Site icon Vistara News

Tim Southee : ಟಿ20 ಕ್ರಿಕೆಟ್​ನಲ್ಲಿ ಅಸಾಮಾನ್ಯ ಸಾಧನೆ ಮಾಡಿದ ನ್ಯೂಜಿಲ್ಯಾಂಡ್ ಬೌಲರ್​

Tim Southee

ಬೆಂಗಳೂರು: ನ್ಯೂಜಿಲೆಂಡ್​ ಕ್ರಿಕೆಟ್​ ತಂಡದ ಅನುಭವಿ ವೇಗಿ ಟಿಮ್ ಸೌಥಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​​ನಲ್ಲಿ 150 ವಿಕೆಟ್​ಗಳ ಮೈಲಿಗಲ್ಲನ್ನು ತಲುಪಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಕ್ಲೆಂಡ್​ನ ಈಡನ್ ಪಾರ್ಕ್​ನಲ್ಲಿ ಶುಕ್ರವಾರ ನಡೆದ ಪಾಕಿಸ್ತಾನ ವಿರುದ್ಧದ ಟಿ20 ಸರಣಿಯ ಆರಂಭಿಕ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಚೆಂಡಿನೊಂದಿಗೆ ಅಬ್ಬರದ ಪ್ರದರ್ಶನ ನೀಡಿದ ಅವರು ಈ ಸಾಧನೆ ಮಾಡಿದರು. ಅವರು ತಮ್ಮ ಸ್ಪೆಲ್​ನಲ್ಲಿ 25 ರನ್​ ನೀಡಿ 4 ವಿಕೆಟ್​ ಪಡೆದು ಮಿಂಚಿದರು.

ಪಾಕಿಸ್ತಾನದ ರನ್ ಚೇಸಿಂಗ್​ನ 18ನೇ ಓವರ್​ನಲ್ಲಿ ಅವರು ಪಂದ್ಯದಲ್ಲಿ ತಮ್ಮ ಮೂರನೇ ವಿಕೆಟ್​ ಪಡೆದು ಈ ಮೈಲುಗಲ್ಲು ದಾಟಿದರು. ಅಬ್ಬಾಸ್ ಅಫ್ರಿದಿ ವಿಕೆಟ್​ ರೂಪದಲ್ಲಿ ಅವರು ಈ ದಾಖಲೆ ಮಾಡಿದರು. ಈ ವಿಕೆಟ್ ಟಿ20 ಪಂದ್ಯಗಳಲ್ಲಿ ಅವರ 150 ನೇ ವಿಕೆಟ್ ಆಗಿದ್ದು, ಒಟ್ಟಾರೆ ಅವರ ಖಾತೆಯಲ್ಲಿ 151 ವಿಕೆಟ್​ಗಳಿವೆ. 35ರ ಹರೆಯದ ಹ್ಯಾರಿಸ್ ರೌಫ್ ಅವರನ್ನು ಅದೇ ಓವರ್​ನಲ್ಲಿ ಔಟ್ ಮಾಡುವ ಮೂಲಕ ಪಾಕಿಸ್ತಾನದ ಬ್ಯಾಟಿಂಗ್ ಬಲವನ್ನು ಕುಗ್ಗಿಸಿದರು. ಈ ಮೂಲಕವೂ ಅವರು ಪಂದ್ಯದಲ್ಲಿ ಮಿಂಚಿದರು.

ಸೌಥಿಯ ಈ ಅದ್ಭುತ ಪ್ರದರ್ಶನದ ನೆರವಿನಿಂದ ಕಿವೀಸ್ ಬಳಗ ಪಾಕಿಸ್ತಾನವನ್ನು 180 ರನ್ ಗಳಿಗೆ ಆಲೌಟ್ ಮಾಡಿತು. ಈ ಪಂದ್ಯದ ಆರಂಭದಲ್ಲಿ ಸೌಥಿ, ಅಪಾಯಕಾರಿ ಬ್ಯಾಟರ್​ಗಳಾದ ಮೊಹಮ್ಮದ್ ರಿಜ್ವಾನ್ ಮತ್ತು ಇಫ್ತಿಖರ್ ಅಹ್ಮದ್ ಅವರನ್ನು ಪೆವಿಲಿಯನ್​ಗೆ ಕಳುಹಿಸಿದ್ದರು. ಸೌಥಿ 118 ಟಿ20 ಪಂದ್ಯಗಳಲ್ಲಿ 8.12ರ ಎಕಾನಮಿ ರೇಟ್​ನಲ್ಲಿ 151 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಈ ಸಾಧನೆಯೊಂದಿಗೆ ಅವರು ಈಗ ಟಿ20 ಐ ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಶಕೀಬ್ ಅಲ್ ಹಸನ್ ಮತ್ತು ರಶೀದ್ ಖಾನ್ ಅವರಿಗಿಂತ ಹಿಂದಿದ್ದಾರೆ.

