ನವದೆಹಲಿ: 6 ಬಾರಿಯ ವಿಶ್ವ ಚಾಂಪಿಯನ್ (6-time world champion) ಮತ್ತು 2012ರ ಒಲಿಂಪಿಕ್ ಪದಕ ವಿಜೇತೆ (Olympic medallist) ಮಾಂಗ್ಟೆ ಚುಂಗ್ನೀಜಾಂಗ್ ಮೇರಿ ಕೋಮ್ (M C Mary Kom) ಅವರು ಬಾಕ್ಸಿಂಗ್‌ಗೆ ಬುಧವಾರ ವಿದಾಯ ಹೇಳಿದ್ದಾರೆ(Retire from Boxing). ಇಂಟರ್ನ್ಯಾಷನಲ್ ಬಾಕ್ಸಿಂಗ್ ಅಸೋಸಿಯೇಷನ್ (IBA) ನಿಯಮಗಳು ಪುರುಷ ಮತ್ತು ಮಹಿಳಾ ಬಾಕ್ಸರ್‌ಗಳು 40 ವರ್ಷ ವಯಸ್ಸಿನವರೆಗೆ ಮಾತ್ರ ಎಲೈಟ್ ಲೇವಲ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುತ್ತವೆ. ಹಾಗಾಗಿ, ಮೇರಿ ಕೋಮ್ ತಮ್ಮ ಬಾಕ್ಸಿಂಗ್ ಕೈಗವಸುಗಳಿಗೆ ರೆಸ್ಟ್ ನೀಡಿದ್ದಾರೆ.
41 ವರ್ಷದ ಮೇರಿ ಕೋಮ್ ಅವರು ಈಗಲೂ ತಮ್ಮಲ್ಲಿ ಬಾಕ್ಸಿಂಗ್ ಹಸಿವು ತಣಿದಿಲ್ಲ. ಎಲೈಟ್ ಲೇವಲ್‌ನಲ್ಲಿ ಆಡುವಷ್ಟು ಸಾಮರ್ಥ್ಯವಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ದುರದೃಷ್ಟವಶಾತ್ ವಯಸ್ಸಿನ ಮಿತಿ ಮುಗಿದಿರುವುದರಿಂದ ನಾನು ಯಾವುದೇ ಸ್ಪರ್ಧೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ನಾನು ಹೆಚ್ಚು ಆಡಲು ಬಯಸುತ್ತೇನೆ. ಆದರೆ ನಾನು ಬಲವಂತವಾಗಿ ಬಾಕ್ಸಿಂಗ್ ತೊರೆಯುತ್ತಿದ್ದೇನೆ (ವಯಸ್ಸಿನ ಮಿತಿಯಿಂದಾಗಿ). ನಾನು ನಿವೃತ್ತಿಯನ್ನು ಹೊಂದಲೇಬೇಕು. ನನ್ನ ಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ ಎಂದು ಹೇಳಿದರು.
Happy Retirement Legend "Mary Kom"
— Satya Prakash (@Satya_Prakash08) January 24, 2024
Inspiration and role model for many female athletes.
You made India and Indians proud always.
6 World Championship 🥇 medals.
2012 Olympic 🥉 medal is still encourage us.
Wishng you the best for your life @MangteC .#MaryKom pic.twitter.com/3sDDE5byxO
ಬಾಕ್ಸಿಂಗ್ ಇತಿಹಾಸದಲ್ಲಿ ಆರು ವಿಶ್ವ ಪ್ರಶಸ್ತಿಗಳನ್ನು ಗೆದ್ದ ಮೊದಲ ಮಹಿಳಾ ಬಾಕ್ಸರ್ ಮೇರಿ. ಐದು ಬಾರಿ ಏಷ್ಯನ್ ಚಾಂಪಿಯನ್ ಆಗಿರುವ ಅವರು 2014 ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಪಡೆದ ಭಾರತದ ಮೊದಲ ಮಹಿಳಾ ಬಾಕ್ಸರ್. ಅನುಭವಿ ಪ್ಯೂಜಿಲಿಸ್ಟ್ ಲಂಡನ್ 2012 ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. 18ನೇ ವಯಸ್ಸಿನಲ್ಲಿ ಪೆನ್ಸಿಲ್ವೇನಿಯಾದ ಸ್ಕ್ರಂಟನ್‌ನಲ್ಲಿ ನಡೆದ ಉದ್ಘಾಟನಾ ವಿಶ್ವ ಕೂಟದಲ್ಲಿ ಮೇರಿ ಕೋಮ್ ಎಂಬ ಮಹಿಳಾ ಬಾಕ್ಸರ್ ಪರಿಚಯ ಇಡೀ ವಿಶ್ವಕ್ಕೆ ಆಯಿತು.
