Site icon Vistara News

ICC World Cup 2023 : ಮೋದಿ ಸ್ಟೇಡಿಯಮ್​ನಲ್ಲಿ ಟಾಸ್ ಗೆದ್ದವರೇ ಬಾಸ್​ ಹೌದಾ?

Narendra Modi stadium

ಬೆಂಗಳೂರು: ವಿಶ್ವ ಕಪ್​ ಕ್ರಿಕೆಟ್ (ICC World Cup 2023) ವೈಭವ ಅಂತಿಮ ಹಂತಕ್ಕೆ ತಲುಪುತ್ತಿದೆ. ಐಸಿಸಿ ವಿಶ್ವಕಪ್ 2023 ರ ವಿಜೇತರನ್ನು ನಿರ್ಧರಿಸುವ ಏಕೈಕ ಪಂದ್ಯ ಮಾತ್ರ ಬಾಕಿಯಿದೆ. ಈ ಹಣಾಹಣಿ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಏತನ್ಮಧ್ಯೆ ಪಂದ್ಯ ನಡೆಯುವ ಪಿಚ್​ನ ಬಗ್ಗೆ ಚರ್ಚೆಗೆಳು ಜೋರಾಗಿ ನಡೆಯುತ್ತಿವೆ. ಅಹಮದಾಬಾದ್ ಪಿಚ್ ಎರಡೂ ತಂಡಗಳಿಗೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತದೆ. ಟಾಸ್ ಅತ್ಯಂತ ನಿರ್ಣಾಯಕವಾಗಿರುತ್ತದೆ ಮತ್ತು ವಿಜೇತ ನಾಯಕನು ಚೇಸಿಂಗ್​ಗೆ ಮುಂದಾಗುತ್ತಾನೆ ಎಂಬುದು ಸಾಬೀತಾಗಿದೆ.

ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈವರೆಗೆ 4 ಪಂದ್ಯಗಳು ನಡೆದಿದ್ದು 3 ಚೇಸಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ. ಸಹಜವಾಗಿ, ಪರಿಸ್ಥಿತಿಗಳನ್ನು ಗಮನಿಸಿದರೆ ಟಾಸ್ ಗೆಲ್ಲುವ ನಾಯಕ ಮೊದಲು ಬೌಲಿಂಗ್ ಮಾಡಿ ಮತ್ತು ಗುರಿಯನ್ನು ಬೆನ್ನಟ್ಟಲು ಮುಂದಾಗುವುದು ಖಾತರಿ.

ಮೊಟೆರಾದಲ್ಲಿ ಒಟ್ಟು 32 ಏಕದಿನ ಪಂದ್ಯಗಳನ್ನು ಆಡಲಾಗಿದ್ದು, 17 ಬಾರಿ ಮೊದಲು ಬ್ಯಾಟಿಂಗ್ ಮಾಡಿದ ತಂಡವು ಪಂದ್ಯವನ್ನು ಗೆದ್ದಿದೆ. ಆದರೆ ಈ ಅಂಕಿಅಂಶಗಳು ಸ್ಟೇಡಿಯಮ್ ನವೀಕರಣಕ್ಕೆ ಮೊದಲಿನ ವಿಷಯ. ಆದರೆ, ಇತ್ತೀಚಿನ ಪಂದ್ಯಗಳನ್ನು ಗಮನಿಸಿದರೆ, ಪಿಚ್ ಚೇಸಿಂಗ್ ತಂಡಗಳಿಗೆ ಸಹಾಯವನ್ನು ಮಾಡಿರುವುದು ಖಾತರಿಯಾಗಿದೆ.

