ಬೆಂಗಳೂರು: ಪಾಕಿಸ್ತಾನ ಹಾಗೂ ಭಾರತ (ind vs pak) ಯಾವುದೇ ಕ್ರೀಡೆಯಲ್ಲಿ ಸಾಂಪ್ರದಾಯಿಕ ಎದುರಾಳಿಗಳು. ಭಾರತೀಯ ಕ್ರೀಡಾಭಿಮಾನಿಗಳು ಪಾಕಿಸ್ತಾನ ತಂಡವನ್ನು ಭಾರತ ಮಣಿಸಿದಾಗ ಪ್ರಶಸ್ತಿ ಗೆದ್ದದ್ದಕ್ಕಿಂತ ಹೆಚ್ಚು ಸಂಭ್ರಮಪಡುತ್ತಾರೆ. ಸ್ವಾತಂತ್ರ್ಯ ಬಂದಾಗಿನಿಂದ ನಡೆದ ನೂರಾರು ಘಟನೆಗಳು ಈ ಮನಸ್ಥಿತಿಗೆ ಕಾರಣ. ಕ್ರೀಡಾಪಟುಗಳಿಗೆ ಮತ್ತು ಅಭಿಮಾನಿಗಳಿಗೆ ಯಾವುದೇ ಎದುರಾಳಿ ತಂಡದ ವಿರುದ್ದ ಗೆದ್ದರೂ ಸಂತಸವೇ. ಆದರೆ, ಪಾಕ್ ವಿರುದ್ದ ಅದು ನೂರ್ಮಡಿಯಾಗುತ್ತದೆ. ಆದರೆ, ಒಂದೇ ದಿನ ಪಾಕಿಸ್ತಾನದ ಮೂರು ಬೇರೆ ಬೇರೆ ಕ್ರೀಡಾ ತಂಡಗಳನ್ನು ಭಾರತದ ಕ್ರೀಡಾಪಟುಗಳು ಸೋಲಿಸಿದರೆ ಅದರ ಸಂತೋಷವನ್ನು ಅನುಭವಿಸಲೇಬೇಕಲ್ಲವೇ? ಅಂಥದ್ದೊಂದು ಸಂದರ್ಭ ಶನಿವಾರ (ಸೆಪ್ಟೆಂಬರ್ 30ರಂದು) ಸೃಷ್ಟಿಯಾಗಿದೆ. ಹೀಗಾಗಿ ಭಾರತದ ಕ್ರೀಡಾಭಿಮಾನಿಗಳು ಇದು ಶುಭ ದಿನವೇ ಸರಿ.
ಸ್ಕ್ವಾಷ್ನಲ್ಲಿ ವಿಜಯ, ಚಿನ್ನದ ಪದಕ
ಏಷ್ಯನ್ ಗೇಮ್ಸ್ ಸ್ಕ್ವಾಷ್ ಫೈನಲ್ನಲ್ಲಿ ಭಾರತದ ಪುರುಷರ ತಂಡವು ಪಾಕಿಸ್ತಾನವನ್ನು 2-1 ಅಂತರದಿಂದ ಸೋಲಿಸಿತು. ಅಭಯ್ ಸಿಂಗ್, ಸೌರವ್ ಘೋಷಾಲ್ ಮತ್ತು ಮಹೇಶ್ ಮಂಗಾಂವ್ಕರ್ ಅವರು ಚಿನ್ನದ ಪದಕವನ್ನು ಗೆದ್ದಿದ್ದಾರೆ. ಈ ಮೂಳಕ ಗಡಿಯಾಚೆಗಿನ ಅಭಿಮಾನಿಗಳನ್ನು ಸುಮ್ಮನಾಗಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಮೊದಲ ಪಂದ್ಯದಲ್ಲಿ ಮಹೇಶ್ ಅವರು ನಾಸಿರ್ ಇಕ್ಬಾಲ್ ವಿರುದ್ಧ 3-0 (11-8, 11-3, 11-2) ಸೆಟ್ ಗಳಿಂದ ಸುಲಭವಾಗಿ ಸೋತರು.
