Site icon Vistara News

Mohammad Rizwan : ಪಾಕ್​ ಬ್ಯಾಟರ್​ನನ್ನು ಬ್ರಾಡ್ಮನ್ ಎಂದು ಹೊಗಳಿದ ನಾಯಕ; ಗೊಳ್ಳೆಂದು ನಗುತ್ತಿರುವ ನೆಟ್ಟಿಗರು!

Mohammad Rizwan

ಬೆಂಗಳೂರು: ಪಾಕಿಸ್ತಾನದ ಮಾಜಿ ಟಿ 20 ಐ ಮಾಜಿ ನಾಯಕ ಹಾಗೂ ವೇಗದ ಬೌಲರ್​​ ಶಾಹೀನ್ ಅಫ್ರಿದಿ ತಂಡದ ಸಹ ಆಟಗಾರ ಮೊಹಮ್ಮದ್ ರಿಜ್ವಾನ್ ಅವರನ್ನು ಟಿ 20 ಕ್ರಿಕೆಟ್ನ ಬ್ರಾಡ್ಮನ್ ಎಂದು ಹೊಗಳಿರುವುದು ನೆಟ್ಟಿಗರ ಪಾಲಿಗೆ ತಮಾಷೆಯ ಸುದ್ದಿಯಾಗಿ ಪರಿವರ್ತನೆಗೊಂಡಿದೆ. ಸೋಶೀಯಲ್​ ಮೀಡಿಯಾಗಳಲ್ಲಿ ಇದನ್ನು ವರ್ಷದ ಜೋಕ್ ಎಂದರೆ ಕರೆದರೆ ಕೆಲವರು ಬಿದ್ದು ಬಿದ್ದು ನಗುತ್ತಿದ್ದಾರೆ.

ಏಪ್ರಿಲ್ 21 ರಂದು ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ 20 ಐ ಸರಣಿಯ 3 ನೇ ಪಂದ್ಯದಲ್ಲಿ ರಿಜ್ವಾನ್ ಕ್ರಿಕೆಟ್​ ಚುಟುಕು ಸ್ವರೂಪದಲ್ಲಿ 3000 ರನ್ ಪೂರೈಸಿದ್ದಾರೆ. ಹೀಗಾಗಿ ಅಫ್ರಿದಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಭಯಂಕರ ಹೇಳಿಕೆ ನೀಡಿದ್ದಾರೆ. ರಾವಲ್ಪಿಂಡಿ ಕ್ರೀಡಾಂಗಣದಲ್ಲಿ ನಡೆದ 2ನೇ ಟಿ 20 ಪಂದ್ಯದಲ್ಲಿ ಪಾಕ್ ತಂಡ ಗೆದ್ದಿತ್ತು. ಆದರೆ, 3ನೇ ಪಂದ್ಯವನ್ನು 7 ವಿಕೆಟ್​ಗಳಿಂದ ಕಳೆದುಕೊಂಡಿತ್ತು.

“ಟಿ20 ಕ್ರಿಕೆಟ್​ನ ಬ್ರಾಡ್ಮನ್ ಮತ್ತು ಟಿ 20ಐನಲ್ಲಿ 3,000 ರನ್ ಗಳಿಸಿದ ಪಾಕಿಸ್ತಾನದ ಸೂಪರ್​ಮ್ಯಾನ್​ ಮೊಹಮ್ಮದ್ ರಿಜ್ವಾನ್ ಅವರಿಗೆ ಅಭಿನಂದನೆಗಳು! 🏏🌟 ನಿಮ್ಮ ಪ್ರಭಾವವು ಆಟದ ರೀತಿಯನ್ನು ಪರಿವರ್ತಿಸಿದೆ ಮತ್ತು ಟೀಕಾಕಾರರನ್ನು ಮೌನಗೊಳಿಸಿದೆ. ಬೆಳೆಯುತ್ತಲೇ ಇರಿ, ಚಾಂಪಿಯನ್! ನೀವು ಅನೇಕರಿಗೆ ಸ್ಫೂರ್ತಿಯಾಗಿದ್ದೀರಿ” ಎಂದು ಶಾಹೀನ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ. ಈ ಪೋಸ್ಟ್​​ ತಮಾಷೆಯ ಸಂಗತಿಯಾಗಿ ಮಾರ್ಪಟ್ಟಿದೆ.