ಹಾಲಿ ವಿಶ್ವ ಕಪ್​ನಲ್ಲಿ ಚೇಸಿಂಗ್ ಮಾಡಿದ ಇಂಗ್ಲೆಂಡ್​, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ತಮ್ಮ ಪಂದ್ಯಗಳನ್ನು ಗೆದ್ದವು. ಮತ್ತೊಂದೆಡೆ, ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ ಚೇಸ್ ಮಾಡಲು ವಿಫಲವಾಯಿತು. ಮೊದಲು ಬ್ಯಾಟಿಂಗ್ ಮಾಡುವಾಗ ಮೈದಾನದಲ್ಲಿ ಪಂದ್ಯವನ್ನು ಗೆದ್ದ ಏಕೈಕ ತಂಡ ಆಸ್ಟ್ರೇಲಿಯಾ.

ಈ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಅತಿ ಹೆಚ್ಚು ರನ್ ಗಳಿಸಿತು. 286 ರನ್ ಗಳಿಸಿತು. ಮತ್ತೊಂದೆಡೆ, ಉಳಿದ ತಂಡಗಳು ಅನೇಕ ಎಸೆತಗಳು ಬಾಕಿ ಇರುವಾಗ ಆರಾಮವಾಗಿ ಗುರಿಯನ್ನು ಬೆನ್ನಟ್ಟಿದವು. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಈ ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿತ್ತು. ನವೆಂಬರ್ 19 ರಂದು ನಡೆಯಲಿರುವ ಪಂದ್ಯದಲ್ಲಿ ವಿಶ್ವಕಪ್ ಗೆಲ್ಲಲು ಉತ್ಸುಕವಾಗಿದೆ.

ಸಮಾರೋಪ ಸಮಾರಂಭಕ್ಕೆ ಸಿದ್ಧತೆ

ವಿಶ್ವಕಪ್ ಫೈನಲ್ ಪಂದ್ಯಕ್ಕೆ ಇನ್ನು ಮೂರು ದಿನಗಳು ಮಾತ್ರ ಬಾಕಿ ಉಳಿದಿದ್ದು, ಸಮಾರೋಪ ಸಮಾರಂಭದ ಬಗ್ಗೆ ಬಿಸಿಸಿಐ ಮತ್ತು ಐಸಿಸಿ ಮೌನ ವಹಿಸಿವೆ. ಆದರೆ 2023 ರ ವಿಶ್ವಕಪ್ ಮುಕ್ತಾಯ ಸಮಾರಂಭಕ್ಕಾಗಿ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಸೋಷಿಯಲ್ ಮೀಡಿಯಾ ಬಝ್ ಮತ್ತು ವೀಡಿಯೊಗಳ ಪ್ರಕಾರ, ಬಾಲಿವುಡ್ ತಾರೆಯರು ಭಾಗವಹಿಸಲಿದ್ದು, ಭಾರತೀಯ ವಾಯುಪಡೆಯ (ಐಎಎಫ್) ಸೂರ್ಯ ಕಿರಣ್ ತಂಡವು ಪಂದ್ಯಕ್ಕೆ ಮುಂಚಿತವಾಗಿ ಸ್ಥಳದಲ್ಲಿ ಏರ್ ಶೋ ನಡೆಸಲು ಸಜ್ಜಾಗಿದೆ.

ನವೆಂಬರ್ 19 ರಂದು ಫೈನಲ್ ಪಂದ್ಯ ಪ್ರಾರಂಭವಾಗುವ ಮೊದಲು ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು 10 ನಿಮಿಷಗಳ ಏರ್ ಶೋ ನಡೆಸಲಿದೆ ಎಂದು ಗುಜರಾತ್​​ನ ರಕ್ಷಣಾ ಪಿಆರ್​ಒ ಗುರುವಾರ ಪ್ರಕಟಿಸಿದ್ದಾರೆ. ಏರ್ ಶೋನ ಪೂರ್ವಾಭ್ಯಾಸ ಶುಕ್ರವಾರ ಮತ್ತು ಶನಿವಾರ ನಡೆಯಲಿದೆ ಎಂದು ಪಿಆ್ಒ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ICC World Cup 2023 : ಫೈನಲ್ ಮ್ಯಾಚ್ ನೋಡಲು ಮೋದಿ ಬರ್ತಾರಾ?

