Site icon Vistara News

VISTARA TOP 10 NEWS : ಟಿಪ್ಪು ಜಯಂತಿ ಕ್ಯಾನ್ಸಲ್​, ನಕ್ಸಲರಿಬ್ಬರ ಸೆರೆ ಮತ್ತಿತರ ದಿನದ ಪ್ರಮುಖ ಸುದ್ದಿಗಳು

Top 10 today

1. ಸರ್ಕಾರದಿಂದ ಟಿಪ್ಪು ಜಯಂತಿ ಆಚರಣೆ ಇಲ್ಲ! ಸಂಪುಟ ಸಭೆಯಲ್ಲಿ ಚರ್ಚೆಯೇ ಆಗಿಲ್ಲ
ಬೆಂಗಳೂರು: ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರದವತಿಯಿಂದ ಟಿಪ್ಪು ಜಯಂತಿ (Tipu Jayanti) ಆಚರಿಸುವ ಸಂಬಂಧ ಯಾವುದೇ ಚರ್ಚೆಯಾಗಿಲ್ಲ (No Discussion in Cabinet Meeting) ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ (Minister H K Patil) ಅವರು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಪೂರ್ಣ ವರದಿಗೆ ಈ ಲಿಂಕ್​ ಕ್ಲಿಕ್ ಮಾಡಿ.

2. ಸಂಸದರು, ಶಾಸಕರ ವಿರುದ್ಧದ ಕೇಸ್‌ಗಳ ಕ್ಷಿಪ್ರ ವಿಚಾರಣೆಗೆ ಸುಪ್ರೀಂ ಆದೇಶ; ಎಷ್ಟು ಜನ ಜೈಲುಪಾಲು?
ನವದೆಹಲಿ: ದೇಶಾದ್ಯಂತ ಕ್ರಿಮಿನಲ್‌ ಕೇಸ್‌ಗಳನ್ನು ಎದುರಿಸುತ್ತಿರುವ (ಅಪರಾಧ ಪ್ರಕರಣಗಳು) ಸಂಸದರು ಹಾಗೂ ಶಾಸಕರಿಗೆ ಸುಪ್ರೀಂ ಕೋರ್ಟ್‌ (Supreme Court) ಶಾಕ್‌ ನೀಡಿದೆ. ಸಂಸದರು ಹಾಗೂ ಶಾಸಕರ ವಿರುದ್ಧ ದಾಖಲಾದ ಕ್ರಿಮಿನಲ್‌ ಕೇಸ್‌ಗಳನ್ನು ಕ್ಷಿಪ್ರವಾಗಿ ವಿಲೇವಾರಿ ಮಾಡುವ ದಿಸೆಯಲ್ಲಿ ಎಲ್ಲ ರಾಜ್ಯಗಳ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಿದೆ. ಸಂಸದರು ಹಾಗೂ ಶಾಸಕರ ವಿರುದ್ಧ ದಾಖಲಾದ ಕೇಸ್‌ಗಳ (Criminal Cases) ಕ್ಷಿಪ್ರ ವಿಚಾರಣೆಗೆ ಸುಮೋಟೊ (ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವುದು) ಕೇಸ್‌ ದಾಖಲಿಸಿಕೊಳ್ಳಬೇಕು ಎಂದು ಕೂಡ ನಿರ್ದೇಶನ ನೀಡಿದೆ. ಪೂರ್ಣ ವರದಿಗೆ ಈ ಲಿಂಕ್​ ಕ್ಲಿಕ್ ಮಾಡಿ.

