಸರದಿಂದ ಹೇಳಿಕೊಂಡಿದ್ದಾರೆ.

100 ಗ್ರಾಮ್​​ ತೂಕ ಹೆಚ್ಚಿದ ಕಾರಣ ವಿನೇಶ್ ಫೋಗಟ್ ಅವರನ್ನು 50 ಕೆ.ಜಿ ಫೈನಲ್​ನಿಂದ ಅನರ್ಹಗೊಂಡ ಬಳಿಕ ಹಂಗೇರಿಯಾದ ಕೋಚ್ ಕೂಟ ಟೀಕೆಗಳನ್ನು ಎದುರಿಸಿದ್ದಾರೆ. ತೂಕ ಮತ್ತಿತರ ವಿಷಯ ಸ್ಪರ್ಧಿ ಮತ್ತು ಕೋಚ್​ಗೆ ಸಂಬಂಧಿಸಿದ್ದು ಎಂಬುದು ಟೀಕಾಕಾರರ ವಾದವಾಗಿದೆ. ಅದಕ್ಕೆ ಉತ್ತರ ನೀಡಿರುವ ಅವರು, ಮ್ಯಾಟ್​ಗೆ ಹತ್ತುವ ಮೊದಲು ವಿನೇಶ್​ ತಮಗೆ ಸಾಧ್ಯವಿರುವ ಎಲ್ಲವನ್ನೂ ಮಾಡಿದ್ದಾರೆ ಎಂಬುದನ್ನು ವಿವರಿಸಿದ್ದಾರೆ. ಎಲ್ಲಿತನಕ ಎಂದರೆ ತೂಕ ಇಳಿಸಲು ಹೋಗಿ ಸಾಯುವ ಹಂತಕ್ಕೆ ಹೋಗಿದ್ದರು ಎಂಬುದನ್ನು ಹೇಳಿದ್ದಾರೆ.

ಹಂಗರಿ ಭಾಷೆಯಲ್ಲಿ ಪೋಸ್ಟ್ ಬರೆದ ಅಕೋಸ್​

ಹಂಗೇರಿಯನ್ ಭಾಷೆಯಲ್ಲಿ ಫೇಸ್ಬುಕ್ ಪೋಸ್ಟ್​​ನಲ್ಲಿ ಅಕೋಸ್ ತನ್ನ ಮೊದಲ ಒಲಿಂಪಿಕ್ ಪದಕವನ್ನು ಪಡೆಯುವ ವಿನೇಶ್ ಫೋಗಟ್ ಅವರ ಬದ್ಧತೆಯನ್ನು ಎತ್ತಿ ತೋರಿಸಿದರು. ಸೆಮಿಫೈನಲ್ ಬಳಿಕ 2.7 ಕೆಜಿ ಹೆಚ್ಚುವರಿ ತೂಕ ಉಳಿದಿತ್ತು. ಒಂದು ಗಂಟೆ ಇಪ್ಪತ್ತು ನಿಮಿಷಗಳ ಕಾಲ ವ್ಯಾಯಾಮ ಮಾಡಿಸಿದೆ. ಆದರೆ 1.5 ಕೆ.ಜಿ ಇನ್ನೂ ಉಳಿದಿತ್ತು. , 50 ನಿಮಿಷಗಳ ದೇಹ ದಂಡನೆ ಬಳಿಕ ಆಕೆಯ ದೇಹ ಸಂಪೂರ್ಣವಾಗಿ ನೀರಿನಂಶ ಕೊರತೆಯಿಂದ ಸೊರಗಿತು. ಮಧ್ಯರಾತ್ರಿಯಿಂದ ಬೆಳಿಗ್ಗೆ 5:30 ರವರೆಗೆ, ಅವರು ವಿವಿಧ ಕಾರ್ಡಿಯೋ ಯಂತ್ರಗಳು ಮತ್ತು ಕುಸ್ತಿ ಚಲನೆಗಳಲ್ಲಿ ಕೆಲಸ ಮಾಡಿದರು. ಒಂದೇ ಬಾರಿಗೆ ಸುಮಾರು ಮುಕ್ಕಾಲು ಗಂಟೆಗಳ ಕಾಲ ಶ್ರಮವಹಿಸಿದು. ಎರಡು-ಮೂರು ನಿಮಿಷಗಳ ವಿಶ್ರಾಂತಿಯೊಂದಿಗೆ ನಂತರ ಅವಳು ತೂಕ ಇಳಿಸಲು ಯತ್ನಿಸಿದರು. ಒಂದು ಹಂತದಲ್ಲಿ ಕುಸಿದುಬಿದ್ದರು. ಹೇಗೋ ನಾವು ಆಕೆಯನ್ನು ಎಬ್ಬಿಸಿದೆವು. ಆ ಬಳಿಕ ಏನು ಮಾಡಲು ಸಾಧ್ಯವಾಗಲಿಲ್ಲ. ಯಾಕೆಂದರೆ ನನ್ನ ಹೇಳಿಕೆಗಳು ನಾಟಕೀಯವಲ್ಲ. ಮುಂದೇನಾದರೂ ತೂಕ ಇಳಿಸಲು ಯತ್ನಿಸಿದ್ದರೆ ಆಕೆ ಸತ್ತು ಹೋಗುತ್ತಿದ್ದಳು ಎಂದು ಕೋಚ್ ಬರೆದಿದ್ದಾರೆ.