ಎರಡನೇ ಪಂದ್ಯದಲ್ಲಿ ಸೌರವ್ ಘೋಷಾಲ್ ನಿರೀಕ್ಷೆಯಂತೆ ಮುಹಮ್ಮದ್ ಅಸಿಮ್ ಖಾನ್ ವಿರುದ್ಧ ಜಯ ಗಳಿಸಿದರು. ಭಾರತದ ಆಟಗಾರ 3-0 (11-5, 11-1, 11-3) ಸೆಟ್ ಗಳಿಂದ ಗೆದ್ದರು. ಘೋಷಾಲ್ ಅವರು ಅಂಗಳದ ಉದ್ದಕ್ಕೂ ವೇಗವಾಗಿ ಚಲಿಸಿದರು ಮತ್ತು ಅವರು ಇನ್ನೂ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು ಎಂಬುದನ್ನು ಸಾಬೀತುಪಡಿಸಿದರು. ಆದರೆ ಅಭಯ್ ಸಿಂಗ್ ಮತ್ತು ಜಮಾನ್ ಪಂದ್ಯದ ರೋಚಕವಾಗಿತ್ತು. ಇದು 65 ನಿಮಿಷಗಳ ಸಂಪೂರ್ಣ ಅವಧಿಯವರೆಗೆ ಸಾಗಿತು. ಪಂದ್ಯವು ನಾಟಕೀಯತೆಯಿಂದ ಕೂಡಿತ್ತು. ಏಕೆಂದರೆ ಎರಡೂ ದೇಶಗಳ ಆಟಗಾರರು ಅಕ್ಷರಶಃ ಕೆಲವು ಬಾರಿ ಪರಸ್ಪರ ಮುಖಾಮುಖಿಯಾಗಿದ್ದರು. ಆದರೆ ಹೆಚ್ಚುತ್ತಿರುವ ಒತ್ತಡದಿಂದ ಭಾರತ ತಂಡವು ವಿಚಲಿತರಾಗಲಿಲ್ಲ ಮತ್ತು ಅಂತಿಮವಾಗಿ ಪದಕ ತನ್ನದಾಗಿಸಿಕೊಂಡಿತು.
ಏಷ್ಯನ್ ಗೇಮ್ಸ್ ಪುರುಷರ ಹಾಕಿಯಲ್ಲಿ ಪಾಕಿಸ್ತಾನದೊಂದಿಗೆ ಭಾರತದ ಚೆಲ್ಲಾಟ
HISTORY: India 10 Pak 2
— stick2hockey.com (@indianhockey) September 30, 2023
1. Max goals in any India-Pak match
2. Highest score by India against Pak
3. Highest margin of victory for India against Pak (8 goals, previous best was 6 goals). pic.twitter.com/B9t1kfQMpV
ಈ ಗೆಲುವು ಭಾರತೀಯರಿಗೆ ಎಲ್ಲಕ್ಕಿಂತ ಸುಲಭವಾಗಿತ್ತು. ವಿಶ್ವ ರ್ಯಾಂಕಿಂಗ್ನಲ್ಲಿ 3ನೇ ಸ್ಥಾನದಲ್ಲಿರುವ ಭಾರತ ವಿರುದ್ಧ ಪಾಕಿಸ್ತಾನ 10-2 ಅಂತರದಲ್ಲಿ ಹೀನಾಯ ಸೋಲು ಕಂಡಿತು. ಹರ್ಮನ್ ಪ್ರೀತ್ ಸಿಂಗ್ (11ನೇ ನಿಮಿಷ, 17ನೇ ನಿಮಿಷ, 33ನೇ ನಿಮಿಷ, 34ನೇ ನಿಮಿಷ) ಗೋಲು ಗಳಿಸಿದರೆ, ವರುಣ್ ಕುಮಾರ್ (41, 54ನೇ ನಿಮಿಷ) ಗೋಲು ಗಳಿಸಿದರು. ಭಾರತದ ಪರ ಮನ್ದೀಪ್ ಸಿಂಗ್ (8ನೇ ನಿ.), ಸುಮಿತ್ (30ನೇ ನಿ.), ಶಂಶೇರ್ ಸಿಂಗ್ (46ನೇ ನಿ.) ಮತ್ತು ಲಲಿತ್ ಕುಮಾರ್ ಉಪಾಧ್ಯಾಯ (49ನೇ ನಿ.) ತಲಾ ಒಂದು ಗೋಲು ಗಳಿಸಿದರು. ಕುತೂಹಲಕಾರಿ ಸಂಗತಿಯೆಂದರೆ, ಇದು ಪಾಕಿಸ್ತಾನ ಹಾಕಿ ತಂಡದ ವಿರುದ್ಧ ಭಾರತದ ಇದುವರೆಗಿನ ಅತಿದೊಡ್ಡ ಗೆಲುವಾಗಿದೆ. ಅಷ್ಟೇ ಅಲ್ಲ, ಆಟದಲ್ಲಿ ಇತರ ದಾಖಲೆಗಳನ್ನು ಸಹ ಮುರಿಯಲಾಯಿತು. ಇದು ಭಾರತ ಮತ್ತು ಪಾಕಿಸ್ತಾನ ನಡುವಿನ ಯಾವುದೇ ಪಂದ್ಯದಲ್ಲಿ ಗಳಿಸಿದ ಗರಿಷ್ಠ ಗೋಲುಗಳ ಸಂಖ್ಯೆ. ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ಭಾರತ ಗಳಿಸಿದ ಅತಿ ಹೆಚ್ಚು ಗೋಲುಗಳಾಗಿವೆ.
ಸ್ಯಾಫ್ ಕಪ್ ಫೈನಲ್ನಲ್ಲಿ ಪಾಕ್ ಮಣಿಸಿದ ಭಾರತ
And the coach goes flying 🆙 😅#PAKIND ⚔️ #BlueColts 🐯 #U19SAFF2023 🏆 #IndianFootball ⚽ pic.twitter.com/mFPLnMB2Wo
— Indian Football Team (@IndianFootball) September 30, 2023
ದಶರಥ್ ರಂಗಶಾಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಎಸ್ಎಎಫ್ಎಫ್ ಅಂಡರ್ -19 ಫುಟ್ಬಾಲ್ ಚಾಂಪಿಯನ್ ಫೈನಲ್ನಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಭಾರತದ ಅಂಡರ್ -19 ತಂಡವೂ ಸಂಭ್ರಮಿಸಿತು. ಸಾಂಪ್ರದಾಯಿಕ ಎದುರಾಳಿ ವಿರುದ್ಧ ಭಾರತ 3-0 ಅಂತರದ ಗೆಲುವು ಸಾಧಿಸಿತು. ಎದುರಾಳಿಗೆ ಕೊಂಚವೂ ಅವಕಾಶ ನೀಡದೇ ಸುಲಭ ಜಯ ಕಂಡಿತು.
ಇದನ್ನೂ ಓದಿ : ICC World Cup 2023 : ಝಾಕಾ ಅಶ್ರಫ್ ಯೂ ಟರ್ನ್, ಭಾರತ ವೈರಿ ರಾಷ್ಟ್ರವಲ್ಲ, ಪ್ರತಿಸ್ಪರ್ಧಿ ಎಂದು ಸಮಜಾಯಿಷಿ
ಭಾರತದ ಪರ ತಂಡದ ಸ್ಟಾರ್ ಆಟಗಾರ ಮಂಗ್ಲಾಂಗ್ಥಾಂಗ್ ಕಿಪ್ಗೆನ್ ತಮ್ಮ ಮೊದಲ ಗೋಲನ್ನು ಗಳಿಸಿದರು. ಬಳಿಕ 85ನೇ ನಿಮಿಷದಲ್ಲಿ ಫ್ರೀ ಕಿಕ್ ಮೂಲಕ ಮುಂದಿನ ಗೋಲು ಗಳಿಸಿದರು. ಕೊನೆಯ ಗೋಲಿನಲ್ಲಿಯೂ ಅವರು ಗ್ವಾಗ್ಮ್ಸರ್ ಗೋಯರಿಗೆ ಸಹಾಯ ಮಾಡಿದರು