ಸ್ಥಳೀಯ ನೃತ್ಯ ಗುಂಪುಗಳು ಭಾನುವಾರ ಒಂದು ರೀತಿಯ ಸಮಾರಂಭಕ್ಕಾಗಿ ಕ್ರೀಡಾಂಗಣದ ಆವರಣದಲ್ಲಿ ಪೂರ್ವಾಭ್ಯಾಸ ನಡೆಸುತ್ತಿವೆ. ಸೆಮಿಫೈನಲ್​​ನಲ್ಲಿ ನ್ಯೂಜಿಲೆಂಡ್ ತಂಡವನ್ನು 70 ರನ್​ಗಳಿಂದ ಸೋಲಿಸಿದ ಭಾರತ ಫೈನಲ್​ಗೇರಿದೆ. ಇದೇ ವೇಳೆ ಎರಡನೇ ಸೆಮಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 3 ವಿಕೆಟ್​ಗಳಿಂದ ಮಣಿಸಿದ ಆಸ್ಟ್ರೇಲಿಯಾ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿದೆ.

ಅಹ್ಮದಾಬಾದ್​ನಲ್ಲಿ ಕ್ರಿಕೆಟ್ ವಿಶ್ವಕಪ್​ನ ಉದ್ಘಾಟನಾ ಸಮಾರಂಭವೂ ಇರಲಿಲ್ಲ. ಬದಲಿಗೆ, ಅಕ್ಟೋಬರ್ 14 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಮೊದಲು ಮತ್ತು ಪಂದ್ಯದ ಮಧ್ಯದಲ್ಲಿ ಪ್ರದರ್ಶನ ನಡೆಯಿತು. ವಿಶ್ವಕಪ್ 2023 ರ ಸಮಾರೋಪ ಸಮಾರಂಭದ ಬಗ್ಗೆ ಇನ್ನೂ ಯಾವುದೇ ದೃಢೀಕರಣವಿಲ್ಲ. ಆದರೆ ಸಾಮಾಜಿಕ ಮಾಧ್ಯಮ ಪ್ಲಾಟ್​ಫಾರ್ಮ್​ಗಲಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿರುವ ವೀಡಿಯೊದಲ್ಲಿ, ಎರಡು ಜೆಟ್​ಗಳು ನರೇಂದ್ರ ಮೋದಿ ಕ್ರೀಡಾಂಗಣದ ಮೇಲೆ ಹಾರುತ್ತಿರುವುದನ್ನು ಸೆರೆಹಿಡಿಯಲಾಗಿದೆ. ಇದು ವಿಶ್ವಕಪ್ ಫೈನಲ್ ಗೆ ಏರ್ ಶೋನ ಸೂಚನೆಯಾಗಿದೆ ಎಂದು ಅಭಿಮಾನಿಗಳು ಊಹಿಸಿದ್ದಾರೆ.

ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 70 ರನ್ಗಳ ಭರ್ಜರಿ ಜಯ ಸಾಧಿಸಿ ಫೈನಲ್ಗೆ ಲಗ್ಗೆ ಇಟ್ಟಿದೆ. ಆಡಿರುವ 10 ಪಂದ್ಯಗಳಲ್ಲಿ 10ರಲ್ಲಿ ಗೆಲುವು ಸಾಧಿಸಿರುವ ಭಾರತ ಟೂರ್ನಿಯಲ್ಲಿ ಅಜೇಯವಾಗಿದೆ. ಈಗ, ಐಸಿಸಿ ಟ್ರೋಫಿ ಬರವನ್ನು ಕೊನೆಗೊಳಿಸಲು ಅವರಿಗೆ ಇನ್ನೂ ಒಂದು ಜಯದ ಅಗತ್ಯವಿದೆ.

Exit mobile version