ಇದನ್ನೂ ಓದಿ: Jasprit Bumrah : ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ ಪಂದ್ಯಕ್ಕೂ ಜಸ್​ಪ್ರಿತ್​ ಬುಮ್ರಾ ಅಲಭ್ಯ?

ಅನರ್ಹಗೊಂಡ ನಂತರ ವಿನೇಶ್ ಫೋಗಟ್ ಕಣ್ಣೀರು ಹಾಕುತ್ತಿದ್ದರೂ ಧೈರ್ಯ ಕಳೆದುಕೊಂಡಿರಲಿಲ್ಲ ಎಂದು ಕೋಚ್ ಹೇಳಿದ್ದಾರೆ. ವಿನೇಶ್ ಫೋಗಟ್ ನಡೆಸಿದ ಮಾತುಕತೆಯನ್ನು ಕೋಚ್​ ಬರೆದುಕೊಂಡಿದ್ದಾರೆ. ಕೋಚ್, ದುಃಖಪಡಬೇಡಿ ಏಕೆಂದರೆ ನಾನು ಕಠಿಣ ಪರಿಸ್ಥಿತಿಯಲ್ಲಿ ಇದ್ದರೂ ಹೆಚ್ಚುವರಿ ಶಕ್ತಿ ತುಂಬಿಕೊಳ್ಳುತ್ತೇನೆ. ನಾನು ವಿಶ್ವದ ಅತ್ಯುತ್ತಮ ಮಹಿಳಾ ಕುಸ್ತಿಪಟುವನ್ನು (ಜಪಾನ್ನ ಯುಯಿ ಸುಸಾಕಿ) ಸೋಲಿಸಿದ್ದೇನೆ. ನಾನು ನನ್ನ ಗುರಿಯನ್ನು ಸಾಧಿಸಿದೆ. ನಾನು ವಿಶ್ವದ ಅತ್ಯುತ್ತಮರಲ್ಲಿ ಒಬ್ಬಳೆಂದು ಸಾಬೀತುಪಡಿಸಿದ್ದೇನೆ. ಆಟದ ಯೋಜನೆಗಳು ಕೆಲಸ ಮಾಡುತ್ತವೆ ಎಂದು ನಾವು ಸಾಬೀತುಪಡಿಸಿದ್ದೇವೆ. ಪದಕಗಳು, ವೇದಿಕೆಗಳು ಕೇವಲ ವಸ್ತುಗಳು. ಪ್ರದರ್ಶನವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ’ ಎಂದು ವಿನೇಶ್​ ಹೇಳಿದ್ದನ್ನು ಅಕೋಸ್ ಅಕ್ಷರ ರೂಪಕ್ಕೆ ಇಳಿಸಿದ್ದಾರೆ.

ಒಲಿಂಪಿಕ್ ಪದಕಕ್ಕೆ ವಿನೇಶ್ ಫೋಗಟ್ ಎಷ್ಟು ಬೆಲೆ ನೀಡುತ್ತಾರೆ ಎಂಬುದನ್ನು ಅವರು ಇದೇ ವೇಳೆ ಬರೆದುಕೊಂಡಿದ್ದಾರೆ. ಕಳೆದ ವರ್ಷ ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪೂನಿಯಾ ಮತ್ತು ಸಾಕ್ಷಿ ಮಲಿಕ್ ಅವರೊಂದಿಗೆ ಹರಿದ್ವಾರದಲ್ಲಿ ತಮ್ಮ ಪದಕಗಳನ್ನು ಗಂಗಾ ನದಿಯಲ್ಲಿ ಬಿಡಲು ಮುಂದಾಗಿದ್ದನ್ನು ಅವರು ಸ್ಮರಿಸಿಕೊಂಡಿದ್ದಾರೆ. ಒಲಿಂಪಿಕ್ ಪದಕಗಳನ್ನು ನದಿಗೆ ಎಸೆಯಬೇಡಿ ಎಂದು ಸಾಕ್ಷಿ ಮತ್ತು ಬಜರಂಗ್ ಗೆ ವಿನೇಶ್​ ತಿಳೀ ಹೇಳಿದ್ದನ್ನೂ ಅವರು ಬರೆದಿದ್ದಾರೆ.

ವಿನೇಶ್ ಫೋಗಟ್ ಅವರ ಅನರ್ಹತೆಯ ಹೊರತಾಗಿಯೂ, ಅವರ ಪಂದ್ಯಗಳ ಮೊದಲ ದಿನದಂದು ಅವರು ಏನು ಸಾಧಿಸಿದರು ಎಂಬುದನ್ನು ಜಗತ್ತು ನೆನಪಿಸಿಕೊಳ್ಳುತ್ತದೆ ಕೋಚ್ ಬರೆದಿದ್ದಾರೆ. ನಮ್ಮ ಕೆಲಸದಿಂದಾಗಿ ವಿಶ್ವದ ಅತ್ಯುತ್ತಮ ಮಹಿಳಾ ಕುಸ್ತಿಪಟುವನ್ನು ಸೋಲಿಸಲು ಮತ್ತು ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತೀಯ ಮಹಿಳಾ ಕುಸ್ತಿಪಟುವನ್ನು ಒಲಿಂಪಿಕ್ ಫೈನಲ್ಸ್​​ಗೆ ಕರೆದೊಯ್ಯಲು ಸಾಧ್ಯವಾಗಿದೆ ಎಂದು ಅಕೋಸ್ ಬರೆದುಕೊಂಡಿದ್ದಾರೆ.

Exit mobile version