Site icon Vistara News

IPL 2024 Auction : ಮಿನಿ ಹರಾಜಿನ ಐದು ದುಬಾರಿ ಆಟಗಾರರು ಇವರು

Chennai Supe Kings

ದುಬೈ: ಹಲವು ಅಚ್ಚರಿಗಳು ಹಾಗೂ ತಿರಸ್ಕಾರಗಳ ನಡುವೆ ಐಪಿಎಲ್ 2024 ರ ಹರಾಜು ಪ್ರಕ್ರಿಯೆ (IPL 2024 Auction) ಮುಕ್ತಾಯಗೊಂಡಿದೆ. ಇದು ಇಂಡಿಯನ್​ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ವಿನಾಶವನ್ನು ಸೃಷ್ಟಿಸಿದೆ. ತಂಡಗಳು ವೇಗದ ಬೌಲರ್​ಗಳನ್ನು ಖರೀದಿಸಲು ದೊಡ್ಡ ಮೊತ್ತ ಹೂಡಿಕೆ ಮಾಡಿರುವುದು ಈ ಬಾರಿಯ ವಿಶೇಷ. ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ಸೇರಿಕೊಂಡು 45 ಕೋಟಿ ರೂ.ಗಿಂತ ಹೆಚ್ಚು ಹಣ ಪಡೆದ ಕಾಋಣ ಆಸ್ಟ್ರೇಲಿಯನ್ನರು ಈ ವರ್ಷದ ಐಪಿಎಲ್​ನಲ್ಲಿ ಫ್ರಾಂಚೈಸಿಗಳ ಬ್ಯಾಂಕ್ ಲೂಟಿ ಮಾಡಿದಂತಾಗಿದೆ. ಹೀಗೆ ಐಪಿಎಲ್​ ಹರಾಜಿನಲ್ಲಿ ಗರಿಷ್ಠ ಮೊತ್ತ ಪಡೆದ ಐವರು ಆಟಗಾರರ ವಿವರ ನೋಡೋಣ.

ಮಿಚೆಲ್ ಸ್ಟಾರ್ಕ್ – 24.75 ಕೋಟಿ (ಕೋಲ್ಕತಾ ನೈಟ್ ರೈಡರ್ಸ್)

ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಖರೀದಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಎಂಟು ವರ್ಷಗಳ ಸುದೀರ್ಘ ಬಿಡುವಿನ ಬಳಿಕ ಐಪಿಎಲ್​ಗೆ ಬಂದ ಅವರು ಅವರನ್ನು ಅವರ ಮಾಜಿ ಫ್ರಾಂಚೈಸಿ ಕೋಲ್ಕತಾ ನೈಟ್ ರೈಡರ್ಸ್ 24.75 ಕೋಟಿ ರೂ.ಗೆ ಖರೀದಿಸಿತು.

ಸ್ಟಾರ್ಕ್ 2014 ಮತ್ತು 2015 ರ ಋತುಗಳಲ್ಲಿ ಆರ್​ಸಿಬಿ ತಂಡದ ಭಾಗವಾಗಿದ್ದರು. 2018ರಲ್ಲಿ ಕೆಕೆಆರ್ ಅವರನ್ನು 9.80 ಕೋಟಿ ರೂ.ಗೆ ಕರೆ ತಂದಿತ್ತು. ದುರದೃಷ್ಟವಶಾತ್, ಗಾಯದಿಂದಾಗಿ ಅವರು ಒಂದೇ ಒಂದು ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ.

ಪ್ಯಾಟ್ ಕಮಿನ್ಸ್ – 20.50 ಕೋಟಿ (ಸನ್ರೈಸರ್ಸ್ ಹೈದರಾಬಾದ್)

ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಮತ್ತು 2023 ರ ವಿಶ್ವ ಕಪ್​ನಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಅವರು 2024ರ ಟಿ 20 ವಿಶ್ವಕಪ್ ಸವಾಲಿಗೆ ಸಿದ್ದರಾಗಿದ್ದಾರೆ. ಅವರ ಹೆಸರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವೆ ಬಿಡ್ಡಿಂಗ್ ಜಟಾಪಟಿ ಸೃಷ್ಟಿಸಿದರು. ನಾಯಕ ಮತ್ತು ವೇಗದ ಬೌಲರ್ ಹುಡುಕಾಟದಲ್ಲಿದ್ದ ಹೈದರಾಬಾದ್ ತಂಡವು ಆಸ್ಟ್ರೇಲಿಯಾದ ಬಲಗೈ ವೇಗಿಯನ್ನು 20.50 ಕೋಟಿ ರೂ.ಗೆ ಖರೀದಿಸಿತು. ಪ್ಯಾಟ್ ಕಮಿನ್ಸ್​ ವಿಶ್ವ ದರ್ಜೆಯ ಬೌಲರ್​. ಅವರು ಲೆಂಥ್​ ಬಾಲ್​​ ಸ್ಪೆಷಲಿಸ್ಟ್​. ಬ್ಯಾಟಿಂಗ್​ನಲ್ಲೂ ಮಿಂಚಬಲ್ಲರು.