ಮೊಹಮ್ಮದ್ ರಿಜ್ವಾನ್, ಟಿ20 ಐನಲ್ಲಿ ವೇಗವಾಗಿ 3000 ರನ್ ಗಳಿಸಿದ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಾದಿಯಲ್ಲಿ ಅವರು ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ರಿಜ್ವಾನ್ 2 92 ನೇ ಟಿ 20 ಅಂತರರಾಷ್ಟ್ರೀಯ ಪಂದ್ಯ ಮತ್ತು 79 ನೇ ಇನ್ನಿಂಗ್ಸ್​ನಲ್ಲಿ ಈ ವೈಯಕ್ತಿಕ ಮೈಲಿಗಲ್ಲನ್ನು ತಲುಪಿದ್ದಾರೆ. 81 ಇನ್ನಿಂಗ್ಸ್​​ಗಳಲ್ಲಿ 3000 ಟಿ 20 ರನ್ ಗಳಿಸಿದ ವೈಟ್-ಬಾಲ್ ನಾಯಕ ಬಾಬರ್ ಅಜಮ್ ಅವರನ್ನೂ 31 ವರ್ಷದ ಆಟಗಾರ ಹಿಂದಿಕ್ಕಿದ್ದಾರೆ.

ರೆಕಾರ್ಡ್​ ಮಾತ್ರ, ಗೆಲುವು ಇಲ್ಲ

ಮೊಹಮ್ಮದ್ ರಿಜ್ವಾನ್ ಮತ್ತು ಪಾಕಿಸ್ತಾನ ಇಬ್ಬರಿಗೂ ರಾತ್ರಿ ಅಂತಿಮವಾಗಿ ಉತ್ತಮವಾಗಿ ಕೊನೆಗೊಳ್ಳಲಿಲ್ಲ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ತಮ್ಮ 3000 ನೇ ಟಿ 20 ರನ್ ತಲುಪಿದ ಕೂಡಲೇ ಗಾಯಗೊಂಡರು. ಪಾಕಿಸ್ತಾನ 178 ರನ್ ಗಳಿಸಿದ್ದ ಮೊದಲ ಇನಿಂಗ್ಸ್​​ನಲ್ಲಿ 21 ಎಸೆತಗಳಲ್ಲಿ 22 ರನ್ ಗಳಿಸಿದ ನಂತರ ರಿಜ್ವಾನ್ ಡ್ರೆಸ್ಸಿಂಗ್ ರೂಮ್​ಗೆ ಮರಳಿದರು. ಪ್ರತಿಯಾಗಿ ಆಡಿದ ಮೈಕೆಲ್ ಬ್ರೇಸ್ವೆಲ್ ನೇತೃತ್ವದ ನ್ಯೂಜಿಲ್ಯಾಂಡ್ ತಂಡ 19 ನೇ ಓವರ್​ನ ಎರಡನೇ ಎಸೆತದಲ್ಲಿ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿ ಸರಣಿಯನ್ನು 1-1 ರಿಂದ ಸಮಬಲಗೊಳಿಸಿತು.

ಇದನ್ನೂ ಓದಿ : Suresh Raina : ಧೋನಿ ನೇತೃತ್ವದಲ್ಲಿ ವಿಶ್ವ ಕಪ್ ಗೆದ್ದಿರುವುದು ಪೂರ್ವ ನಿಯೋಜಿತ; ಸ್ಫೋಟಕ ಮಾಹಿತಿ ಬಹಿರಂಗ ಮಾಡಿದ ರೈನಾ!

ರಿಜ್ವಾನ್ ತನ್ನ ವೃತ್ತಿಜೀವನದಲ್ಲಿ ಬ್ರಾಡ್ಮನ್ ಹೊಂದಿದ್ದ ಸರಾಸರಿಗೆ ಹತ್ತಿರದಲ್ಲಿಯೂ ಇಲ್ಲ. ಹಾಗಿರುವಾಗ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಶಾಹೀನ್ ಅವರನ್ನು ಪ್ರಶ್ನಿಸಿದ್ದಾರೆ. ರಿಜ್ವಾನ್​ ಅವರನ್ನು ಬ್ರಾಡ್ಮನ್ ಎಂದು ಕರೆಯಲು ಹೇಗೆ ಸಾಧ್ಯ ಎಂದ ಪ್ರಶ್ನಿಸಿದ್ದಾರೆ.

ಬಾಬರ್ ಅಜಮ್ ಅವರನ್ನು ಮತ್ತೆ ನೇಮಕ ಮಾಡಲು ಪಿಸಿಬಿ ಕಳೆದ ತಿಂಗಳು ಅವರನ್ನು ನಾಯಕತ್ವದಿಂದ ವಜಾಗೊಳಿಸಿದ ನಂತರ ಕೆಲವು ಅಭಿಮಾನಿಗಳು ಅವರ ಮಾನಸಿಕ ಸ್ಥಿರತೆಯ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆ. ಹೀಗಾಗಿಯೇ ಶಾಹೀನ್ ರಿಜ್ವಾನ್ ಅವರನ್ನು ಟಿ 20 ಕ್ರಿಕೆಟ್​​ ಬ್ರಾಡ್ಮನ್ ಎಂದು ಕರೆದಿದ್ದಾರೆ ಎಂದು ಹೇಳಲಾಗುತ್ತಿದೆ.

Exit mobile version