Site icon Vistara News

ICC Award : ಶಮಿಯ ಮುಂದೆ ಮತ್ತೆ ಮಿಂಚಿದ ಟ್ರಾವಿಸ್​​​ ಹೆಡ್​​ಗೆ ಐಸಿಸಿ ಪ್ರಶಸ್ತಿ

Tavi Head

ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ 2023 ರ ((ICC Award)) ನವೆಂಬರ್ ತಿಂಗಳ ಐಸಿಸಿ ಪುರುಷರ ಮತ್ತು ಮಹಿಳಾ ಆಟಗಾರ್ತಿ ಪ್ರಶಸ್ತಿ ವಿಜೇತರನ್ನು ಗುರುವಾರ ಪ್ರಕಟಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್ ಗೆಲುವು ಮತ್ತು ಅಹಮದಾಬಾದ್​ನಲ್ಲಿ ಭಾರತ ವಿರುದ್ಧದ ಫೈನಲ್ ಗೆಲುವು ಎರಡರಲ್ಲೂ ಪಂದ್ಯಶ್ರೇಷ್ಠ ಪ್ರಶಸ್ತಿಪಡೆದ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ನವೆಂಬರ್ ತಿಂಗಳ ಐಸಿಸಿ ಪುರುಷರ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿ ರೇಸ್​ನಲ್ಲಿ ಭಾರತದ ಬೌಲರ್​ ಮೊಹಮ್ಮದ್​ ಶಮಿ ಇದ್ದರು. ಅವರನ್ನು ಹಿಂದಿಕ್ಕಿದ ಹೆಡ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಬಾಂಗ್ಲಾದೇಶದ ಸ್ಪಿನ್ನರ್​ ನಹೀದಾ ಪ್ರಶಸ್ತಿ ಗೆದ್ದಿದ್ದಾರೆ. ಕಳೆದ ತಿಂಗಳು ತವರು ನೆಲದಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಏಕದಿನ ಸರಣಿ ಗೆಲುವಿನಲ್ಲಿ ಅವರು ಪ್ರಧಾನ ಪಾತ್ರ ವಹಿಸಿದ್ದರು. ಭಾರತದ ವಿರುದ್ಧ ಆಸ್ಟ್ರೇಲಿಯಾದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಗೆಲುವಿನ ರೂವಾರಿಯಾಗಿರುವ ಹೆಡ್ ಅವರನ್ನು ಜೂನ್ 2023 ರಲ್ಲಿ ತಮ್ಮ ಮೊದಲ ಐಸಿಸಿ ಪುರುಷರ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿತ್ತು.

ಐಸಿಸಿಯಲ್ಲಿ ನೋಂದಾಯಿಸಲಾದ ಜಾಗತಿಕ ಅಭಿಮಾನಿಗಳು ಮತ್ತು ಐಸಿಸಿ ಹಾಲ್ ಆಫ್ ಫೇಮ್ಸ್, ಮಾಜಿ ಅಂತಾರರಾಷ್ಟ್ರೀಯ ಆಟಗಾರರು ಮತ್ತು ಮಾಧ್ಯಮ ಪ್ರತಿನಿಧಿಗಳನ್ನು ಒಳಗೊಂಡ ವಿಶೇಷ ಸಮಿತಿಯಿಂದ ಮತಗಳನ್ನು ಸಂಗ್ರಹಿಸಿದ ಪ್ರಕ್ರಿಯೆಯಿಂದ ಹೆಡ್ ಮತ್ತು ಅಕ್ಟರ್ ವಿಜಯಶಾಲಿಗಳಾಗಿ ಹೊರಹೊಮ್ಮಿದರು.

ವಿಶ್ವಕಪ್ ವಿಜೇತ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ದಾಖಲೆಯ ಭಾರತೀಯ ಬೌಲರ್ ಮೊಹಮ್ಮದ್ ಶಮಿ ಅವರನ್ನು ಹಿಂದಿಕ್ಕಿ ಹೆಡ್ ನವೆಂಬರ್ನಲ್ಲಿ ಕಿರೀಟವನ್ನು ಗೆದ್ದರೆ, ಅಕ್ಟರ್ ಅದೇ ಸರಣಿಯ ಇತರ ಇಬ್ಬರು ತಾರೆಗಳಾದ ಸಹವರ್ತಿ ಫರ್ಗಾನಾ ಹೋಕ್ ಮತ್ತು ಪಾಕಿಸ್ತಾನದ ಸಾದಿಯಾ ಇಕ್ಬಾಲ್ ಅವರನ್ನು ಸೋಲಿಸಿದರು.