ಡ್ಯಾರಿಲ್ ಮಿಚೆಲ್ – 14.00 ಕೋಟಿ (ಚೆನ್ನೈ ಸೂಪರ್ ಕಿಂಗ್ಸ್)

ಕಿವೀಸ್ ಆಲ್​ರೌಂಡರ್​ ಡ್ಯಾರಿಲ್ ಮಿಚೆಲ್ ನ್ಯೂಜಿಲೆಂಡ್ ತಂಡದ ಅದ್ಭುತ ಆಸ್ತಿ. ಅವರು ಐಸಿಸಿ ಪಂದ್ಯಾವಳಿಗಳಲ್ಲಿ ತಮ್ಮ ತಂಡದ ಪ್ರಮುಖ ಆಟಗಾರ. ತಂಡವನ್ನು ಕಠಿಣ ಪರಿಸ್ಥಿತಿಗಳಿಂದ ಹೊರತರುವ ವಿಶೇಷ ಕೌಶಲ ಅವರು ಹೊಂದಿದ್ದಾರೆ. ಹಿಂದೆ ಅವರು ರಾಜಸ್ಥಾನ್ ರಾಯಲ್ಸ್​ ಭಾಗವಾಗಿದ್ದರು ಅಲ್ಲಿ ಅವಕಾಶಗಳು ಸಿಕ್ಕಿರಲಿಲ್ಲ.

ಬೆನ್ ಸ್ಟೋಕ್ಸ್ ಸೇರಿದಂತೆ ಕೆಲವು ಆಟಗಾರರನ್ನು ಬಿಡುಗಡೆ ಮಾಡಿದ ನಂತರ, ಚೆನ್ನೈ ಸೂಪರ್ ಕಿಂಗ್ಸ್ ಸೀಮ್ ಬೌಲಿಂಗ್ ಕೌಶಲ್ಯವನ್ನು ಹೊಂದಿರುವ ಆಲ್​ರೌಂಡರ್​ಗಾಗಿ ಹುಡುಕುತ್ತಿತ್ತು. ಅವರು ಡ್ಯಾರಿಲ್ ಮಿಚೆಲ್​ ಅದಕ್ಕೆ ಸೂಕ್ತ. ಮುಂಬರುವ ಋತುವಿನಲ್ಲಿ ಅವರ ಸೇವೆಗಳನ್ನು ಪಡೆಯುವ ಸಲುವಾಗಿ ಅವರು 14 ಕೋಟಿ ರೂ.ಗಳನ್ನು ಪಾವತಿಸಿದ್ದಾರೆ.

ಹರ್ಷಲ್ ಪಟೇಲ್ – 11.75 ಕೋಟಿ (ಪಂಜಾಬ್ ಕಿಂಗ್ಸ್)

ಹರ್ಷಲ್ ಪಟೇಲ್ 2021 ರಲ್ಲಿ ಆರ್​ಸಿಬಿ ಪರ ಆಡುವಾಗ 50 ಲಕ್ಷ ರೂಪಾಯಿ ನೀಡಲಾಗಿತ್ತು. ಆ ವರ್ಷ ಅವರು 32 ವಿಕೆಟ್​ಗಳನ್ನು ಪಡೆದರು. 2022 ರ ಮೆಗಾ ಹರಾಜಿನಲ್ಲಿ 10.75 ಕೋಟಿ ರೂ.ಗಳ ಬೃಹತ್ ಮೊತ್ತವನ್ನು ಪಡೆದರು ಮತ್ತು ಆರ್​ಸಿಬಿ ಪರ ಆಡಿದರು. ಆದರೆ ಅದೇ ಪ್ರದರ್ಶನವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಆರ್​ಸಿಬಿ ಬಿಡುಗಡೆ ಮಾಡಿತು.

ಹರ್ಷಲ್​ ಹಿಂದಿಗಿತಂತ ಹೆಚ್ಚಿನ ಮೊತ್ತಕ್ಕೆ ಹೋಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಬಿಡ್ಡಿಂಗ್ ಸಮರದಲ್ಲಿ ಪಂಜಾಬ್ ಕಿಂಗ್ಸ್ ಅವರ ಸೇವೆಗಳನ್ನು 11.75 ಕೋಟಿ ರೂ.ಗೆ ಪಡೆಯಿತು.

ಅಲ್ಜಾರಿ ಜೋಸೆಫ್ – 11.50 ಕೋಟಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು)

ಕಳೆದ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಭಾಗವಾಗಿದ್ದ ಕೆರಿಬಿಯನ್ ವೇಗದ ಬೌಲರ್ ಅಲ್ಜಾರಿ ಜೋಸೆಫ್, ಐಪಿಎಲ್ 2023 ರ ನಂತರ ಬಿಡುಗಡೆಗೊಂಡರು . ಈಗ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಲಿದ್ದಾರೆ. ವೇಗದ ಬೌಲರ್​ಗಾಗಿ ಆರ್​ಸಿಬಿ 11.50 ಕೋಟಿ ರೂ. ಹೂಡಿಕೆ ಮಾಡಿತು.

ಆರ್​ಸಿಬಿಗೆ ವಿದೇಶಿ ವೇಗದ ಬೌಲರ್​​ನ ತೀವ್ರ ಅಗತ್ಯವಿತ್ತು. ಪ್ಯಾಟ್ ಕಮಿನ್ಸ್ ಅವರನ್ನು ಖರೀದಿಸಲು ವಿಫಲವಾದ ಕಾರಣ, ಜೋಸೆಫ್ ಅವರನ್ನು ಬೆನ್ನಟ್ಟಿದ್ದರು. ಕೇವಲ 2.4 ಕೋಟಿ ರೂ.ಗೆ ಜಿಟಿ ಪರ ಆಡುತ್ತಿದ್ದ ಜೋಸೆಫ್ ಏಕಾಏಕಿ ದೊಡ್ಡ ಮೊತ್ತ ಪಡೆದರು. ಅವರು ಸಿರಾಜ್​ ಮತ್ತು ರೀಸ್ ಟಾಪ್ಲೆಗೆ ಜತೆಯಾಗಲಿದ್ದಾರೆ.

Exit mobile version