ಮೇರಿ ಕೋಮ್ ಅವರು AIBA ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯರು ಎಂಬ ಖ್ಯಾತಿ ಗಳಿಸಿದ್ದಾರೆ. 2005, 2006, 2008 ಮತ್ತು 2010 ಆವೃತ್ತಿಗಳಲ್ಲಿ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಗೆದ್ದರು. 2008 ವರ್ಲ್ಡ್ ಬಾಕ್ಸಿಂಗ್ ಪ್ರಶಸ್ತಿಯನ್ನು ಗೆದ್ದ ನಂತರ ಮೇರಿ ಅವರು ಅವಳಿ ಮಕ್ಕಳ ತಾಯಿಯಾದರು. ಹಾಗಾಗಿ, ಅವರ ಕೆಲವು ಕಾಲ ಸ್ಪರ್ಧಾತ್ಮಕ ಬಾಕ್ಸಿಂಗ್‌ನಿಂದ ವಿರಾಮ ತೆಗೆದುಕೊಂಡರು.
2012 ರ ಒಲಿಂಪಿಕ್ ಪದಕವನ್ನು ಗೆದ್ದ ನಂತರ, ಮೇರಿ ತನ್ನ ಮೂರನೇ ಮಗುವಿಗೆ ಜನ್ಮ ನೀಡಿದರು. ಮತ್ತೆ ಕೆಲವು ಕಾಲ ಅವರು ಬಾಕ್ಸಿಂಗ್‌ನಿಂದ ದೂರವಾದರು. ಮತ್ತೆ ಬಾಕ್ಸಿಂಗ್ ಅಂಗಣಕ್ಕೆ ಹಿಂದಿರುಗಿ ದೆಹಲಿಯಲ್ಲಿ ನಡೆದ 2018 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಶೃಂಗಸಭೆಯಲ್ಲಿ ತಮ್ಮ ಸ್ಥಾನವನ್ನುಗಳಿಸಿಕೊಂಡರು ಮತ್ತು ಉಕ್ರೇನ್ ಹನ್ನಾ ಒಖೋಟಾ ವಿರುದ್ಧ 5-0 ಗೆಲುವುನೊಂದಿಗೆ ಆರನೇ ಬಾರಿ ವಿಶ್ವ ಚಾಂಪಿಯನ್ ಆದರು.
ಭಾರತೀಯ ಮಹಿಳೆಯರಲ್ಲಿ ಕ್ರೀಡಾ ಪ್ರೇಮಕ್ಕೆ ಪ್ರೇರಣೆಯನ್ನು ಒದಗಿಸಿದ್ದಾರೆ. ಇವರ ಸಾಧನೆ ಕಂಡು ಅನೇಕ ಬಾಲಕಿಯರು ಬಾಕ್ಸಿಂಗ್ ಗ್ಲೌವ್ಸ್ ತೊಟ್ಟು ಅಂಗಣಕ್ಕೆ ಇಳಿದಿದ್ದಾರೆ. ಇವರ ಸಾಧನೆಯನ್ನು ಸಾರುವ ಮೇರಿ ಕೋಮ್ ಸಿನಿಮಾ ಕೂಡ ಜನಪ್ರಿಯವಾಗಿತ್ತು. ನಟಿ ಪ್ರಿಯಾಂಕಾ ಚೋಪ್ರಾ ಅವರು ಮೇರಿ ಕೋಮ್ ಅವರ ಪಾತ್ರವನ್ನು ನಿಭಾಯಿಸಿದ್ದರು.
ಮೇಕಿ ಕೋಮ್ ಅವರ ಸಾಧನೆಯನ್ನು ಅರಸಿ ಅನೇಕ ಬಹುಮಾನಗಳು, ಪ್ರಶಸ್ತಿಗಳು ಬಂದಿವೆ. 2020ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮವಿಭೂಷಣ, 2013ರಲ್ಲಿ ಪದ್ಮಭೂಷಣ ದೊರೆತಿವೆ. ಇನ್ನು 2009ರಲ್ಲಿ ಮೇಜರ್ ಧ್ಯಾನ ಚಂದ್ ಖೇಲ್ ರತ್ನ ಅವಾರ್ಡ್, 2006ರಲ್ಲಿ ಪದ್ಮಶ್ರೀ ಮತ್ತು 2003ರಲ್ಲಿ ಅರ್ಜನ್ ಅವಾರ್ಡ್ ಕೂಡ ಅವರಿಗೆ ಸಂದಿವೆ.
ಈ ಸುದ್ದಿಯನ್ನೂ ಓದಿ: Mary Kom: ಬ್ರಿಜ್ ಭೂಷಣ್ ವಿರುದ್ಧದ ತನಿಖಾ ಸಮಿತಿಗೆ ಮೇರಿ ಕೋಮ್ ನೇತೃತ್ವ