ವಿಶ್ವ ಕಪ್​ನಲ್ಲಿ ಮಿಂಚಿದ್ದ ಹೆಡ್​

ಕೊಲ್ಕತ್ತಾದಲ್ಲಿ ನಡೆದ ಸೆಮಿಫೈನಲ್ ಮುಖಾಮುಖಿಯಲ್ಲಿ ಹೆಡ್ ಬೌಲಿಂಗ್​ನಲ್ಲಿ ಮಿಂಚಿದ್ದರು. ದಕ್ಷಿಣ ಆಫ್ರಿಕಾದ ಅಪಾಯಕಾರಿ ಬ್ಯಾಟರ್​ಗಳಾದ ಹೆನ್ರಿಕ್ ಕ್ಲಾಸೆನ್ ಮತ್ತು ಮಾರ್ಕೊ ಜಾನ್ಸೆನ್ ಅವರನ್ನು ಸತತ ಎಸೆತಗಳಲ್ಲಿ ಔಟ್ ಮಾಡಿದ್ದರು. ಅಲ್ಲಿದೆ ದಕ್ಷಿಣ ಆಫ್ರಿಕಾದ ಸ್ಕೋರ್ ಅನ್ನು ಸಾಧಾರಣ 212 ಕ್ಕೆ ಸೀಮಿತಗೊಳಿಸಿದರು. ಬ್ಯಾಟಿಂಗ್ ವೇಳೆ 48 ಎಸೆತಗಳಲ್ಲಿ 62 ರನ್ ಸಿಡಿಸಿದ್ದರು.

ಇದನ್ನೂ ಓದಿ : WPL 2024 : ಈ ಬಾರಿಯೂ ಬೆಂಗಳೂರಿನಲ್ಲಿ ನಡೆಯಲ್ಲ ಮಹಿಳೆಯರ ಐಪಿಎಲ್​

ಭಾರತ ವಿರುದ್ಧ ಪೈನಲ್​ನಲ್ಲಿ ಹೆಡ್​ ಅದ್ಭುತ ಪ್ರದರ್ಶನ ನೀಡಿದ್ದರು. ರೋಹಿತ್ ಶರ್ಮಾ ಅವರನ್ನು ಔಟ್ ಮಾಡಲು ಔಟ್ ಫೀಲ್ಡ್ ನಲ್ಲಿ ಅಸಾಧಾರಣ ಕ್ಯಾಚ್​ ಹಿಡಿದ್ದರು. ಗೆಲುವಿಗೆ 241 ರನ್​ಗಳ ಗುರಿ ಹೊಂದಿದ್ದ ಆಸೀಸ್​ ತಂಡಕ್ಕೆ ಹೆಡ್​ 120 ಎಸೆತಗಳಲ್ಲಿ 137 ರನ್ ಗಳಿಸಿ ಗೆಲುವಿಗೆ ಕಾರಣರಾಗಿದ್ದರು.

ತಮ್ಮ ಪ್ರಶಸ್ತಿ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಹೆಡ್ “ಇದು ತಂಡಕ್ಕೆ ನಂಬಲಾಗದ 12 ತಿಂಗಳುಗಳಾಗಿವೆ. ಅದರ ಭಾಗವಾಗಿರುವುದು ನಿಜವಾದ ಗೌರವವಾಗಿದೆ. ನಾವು ತವರಿನಲ್ಲಿ ಬೇಸಿಗೆ, ಭಾರತ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಭಾರತ ಮತ್ತು ವಿಶ್ವಕಪ್ ಪ್ರವಾಸಗಳನ್ನು ನಿರ್ವಹಿಸಿದ ರೀತಿ ಅದ್ಭುತ ಎಂದು ಹೇಳಿದರು.

ನನ್ನ ಕೈ ಮುರಿದ ನಂತರ ಅವರು ವಿಶ್ವಕಪ್​​ನಲ್ಲಿ ನನ್ನ ಮೇಲೆ ನಂಬಿಕೆ ಇಟ್ಟರು. ಆದ್ದರಿಂದ ಅವರಿಗೆ ಉತ್ತಮವಾದುದನ್ನೇ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.

“ಈ ಪ್ರಶಸ್ತಿಯೊಂದಿಗೆ ಗುರುತಿಸಲ್ಪಟ್ಟಿರುವುದು ದೊಡ್ಡ ಗೌರವವಾಗಿದೆ, ಆದರೆ ಇದು ತಂಡದ ಪ್ರಯತ್ನವಾಗಿದೆ. ಎಲ್ಲಾ ಸ್ವರೂಪಗಳಲ್ಲಿ ನನ್ನ ತಂಡದ ಸಹ ಆಟಗಾರರು ಇಲ್ಲದಿದ್ದರೆ ಇದು ಸಂಭವಿಸುತ್ತಿರಲಿಲ್ಲ; ಆದ್ದರಿಂದ ಈ ರೀತಿಯ ಪ್ರಶಸ್ತಿಗಳು ನನಗೆ ಎಷ್ಟು ಮುಖ್ಯವೋ ಅವರಿಗೂ ಅಷ್ಟೇ ಮುಖ್ಯ” ಎಂದು ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version