ಇದನ್ನೂ ಓದಿ : T20 World Cup : ಟಿ20 ವಿಶ್ವಕಪ್ ನಲ್ಲಿ ಭಾರತದ ವಿಕೆಟ್ ಕೀಪರ್ ಯಾರಾಗಬಹುದು?

2010 ರಲ್ಲಿ ಪಾಕಿಸ್ತಾನದ ಬ್ಯಾಟರ್​ಗಳಾದ ಯೂನಿಸ್ ಖಾನ್, ಮೊಹಮ್ಮದ್ ಹಫೀಜ್ ಮತ್ತು ಉಮರ್ ಅಕ್ಮಲ್ ಅವರ ವಿಕೆಟ್​ಗಳನ್ನು ಪಡೆಇದ್ದ ಸೌಥಿ ಟಿ 20ಐ ಹ್ಯಾಟ್ರಿಕ್ ಪಡೆದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ನ್ಯೂಜಿಲೆಂಡ್ ವೇಗಿ 374 ವಿಕೆಟ್​ಗಳೊಂದಿಗೆ ಆ ತಂಡದ ಎರಡನೇ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ ಮತ್ತು ಏಕದಿನ ಪಂದ್ಯಗಳಲ್ಲಿ 221 ವಿಕೆಟ್​ಗಳೊಂದಿಗೆ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ ಒಟ್ಟಾರೆಯಾಗಿ, ಸೌಥಿ ನ್ಯೂಜಿಲೆಂಡ್ ಪರ 375 ಪಂದ್ಯಗಳಲ್ಲಿ 746 ವಿಕೆಟ್​ಗಳನ್ನು ಪಡೆದಿದ್ದಾರೆ, ಇದರಲ್ಲಿ ಇಪ್ಪತ್ತೈದು ಬಾರಿ ಐದು ವಿಕೆಟ್ ಮತ್ತು ಒಂದು ಬಾರಿ ಹತ್ತು ವಿಕೆಟ್ ಸೇರಿವೆ.

ನ್ಯೂಜಿಲೆಂಡ್ ತಂಡಕ್ಕೆ ಭರ್ಜರಿ ಜಯ

ಪಾಕಿಸ್ತಾನ ವಿರುದ್ಧದ ಮೊದಲ ಟಿ 20 ಪಂದ್ಯದಲ್ಲಿ, ಸೌಥಿ ಅವರ ಅಬ್ಬರದ ಬೌಲಿಂಗ್ ಪ್ರದರ್ಶನವು ನ್ಯೂಜಿಲೆಂಡ್ ತಂಡಕ್ಕೆ 46 ರನ್​ಗಳ ಗೆಲುವು ತಂದುಕೊಟ್ಟಿದೆ. ಅವರ ಪ್ರಯತ್ನಗಳು ಮತ್ತು ಆಡಮ್ ಮಿಲ್ನೆ ಮತ್ತು ಬೆನ್ ಸಿಯರ್ಸ್ ಅವರ ಬೌಲಿಂಗ್​ ಕೊಡುಗೆಗಳೊಂದಿಗೆ ಪಾಕಿಸ್ತಾನವನ್ನು 180 ರನ್​ಗಳಿಗೆ ಸೀಮಿತಗೊಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ನಿಗದಿತ 20 ಓವರ್​ಗಳಲ್ಲಿ 226 ರನ್​​ಗಳ ಬೃಹತ್ ಮೊತ್ತವನ್ನು ದಾಖಲಿಸಿತು. ಡ್ಯಾರಿಲ್ ಮಿಚೆಲ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ಆಕರ್ಷಕ ಅರ್ಧಶತಕಗಳೊಂದಿಗೆ ತಂಡಕ್ಕೆ ಮುನ್ನಡೆ ತಂದರು. ಮಿಚೆಲ್ 27 ಎಸೆತಗಳಲ್ಲಿ 61 ರನ್ ಬಾರಿಸಿದ್ದರು.

Exit mobile version