ವಿಸ್ತಾರ ನ್ಯೂಸ್ ಬೆಂಗಳೂರು: ಟಿ20 ಕ್ರಿಕೆಟ್ ಸ್ವರೂಪವು ಅಭಿಮಾನಿಗಳ ಪಾಲಿಗೆ ಅತಿ ಹೆಚ್ಚು ಭಾವನೆಗಳನ್ನು ನೀಡುವ ಮಾದರಿ. ಪ್ರತಿ ಟಿ 20 ಪಂದ್ಯದಲ್ಲಿ, ಹೊಸ ದಾಖಲೆಗಳು ನಿರ್ಮಾಣಗೊಳ್ಳುತ್ತದೆ. ಆದರೆ ಕೆಲವು ಆಟಗಾರರು ಅನಗತ್ಯ ದಾಖಲೆಗಳಿಗೆ ಒಳಗಾಗುತ್ತಾರೆ. ಯಾಕೆಂದರೆ ಕೆಲವು ಬ್ಯಾಟರ್ಗಳು ಅತಿ ವೇಗದಲ್ಲಿ ರನ್ ಮಾಡುವ ಉದ್ದೇಶದಿಂದ ಅನಗತ್ಯ ದಾಖಲೆಗಳಿಗೆ ಒಳಗಾಗುತ್ತಾರೆ. ಅಂತವರಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಒಬ್ಬರು. ಅತಿ ಹೆಚ್ಚು ಟಿ 20 ಶತಕಗಳನ್ನು ಹೊಂದಿರುವ ರೋಹಿತ್ ಶರ್ಮಾ, ಅತಿ ಹೆಚ್ಚು ಬಾರಿ ಶೂನ್ಯಕ್ಕೆ (Most Ducks) ಔಟಾಗಿರುವ ದಾಖಲೆಗೂ ಒಳಗಾಗಿದ್ದಾರೆ. ಹಾಲಿ ನಡೆಯುತ್ತಿರುವ ಅಫಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಮೊದಲೆರು ಪಂದ್ಯಗಳಲ್ಲಿ ಸತತವಾಗಿ ಶೂನ್ಯಕ್ಕೆ ಔಟಾಗುವ ಮೂಲಕ ಅವರು ಕಳಪೆ ದಾಖಲೆಗೆ ಒಳಗಾಗಿದ್ದಾರೆ. ಈ ರೀತಿಯಾಗಿ ಟಿ20 ಮಾದರಿಯಲ್ಲಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾಗಿರುವ ಐದು ಕ್ರಿಕೆಟಿಗರ ಪಟ್ಟಿ ಇಲ್ಲಿದೆ.
ಐರ್ಲೆಂಡ್ನ ಪಾಲ್ ಸ್ಟಿರ್ಲಿಂಗ್ – 13 ಬಾರಿ ಶೂನ್ಯ
ಐರಿಶ್ ಕ್ರಿಕೆಟಿಗ ಮತ್ತು ಐರ್ಲೆಂಡ್ ತಂಡದ ಟಿ 20ಐ ನಾಯಕ ಪಾಲ್ ಸ್ಟಿರ್ಲಿಂಗ್ ಚುಟುಕು ಕ್ರಿಕೆಟ್ನಲ್ಲಿ 13 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಐರ್ಲೆಂಡ್ ಪರ 134 ಟಿ 20 ಐ ಪಂದ್ಯಗಳನ್ನು ಆಡಿರುವ ಪಾಲ್, ಒಂದು ಶತಕ ಮತ್ತು 23 ಅರ್ಧಶತಕಗಳು ಸೇರಿದಂತೆ 3438 ರನ್ ಬಾರಿಸಿದ್ದಾರೆ. ಆ ತಂಡದ ಗರಿಷ್ಠ ಸ್ಕೋರರ್ಗಳಲ್ಲಿ ಒಬ್ಬರು.
ಟಿ20 ಪಂದ್ಯಗಳಲ್ಲಿ ಓಪನರ್ ಆಗಿರುವುದು ಒಂದು ಕಠಿಣ ಕೆಲಸ. ಪಾಲ್ ಸ್ಟಿರ್ಲಿಂಗ್ ಆ ಕೆಲಸ ಮಾಡುತ್ತಿದ್ದರು. ಅವರು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ವಿಷಯಕ್ಕೆ ಬಂದಾಗ ಅಗ್ರಸ್ಥಾನದಲ್ಲಿದ್ದಾರೆ. ಚುಟುಕು ಸ್ವರೂಪದಲ್ಲಿ 123 ಸಿಕ್ಸರ್ಗಳನ್ನು ಬಾರಿಸುವ ಮೂಲಕ ಅತಿ ಹೆಚ್ಚು ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲೂ ಇದ್ದಾರೆ.
