Site icon Vistara News

Tushar Deshpande : 11ನೆಯವರಾಗಿ ಆಡಲು ಇಳಿದು ಶತಕ, ರಣಜಿ ಟ್ರೋಫಿಯಲ್ಲಿ ವಿನೂತನ ಸಾಧನೆ

Tushar Deshpande

ನವದೆಹಲಿ: ಐಪಿಎಲ್ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಬೌಲರ್ ಆಗಿದ್ದ ತುಷಾರ್ ದೇಶಪಾಂಡೆ (Tushar Deshpande) ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. ಅವರು 11ನೇ ಬ್ಯಾಟರ್ ಆಗಿ ಕಣಕ್ಕೆ ಇಳಿದು ಶತಕ ಬಾರಿಸಿ ಮಿಂಚಿದ್ದಾರೆ. ಈ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಗರಿಷ್ಠ ರನ್ ಮಾಡಿದ ದಾಖಲೆಯನ್ನೂ ತಮ್ಮೆಸರಿಗೆ ಬರೆದುಕೊಂಡಿದ್ದಾರೆ. ಬರೋಡಾ (Baroda Cricket Team) ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ (Ranji Trophy) ಕ್ವಾರ್ಟರ್ ಫೈನಲ್​ನಲ್ಲಿ ಮುಂಬಯಿ ಪರ ಅವರು ಈ ಸಾಧನೆ ಮಾಡಿದ್ದಾರೆ.

ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 384 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬರೋಡಾ 36 ರನ್​ಗಳ ಹಿನ್ನಡೆ ಅನುಭವಿಸಿ ಕೇವಲ 348 ರನ್​ಗಳಿಗೆ ಕುಸಿಯಿತು. ಎರಡನೇ ಇನ್ನಿಂಗ್ಸ್​​ನಲ್ಲಿ ಮುಂಬೈ 9 ವಿಕೆಟ್ ನಷ್ಟಕ್ಕೆ 337 ರನ್ ಗಳಿಸಿತ್ತು. ಹೀಗಾಗಿ ಬರೋಡಾ ಸುಮಾರು 400 ರನ್​ಗಳ ಗುರಿ ಪಡೆಯಬಹುದು ಎಂದುಕೊಳ್ಳಲಾಗಿತ್ತು. ಆದರೆ ತುಷಾರ್ ದೇಶಪಾಂಡೆ ಮತ್ತು ತನುಷ್ ಕೋಟ್ಯಾನ್ (Tanush Kotian) ಚಿತ್ರಣವನ್ನೇ ಬದಲಾಯಿಸಿದರು.

10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​ಗೆ ಇಳಿದ ತನುಷ್ ಹಾಗೂ 11ನೇ ಕ್ರಮಾಂಕದಲ್ಲಿ ಆಡಿದ ದೇಶಪಾಂಡೆ ಕೊನೆಯ ವಿಕೆಟ್​ಗೆ 232 ರನ್​ಗಳ ಜೊತೆಯಾಟವಾಡಿದರು. ತನುಷ್ ಅಜೇಯ 120 (129) ರನ್ ಗಳಿಸಿದರು, ಇದರಲ್ಲಿ 10 ಫೋರ್​ಗಳು ಮತ್ತು ನಾಲ್ಕು ಸಿಕ್ಸರ್ ಗಳು ಸೇರಿಕೊಂಡಿವೆ. ತುಷಾರ್ 10 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 123 ರನ್ ಸಿಡಿಸಿ ಔಟಾದರು.

ಕೊನೇ ವಿಕೆಟ್​ಗೆ ದಾಖಲೆ ಜತೆಯಾಟ

232 ರನ್​ಗಳ ಜೊತೆಯಾಟವು ರಣಜಿ ಟ್ರೋಫಿ ಇತಿಹಾಸದಲ್ಲಿ ಕೊನೆಯ ವಿಕೆಟ್​​ಗೆ 2ನೇ ಅತಿ ಹೆಚ್ಚು ಜೊತೆಯಾಟವಾಗಿದೆ. ಚಂದು ಸರ್ವಟೆ ಮತ್ತು ಶುಟೆ ಬ್ಯಾನರ್ಜಿ ಒಂದೇ ಇನ್ನಿಂಗ್ಸ್​ನಲ್ಲಿ 10 ಮತ್ತು 11 ನೇ ಕ್ರಮಾಂಕದಲ್ಲಿ ಪ್ರಥಮ ದರ್ಜೆ ಶತಕಗಳನ್ನು ದಾಖಲಿಸಿದ ಮೊದಲಿಗರಾಗಿದ್ದರು. 1946ರಲ್ಲಿ ಓವಲ್​​ನಲ್ಲಿ ನಡೆದ ಸರ್ರೆ ಮತ್ತು ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಸರ್ವಾಟೆ ಮತ್ತು ಬ್ಯಾನರ್ಜಿ ಈ ಸಾಧನೆ ಮಾಡಿದ್ದರು.

ಇದನ್ನೂ ಓದಿ : Mohammed Shami : ಆಸ್ಪತ್ರೆಯಲ್ಲಿರುವ ಮೊಹಮ್ಮದ್​ ಶಮಿಗೆ ಹಾರೈಕೆ ತಿಳಿಸಿದ ಪ್ರಧಾನಿ ಮೋದಿ

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 11ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ತುಷಾರ್ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಎಂಬ ದಾಖಲೆಯನ್ನು ಮುರಿದರು. ಅವರು 1947 ರಲ್ಲಿ ಸರ್ರೆ ವಿರುದ್ಧ 121 ರನ್ ಗಳಿಸಿದ ಷುಟೆ ಬ್ಯಾನರ್ಜಿ ಅವರ ದಾಖಲೆಯನ್ನು ಮುರಿದರು.

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಗರಿಷ್ಠ ರನ್ ಬಾರಿಸಿದವರ ದಾಖಲೆ ಪಟ್ಟಿ ಇಲ್ಲಿದೆ

Exit mobile version