Site icon Vistara News

Twitter Blue Tick: ಕೊಹ್ಲಿ, ಧೋನಿ ಸೇರಿ ಹಲವು ಕ್ರಿಕೆಟಿಗರ ಟ್ವಿಟರ್​ ಖಾತೆಯಿಂದ ಮಾಯವಾದ ಬ್ಲ್ಯೂ ಟಿಕ್‌; ಕಾರಣ ಏನು?

Twitter Blue Tick: Kohli, Dhoni and many other cricketers have disappeared from their Twitter accounts; What is the reason?

Twitter Blue Tick: Kohli, Dhoni and many other cricketers have disappeared from their Twitter accounts; What is the reason?

ಮುಂಬಯಿ: ಎಲಾನ್‌ ಮಸ್ಕ್‌(elon musk) ಅವರು ಟ್ವಿಟರ್‌ ಖರೀದಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಭಾರಿ ಬದಲಾವಣೆಯಾಗುತ್ತಿದೆ. ಟ್ವಿಟರ್‌ನಲ್ಲಿ ನಕಲಿ ಖಾತೆಗಳನ್ನು ರದ್ದುಗೊಳಿಸುವುದು ಸೇರಿ ಹಲವು ಹೊಸ ನಿಯಮಗಳನ್ನು ರೂಪಿಸಿದ್ದರು. ಅದರಂತೆ ಕೆಲವು ತಿಂಗಳ ಹಿಂದೆ ಪಾವತಿ ಮಾಡಿ ಪಡೆಯುವ ಸಬ್​ಸ್ಕ್ರಿಪ್ಷನ್​ ಮಾಡೆಲ್​ ಜಾರಿಗೆ ತಂದಿತ್ತು. ಇದೀಗ ಚಂದಾದಾರಿಕೆ ಪಡೆಯದ ಬಹುತೇಕ ಸೆಲೆಬ್ರಿಟಿಗಳ ಟ್ವಿಟರ್ ಖಾತೆಯಿಂದ ಬ್ಲೂ ಟಿಕ್(Twitter Blue Tick) ಮಾಯವಾಗಿದೆ. ಕ್ರಿಕೆಟಿಗರಾದ ವಿರಾಟ್ ಕೊಹ್ಲಿ (Virat Kohi), ರೋಹಿತ್ ಶರ್ಮಾ, ಸಚಿನ್ ತೆಂಡೂಲ್ಕರ್, ಎಂ.ಎಸ್ ಧೋನಿ (MS Dhoni) ಸೇರಿದಂತೆ ಅನೇಕ ಕ್ರಿಕೆಟಿಗರ ಪ್ರೊಫೈಲ್‌ಗಳಿಂದಲೂ ಬ್ಲ್ಯೂ ಟಿಕ್‌ ತೆಗೆದು ಹಾಕಲಾಗಿದೆ.

ಮಸ್ಕ್​ ಒಡೆತನದ ಮೈಕ್ರೋ ಬ್ಲಾಗಿಂಗ್ ಸಂಸ್ಥೆ ಟ್ವಿಟರ್ ನಿಯಮದ ಪ್ರಕಾರ ಯಾವುದೇ ಬಳಕೆದಾರರು ತಮ್ಮ ಖಾತೆಯನ್ನು ಅಧಿಕೃತ ಎಂದು ತೋರಿಸಲು ಬ್ಲ್ಯೂ ಟಿಕ್‌ ಪಡೆಯಬೇಕಿತ್ತು. ಇದಕ್ಕೆ ಬಳಕೆದಾರರು ಚಂದಾದಾರಿಕೆಯನ್ನು ಪಡೆಯಬೇಕು. ಒಂದೊಮ್ಮೆ ಚಂದಾದಾರರಿಲ್ಲದ ಪ್ರೊಫೈಲ್‌ಗಳಿಂದ ಟ್ವಿಟ್ಟರ್ ಬ್ಲ್ಯೂ ಟಿಕ್‌ ತೆಗೆದು ಹಾಕಿದೆ. ಇದರರಲ್ಲಿ ಟೀಮ್​ ಇಂಡಿಯಾದ ಈ ಕ್ರಿಕೆಟಿಗರು ಸೇರಿದ್ದಾರೆ. ಸದ್ಯ ಇವರೆಲ್ಲ ಮುಂದಿನ ದಿನಗಳಲ್ಲಿ ಹಣ ಪಾವತಿಸಿ ಬ್ಲ್ಯೂ ಟಿಕ್‌ ಪಡೆದುಕೊಳ್ಳುವ ಸಾಧ್ಯತೆ ಇದೆ. ಏಕೆಂದರೆ ಇವರ ಹೆಸರಿನಲ್ಲಿ ಹಲವು ನಕಲಿ ಖಾತೆಗಳನ್ನು ಆರಂಭಿಸಿ ಮೋಸ ಮಾಡುವ ಸಾಧ್ಯತೆಯೂ ದಟ್ಟವಾಗಿದೆ.