3. 6 ಸಚಿವರಿಗೆ ಸಂಸತ್‌ ಚುನಾವಣೆ ಸ್ಪರ್ಧೆಯ ತೂಗುಗತ್ತಿ!
ಬೆಂಗಳೂರು: ಕಾಂಗ್ರೆಸ್‌ ಪಕ್ಷವು ಪಂಚ ರಾಜ್ಯಗಳ ಚುನಾವಣೆಯ ಬ್ಯೂಸಿ ನಡುವೆಯೂ ಲೋಕಸಭೆ ಚುನಾವಣೆಗೂ (Parliament Elections 2024) ಸಿದ್ಧತೆಗಳನ್ನು ನಡೆಸುತ್ತಿದೆ. ಅದರಲ್ಲೂ ರಾಜ್ಯದಲ್ಲಿ ಯಾವ ಕ್ಷೇತ್ರದಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬ ವಿಚಾರದಲ್ಲಿ ವೀಕ್ಷಕರ ವರದಿ, ಸಮೀಕ್ಷೆ ಸೇರಿದಂತೆ ಹಲವು ಉಪಕ್ರಮಗಳು ನಡೆಯುತ್ತಿದೆ. ಅದರ ನಡುವೆ ಕೆಲವು ಕ್ಷೇತ್ರಗಳಲ್ಲಿ ಹಾಲಿ ಸರ್ಕಾರದಲ್ಲಿ ಸಚಿವರಾಗಿರುವ ನಾಯಕರನ್ನು (Ministers in Lokasabha fray) ಕಣಕ್ಕಿಳಿಸುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಪೂರ್ಣ ವರದಿಗೆ ಈ ಲಿಂಕ್​ ಕ್ಲಿಕ್ ಮಾಡಿ.

4. ಕರ್ನಾಟಕ-ಕೇರಳ ಗಡಿಯಲ್ಲಿ ಫೈರಿಂಗ್;‌ ಶೃಂಗೇರಿ ಮೂಲದ ಮಹಿಳೆ ಸೇರಿ ಇಬ್ಬರು ನಕ್ಸಲರ ಬಂಧನ
ಬೆಂಗಳೂರು/ವಯನಾಡು: ಕರ್ನಾಟಕ ಹಾಗೂ ಕೇರಳ ಗಡಿಯಲ್ಲಿರುವ (Karnataka Kerala Border) ವಯನಾಡು ಜಿಲ್ಲೆಯಲ್ಲಿ ಪೊಲೀಸರು ಹಾಗೂ ನಕ್ಸಲರ ಮಧ್ಯೆ ಗುಂಡಿನ ಚಕಮಕಿ (Firing) ನಡೆದಿದೆ. ವಯನಾಡು ಜಿಲ್ಲೆಯ (Wayanad District) ತಲಪ್ಪುಳ ವ್ಯಾಪ್ತಿಯ ಮನೆಯೊಂದರಲ್ಲಿ ಮಂಗಳವಾರ (ನವೆಂಬರ್‌ 7) ರಾತ್ರಿ ನಕ್ಸಲರು ಊಟ ಮಾಡುತ್ತಿದ್ದಾಗ ಕೇರಳ ಪೊಲೀಸರು ದಾಳಿ ನಡೆಸಿದ್ದಾರೆ. ಇದೇ ವೇಳೆ ನಕ್ಸಲರು ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾರೆ. ತಿರುಗೇಟು ನೀಡಿದ ಪೊಲೀಸರು ಕರ್ನಾಟಕದ ಮೂಲದ ಒಬ್ಬ ಮಹಿಳೆ ಸೇರಿ ಇಬ್ಬರು ನಕ್ಸಲರನ್ನು ಬಂಧಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್​ ಕ್ಲಿಕ್ ಮಾಡಿ.

5. ಜಾತಿ ಆಧಾರಿತ ಮೀಸಲಾತಿ 65%ಕ್ಕೆ ಹೆಚ್ಚಿಸಲು ಬಿಹಾರ ಅಸ್ತು; ಮತ್ತೊಂದು ಐತಿಹಾಸಿಕ ತೀರ್ಮಾನ
ಪಟನಾ: ಲೋಕಸಭೆ ಚುನಾವಣೆಗೂ ಮುನ್ನ ಜಾತಿ ಗಣತಿಯ (Caste Census) ವರದಿ ಬಿಡುಗಡೆ ಮಾಡಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸರ್ಕಾರವೀಗ ಮತ್ತೊಂದು ಐತಿಹಾಸಿಕ ತೀರ್ಮಾನ ಪ್ರಕಟಿಸಿದೆ. ರಾಜ್ಯದಲ್ಲಿ ಜಾತಿ ಆಧಾರಿತ ಮೀಸಲಾತಿಯನ್ನು (Caste Reservation) ಶೇ.65ಕ್ಕೆ ಹೆಚ್ಚಿಸುವ ಮಹತ್ವದ ವಿಧೇಯಕಕ್ಕೆ ಬಿಹಾರ ವಿಧಾನಸಭೆಯು ಅವಿರೋಧವಾಗಿ ಅಂಗೀಕಾರ ನೀಡಿದೆ. ಹಾಗಾಗಿ, ಮುಂಬರುವ ಲೋಕಸಭೆ ಹಾಗೂ ಬಿಹಾರ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಪ್ರಮುಖವಾಗಿದೆ. ಪೂರ್ಣ ವರದಿಗೆ ಈ ಲಿಂಕ್​ ಕ್ಲಿಕ್ ಮಾಡಿ.

