ಬೆಂಗಳೂರು: ಐಪಿಎಲ್ 2024ರಲ್ಲಿ ಹಲವಾರು ದಾಖಲೆಗಳು ಮೂಡಿ ಬರುತ್ತಿವೆ. ಅಂತೆಯೇ ಸನ್ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ (Travis Head) ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2024) co ಚ್ಚಲ ಶತಕ ಬಾರಿಸಿದ್ದಾರೆ. ಅದು ಕೂಡ ದಾಖಲೆಯ ವೇಗದ ಶತಕವಾಗಿ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಹೆಡ್ 39 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಇನ್ನಿಂಗ್ಸ್ ನ ಆರಂಭದಿಂದಲೂ ಅಬ್ಬರಿಸಿದ ಅವರು ಆರ್ಸಿಬಿ ಬೌಲರ್ಗಳ ಬುರುಡೆ ಮೇಲೆ ಬಾರಿಸಿದಂತೆ ಸಿಕ್ಸರ್ ಹಾಗೂ ಬೌಂಡರಿಗಳ ಸುರಿಮಳೆ ಸುರಿಸಿದರು. ಅಭಿಷೇಕ್ ಶರ್ಮಾ ಅವರೊಂದಿಗೆ ಪವರ್ ಪ್ಲೇನಲ್ಲಿ ಪ್ರಾಬಲ್ಯ ಸಾಧಿಸಿದ ಹೆಡ್, ಶತಕದ ಜೊತೆಯಾಟ ತಂದರು. ಬಳಿಕ ಹೆಡ್ ಹೆನ್ರಿಚ್ ಕ್ಲಾಸೆನ್ ಅವರೊಂದಿಗೆ ಅಬ್ಬರ ಮುಂದುವರಿಸಿದರು.
102 off 41 🧡🔥
— IndianPremierLeague (@IPL) April 15, 2024
Pure entertainment with the bat from Travis Head 👏👏
Follow the Match ▶️ https://t.co/OOJP7G9bLr#TATAIPL | #RCBvSRH | @SunRisers pic.twitter.com/lb1NpdkU8Q
ಇದು ಐಪಿಎಲ್ ಇತಿಹಾಸದಲ್ಲಿ ಕ್ರಿಸ್ ಗೇಲ್, ಯೂಸುಫ್ ಪಠಾಣ್ ಮತ್ತು ಡೇವಿಡ್ ಮಿಲ್ಲರ್ ಬಳಿಕ ಇದು ನಾಲ್ಕನೇ ವೇಗದ ಶತಕವಾಗಿದೆ. ಹೆಡ್ ಆ ದಿನ 9 ಬೌಂಡರಿಗಳು ಮತ್ತು 8 ಸಿಕ್ಸರ್ ಗಳನ್ನು ಹೊಡೆದರು. ಪಂದ್ಯದ 13 ನೇ ಓವರ್ನಲ್ಲಿ ಲಾಕಿ ಫರ್ಗುಸನ್ ಹೆಡ್ ಅವರನ್ನು ಔಟ್ ಮಾಡಿದರು. ಆದರೆ ಆ ಹೊತ್ತಿಗೆ ಬ್ಯಾಟ್ಸ್ಮನ್ ಕೇವಲ 41 ಎಸೆತಗಳಲ್ಲಿ 102 ರನ್ ಗಳಿಸಿದ್ದರು.