ಆರಂಭದಲ್ಲಿ ಮೈಕ್ರೋ ಬ್ಲಾಗಿಂಗ್ ಸಂಸ್ಥೆ ಟ್ವಿಟರ್ ಕಂಪೆನಿ ಏಪ್ರಿಲ್ 1ರಂದು ಲೆಗಸಿ ಬ್ಲ್ಯೂ ಟಿಕ್​ಗಳನ್ನು ತೆಗೆದುಹಾಕುವ ಯೋಜನೆಯನ್ನು ಪ್ರಕಟಿಸಿತ್ತು. ಆದರೆ ಬದಲಾವಣೆಯು ಆಯ್ದ ಖಾತೆಗಳಿಗೆ ಅನ್ವಯಿಸುತ್ತದೆ ಎಂದು ಬಳಿಕ ಸ್ಪಷ್ಟಪಡಿಸಿತ್ತು. ಆದರೆ ಇದೀಗ ಚಂದಾದಾರರಲ್ಲದ ಎಲ್ಲ ಖಾತೆಗಳಿಂದಲೂ ಬ್ಲ್ಯೂ ಟಿಕ್‌ ಚಿಹ್ನೆಯನ್ನು ತೆಗೆಯುವ ನಿರ್ಧಾರ ಮಾಡಲಾಗಿದೆ. ಖಾತೆಯ ದೃಢೀಕರಣಕ್ಕಾಗಿ ಬ್ಲ್ಯೂ ಟಿಕ್‌ ಅವಶ್ಯವಾಗಿದ್ದು, ಈ ಬ್ಲ್ಯೂ ಟಿಕ್‌ ಪಡೆಯಲು ನಿಗದಿತ ಶುಲ್ಕವನ್ನು ಪಾವತಿ ಮಾಡಬೇಕು.

ಇದನ್ನೂ ಓದಿ IPL 2023 : ತಿಣುಕಾಡಿ ಮೊದಲ ಗೆಲುವು ದಾಖಲಿಸಿದ ಡೆಲ್ಲಿ ಕ್ಯಾಪಿಟಲ್ಸ್​, ಕೆಕೆಆರ್​ ತಂಡಕ್ಕೆ ಹ್ಯಾಟ್ರಿಕ್​ ಸೋಲು

ಟ್ವಿಟ್ಟರ್ ಬ್ಲ್ಯೂ ಟಿಕ್‌ ಆ್ಯಂಡ್ರಾಯ್ಡ್ ಹಾಗೂ ಐಓಎಸ್ ಡಿವೈಸ್‌ ಎರಡರಲ್ಲೂ ಬಳಸಬಹುದಾಗಿದೆ. ಇದರ ಜತೆಗೆ ಟ್ವಿಟರ್ ವೆಬ್‌ಸೈಟ್ ಬಳಸುವವರು ಕೂಡ ಬ್ಲ್ಯೂ ಟಿಕ್‌ ಖರೀದಿಸಬಹುದು. ಐಓಎಸ್ ಹಾಗೂ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಬ್ಲ್ಯೂ ಟಿಕ್‌ ಮಾಸಿಕ ಸಬ್‌ಸ್ಕ್ರಿಪ್ಶನ್ ಶುಲ್ಕ 900 ರೂ., ವೆಬ್ ಬಳಕೆದಾರರಿಗೆ ಈ ಶುಲ್ಕ 650 ರೂ. ಇರಲಿದೆ. ವಾರ್ಷಿಕ ಸಬ್‌ಸ್ಕ್ರಿಪ್ಶನ್ ಸೇವೆಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಒಟ್ಟಾರೆ ಮಸ್ಕ್‌ ಅವರು ಟ್ವಿಟರ್‌ ಖರೀದಿಸಿದ ಬಳಿಕ ಹಲವು ಮಹತ್ವದ ಬದಲಾವಣೆಯಾಗಿದೆ. ಮುಂದಿನ ದಿನಗಳಲ್ಲಿ ಇನಷ್ಟು ಬದಲಾವಣೆ ಮತ್ತು ಷರತ್ತುಗಳು ಬಂದರೂ ಅಚ್ಚರಿ ಪಡೆಬೇಕಿಲ್ಲ.

ಬ್ಲ್ಯೂ ಟಿಕ್ ಎಂದರೇನು?

ಸೆಲೆಬ್ರೆಟಿಗಳು, ರಾಜಕಾರಣಿಗಳು ಸೇರಿ ಪ್ರಮುಖ ವ್ಯಕ್ತಿಗಳಿಗೆ ಟ್ವಿಟ್ಟರ್ ನೀಡುವ ಅಥಂಟಿಫಿಕೇಷನ್ ಪ್ರಕ್ರಿಯೆಗೆ ಬ್ಲ್ಯೂ ಟಿಕ್ ಎನ್ನಲಾಗುತ್ತದೆ. ಬ್ಲ್ಯೂ ಟಿಕ್ ಇರುವ ಖಾತೆಗಳು ಟ್ವಿಟ್ಟರ್​ನಿಂದ ವೆರಿಫೈ ಮಾಡಲಾಗಿದೆ ಜತೆಗೆ ಇದು ನಕಲಿ ಖಾತೆ ಎಲ್ಲ ಎಂಬುದನ್ನು ಸೂಚಿಸುತ್ತದೆ.

Exit mobile version