Site icon Vistara News

IPL 2024 : ಫ್ರಾಂಚೈಸಿಗಳು ಬಿಡುಗಡೆ ಮಾಡಿದ ಟಾಪ್ 5 ದುಬಾರಿ ಆಟಗಾರರು ಇವರು

Ben stokes

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ (IPL 2024) ಹರಾಜಿಗೆ ತಮ್ಮ ಪರ್ಸ್ ಅನ್ನು ಹೆಚ್ಚಿಸಲು, ಫ್ರಾಂಚೈಸಿಗಳು ತಮ್ಮ ಕಡೆಯಿಂದ ಅನೇಕ ದುಬಾರಿ ಆಟಗಾರರನ್ನು ಬಿಡುಗಡೆ ಮಾಡಿವೆ. ಡಿಸೆಂಬರ್​ನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಇದೇ ಮೊದಲು ಬಾರಿಗೆ ಭಾರತಕ್ಕಿಂತ ಹೊರಗಡೆ ಅಂದರೆ ದುಬೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಮುಂದಿನ ಐಪಿಎಲ್ ಟೂರ್ನಿಯಲ್ಲಿ ಅತ್ಯುತ್ತಮ ಆಟಗಾರರನ್ನು ಪಡೆಯುವ ಉದ್ದೇಶದಿಂದ ಕಳೆದ ಆವೃತ್ತಿಯಲ್ಲಿ ತಂಡದ ಪರವಾಗಿ ಆಡಿದ್ದ ಕೆಲವು ಆಟಗಾರರನ್ನು ಬಿಡುಗಡೆ ಮಾಡಿದೆ.

ಐಪಿಎಲ್ 2023 ರ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ಅತಿ ಹೆಚ್ಚು ಸಂಭಾವನೆ ನೀಡಿದ ಆಟಗಾರ ಬೆನ್ ಸ್ಟೋಕ್ಸ್ ಅವರನ್ನು ಬಿಡುಗಡೆ ಮಾಡಿದೆ. ಇತರ ತಂಡಗಳು ತಮ್ಮ ಪರ್ಸ್ ಗಳಲ್ಲಿ ಹೆಚ್ಚಿನ ಹಣವನ್ನು ತುಂಬಲು ತಮ್ಮ ದುಬಾರಿ ಖರೀದಿಗಳನ್ನು ಬಿಡುಗಡೆ ಮಾಡಿವೆ. ಫ್ರಾಂಚೈಸಿಗಳ ಅತ್ಯಂತ ದುಬಾರಿ ಐಪಿಎಲ್ ಬಿಡುಗಡೆಗಳ ಪಟ್ಟಿ ಈ ಕೆಳಗಿನಂತಿದೆ. .

ಬೆನ್ ಸ್ಟೋಕ್ಸ್

ಐಪಿಎಲ್ 2023 ರ ಹರಾಜಿನಲ್ಲಿ ಬೆನ್ ಸ್ಟೋಕ್ಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) 16.25 ಕೋಟಿ ರೂ.ಗೆ ಖರೀದಿಸಿತ್ತು. ಐಪಿಎಲ್​​ನ ಹಿಂದಿನ ಋತುವಿನಲ್ಲಿ ಅವರು ಕೇವಲ ಎರಡು ಪಂದ್ಯಗಳನ್ನು ಆಡಿದ್ದರು. ಅವರು ತಂಡದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಸ್ಟೋಕ್ಸ್ ಅವರನ್ನು ಈ ಬಾರಿ ಬೇರೆ ತಂಡಗಳು ಖರೀದಿಸಬಹುದು. ಆದರೆ ಈ ಬಾರಿ ಅವರಿಗೆ ಅಷ್ಟೊಂದು ಬೆಲೆ ಸಿಗದು.

ಇದನ್ನೂ ಓದಿ : IPL 2024 : ಐಪಿಎಲ್ ಇತಿಹಾಸದ​ ಗರಿಷ್ಠ ಬೆಲೆಯ ಆಟಗಾರರ ಮಾರಾಟ ವಿವರ ಇಲ್ಲಿದೆ

ಹ್ಯಾರಿ ಬ್ರೂಕ್

ಹಿಂದಿನ ಐಪಿಎಲ್ ಹರಾಜಿನಲ್ಲಿ ಇಂಗ್ಲೆಂಡ್ ಬ್ಯಾಟರ್​ ಹ್ಯಾರಿ ಬ್ರೂಕ್ ಚರ್ಚೆಯ ವಿಷಯವಾಗಿದ್ದರು. ಅವರನ್ನು ಸನ್​ರೈಸರ್ಸ್​​ ಹೈದರಾಬಾದ್ 13.25 ಕೋಟಿ ರೂ.ಗೆ ಖರೀದಿಸಿತ್ತು. . ಆದಾಗ್ಯೂ, ಐಪಿಎಲ್ 2023 ರಲ್ಲಿ ಅವರ ಪ್ರದರ್ಶನವು ಪ್ರಭಾವಶಾಲಿಯಾಗದ ಕಾರಣ ಅವರು ತಮ್ಮ ಬೆಲೆಗೆ ತಕ್ಕ ನ್ಯಾಯ ಒದಗಿಸಲಿಲ್ಲ. 11 ಪಂದ್ಯಗಳನ್ನಾಡಿರುವ ಬ್ರೂಕ್ 21.11ರ ಕಳಪೆ ಸರಾಸರಿಯಲ್ಲಿ ಕೇವಲ 190 ರನ್ ಗಳಿಸಿದ್ದಾರೆ. ಹೀಗಾಗಿ ಅವರನ್ನು ಬಿಡುಗಡೆ ಮಾಡಲಾಗಿದೆ.

