ಬೆಂಗಳೂರು: ವಿರಾಟ್ ಕೊಹ್ಲಿ (62), ಫಾಫ್ ಡು ಪ್ಲೆಸಿಸ್ (ಅಜೇಯ 79) ಹಾಗೂ ಮ್ಯಾಕ್ಸ್ವೆಲ್ (59) ಬಾರಿಸಿದ ತ್ರಿವಳಿ ಶತಕದ ನೆರವಿನಿಂದ ಮಿಂಚಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 16ನೇ ಆವೃತ್ತಿಯ ತನ್ನ ಮೂರನೇ ಪಂದ್ಯದಲ್ಲಿ ಲಕ್ನೊ ಸೂಪರ್ ಜಯಂಟ್ಸ್ ವಿರುದ್ದ ಮೊದಲು ಬ್ಯಾಟ್ ಮಾಡಿ 212 ರನ್ಗಳನ್ನು ಪೇರಿಸಿದೆ. ಆರಂಭದಿಂದಲೂ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನಡೆಸಿದ ಆರ್ಸಿಬಿ ಬ್ಯಾಟರ್ಗಳು ದೊಡ್ಡ ಎದುರಾಳಿ ತಂಡಕ್ಕೆ ದೊಡ್ಡ ಮೊತ್ತದ ಗುರಿಯನ್ನು ಒಡ್ಡಿದೆ.
ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲ ಟಾಸ್ ಗೆದ್ದ ಲಕ್ನೊ ಸೂಪರ್ ಜಯಂಟ್ಸ್ ತಂಡದ ನಾಯಕ ಕೆ. ಎಲ್ ರಾಹುಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟಿಂಗ್ಗೆ ಆಹ್ವಾನ ಪಡೆದ ಆರ್ಸಿಬಿ ಬಳಗ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 212 ರನ್ ಬಾರಿಸಿತು.
ಇದನ್ನೂ ಓದಿ : IPL 2023 : ಗಾಯದ ಸಮಸ್ಯೆ ಕುರಿತು ರವಿ ಶಾಸ್ತ್ರಿ ಹೇಳಿಕೆಗೆ ಬಿಸಿಸಿಐ ತಿರುಗೇಟು!
ಇನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಆರಂಭದಲ್ಲಿ ವಿಕೆಟ್ ಪತನಗೊಳ್ಳದಂತೆ ನೋಡಿಕೊಂಡರು. ಏತನ್ಮಧ್ಯೆ ವಿರಾಟ್ ಕೊಹ್ಲಿ ನಿಧಾನವಾಗಿ ರನ್ ಗಳಿಕೆಗೆ ವೇಗ ಕೊಟ್ಟು 35 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದರು. ಬಳಿಕ ರನ್ ಗಳಿಕೆಯ ವೇಗವನ್ನು ಹೆಚ್ಚಿಸುವ ವೇಳೆ ಅಮಿತ್ ಮಿಶ್ರಾ ಅವರ ಸ್ಪಿನ್ ಬೌಲಿಂಗ್ನಲ್ಲಿ ಸ್ಟೋಯ್ನಿಸ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ವೇಳೆ ಆರ್ಸಿಬಿ ಸ್ಕೋರ್ 96.
ವಿರಾಟ್ ಕೊಹ್ಲಿ ಔಟಾದ ಬಳಿಕ ಜತೆಯಾದ ಮ್ಯಾಕ್ಸ್ವೆಲ್ ಮತ್ತು ಫಾಫ್ ಡು ಪ್ಲೆಸಿಸ್ ಎದುರಾಳಿ ಲಕ್ನೊ ತಂಡದ ಬೌಲರ್ಗಳನ್ನು ಚೆಂಡಾಡಿದರು. ಬೌಂಡರಿ ಸಿಕ್ಸರ್ಗಳ ಮಳೆ ಸುರಿಸಿದ ಈ ಜೋಡಿ 105 ರನ್ಗಳ ಜತೆಯಾಟ ನೀಡಿತು. ಮ್ಯಾಕ್ಸ್ವೆಲ್ 29 ಎಸೆತಗಳಲ್ಲಿ 59 ರನ್ ಬಾರಿಸಿದರೆ ಫಾಫ್ ಡು ಪ್ಲೆಸಿಸ್ 46 ಎಸೆತಗಳಲ್ಲಿ 79 ರನ್ ಬಾರಿಸಿದರು. ಆರ್ಸಿಬಿ ತಂಡ 15 ಸಿಕ್ಸರ್ ಬಾರಿಸಿದೆ 12 ಫೋರ್ಗಳ ಮೂಲಕ ದೊಡ್ಡ ಮೊತ್ತ ಗಳಿಸಿತು.
ಲಕ್ನೊ ಸೂಪರ್ ಜಯಂಟ್ಸ್ ತಂಡ ಪರ ಅಮಿತ್ ಮಿಶ್ರಾ ತಮ್ಮ ಎರಡು ಓವರ್ಗಳ ಸ್ಪೆಲ್ನಲ್ಲಿ 18 ರನ್ ನೀಡಿ ಒಂದು ವಿಕೆಟ್ ಪಡೆದರೆ, ಮಾರ್ಕ್ವುಡ್ 4 ಓವರ್ಗಳಲ್ಲಿ 32 ರನ್ ನೀಡಿ ಕೊನೆಯಲ್ಲೊಂದು ವಿಕೆಟ್ ತಮ್ಮದಾಗಿಸಿಕೊಂಡರು.