6. ಗಡಿಯಲ್ಲಿ ಪಾಕ್‌ ಸೈನಿಕರ ಉದ್ಧಟತನ; ಗುಂಡಿನ ದಾಳಿಗೆ ಭಾರತೀಯ ಯೋಧ ಹುತಾತ್ಮ
ಶ್ರೀನಗರ: ಪಾಕಿಸ್ತಾನಿ ಸೈನಿಕರ ಉದ್ಧಟತನ ಮುಂದುವರಿದಿದೆ. ಸಾಂಭಾ ಜಿಲ್ಲೆಯ ರಾಮಗಢ ವಲಯದ ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಪಾಕ್‌ ರೇಂಜರ್‌ಗಳು (Pak Rangers) ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಿಂದಾಗಿ ಬಿಎಸ್‌ಎಫ್‌ ಯೋಧರೊಬ್ಬರು (BSF Jawan) ಹುತಾತ್ಮರಾಗಿದ್ದಾರೆ. ನವೆಂಬರ್‌ 8 ಹಾಗೂ 9ರ ನಡುವಿನ ರಾತ್ರಿ ವೇಳೆ ಪಾಕ್‌ ಸೈನಿಕರು ಭಾರತದ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದೇ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಯೋಧ ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ. ಪೂರ್ಣ ವರದಿಗೆ ಈ ಲಿಂಕ್​ ಕ್ಲಿಕ್ ಮಾಡಿ.

7. ಭಾರತಕ್ಕೆ ಸೆಮಿಯಲ್ಲಿ ಪಾಕ್​ ಎದುರಾದರೆ ತಾಣ ಬದಲಾವಣೆ!; ಕಾರಣ ಏನು
ಮುಂಬಯಿ: ಭಾರತ(IND vs PAK) ತಂಡದ ಸೆಮಿಫೈನಲ್(world cup semi final 2023)​ ತಾಣ ಈಗಾಗಲೇ ನಿಗದಿಯಾಗಿದೆ. ಆದರೆ ಎದುರಾಳಿ ಮಾತ್ರ ಇನ್ನಷ್ಟೆ ನಿಗದಿಯಾಗಬೇಕಿದೆ. ಮೂಲ ವೇಳಾಪಟ್ಟಿಯ ಪ್ರಕಾರ ಭಾರತ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ನವೆಂಬರ್​ 15ರಂದು ಪಂದ್ಯ ಆಡಬೇಕಿದೆ. ಆದರೆ ಇದೀಗ ಪಾಕಿಸ್ತಾನ ತಂಡ ಎದುರಾದರೆ ಈ ಪಂದ್ಯದ ಸ್ಥಳ ಬದಲಾಗುವ ಸಾಧ್ಯತೆ ಅಧಿಕ ಎಂದು ವರದಿಯಾಗಿದೆ. ಪೂರ್ಣ ವರದಿಗೆ ಈ ಲಿಂಕ್​ ಕ್ಲಿಕ್ ಮಾಡಿ.
ವಿಶ್ವಕಪ್‌ ಕ್ರಿಕೆಟ್‌ ಕುರಿತ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

8. ಮಲೆನಾಡು, ಕರಾವಳಿಯಲ್ಲಿ ಭಾರಿ ಮಳೆ; ಬೆಂಗಳೂರಲ್ಲಿ ಹೇಗೆ?
ಬೆಂಗಳೂರು: ರಾಜ್ಯಾದ್ಯಂತ ಗುಡುಗು ಸಹಿತ ಮಳೆಯಾಗುವ (Rain News) ಸಾಧ್ಯತೆ ಇದೆ. ಕರಾವಳಿಯ ಹಲವು ಕಡೆಗಳಲ್ಲಿ, ಒಳನಾಡಿನ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ (Karnataka Weather Forecast) ಇದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗಿನ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ‌ ನಿರೀಕ್ಷೆ ಮಾಡಲಾಗಿದೆ. ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ಅಥವಾ ರಾತ್ರಿ ವೇಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 28 ಹಾಗೂ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಪೂರ್ಣ ವರದಿಗೆ ಈ ಲಿಂಕ್​ ಕ್ಲಿಕ್ ಮಾಡಿ.