ವನಿಂದು ಹಸರಂಗ

ಶ್ರೀಲಂಕಾದ ಬೌಲರ್ ವನಿಂದು ಹಸರಂಗ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (ಆರ್​ಸಿಬಿ) ಬಿಡುಗಡೆ ಮಾಡಿದೆ. ಆರ್​ಸಿಬಿಯ ಪರ ಪ್ರಮುಖ ಸ್ಪಿನ್ ಬೌಲರ್ ಆಗಿದ್ದ ಹಸರಂಗ, ಐಪಿಎಲ್ 2023 ರಲ್ಲಿ ಎಂಟು ಪಂದ್ಯಗಳಲ್ಲಿ ಒಂಬತ್ತು ವಿಕೆಟ್​ಗಳನ್ನು ಪಡೆದಿದ್ದರು. ಆರ್​ಸಿಬಿಗೆ ತಮ್ಮ ತಂಡದಲ್ಲೊಬ್ಬ ಉತ್ತಮ ಸ್ಪಿನ್ನರ್ ಬೇಕಾಗಿದ್ದರಿಂದ ಅವರ ಬಿಡುಗಡೆ ಆಶ್ಚರ್ಯವನ್ನುಂಟು ಮಾಡಿತು. ಹರಾಜಿನಲ್ಲಿ ಬೇರೆ ಸ್ಪಿನ್ನರ್​ಗಳನ್ನು ಹುಡುಕಬಹುದು.

ಶಾರ್ದೂಲ್ ಠಾಕೂರ್

ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಐಪಿಎಲ್ 2024 ರ ಹರಾಜಿಗೆ ಮುಂಚಿತವಾಗಿ 12 ಆಟಗಾರರನ್ನು ಬಿಡುಗಡೆ ಮಾಡಿದೆ. ಇದೇ ವೇಳೆ ಕೆಕೆಆರ್ 10.75 ಕೋಟಿ ರೂಪಾಯಿ ಮೌಲ್ಯ ಹೊಂದಿದ್ದ ಶಾರ್ದೂಲ್ ಠಾಕೂರ್ ಅವರನ್ನು ಬಿಡುಗಡೆ ಮಾಡಿದೆ. ಐಪಿಎಲ್ 2023ರ ಆವೃತ್ತಿಯಲ್ಲಿ ಶಾರ್ದೂಲ್ 11 ಪಂದ್ಯಗಳಲ್ಲಿ 113 ರನ್ ಗಳಿಸಿದ್ದರು. ಹಿಂದಿನ ಋತುವಿನಲ್ಲಿ ಅವರು ಕೇವಲ ಏಳು ವಿಕೆಟ್ ಪಡೆದಿದ್ದರು. ಅವರು ಅಷ್ಟೊಂದು ಪರಿಣಾಮಕಾರಿ ಎನಿಸಿರಲಿಲ್ಲ.

ಹರ್ಷಲ್ ಪಟೇಲ್

ಹರ್ಷಲ್ ಪಟೇಲ್ ಅವರನ್ನು ಆರ್ಸಿಬಿ 10.75 ಕೋಟಿ ರೂ.ಗೆ ಖರೀದಿಸಿತ್ತು. ಐಪಿಎಲ್ ಇತಿಹಾಸದಲ್ಲಿ ಹರ್ಷಲ್ 8.59 ಎಕಾನಮಿಯೊಂದಿಗೆ 111 ವಿಕೆಟ್​ಗಳನ್ನು ಪಡೆದಿದ್ದಾರೆ. ಆದಾಗ್ಯೂ, ಅವರ ಹಿಂದಿನ ಋತುವು ಉತ್ತಮವಾಗಿರಲಿಲ್ಲ. , ಅವರು 13 ಪಂದ್ಯಗಳಲ್ಲಿ 14 ವಿಕೆಟ್​ಗಳನ್ನು ಪಡೆದರು. ಪ್ರತಿ ಓವರ್​ಗೆ ಸುಮಾರು 10 ರನ್​ಗಳನ್ನು ಬಿಟ್ಟುಕೊಟ್ಟು ನಿರಾಸೆ ಮೂಡಿಸಿದ್ದರು. ಹೀಗಾಗಿ ಅವರನ್ನು ಬಿಡುಗಡೆ ಮಾಡಿದೆ ಆರ್​ಸಿಬಿ.

Exit mobile version