Site icon Vistara News

Wrestling | ಕುಸ್ತಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಬಜರಂಗ್‌ ನೂತನ ದಾಖಲೆಯೇನು?

Bajrang Punia will returns padma shree award to govt, Why he did so?

ಬೆಲ್‌ಗ್ರೇಡ್‌ (ಸರ್ಬಿಯಾ) : ಭಾರತದ ಸ್ಟಾರ್‌ ಕುಸ್ತಿಪಟು (Wrestling) ಬಜರಂಗ್‌ ಪೂನಿಯಾ ಇಲ್ಲಿ ನಡೆಯುತ್ತಿರುವ ಕುಸ್ತಿ ವಿಶ್ವ ಚಾಂಪಿಯನ್‌ಶಿಪ್‌ನ ಪುರುಷರ ೬೫ ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇದರೊಂದಿಗೆ ಅವರು ಭಾರತ ಪರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟಾರೆ ನಾಲ್ಕು ಪದಕಗಳನ್ನು ಗೆದ್ದಿರುವ ಮೊದಲ ಕುಸ್ತಿಪಟು ಎನಿಸಿಕೊಂಡಿದ್ದಾರೆ.

ಭಾನುವಾರ ನಡೆದ ಕಂಚಿನ ಪದಕದ ಸ್ಪರ್ಧೆಯಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಬಜರಂಗ್‌ ಪೂನಿಯಾ ಅವರು ಪುರ್ಟೊ ರಿಕೊ ದೇಶದ ಸೆಬಾಸ್ಟಿಯನ್‌ ಸಿ ರಿವೆರಾ ವಿರುದ್ಧ ೧೧-೯ ಅಂಕಗಳಿಂದ ಗೆಲುವು ಸಾಧಿಸಿ ಸಾಧನೆ ಮೆರೆದರು.

ಬಜರಂಗ್‌ ಅವರ ಅಮೆರಿಕದ ಜಾನ್‌ ಮೈಕೆಲ್‌ ವಿರುದ್ಧದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಸೋಲು ಕಂಡಿದ್ದರು. ಆದರೆ, ಜಾನ್‌ ಮೈಕಲ್‌ ಫೈನಲ್‌ನಲ್ಲಿ ಗೆದ್ದ ಕಾರಣ ಬಜರಂಗ್‌ ರೆಪಚೇಜ್‌ ಅವಕಾಶ ಪಡೆದುಕೊಂಡು ಕಂಚಿನ ಪದಕ ತಮ್ಮದಾಗಿಸಿಕೊಂಡರು. ಅವರು ೨೦೧೮ರ ಆವೃತ್ತಿಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರೆ, ೨೦೧೩, ೨೦೧೯, ೨೦೨೨ರಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಭಾರತದಿಂದ ಈ ಬಾರಿ ಒಟ್ಟು ೩೦ ಕುಸ್ತಿಪಟುಗಳು ವಿಶ್ವ ಚಾಂಪಿಯನ್‌ಷಿಪ್‌ಗೆ ತೆರಳಿದ್ದರು. ಆದರೆ, ವೈಫಲ್ಯದ ಪ್ರದರ್ಶನ ನೀಡದ ಕಾರಣ ಕೇವಲ ಎರಡು ಪದಕಗಳು ಮಾತ್ರ ಲಭಿಸಿತು. ಮಹಿಳೆಯರ ವಿಭಾಗದಲ್ಲಿ ವಿನೇಶ್‌ ಫೋಗಾಟ್‌ ಗೆದ್ದಿರುವ ಕಂಚು ಭಾರತದ ಇನ್ನೊಂದು ಪದಕವಾಗಿದೆ.

ಇದನ್ನೂ ಓದಿ | Vinesh Phogat | ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ವಿನೇಶ್‌ ಫೋಗಾಟ್‌ಗೆ ಕಂಚು

Exit mobile version