9. ಬೆರಳಿನ ಪರೀಕ್ಷೆಯಿಂದ ಮೆದುಳಿನ ಟ್ಯೂಮರ್‌ ಪತ್ತೆ! ವಿಜ್ಞಾನಿಗಳಿಂದ ಹೊಸ ಆವಿಷ್ಕಾರ
ಬೆರಳು- ಚುಚ್ಚುವಿಕೆಯ ಮೂಲಕ ಮೆದುಳಿನ ಕ್ಯಾನ್ಸರ್‌ ಗೆಡ್ಡೆಗಳನ್ನು (brain tumor) ಪತ್ತೆಹಚ್ಚುವ ಪರೀಕ್ಷೆಯನ್ನು ವಿಜ್ಞಾನಿಗಳು (medical news) ಅಭಿವೃದ್ಧಿಪಡಿಸಿದ್ದಾರೆ. COVID-19 ಸಾಂಕ್ರಾಮಿಕ ಸಮಯದಲ್ಲಿ ನಡೆಸಿದ ಪರೀಕ್ಷೆಯಂತೆಯೇ ಇದು ಇರಲಿದ್ದು, ವಿಶ್ವದ ಮೊದಲ ಲ್ಯಾಟರಲ್ ಫ್ಲೋ ಟೆಸ್ಟ್ (Lateral flow test) ಆಗಿರಲಿದೆ. ಪೂರ್ಣ ವರದಿಗೆ ಈ ಲಿಂಕ್​ ಕ್ಲಿಕ್ ಮಾಡಿ.

10 .ಎಣ್ಣೆ’ ಹೊಡೆದಿದ್ದ ಇಲಿಯನ್ನು ಬಂಧಿಸಿದ ಪೊಲೀಸರು! ಅಚ್ಚರಿ ಎನಿಸಿದರೂ ಇದು ಸತ್ಯ
ಭೋಪಾಲ್‌: ಇಲಿ (Rat) ಕಾಟದಿಂದ ಹೈರಾಣಾದ ಬಹುತೇಕರಿದ್ದಾರೆ. ನಗರ ಇರಲಿ, ಗ್ರಾಮೀಣ ಪ್ರದೇಶ ಇರಲಿ ಈ ಮೂಷಿಕ ಎಲ್ಲೆಂದರಲ್ಲಿ ಕಾಣಿಸಿಕೊಂಡು ಕಣ್ಣಿಗೆ ಕಂಡಿದ್ದನ್ನೆಲ್ಲ ಕಡಿದು ಹಾಕುತ್ತದೆ. ಇಲಿ ಕಾಟದಿಂದ ಜನ ಸಾಮಾನ್ಯರು ಮಾತ್ರವಲ್ಲ ಪೊಲೀಸರೂ ಬೇಸತ್ತಿದ್ದಾರೆ. ಎಲ್ಲಿಯವರೆಗೆ ಪೊಲೀಸರು ರೋಸಿ ಹೋಗಿದ್ದಾರೆ ಎಂದರೆ ಇಲಿಗೆ ʼಬಂಧನʼದ ಶಿಕ್ಷೆಯನ್ನೂ ನೀಡಿದ್ದಾರೆ. ಹೌದು, ಮಧ್ಯ ಪ್ರದೇಶದ ಛಿಂದ್ವಾರದಲ್ಲಿ (Chhindwara) ಪೊಲೀಸರು ಕಾಟ ಕೊಡುತ್ತಿದ್ದ ಇಲಿಯನ್ನು ಬಂಧಿಸಿ ಬೋನಿನಲ್ಲಿಟ್ಟಾರೆ (Viral News). ಪೂರ್ಣ ವರದಿಗೆ ಈ ಲಿಂಕ್​ ಕ್ಲಿಕ್ ಮಾಡಿ.
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

Exit mobile version