ರೋಹಿತ್ ಶರ್ಮಾ – 12 ಬಾರಿ ಶೂನ್ಯ
ವಿಶ್ವದ ಅತ್ಯಂತ ನಿರ್ಭಿಡ ಕ್ರಿಕೆಟಿಗರಲ್ಲಿ ಒಬ್ಬರಾದ ರೋಹಿತ್ ಶರ್ಮಾ ಅವರು ಕಿರು ಸ್ವರೂಪದಲ್ಲಿ ಗರಿಷ್ಠ ಸಂಖ್ಯೆಯ ಶತಕಗಳನ್ನು ಹೊಂದಿದ್ದಾರೆ. ಪ್ರಸ್ತುತ 150 ಪಂದ್ಯಗಳನ್ನು ಆಡಿರುವ ಅವರು ಟಿ20ಐನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರಾಗಿದ್ದಾರೆ. 2007 ರಲ್ಲಿ ಪಾದಾರ್ಪಣೆ ಮಾಡಿದ ರೋಹಿತ್ ಅನೇಕ ದಾಖಲೆಗಳನ್ನು ಮುರಿದಿದ್ದಾರೆ ಮತ್ತು ದುರದೃಷ್ಟವಶಾತ್ ಅವರು ಟಿ 20 ಪಂದ್ಯಗಳಲ್ಲಿ 12 ಬಾರಿ ಡಕ್ಔಟ್ ಆಗಿದ್ದಾರೆ. ರೋಹಿತ್ ಶರ್ಮಾ 3853 ರನ್ಗಳೊಂದಿಗೆ ಟಿ 20 ಐ ಸ್ವರೂಪದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದವರು. ಟಿ 20 ಮತ್ತು ಎಲ್ಲಾ ಸ್ವರೂಪಗಳಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಹೊಂದಿದ್ದಾರೆ.
ಕೆವಿನ್ ಒ’ಬ್ರಿಯಾನ್ – 12 ಬಾರಿ ಶೂನ್ಯ
ಐರ್ಲೆಂಡ್ನ ಕೆವಿನ್ ಒ’ಬ್ರಿಯಾನ್ ಟಿ20 ಪಂದ್ಯಗಳಲ್ಲಿ 12 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಆದಾಗ್ಯೂ ಅವರು ಐರಿಶ್ ಕ್ರಿಕೆಟ್ನ ದಿಗ್ಗಜರಲ್ಲಿ ಒಬ್ಬರು. ಬಲಗೈ ಬ್ಯಾಟರ್ ತಮ್ಮ ರಾಷ್ಟ್ರಕ್ಕಾಗಿ 110 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಒಂದು ಶತಕ ಮತ್ತು ಐದು ಅರ್ಧಶತಕಗಳ ಸಹಾಯದಿಂದ 1973 ರನ್ ಗಳಿಸಿದ್ದಾರೆ. ಅವರು 12 ಡಕ್ಗಳನ್ನು ದಾಖಲಿಸಿ ಅನಗತ್ಯ ದಾಖಲೆ ಮಾಡಿದ್ದಾರೆ.
ಸೌಮ್ಯ ಸರ್ಕಾರ್ 11 ಬಾರಿ ಶೂನ್ಯ ರನ್
ಬಾಂಗ್ಲಾದೇಶದ ಯುವ ಕ್ರಿಕೆಟಿಗ ಸೌಮ್ಯ ಸರ್ಕಾರ್ ಅವರು ಟಿ20 ಪಂದ್ಯಗಳಲ್ಲಿ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 11 ಶೂನ್ಯದ ಅನಗತ್ಯ ದಾಖಲೆ ಸೃಷ್ಟಿಸಿದ್ದಾರೆ. ಡಕ್ಔಟ್ ವಿಷಯಕ್ಕೆ ಬಂದಾಗ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರ ಸಾಮರ್ಥ್ಯಗಳು ಮತ್ತು ಸರ್ವಾಂಗೀಣ ಕೌಶಲ್ಯಗಳ ವಿಷಯಕ್ಕೆ ಬಂದಾಗ ಮುಂಬರುವ ವರ್ಷಗಳಲ್ಲಿ ಅವರಿಗೆ ಹೆಚ್ಚಿನ ಅವಕಾಶಗಳು ಲಭಿಸಲಿದೆ.
ಇದನ್ನೂ ಓದಿ : Shivam Dube : ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ದಾಖಲೆ ಪಟ್ಟಿ ಸೇರಿದ ಶಿವಂ ದುಬೆ
75 ಟಿ20 ಪಂದ್ಯಗಳನ್ನಾಡಿರುವ ಅವರು 5 ಅರ್ಧಶತಕ ಸೇರಿದಂತೆ 1200ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಕೆಲವು ಕಳಪೆ ಪ್ರದರ್ಶನಗಳಿಂದಾಗಿ, ಅವರು ತಂಡದ ಹೊರಗೆ ಇದ್ದಾರೆ
ರೆಗಿಸ್ ಚಕಾಬ್ವಾ 11 ಬಾರಿ ಶೂನ್ಯ
ಜಿಂಬಾಬ್ವೆಯ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರೆಗಿಸ್ ಚಕಾಬ್ವಾ ಅವರು ಚುಟುಕು ಸ್ವರೂಪದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಿಲ್ಲ . ಅವರು 49 ಟಿ 20 ಪಂದ್ಯಗಳಲ್ಲಿ ಜಿಂಬಾಬ್ವೆ ತಂಡದ ಭಾಗವಾಗಿದ್ದಾರೆ. ಅದರಲ್ಲಿ 11 ಬಾರಿ ಒಂದೇ ಒಂದು ರನ್ ಗಳಿಸಲು ವಿಫಲರಾಗಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಿರು ಸ್ವರೂಪದಲ್ಲಿ ಅವರ ಗರಿಷ್ಠ ಸ್ಕೋರ್ 48. ಅವರು ತಮ್ಮ ಟಿ 20 ಐ ವೃತ್ತಿಜೀವನದುದ್ದಕ್ಕೂ ಕೇವಲ 14 ಕ್ಕಿಂತ ಕಡಿಮೆ ಸರಾಸರಿಯೊಂದಿಗೆ ಆಡಿದ್ದಾರೆ.