Clearing them with ease 👌👌
— IndianPremierLeague (@IPL) April 15, 2024
Travis Head is taking it 🔛 at the Chinnaswamy 🔥🔥
Watch the match LIVE on @JioCinema and @StarSportsIndia 💻📱#TATAIPL | #RCBvSRH | @SunRisers pic.twitter.com/kjKnRqLSNv
ಐಪಿಎಲ್ನಲ್ಲಿ ಅತಿವೇಗದ ಶತಕ ಬಾರಿಸಿದವರ ವಿವರ,
- ಕ್ರಿಸ್ ಗೇಲ್, 30 ಎಸೆತ, ಆರ್ಸಿಬಿ ತಂಡ, ಪುಣೆ ವಿರುದ್ಧ , ಬೆಂಗಳೂರು, 23 ಏಪ್ರಿಲ್ 2013
- ಯೂಸುಫ್ ಪಠಾಣ್, 37 ಎಸೆತ, ರಾಜಸ್ಥಾನ್ ತಂಡ, ಮುಂಬೈ ವಿರುದ್ಧ, 13 ಮಾರ್ಚ್ 2010
- ಡೇವಿಡ್ ಮಿಲ್ಲರ್, 38 ಎಸೆತ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ಆರ್ಸಿಬಿ ವಿರುದ್ಧ, ಮೊಹಾಲಿ 6 ಮೇ 2013
- ಟ್ರಾವಿಸ್ ಹೆಡ್, 39 ಎಸೆತ ಎಸ್ಆರ್ಎಚ್ ತಂಡ, ಆರ್ಸಿಬಿ ವಿರುದ್ಧ, ಬೆಂಗಳೂರು 15 ಏಪ್ರಿಲ್ 2024
- ಆಡಮ್ ಗಿಲ್ಕ್ರಿಸ್ಟ್, 42 ಎಸೆತ. ಡಿಸಿ ತಂಡ, ಮುಂಬೈ ವಿರುದ್ಧ, 27 ಏಪ್ರಿಲ್ 2008
ಎಸ್ಆರ್ಎಚ್ ಪರ ತಮ್ಮ ಚೊಚ್ಚಲ ಋತುವಿನಲ್ಲಿ ಟ್ರಾವಿಡ್ ಹೆಡ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಅಗ್ರ ಕ್ರಮಾಂಕದಲ್ಲಿ ಅಭಿಷೇಕ್ ಶರ್ಮಾ ಅವರೊಂದಿಗೆ ಬಲವಾದ ಜತೆಯಾಟ ರೂಪಿಸಿದ್ದಾರೆ. ಆರ್ಸಿಬಿ ವಿರುದ್ದ ಇಬ್ಬರೂ ಬ್ಯಾಟರ್ಗಳು ರೀಸ್ ಟೋಪ್ಲೆ ಮತ್ತು ಯಶ್ ದಯಾಳ್ ಅವರಂತಹ ಬೌಲರ್ಗಳ ವಿರುದ್ಧ ಉತ್ತಮ ಪ್ರದರ್ಶನ ನೀಡಿದರು.
ಇದನ್ನೂ ಓದಿ: MS Dhoni : ನೋವಿನಲ್ಲೂ ಸಿಕ್ಸರ್ ಬಾರಿಸುತ್ತಿದ್ದಾರೆ ಧೋನಿ; ದಿಗ್ಗಜನ ಬದ್ಧತೆಗೆ ಸಿಎಸ್ಕೆ ಕೋಚ್ ಮೆಚ್ಚುಗೆ
ಹೈದರಾಬಾದ್ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸುವ ಮೂಲಕ ಎಸ್ಆರ್ಎಚ್ ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತ್ಯಧಿಕ ತಂಡದ ಮೊತ್ತವನ್ನು ಗಳಿಸಿದೆ. ಆ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಕೇವಲ 24 ಎಸೆತಗಳಲ್ಲಿ 62 ರನ್ ಗಳಿಸಿ ತಂಡದ ಮೊತ್ತವನ್ನು 277 ರನ್ ಗಳಿಸಲು ನೆರವಾಗಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಮೊದಲು ಬ್ಯಾಟಿಂಗ್ಗೆ ಕಳುಹಿಸಿದ್ದರು.
ಮುಲ್ಲಾನ್ಪುರದಲ್ಲಿ ನಡೆದ ಪಂಜಾಬ್ ವಿರುದ್ಧ ಮುಖಾಮುಖಿಯ ಬಳಿಕವು ಎಸ್ಆರ್ಎಚ್ ತನ್ನ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.