Site icon Vistara News

ಪಾಕ್​ ಆಟಗಾರನ ಬ್ಯಾಟ್​ನಿಂದ ಭಾರತದ ವಿಶ್ವಕಪ್ ಗೆಲುವು ಕಸಿದ ಟ್ರಾವಿಸ್​ ಹೆಡ್​!

travis head

ಅಹಮದಾಬಾದ್​: ಭಾನುವಾರ ನರೇಂದ್ರ ಮೋದಿ ಕ್ರಿಕೆಟ್​ ಸ್ಟಡಿಯಂನಲ್ಲಿ ನಡೆದ ಏಕದಿನ ಕ್ರಿಕೆಟ್​ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ (IND vs AUS Final) ಭಾರತದ ವಿಶ್ವಕಪ್​ ಟ್ರೋಫಿ ಕನಸಿಗೆ ಕೊಳ್ಳಿ ಇಟ್ಟ ಟ್ರಾವಿಸ್​ ಹೆಡ್​(travis head) ಅವರು ಬಳಸಿದ್ದು ಪಾಕಿಸ್ತಾನ ಆಟಗಾರ ನೀಡಿದ ಬ್ಯಾಟ್​ನಿಂದ ಎಂದು ತಿಳಿದುಬಂದಿದೆ.

ಹೌದು, ಟ್ರಾವಿಸ್​ ಹೆಟ್​ ಅವರು ಬಳಸಿದ್ದು ಪಾಕ್​ ತಂಡದ ಮಾಜಿ ನಾಯಕ ಬಾಬರ್​ ಅಜಂ(babar azam) ಅವರ ಬ್ಯಾಟ್​. ಇದಕ್ಕೆ ಸಂಬಂಧಿಸಿದ ವಿಡಿಯೊವೊಂದು ಈಗ ವೈರಲ್​ ಆಗಿದೆ. ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಣ ಸರಣಿಯ ವೇಳೆ ಬಾಬರ್​ ಅಜಂ ಅವರು ತಮ್ಮ ಬ್ಯಾಟ್​ ಒಂದನ್ನು ಟ್ರಾವಿಸ್​ ಹೆಡ್​ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಇದೇ ಬ್ಯಾಟ್​ನಲ್ಲಿ ಹೆಡ್​ ಅವರು ಫೈನಲ್​ ಆಡಿ​ ಭಾರತದ ವಿಶ್ವಕಪ್​ ಗೆಲುವುನ್ನು ಕಸಿದರು ಎನ್ನುವುದು ಕೆಲ ಪಾಕ್​ ನೆಟ್ಟಿಗರು ಸಂಭ್ರಮ ಪಡುತ್ತಿದ್ದಾರೆ.

2 ವಿಶ್ವಕಪ್​ನಲ್ಲಿ ಕಂಟಕವಾದ ಹೆಡ್​

ಟ್ರಾವಿಸ್​ ಹೆಡ್​ ಅವರು ಭಾರತಕ್ಕೆ ಕಂಟಕವಾಗಿ ಪರಿಣಮಿಸಿದ್ದು ಇದು ಇರಡನೇ ನಿದರ್ಶನ. ನಾಲ್ಕು ತಿಂಗಳ ಹಿಂದಷ್ಟೇ ಲಂಡನ್​ನಲ್ಲಿ ನಡೆದಿದ್ದ ವಿಶ್ವಕಪ್​ ಟೆಸ್ಟ್​ ಫೈನಲ್​ ಪಂದ್ಯದಲ್ಲಿಯೂ ಭಾರತ ವಿರುದ್ಧ ಶತಕ ಬಾರಿಸಿ ಸೋಲುಣಿಸಿದ್ದರು. ಇದೀಗ ಏಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿಯೂ ಅವರು ಶತಕ ಬಾರಿಸಿ ಮತ್ತೊಮ್ಮೆ ಭಾರತದ ಟ್ರೋಫಿ ಗೆಲುವಿಗೆ ಅಡ್ಡಗಾಲಿಟ್ಟರು.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪಂದ್ಯದಲ್ಲೂ ಅವರು ಬಾಬರ್​ ನೀಡಿದ ಬ್ಯಾಟ್​ನಿಂದಲೇ ಶತಕ ಬಾರಿಸಿ ಮಿಂಚಿದ್ದರು. ಅಲ್ಲದೆ ಭಾರತಕ್ಕೆ ಸೋಲು ಕಾಣುವಂತೆ ಮಾಡಿದ್ದರು. ಇದೀಗ ಏಕದಿನದಲ್ಲೂ ಬಾಬರ್​ ಅವರ ಬ್ಯಾಟ್​ನಿಂದಲೇ ಶತಕ ಬಾರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ Mitchell Marsh: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟ ಆಸ್ಟ್ರೇಲಿಯಾ ಆಟಗಾರ! ಕ್ರಿಕೆಟ್ ಪ್ರೇಮಿಗಳ ಆಕ್ರೋಶ

ಟ್ರಾವಿಸ್​ ಹೆಡ್​​ ಅವರು ಫೈನಲ್​ ಪಂದ್ಯದಲ್ಲಿ ಭಾರತೀಯ ಬೌಲರ್​ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು 15 ಮನಮೋಹಕ ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 120 ಎಸೆತಗಳಲ್ಲಿ 137 ರನ್ ಬಾರಿಸಿ ಆಸೀಸ್​ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರ ಈ ಅಸಾಮಾನ್ಯ ಸಾಧನೆಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು. ಇದು ಹೆಡ್​​ ಅವರ 2ನೇ ವಿಶ್ವಕಪ್​ ಶತಕವಾಗಿದೆ. ಮೊದಲ ಶತಕ ಇದೇ ಆವೃತ್ತಿಯಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ದಾಖಲಿಸಿದ್ದರು.

ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಭಾನುವಾರ ನಡೆದ ಫೈನಲ್​ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಬ್ಯಾಟಿಂಗ್ ವೈಫಲ್ಯ ಎದುರಿಸಿದ ಭಾರತ ತಂಡ ನಿಗದಿತ 50 ಓವರ್​ಗಳಲ್ಲಿ 240 ರನ್​ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ತಂಡ 43 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿ ಗೆಲುವು ಸಾಧಿಸಿತು. ಟ್ರಾವಿಸ್ ಹೆಡ್​ 137 ರನ್​ ಬಾರಿಸಿ ಭಾರತದ ಗೆಲುವನ್ನು ಕಸಿದರು. ಆಸೀಸ್​ ಪಾಲಿಗೆ ಗೆಲುವಿನ ರೂವಾರಿ ಎನಿಸಿಕೊಂಡರು.

Exit mobile version